ಹೈದರಾಬಾದ್ : ಸದ್ಯದಲ್ಲೇ ತೆರೆಗೆ ಬರಲಿರುವ ವರ್ಷದ ದುಬಾರಿ ವೆಚ್ಚದ ಸಿನೆಮಾ ಎಂದೇ ಹೇಳಲಾಗಿರುವ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದಲ್ಲಿ ನಟ ಪ್ರಭಾಸ್ ನಟಿಸುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಪಾತ್ರ ಏನು? ಹೆಸರೇನು? ಕಥೆ ಏನು? ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಇದೆ. ಈ ನಡುವೆ ಚಿತ್ರದಲ್ಲಿ ಪ್ರಭಾಸ್ ಪಾತ್ರದ ಹೆಸರನ್ನು ರಿವೀಲ್ ಮಾಡಲಾಗಿದೆ.
ಪ್ಯಾನ್ ಇಂಡಿಯಾ ಸಿನೆಮಾವಾಗಿ ‘ಕಲ್ಕಿ 2898 ಎಡಿ’ (Kalki 2898 AD) ತಯಾರಾಗುತ್ತಿದ್ದು, ಟಾಲಿವುಟ್ ಸ್ಟಾರ್ ಪ್ರಭಾಸ್, ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಹೆಸರಿನ ಬಗ್ಗೆ ಸಿನಿರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು ಇದೀಗ ಪ್ರಭಾಸ್ ಹೆಸರು ಏನು ಅನ್ನೋದು ರಿವೀಲ್ ಆಗಿದೆ.
ಟಾಲಿವುಡ್ ನಿರ್ದೇಶಕ ನಾಗ್ ಅಶ್ವಿನ್ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ನಿರ್ದೇಶನ ಮಾಡುತ್ತಿದ್ದು, ಶಿವರಾತ್ರಿಯಂದು ಸಿನೆಮಾದ ಹೊಸ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.
ಈ ಪೋಸ್ಟರ್ ಮೂಲಕ ಸಿನೆಮಾದಲ್ಲಿ ಪ್ರಭಾಸ್ ಪಾತ್ರದ ಪರಿಚಯ ಮಾಡಿಸಿದೆ. ವಿಶೇಷ ಚಿತ್ರಕಥೆ ಹೊಂದಿರುವ ‘ಕಲ್ಕಿ 2898 ಎಡಿ’ (Kalki 2898 AD) ಸಿನೆಮಾದಲ್ಲಿ ‘ಭೈರವ’ ಹೆಸರಿನಲ್ಲಿ ನಟ ಪ್ರಭಾಸ್ ಮಿಂಚಲಿದ್ದಾರೆ.
ಪೋಸ್ಟರ್ ನಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪ್ರಭಾಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಹುಬಲಿಯ ಬಳಿಕ ಪ್ರಭಾಸ್ ಮತ್ತೊಂದು ಹಿಟ್ ಸಿನೆಮಾ ‘ಕಲ್ಕಿ 2898 ಎಡಿ’ (Kalki 2898 AD) ಆಗಲಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಕಥೆಯ ಬಗ್ಗೆ ಕ್ಲೂ ಕೊಟ್ಟ ನಿರ್ದೇಶಕ ನಾಗ್ ಅಶ್ವಿನಿ
ಮಹಾಭಾರತದ ಕಾಲದಿಂದ ಆರಂಭವಾಗಿ ಕ್ರಿ.ಶ.2898 ರಲ್ಲಿ ಕೊನೆಗೊಳ್ಳುವ ಸರಿ ಸುಮಾರು 6000 ವರ್ಷಗಳ ಕಥೆ ಇದಾಗಿದ್ದು, ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡ್ತಾ ಇದ್ದೇವೆ ಅಂತ ನಿರ್ದೇಶಕ ನಾಗ್ ಅಶ್ವಿನ್ ಕಥೆಯ ಸಣ್ಣ ಎಳೆಯನ್ನು ಬಿಚ್ಚಿಟ್ಟಿದ್ದಾರೆ.
ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಜೊತೆಗೆ ಶ್ರೇಷ್ಠ ನಟರಾದ ಕಮಲ್ ಹಾಸನ್ , ಅಮಿತಾಬ್ ಬಚ್ಚನ್ ಹಾಗೂ ಬಾಲಿವುಡ್ ನಟಿ ದಿಶಾ ಪಠಾಣಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
‘ಕಲ್ಕಿ 2898 ಎಡಿ’ (Kalki 2898 AD) ಸುಮಾರು 600 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ ಎಂದು ಹೇಳಲಾಗಿದ್ದು, ಇದು ಈ ವರ್ಷದ ದೊಡ್ಡ ಬಜೆಟ್ ಸಿನೆಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಸುಮಾರು 29 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ಘೋಷಣೆ ಮಾಡಿದ್ದು ಬಹಳ ಅಚ್ಚರಿ ಮೂಡಿಸಿತ್ತು. ಈ ವಿಚ್ಚೇದನದ ಸುದ್ದಿಯಿಂದಾಗಿ ಎ.ಆರ್ ರೆಹಮಾನ್ ಅವರ ವೈಯಕ್ತಿನ ಬದುಕಿನ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ.
‘ರೆಹಮಾನ್’ ಎಂಬ ಹೆಸರಿನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದ ದಿಲೀಪ್ ಕುಮರ್ 1980ರಲ್ಲಿ ತಂದೆಯ ಮರಣದ ನಂತರ ಕುಟುಂಬದೊಂದಿಗೆ ಇಸ್ಲಾಂಗೆ ಮತಾಂತರಗೊಂಡ ನಂತರ, ಬಹುಕಾಲದ ಆಸೆಯಾಗಿದ್ದ ರೆಹಮಾನ್’ ಎಂಬ ಹೆಸರನ್ನು ಬಳಸಲು ನಿರ್ಧರಿಸಿದರು.
ತಂಗಿಯ ಮದುವೆಗೆ ಜ್ಯೋತಿಷ್ಯ ನೋಡುವಾಗ, ಒಬ್ಬ ಹಿಂದೂ ಜ್ಯೋತಿಷಿ ಅಬ್ದುಲ್ ರೆಹಮಾನ್ ಮತ್ತು ಅಬ್ದುಲ್ ರಹೀಮ್ ಎಂಬ ಹೆಸರುಗಳನ್ನು ಸೂಚಿಸಿದ್ದಾಗಿ ರೆಹಮಾನ್ ಆಗಾಗ ನನಪಿಸುಕೊಳ್ಳುತ್ತಿರುತ್ತಾರೆ. ‘ರೆಹಮಾನ್’ ಹೆಸರು ಇಷ್ಟವಾಗಿದ್ದ ಕಾರಣ ಅದನ್ನೇ ಆಯ್ಕೆ ಮಾಡಿಕೊಂಡರು. ತಾಯಿಯ ಮನದಿಚ್ಚೆಯಂತೆ, ‘ಅಲ್ಲಾ ರಕ್ಕಾ’ ಎಂಬುದನ್ನು ಸೇರಿಸಿ ಎ.ಆರ್. ರೆಹಮಾನ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು.
‘ದೇವರಿಂದ ರಕ್ಷಿಸಲ್ಪಟ್ಟವರು’ ಎಂಬ ಅರ್ಥವನ್ನು ಹೊಂದಿರುವ ಎ.ಆರ್. ರೆಹಮಾನ್ ಎಂಬ ಹೆಸರು ಇಂದು ಸಂಗೀತ ಲೋಕದಲ್ಲಿ ಅನುಪಮ ಸ್ಥಾನ ಪಡೆದಿದೆ. ಈ ಹೆಸರು ಬದಲಾವಣೆ ರೆಹಮಾನ್ ಅವರ ಆಧ್ಯಾತ್ಮಿಕ ಪಯಣವನ್ನು ಸೂಚಿಸುವುದು ಮಾತ್ರವಲ್ಲದೆ, ಜಾಗತಿಕ ಖ್ಯಾತಿಗೆ ಅವರ ಏಳಿಗೆಯ ಆರಂಭವನ್ನೂ ಸೂಚಿಸುತ್ತದೆ, ರೆಹಮಾನ್ ಎಂಬ ಹೆಸರು ವಿಶ್ವದ ಅತ್ಯಂತ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ.
29 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ ರೆಹಮಾನ್ ಸಾಯಿರಾ ದಂಪತಿ ವಕೀಲರಾದ ವಂದನಾ ಶಾ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಮೂಲಕ ಪ್ರತ್ಯೇಕಗೊಂಡಿರುವ ವಿಚಾರ ತಿಳಿಸಿದರು. ತಮ್ಮ ತಂದೆಯನ್ನು ಕೊನೆಯ ದಿನಗಳಲ್ಲಿ ಆರೈಕೆ ಮಾಡಿದ್ದ ಸೂಫಿ ಸಂತರೊಬ್ಬರ ಪ್ರಭಾವಕ್ಕೆ ಒಳಗಾಗಿ ಮುಸ್ಲಿಂ ಧರ್ಮಕ್ಕೆ ರೆಹಮಾನ್ ಮತಾಂತರಗೊಂಡರು ಎನ್ನಲಾಗಿದೆ. ‘ಈ ನಂಬಿಕೆಯ ಬದಲಾವಣೆ ಮನಸ್ಸಿಗೆ ಶಾಂತಿ ನೀಡಿದ್ದು, ತಾವು ತಮ್ಮ ನಂಬಿಕೆಯನ್ನು ಬೇರೆಯವರ ಮೇಲೆ ಹೇರಲು ಇಷ್ಟಪಡುವುದಿಲ್ಲ’ ಎಂದು ಸ್ವತಃ ರೆಹಮಾನ್ ಹೇಳಿಕೊಂಡಿದ್ದಾರೆ.
ಮಂಗಳೂರು/ಬೆಂಗಳೂರು : ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕನಾಗಿ ಮಿಂಚಿ ಸಕತ್ ಫೇಮಸ್ ಆಗಿದ್ದ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸರಳವಾಗಿ ಅವರ ನಿಶ್ಚಿತಾರ್ಥ ಕಾರ್ಯ ನೆರವೇರಿದೆ.
ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದು, ರಾಣಾ ಎಂಗೇಜ್ಮೆಂಟ್ ಆಗಿರುವ ಹುಡುಗಿ ಯಾರು? ಎಲ್ಲಿಯವರು? ಎಂಬ ಮಾಹಿತಿ ಬಹಿರಂಗವಾಗಿಲ್ಲ. ನಿಶ್ಚಿತಾರ್ಥದ ಫೋಟೋ ನೋಡಿದ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಪ್ರೇಮ್ ಮಿಸ್ ಯಾಕೆ?
ರಾಣಾ ಎಂಗೇಜ್ಮೆಂಟ್ ಸಮಾರಂಭದಲ್ಲಿ ನಟಿ ರಕ್ಷಿತಾ ಪ್ರೇಮ್ ಕುಟುಂಬ ಇದೆ. ಆದ್ರೆ ನಿರ್ದೇಶಕ ಪ್ರೇಮ್ ಇಲ್ಲ. ಅವರು ಏನು ಭಾಗಿಯಾಗಿಲ್ಲ ಎಂಬ ಅನುಮಾನ ಹುಟ್ಟಿರೋದು ಸಹಜ. ಪ್ರೇಮ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರೋದರಿಂದ ನಿಶ್ಚಿತಾರ್ಥದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕೆಡಿ ಸಿನಿಮಾದ ಶೂಟಿಂಗ್ ಗಾಗಿ ಅವರು ಚಿಕ್ಕಮಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಣಾ, ಪ್ರೇಮ್ ಅಸಿಸ್ಟೆಂಟ್ ಡೈರೆಕ್ಟರ್ ವಿಜಯ್ ಈಶ್ವರ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಾನ್ವಿ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅನೇಕ ಕಲಾವಿದರು ಹೀರೋ/ಹೀರೋಯಿನ್ ಆಗಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ, ಕೆಲವರು ಬೇರೆಯದೇ ಆಲೋಚನೆ ಇಟ್ಟುಕೊಂಡು ನಂತರ ಚಿತ್ರರಂಗಕ್ಕೆ ಬಂದು ಗೆಲುವು ಕಾಣುತ್ತಾರೆ. ಈ ಸಾಲಿಗೆ ಆದಿತ್ಯ ರಾಯ್ ಕಪೂರ್ ಸಹ ಸೇರುತ್ತಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಆದಿತ್ಯ ನಂತರ ಬಾಲಿವುಡ್ನ ಸ್ಟಾರ್ ಆಗಿರೋ ಕಥೆಯೇ ರೋಚಕ.
ಆದಿತ್ಯ ರಾಯ್ ಕಪೂರ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದು 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಮೂಲಕ. ಆ ಬಳಿಕ ‘ಆಶಿಕಿ 2’, ‘ಯೇ ಜವಾನಿ ಹೇ ದಿವಾನಿ’ ‘ಕಳಂಕ್’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದರು. ಅವರು ನಟಿಸಿದ ‘ದಿ ನೈಟ್ ಮ್ಯಾನೇಜರ್’ ಸೀರಿಸ್ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಸರಣಿಯಲ್ಲಿ ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಈ ಸರಣಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದಕ್ಕೆ ಸೀಕ್ವೆಲ್ ಕೂಡ ಬರಬೇಕಿದೆ. ಇಷ್ಟೆಲ್ಲ ಹೆಸರು ಮಾಡಿದ ಆದಿತ್ಯ ಅವರ ಮೂಲ ಕನಸು ಮಾತ್ರ ಬೇರೆಯದೇ ಇತ್ತು.
‘ನಾನು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದೆ. ಆದರೆ, ಅದು ಹೊಂದಾಣಿಕೆ ಆಗಿಲ್ಲ. ನಂತರ ನಟನೆಗೆ ಬಂದೆ. ನಾನು ವಿಡಿಯೋ ಜಾಕಿ ಕೂಡ ಆಗಿದ್ದೆ’ ಎಂದಿದ್ದರು ಆದಿತ್ಯ ರಾಯ್ ಕಪೂರ್. ಹಾಗಂತ ಆದಿತ್ಯ ರಾಯ್ ಕಪೂರ್ ಅವರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದುಕೊಳ್ಳಬೇಡಿ. ಅವರು ದೊಡ್ಡ ಕುಟುಂಬದ ಹಿನ್ನೆಲೆಯಿಂದಲೇ ಬಂದವರು.