ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೋಕ್ಷಿತಾ, ಉಗ್ರಂ ಮಂಜು, ರಜತ್, ಭವ್ಯಾ, ತ್ರಿವಿಕ್ರಮ್ ಮನೆಯವರೆಲ್ಲಾ ಬಿಗ್ ಬಾಸ್‌ಗೆ ಬಂದು ಖುಷಿಪಟ್ಟಿದ್ದಾರೆ. ಇದೀಗ ಧನರಾಜ್ ಪತ್ನಿ ಪ್ರಜ್ಞಾ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ವೇಳೆ, ಧನರಾಜ್ ಅವರು ಪತ್ನಿ ಬಳಿ ಎರಡನೇ ಮಗುವನ್ನು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜನವರಿ 2ರ ಎಪಿಸೋಡ್‌ನಲ್ಲಿ ಧನರಾಜ್ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಫನ್ ಆಕ್ಟಿವಿಟಿ ನಡೆದಿದೆ. ಧನರಾಜ್ ಅವರದ್ದು ಕೂಡು ಕುಟುಂಬ ಆಗಿದ್ದು, ಮೊದಲಿಗೆ ಇಡೀ ಫ್ಯಾಮಿಲಿ ಬಿಗ್ ಬಾಸ್‌ಗೆ ಆಗಮಿಸಿ ಧನರಾಜ್ ಜೊತೆ ಹುಲಿ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಆ ನಂತರ ಧನರಾಜ್‌ಗೆ ಧೈರ್ಯ ತುಂಬಿ ಆಲ್ ಬಿ ಬೆಸ್ಟ್ ಹೇಳಿ ಮನೆಯಿಂದ ನಿರ್ಗಮಿಸಿದ್ದಾರೆ.
ಆ ನಂತರ ಧನರಾಜ್ ಅವರ ಪತ್ನಿ ಪ್ರಜ್ಞಾ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಐಶ್ವರ್ಯಾಗೆ ಯಾವಾಗಲೂ ಉತ್ತಮ ಕೊಡುತ್ತಾ ಇದ್ರಿ. ಏನು ಸಮಾಚಾರ ಅವರಿಗೆ ಲೈನ್ ಹೊಡೀತಾ ಇದ್ರಿ ಅಂತ ಡೌಂಟ್ ನನಗೆ ಎಂದು ಧನರಾಜ್‌ಗೆ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ನಂತರ ಇತರೆ ಸ್ಪರ್ಧಿಗಳನ್ನು ಪತ್ನಿಗೆ ಪರಿಚಯಿಸಿದ ಬಳಿಕ ಕೆಲ ಕಾಲ ಪತ್ನಿ ಜೊತೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
‘ಬಿಗ್ ಬಾಸ್’ ಮನೆಯ ಮುಖ್ಯದ್ವಾರದ ಎದುರು ಕುಳಿತುಕೊಳ್ಳಲು ಜಾಗವಿದೆ. ಅದು ಧನರಾಜ್ ಹಾಗೂ ಹನುಮಂತ ಅವರ ಫೇವರಿಟ್ ಜಾಗ. ಅಲ್ಲಿಯೇ ಕುಳಿತು ಧನರಾಜ್ ಅವರು ಕ್ಯಾಪ್ಟನ್ ಆಗುವ, ಉತ್ತಮ ಪಡೆಯುವ ಹಾಗೂ ಕಿಚ್ಚನ ಚಪ್ಪಾಳೆ ಪಡೆಯುವ ಕನಸು ಕಂಡಿದ್ದರು. ಅದು ನಿಜವಾಗಿದೆ ಎಂದು ಈ ವಿಚಾರವನ್ನು ಅವರು ಪತ್ನಿ ಬಳಿ ಹೇಳಿಕೊಂಡಿದ್ದಾರೆ. ಅದಕ್ಕೆ ಹೌದಾ, ಹಾಗಾದರೆ ಈಗೇನು ಕೇಳಿಕೊಳ್ಳುತ್ತೀರಿ ಎಂದು ಧನರಾಜ್‌ಗೆ ಪತ್ನಿ ಕೇಳಿದ್ದಾರೆ. ಆಗ ಧನರಾಜ್ ಅವರು ಮುಚ್ಚು ಮರೆ ನೇರವಾಗಿ ಮಾತನಾಡಿದ್ದಾರೆ.
ನನಗೆ ಎರಡನೇ ಮಗು ಬೇಕು ಎಂದಾಗ ಪ್ರಜ್ಞಾ ಅವರು ಎಂತ ಮರ್ರೆ ನೀವು ಎಂದು ನಾಚಿ ನೀರಾದರು. ಆಗ ಧನರಾಜ್, ನೀನು ರೆಡಿ ಇಲ್ವ? ಬೇಡ್ವಾ? ಎಂದು ಕೇಳಿದರು. ಈಗ ಮಾತನಾಡೋದು ಬೇಡ, ಇದನ್ನೆಲ್ಲ ಮನೆಗೆ ಬಂದು ಮಾತಾಡಬೇಕಲ್ವ ಎಂದರು ಪ್ರಜ್ಞಾ. ಆ ಬಳಿಕ ಧನರಾಜ್ ಅವರು ಸೈಲೆಂಟ್ ಆದರು. ಆ ನಂತರ ಮನೆಗೆ ಬಂದ ಮುದ್ದು ಮಗಳನ್ನು ಎತ್ತಿ ಖುಷಿಪಟ್ಟರು.
ಕನ್ನಡ ‘ಬಿಗ್ ಬಾಸ್’ ಸೀಸನ್ 11ರ ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 97 ದಿನಗಳು ಪೂರೈಸಿರುವ ಬಿಗ್ ಬಾಸ್ ಆಟ ಇನ್ನೆಷ್ಟು ದಿನಗಳು ಇರಲಿದೆ ಎಂಬುದನ್ನು ಸುದೀಪ್ ದೊಡ್ಮನೆ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ಬಗ್ಗೆ ಸುದೀಪ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.
2024ರಲ್ಲಿ ಸೆ.29ರಂದು ‘ಬಿಗ್ ಬಾಸ್ ಕನ್ನಡ 11’ಕ್ಕೆ ಅದ್ಧೂರಿ ಚಾಲನೆ ನೀಡಲಾಗಿತ್ತು. 17 ಸ್ಪರ್ಧಿಗಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಪ್ರಸ್ತುತ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 97 ದಿನಗಳು ಪೂರೈಸಿರುವ ಈ ಆಟಕ್ಕೆ ಅಂತ್ಯ ಯಾವಾಗ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.
ಸುದೀಪ್ ವೇದಿಕೆಯಲ್ಲಿ ಹೇಳಿರುವಂತೆ ಇನ್ನೂ ಫಿನಾಲೆಗೆ ಇನ್ನು ಮೂರು ವಾರ ಇದೆ. ಅಂದರೆ ಇನ್ನು 21 ದಿನದಲ್ಲಿ ಫಿನಾಲೆ ನಡೆದು ಈ ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ. ಶೋ ಅಂತ್ಯವಾಗಲಿದೆ. ಈ ಸೀಸನ್ ಮೂಲಕ ಬಿಗ್ ಬಾಸ್ ಜೊತೆ ಸುದೀಪ್ ಅವರ ಪಯಣವೂ ಅಂತ್ಯವಾಗಲಿದೆ.
ಅಂದಹಾಗೆ, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲ. ಫ್ಯಾಮಿಲಿ ರೌಂಡ್ ಆಗಿದ್ದ ಹಿನ್ನೆಲೆ ವೋಟಿಂಗ್ ಲೈನ್ ಕ್ಲೋಸ್ ಇತ್ತು. ಹಾಗಾಗಿ ಮುಂದಿನ ವಾರ ಡಬಲ್ ಎಲಿಮಿನೇಷನ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. 9 ಸ್ಪರ್ಧಿಗಳಿರುವ ಮನೆಯಲ್ಲಿ ಫಿನಾಲೆಗೆ 5 ಮಂದಿಯಷ್ಟೇ ಆಯ್ಕೆಯಾಗಲಿದ್ದಾರೆ. ಉಗ್ರಂ ಮಂಜು, ಗೌತಮಿ, ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ರಜತ್, ಧನರಾಜ್, ಹನುಮಂತ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾವ 5 ಸ್ಪರ್ಧಿಗಳಿಗೆ ಫಿನಾಲೆ ಟಿಕೆಟ್ ಸಿಗಲಿದೆ. ಯಾರು ಬಿಗ್ ಬಾಸ್ ವಿನ್ನರ್ ಪಟ್ಟ ಗೆಲ್ತಾರೆ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಶನಿವಾರದ ಎಪಿಸೋಡ್‌ನಲ್ಲಿ ಕೋಪಗೊಂಡು ಮನೆಯಿಂದ ಹೊರ ಹೋಗಿದ್ದ ಕಿಚ್ಚ ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಸಖತ್ ಖುಷಿ ಖುಷಿಯಾಗಿದ್ದಾರೆ. ಬಿಗ್ಬಾಸ್ ಸ್ಪರ್ಧಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಗೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರಿಗೂ ಮನವರಿಕೆ ಮಾಡಿದ್ದಾರೆ. ಅಲ್ಲದೇ ಬಿಗ್ಬಾಸ್ ಫ್ರೆಂಡ್ಸ್ ಧನರಾಜ್ ಹಾಗೂ ಹನುಮಂತು ಇಣುಕಿ ನೋಡಿದ್ದರ ಬಗ್ಗೆ ಕಿಚ್ಚ ಫುಲ್ ತಮಾಷೆ ಮಾಡಿದ್ದಾರೆ.
ಬಾದ್ಷಾ ಸುದೀಪ್ ಜೊತೆ ಸೂಪರ್ ಸಂಡೇ ಸ್ಪೆಶಲ್ ಟಾಕ್ನ ಪ್ರೋಮೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಿಚ್ಚನ ಮಾತುಗಳಿಗೆ ಮನೆ ಸದಸ್ಯರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹೊರಗಡೆ ಟ್ರೋಲ್ ಅಂತ ನಡೆಯುತ್ತಿರುತ್ತೆ. ನಿಮಗೆ ಯಾವ ಥರ ಇಮೇಜ್ ಇರಬಹುದು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ವಿಡಿಯೋಗಳನ್ನು ಕೂಡ ಪ್ಲೇ ಮಾಡಿಸಿದ್ದಾರೆ.
ಗೌತಮಿ ಜಾಧವ್ರನ್ನ ಮಾತನಾಡಿಸಲು ಗಂಡ ಅಭಿಷೇಕ್ ಅವರು ಬಂದಾಗ ಇಬ್ಬರು ಬೇರೆ ರೂಮ್ಗೆ ಹೋಗಿ ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು. ಈ ವೇಳೆ ರೂಮ್ ಹೊರಗಡೆಯಿಂದ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕ್ಯೂರಾಸಿಟಿ ಇತ್ತು ಎಂದಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ.
ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ಎಕ್ಸ್ಪರ್ಟ್ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್.. ಎನ್ನುತ್ತಿದ್ದಂತೆ ಎಲ್ಲರು ನಕ್ಕಿದ್ದಾರೆ. ಒಂದು ವೇಳೆ ನೀವಿಬ್ಬರು ನೋಡುವಾಗ ಏನಾದರೂ ಕಂಟೇಂಟ್ ಸಿಕ್ಕಿದ್ದರೇ ಏನ್ ಮಾಡುತ್ತಿದ್ದೀರಿ ಎಂದು ಕಿಚ್ಚ ಪ್ರಶ್ನೆ ಮಾಡುತ್ತಿದ್ದಂತೆ, ಅದನ್ನೇ ರಿವೆಂಡ್ ಮಾಡಿ.. ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ.
ಬಿಗ್ ಬಾಸ್ ಸೀಸನ್ 11 ಮನೆಯಲ್ಲಿ ಮತ್ತೆ ಹೋರಾಟದ ಕಿಚ್ಚು ಹಚ್ಚಿಕೊಳ್ಳುವ ಸುಳಿವು ಸಿಕ್ಕಿದೆ. ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಸುದೀಪ್ ಮನೆಯವರು ಮಾಡಿರೋ ತಪ್ಪುಗಳನ್ನ ಹುಡುಕಿದ್ದು, ಇವತ್ತು ತ್ರಿವಿಕ್ರಮ್, ಮಂಜು, ಗೌತಮಿ ಈ ಮೂವರಿಗೆ ಚಳಿ ಬಿಡಿಸೋ ಸಾಧ್ಯತೆ ಇದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಂಟೆಸ್ಟೆಂಟ್ ತಮ್ಮ ರಕ್ತ ಸಂಬಂಧಗಳನ್ನ ಭೇಟಿ ಮಾಡಿದ್ದಾರೆ. ಆದರೆ ಮನೆ ಊಟ ತಿಂದು ಬಿಗ್ ಬಾಸ್ ಆಟದ ಮೈ ಮರೆತು ಮಾತನಾಡಿದ್ದಾರೆ. ಮನೆಯವರ ಮಾತನ್ನ ಕೇಳಿ ಎಚ್ಚರ ಆದವರು ಇದ್ದಾರೆ.
ಮನೆಯವರ ಭೇಟಿಯಿಂದ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ, ಸಂತೋಷ ಹೆಚ್ಚಾಗಿರಬಹುದು. ಆದರೆ ಸ್ಪರ್ಧಿಗಳ ಆಟದಲ್ಲೂ ಬದಲಾವಣೆ ಆಗಲಿದೆ. ಇದಕ್ಕೆ ಸಾಕ್ಷಿಯಾಗಿ ಮನೆಯವರ ಜೊತೆ ಮಾತಾಡಿದ ತ್ರಿವಿಕ್ರಮ್, ಮಂಜು, ಗೌತಮಿ ಅವರ ಮಾತುಗಳಾಗಿದೆ. ತ್ರಿವಿಕ್ರಮ್ ಅವರ ತಾಯಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಜೊತೆ ಸ್ವಲ್ಪ ದೂರ ಇರು ಅಂತ ನೇರವಾಗಿ ಹೇಳಿದ್ದಾರೆ. ಇದು ತ್ರಿವಿಕ್ರಮ್ ಅವರ ಮನಮುಟ್ಟಿದ್ದು, ಇನ್ಮುಂದೆ ಭವ್ಯಾ, ತ್ರಿವಿಕ್ರಮ್ ಅವರ ಗೇಮ್ ಪ್ಲಾನ್ ಚೇಂಜ್ ಆಗುವ ಸಾಧ್ಯತೆ ಇದೆ.
ಇನ್ನು ಗೌತಮಿ ಅವರ ಪತಿ ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನ ಉಪಯೋಗಿಸಿಕೊಳ್ಳುತ್ತಾ ಇರೋರು ಅವರು. ಬಿ ಕೇರ್ ಫುಲ್ ಎಂದ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಜು ಅವರ ತಂಗಿ ಕೂಡ ಬೇಡ ಅವರ ಜೊತೆ ಇರೋದು ಬೇಡ. ಫ್ರೆಂಡ್ ಶಿಪ್‌ನ ಬ್ರೇಕ್ ಅಪ್ ಮಾಡು. ನನಗೆ ಪ್ರಾಮಿಸ್ ಮಾಡಬೇಕು ಎಂದು ಮಂಜು ತಂಗಿ ಭಾಷೆ ಕೂಡ ತೆಗೆದುಕೊಂಡಿದ್ದಾರೆ.
ಇವತ್ತಿನ ಕಿಚ್ಚನ ಪಂಚಾಯ್ತಿಯಲ್ಲಿ ಮನೆಯವರ ಜೊತೆ ಕಾಲ ಕಳೆದ ಖುಷಿಯ ಜೊತೆಗೆ ಮೈ ಮರೆತು ಮಾತನಾಡಿರೋ ಮಾತು ಚರ್ಚೆಯಾಗಲಿದೆ. ಮನೆಯವರಿಗೆ ಮಾತು ಕೊಟ್ಟಂತೆ ತ್ರಿವಿಕ್ರಮ್, ಗೌತಮಿ, ಮಂಜು ಅವರು ನಡೆದುಕೊಳ್ತಾರಾ. ಗೆಳೆತನ, ಸ್ನೇಹ ಆಟದ ದಿಕ್ಕು ಬದಲಿಸುತ್ತಾ ಅನ್ನೋದು ರೋಚಕವಾಗಿದೆ.