Connect with us

    FILM

    ನಟ ದರ್ಶನ್ ಸಂಕ್ರಾಂತಿ ಆಚರಣೆ…ಪತ್ನಿ ಮಾಡಿರುವ ಪೋಸ್ಟ್ ವೈರಲ್!

    Published

    on

    ಮಂಗಳೂರು/ಮೈಸೂರು : ಪ್ರತೀ ವರ್ಷ ನಟ ದರ್ಶನ್ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ. ಎತ್ತುಗಳು, ಹಸುಗಳನ್ನು ಸ್ನಾನ ಮಾಡಿಸಿ, ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ಆದರೆ, ಈ ವರ್ಷ ದರ್ಶನ್ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಇತ್ತು. ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಿಂದ ಜಾಮೀನು ಪಡೆದಿರುವ ದರ್ಶನ್ ಈ ಬಾರಿ ಸಂಕ್ರಾಂತಿ ಆಚರಿಸಿದ್ದಾರಾ ಎಂಬ ಕುತೂಹಲ ಮನೆ ಮಾಡಿತ್ತು.

    ಈ ಕುತೂಹಲವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ತಣಿಸಿದ್ದಾರೆ. ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಅವರು ಸ್ಟೋರಿ ಹಾಕಿದ್ದಾರೆ. ಈ ಮೂಲಕ ಫಾರ್ಮ್ ಹೌಸ್‌ನಲ್ಲಿ ದರ್ಶನ್ ಜೊತೆ ಸಂಕ್ರಾಂತಿ ಆಚರಿಸುತ್ತಿದ್ದಾರೆ ಅನ್ನೋದು ಕನ್ಫಮ್ ಆಗಿದೆ.

    ಸದ್ಯ ಈ ಫೋಟೋ ವೈರಲ್ ಆಗಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿದ್ದಾರೆ. ಅಲ್ಲಿ ಪ್ರಾಣಿಗಳ ಆರೈಕೆ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ : ಮಹಾಕುಂಭ ಮೇಳದಲ್ಲಿ ಖ್ಯಾತ ನಟಿಯಿಂದ ಶಿವ ತಾಂಡವ ಪಠಣ

    ಈ ಫೋಟೋದಲ್ಲಿ ಇಬ್ಬರೂ ಮುಖ ತೋರಿಸಿಲ್ಲ.  ಪ್ರಾಣಿಗಳತ್ತ ನೋಡುತ್ತಿರುವಂತೆ ಫೋಟೋ ಕ್ಲಿಕ್ಕಿಸಲಾಗಿದೆ. ಬೆನ್ನಿನ ಭಾಗ ಮಾತ್ರ ತೋರಿಸಲಾಗಿದೆ  ವಿಜಯಲಕ್ಷ್ಮಿ ತನ್ನ ಮುದ್ದಿನ ನಾಯಿಯನ್ನು ಫಾರ್ಮ್ ಹೌಸ್‌ಗೆ ಕೊಂಡೊಯ್ದಿದ್ದು, ಈ ಫೋಟೋದಲ್ಲಿ ನಾಯಿಯೂ ಇರುವುದನ್ನು ಕಾಣಬಹುದು.

    FILM

    ಡ್ರ*ಗ್ಸ್ ಕೇ*ಸ್‌ನಲ್ಲಿ ಆರೋಪಿಯಾಗಿದ್ದ ನಟಿ ರಾಗಿಣಿ ಖುಲಾಸೆ

    Published

    on

    ಡ್ರ*ಗ್ಸ್ ಕೇಸ್​ನಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರು ತಳುಕು ಹಾಕಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 2020ರ ಸೆಪ್ಟೆಂಬರ್​ನಲ್ಲಿ ರಾಗಿಣಿ ಯನ್ನು ಬಂಧಿಸಲಾಗಿತ್ತು. ಅವರು ಹಲವು ದಿನ ಜೈಲಿನಲ್ಲೂ ಕೂಡ ಇದ್ದರು. ನಾಲ್ಕು ವರ್ಷಗಳ ಬಳಿಕ ಡ್ರ*ಗ್ಸ್​ ಕೇಸ್​ನಲ್ಲಿ ರಾಗಿಣಿ ನಿರಪರಾಧಿ ಎಂಬುದು ಸಾಬೀತಾಗಿದೆ.

     

    ನಟಿಯ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಕೇಸ್ ಖುಲಾಸೆ ಮಾಡಿ ಹೈಕೋರ್ಟ್​ ಆದೇಶ ನೀಡಿದೆ. ಇದರಿಂದ ರಾಗಿಣಿ ಅವರು ರಿಲೀಫ್ ಆಗಿದ್ದಾರೆ. ಡ್ರ*ಗ್ಸ್ ಮಾ*ಫಿಯಾದೊಂದಿಗೆ ನಂಟು ಹೊಂದಿದ ಆರೋಪ ರಾಗಿಣಿ ಮೇಲೆ ಇತ್ತು. ಪಾರ್ಟಿ ಆಯೋಜಿಸಿ ಡ್ರ*ಗ್ಸ್ ಬಳಕೆಗೂ ಅವರು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು. ಈ ಕಾರಣಕ್ಕೆ ಎನ್​ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಕೇವಲ ಸಹ ಆರೋಪಿಗಳ ಹೇಳಿಕೆ ಆಧರಿಸಿ ರಾಗಿಣಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ, ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ” ಎಂದು ರಾಗಿಣಿ ಪರ ವಕೀಲ ಎ. ಮೊಹಮ್ಮದ್ ತಾಹಿರ್ ವಾದ ಮಾಡಿದ್ದರು.

    ಈ ವಾದವನ್ನು ಪರಿಣಿಸಿದ ನ್ಯಾಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ. ಎ 4 ಪ್ರಶಾಂತ್ ರಂಕಾ ವಿರುದ್ಧದ ಪ್ರಕರಣ ಕೂಡ ರದ್ದಾಗಿದೆ. ರಾಗಿಣಿ ದ್ವಿವೇದಿ ಅವರು ‘ಕೆಂಪೇಗೌಡ’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದವರು. ‘ತುಪ್ಪ ಬೇಕಾ ತುಪ್ಪ..’ ಹಾಡಿಗೆ ಡ್ಯಾನ್ಸ್ ಮಾಡಿ ತುಪ್ಪದ ಹುಡುಗಿ ಎಂದೇ ಫೇಮಸ್ ಆದರು. ಡ್ರಗ್ಸ್ ಕೇಸ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಕಪ್ಪು ಚುಕ್ಕಿ ಆಗಿತ್ತು. ಆದರೆ, ಈಗ ಅವರು ಆರೋಪ ಮುಕ್ತರಾಗಿದ್ದಾರೆ.

    Continue Reading

    FILM

    ಪ್ರಭಾಸ್ ಮದುವೆಯಾಗುತ್ತಿರುವ ಹುಡುಗಿ ಬಗ್ಗೆ ಸುಳಿವು ಬಿಟ್ಟು ಕೊಟ್ಟ ನಟ ರಾಮ್ ಚರಣ್

    Published

    on

    ಮಂಗಳೂರು/ಆಂಧ್ರಪ್ರದೇಶ : ತೆಲುಗು ನಟ ಪ್ರಭಾಸ್ ಮದುವೆ ಬಗ್ಗೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅವರ ಮದುವೆಯ ಬಗ್ಗೆ ಯಾವಾಗಲೂ ವದಂತಿಗಳು ಹಬ್ಬುತ್ತಿರುತ್ತದೆ. ಇದೀಗ ಮತ್ತೆ ಪ್ರಭಾಸ್ ಮದುವೆ ವಿಚಾರ  ಸುದ್ದಿಯಾಗುತ್ತಿದೆ. ಈ ಬಾರಿ ಗಾಸಿಪ್ ಅಲ್ಲ. ಪ್ರಭಾಸ್ ಮದುವೆ ಬಗ್ಗೆ ನಟ ರಾಮ್ ಚರಣ್ ತೇಜ ಅವರು ಮಾಹಿತಿ ನೀಡಿದ್ದಾರೆ.

    ಆಂಧ್ರ ಹುಡುಗಿ ಜೊತೆ ಮದುವೆ!

    ನಂದಮೂರಿ ಬಾಲಕೃಷ್ಣ ಅವರ ಜನಪ್ರಿಯ ಅನ್‌ಸ್ಟಾಪೇಬಲ್ ಟಾಕ್ ಶೋನಲ್ಲಿ ರಾಮ್ ಚರಣ್ ಸ್ನೇಹಿತ ಪ್ರಭಾಸ್ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಬಾಲಕೃಷ್ಣ ಅವರು ಪ್ರಭಾಸ್ ಮದುವೆ ಬಗ್ಗೆ ಕೇಳಿದ್ದಾರೆ. ಈ ವೇಳೆ ರಾಮ್ ಚರಣ್ ನಕ್ಕಿದ್ದಾರೆ. ಪ್ರಭಾಸ್ ಮದುವೆಯ ಕುರಿತು ಸುಳಿವು ನೀಡಿದ್ದಾರೆ. ಆಂಧ್ರಪ್ರದೇಶದ ಗಾನಪವರಂನ ಹುಡುಗಿಯನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.ಸದ್ಯ ಶೋನ ಟ್ರೇಲರ್ ಬಿಡುಗಡೆಯಾಗಿದ್ದು, ರಾಮ್ ಚರಣ್ ಹೇಳಿರುವ ಕೆಲವು ದೃಶ್ಯಗಳನ್ನು ತೋರಿಸಲಾಗಿದೆ. ಜನವರಿ 14 ರಂದು ಶೋ ಪ್ರಸಾರವಾಗಲಿದೆ. ಹಾಗಾಗಿ ಟ್ರೇಲರ್‌ನಲ್ಲಿ ತೋರಿಸಲಾಗಿರುವ ವಿಚಾರಗಳ ಸ್ಪಷ್ಟನೆ ಶೋ ಪೂರ್ತಿ ನೋಡಿದ ಮೇಲೆ ಗೊತ್ತಾಗಲಿದೆ.

    ಈ ಹಿಂದೆ ಬಾಹುಬಲಿ ಸಿನಿಮಾ ವೇಳೆ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ನಾನು ಶೀಘ್ರದಲ್ಲಿ ಮದುವೆಯಾಗುವುದಿಲ್ಲ. ಏಕೆಂದರೆ, ನನ್ನ ಮಹಿಳಾ ಅಭಿಮಾನಿಗಳ ಭಾವನೆಗಳನ್ನು ನೋಯಿಸಲು ನಾನು ಬಯಸುವುದಿಲ್ಲ ಎಂದಿದ್ದರು.

    ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಹೆಸರು ಹಲವು ಸಮಯಗಳಿಂದ ತಳುಕು ಹಾಕುತ್ತಿದೆ.  ಇತ್ತೀಚೆಗೆ ಕೃತಿ ಸನೊನ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಗುಲ್ಲೂ ಹಬ್ಬಿತ್ತು.  ಸದ್ಯ ಪ್ರಭಾಸ್ ಸಲಾರ್ ಬಳಿಕ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆ ಮೂರು ಸಿನಿಮಾ ಮಾಡುವ ಒಪ್ಪಂದ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ : ಶ್ರೀಮಂತನನ್ನು ಬಿಕಾರಿಯನ್ನಾಗಿಸಿತು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು !

    ಇನ್ನು ಆರ್ ಆರ್ ಆರ್ ಸಿನಿಮಾ ರಾಮ್ ಚರಣ್‌ಗೆ ದೊಡ್ಡ ಯಶಸ್ಸು ನೀಡಿತ್ತು. ಈಗ ಗೇಮ್ ಛೇಂಜರ್ ಆಗಿ ಅವರು ಬೆಳ್ಳಿ ಪರದೆಯ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಬಹುಭಾಷಾ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

    Continue Reading

    FILM

    ಕಾಟನ್ ಕ್ಯಾಂಡಿ ಹಾಡು: ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ

    Published

    on

    ರ್ಯಾಪರ್ ಚಂದನ್ ಶೆಟ್ಟಿ ಇತ್ತೀಚೆಗಷ್ಟೆ ‘ಕಾಟನ್ ಕ್ಯಾಂಡಿ’ ಹೆಸರಿನ ಹಾಡು ಬಿಡುಗಡೆ ಮಾಡಿದ್ದಾರೆ. ಇನ್​ಸ್ಟಾಗ್ರಾಂ ರೀಲ್​ಗಳಲ್ಲಿ ತಮ್ಮ ಹಾಡನ್ನು ಸಖತ್ ಪ್ರೊಮೋಷನ್ ಮಾಡುತ್ತಿದ್ದಾರೆ. ಬೇರೆ ಬೇರೆ ಸೆಲೆಬ್ರಿಟಿಗಳಿಂದ ತಮ್ಮ ಹಾಡಿಗೆ ರೀಲ್ಸ್ ಮಾಡಿಸುತ್ತಿದ್ದಾರೆ. ಆದರೆ ಇದೀಗ ಚಂದನ್ ಶೆಟ್ಟಿ ವಿರುದ್ಧ ಇದೀಗ ಕೃತಿ ಚೌರ್ಯ ಆರೋಪ ಎದುರಾಗಿದೆ. ಕನ್ನಡದ ರ್ಯಾಪರ್ ಒಬ್ಬರು, ಚಂದನ್ ಶೆಟ್ಟಿ ತಮ್ಮ ಹಳೆಯ ಹಾಡಿನ ಟ್ಯೂನ್ ಕದ್ದು, ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ತಾವು ಚಂದನ್ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ.

    ಯುವರಾಜ್ ಹೆಸರಿನ ಮತ್ತೊಬ್ಬ ರ್ಯಾಪರ್, ಚಂದನ್ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದು, ತಾನು ಆರು ವರ್ಷದ ಹಿಂದೆ ‘ವೈ ಬುಲ್ ಪಾರ್ಟಿ’ ಹಾಡಿನ ಮೊದಲ ಪಲ್ಲವಿ ಹಾಗೂ ಎರಡನೇ ಚರಣ ನಕಲು ಮಾಡಿ ತಮ್ಮ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಚಂದನ್ ಶೆಟ್ಟಿಯೇ ಈ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದೆ ಆದರೆ ಅವರು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ನನ್ನ ಬಳಿಯೂ ಅವರು ಈ ಬಗ್ಗೆ ಕೇಳಿಲ್ಲ. ಹಾಗಾಗಿ ಈಗ ನಾನೇ ಈ ಬಗ್ಗೆ ಮಾತನಾಡುತ್ತಿದ್ದೇನೆ. ಚಂದನ್ ಶೆಟ್ಟಿ ವಿರುದ್ಧ ನಾವು ಕಾನೂನು ಮೊರೆ ಹೋಗಲಿದ್ದೀವಿ’ ಎಂದಿದ್ದಾರೆ ಯುವರಾಜ್.

    ‘ಆ ಹಾಡನ್ನು ನಾನು ಬಹಳ ಕಷ್ಟಪಟ್ಟು ಮಾಡಿದ್ದೆ. ಆಗಲೇ ಹಣ ಕೂಡಿಟ್ಟು 17 ಲಕ್ಷ ರೂಪಾಯಿ ಖರ್ಚು ಮಾಡಿ ಹಾಡು ಮಾಡಿದ್ದೆ. ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ನನ್ನ ಟ್ಯೂನ್ ಮಾತ್ರವೇ ಅಲ್ಲದೆ ಇನ್ನೊಬ್ಬರ ಬಿಜಿಎಂ ಅನ್ನು ಸಹ ಕದ್ದಿದ್ದಾರೆ. ಚಂದನ್ ಶೆಟ್ಟಿ ಈಗಾಗಲೇ ಬೆಳೆದಿದ್ದಾರೆ. ಆದರೆ ಅವರು ಇನ್ನೊಬ್ಬರನ್ನೂ ಬೆಳೆಯಲು ಬಿಡಬೇಕು. ಚಂದನ್ ಶೆಟ್ಟಿ ನನಗೆ ಮೊದಲಿನಿಂದಲೂ ಪರಿಚಯ. ಟ್ಯೂನ್ ಬೇಕು ಎಂದು ಕೇಳಿದ್ದರೆ ನಾನೇ ಕೊಟ್ಟುಬಿಡುತ್ತಿದ್ದೆ’ ಎಂದಿದ್ದಾರೆ.

    ‘ಕಾಟನ್ ಕ್ಯಾಂಡಿ’ ಸಿನಿಮಾದ ಹಾಡಿನ ಕೆಲ ಸಾಲುಗಳು, ಯುವರಾಜ್ ಅವರ ಹಳೆಯ ಹಾಡನ್ನು ಹೋಲುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಚಂದನ್ ಶೆಟ್ಟಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಧ್ರುವ ಸರ್ಜಾ ನಟಿಸಿದ್ದ ‘ಪೊಗರು’ ಸಿನಿಮಾಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದರು. ಆ ಸಿನಿಮಾದ ಒಂದು ಹಾಡನ್ನು ಚಂದನ್ ಶೆಟ್ಟಿ ಬೇರೊಂದು ಸಿನಿಮಾದಿಂದ ಎತ್ತಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಗ ಸ್ಪಷ್ಟನೆ ನೀಡಿದ್ದ ಚಂದನ್ ಶೆಟ್ಟಿ ಎರಡೂ ಹಾಡಿನ ಟೆಂಪೊ ಬೇರೆ ಬೇರೆ ಎಂದು ಸಮಜಾಯಿಷಿ ನೀಡಿದ್ದರು.

    Continue Reading

    LATEST NEWS

    Trending