ಮಂಗಳೂರು/ಹೈದರಾಬಾದ್: ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿನಿಮಾದ ಪ್ರೀಮಿಯರ್ ಶೋ ವೇಳೆಯಲ್ಲಿ ಯಾವುದೇ ಮಾಹಿತಿ ನೀಡದೇ ಹೈದರಾಬಾದ್ ನ ಥಿಯೇಟರ್ ಒಂದಕ್ಕೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರು.
ನೆಚ್ಚಿನ ನಟನನ್ನು ನೋಡಲು ಅಲ್ಲಿ ನೆರೆದಿದ್ದ ಜನರು ಮುಗಿಬಿದ್ದ ಪರಿಣಾಮ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಘಟನೆಯ ಸಂಬಂಧ ಅಲ್ಲು ಅರ್ಜುನ್ ವಿರುದ್ಧ 105, 118(1)r/w 3(5) ಬಿಎನ್ಎಸ್ ಕಾಯ್ದೆಯಡಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಮೃತರ ಕುಟುಂಬ ಸದಸ್ಯರ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ‘ಪುಷ್ಪ 2’ ನೋಡಲು ಬಂದಾಗ ಅವಘಡ; ಮೃತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಕೊಟ್ಟ ಅಲ್ಲು ಅರ್ಜುನ್
ಪ್ರಕರಣ ಕುರಿತು ಈ ಮೊದಲೇ ಹೈದರಾಬಾದ್, ಚಿಕ್ಕಡಪಲ್ಲಿ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ನೊಟೀಸ್ಗೆ ಅಲ್ಲು ಅರ್ಜುನ್ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಆದರೆ ಅಲ್ಲು ಅರ್ಜುನ್, ಪ್ರಕರಣವನ್ನು ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆ ಇನ್ನೂ ನಡೆದಿಲ್ಲ.
ಈಗಾಗಲೇ ಇದೇ ಪ್ರಕರಣದಲ್ಲಿ ಸಂಧ್ಯಾ ಚಿತ್ರಮಂದಿರದ ಮಾಲೀಕ, ಚಿತ್ರಮಂದಿರದ ಮ್ಯಾನೇಜರ್ ಹಾಗೂ ಕಾಲ್ತುಳಿತ ನಡೆದ ದಿನ ಅಲ್ಲು ಅರ್ಜುನ್ ಜೊತೆಗೆ ಇದ್ದ ಕೆಲವು ಬೌನ್ಸರ್ಗಳನ್ನು ಸಹ ಈಗಾಗಲೇ ಬಂಧಿಸಲಾಗಿದೆ.
ಅಲ್ಲು ಅರ್ಜುನ್ ಮನೆಗೆ ಹೋಗಿ, ಅವರ ಬೆಡ್ರೂಂ ಬಳಿಗೆ ಹೋಗಿ ಅಲ್ಲು ಅರ್ಜುನ್ ಅನ್ನು ಕರೆತರಲಾಗಿದೆ. ಪೊಲೀಸ್ ಜೀಪು ಹತ್ತುವ ಮುಂಚೆ, ಈ ಬಗ್ಗೆ ಅಲ್ಲು ಅರ್ಜುನ್ ಪೊಲೀಸರು ತಮ್ಮನ್ನು ಬಂಧಿಸಿದ ವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆ ನಂತರ ಅಲ್ಲು ಅರ್ಜುನ್ ಪೊಲೀಸ್ ಜೀಪು ಹತ್ತುವ ವೇಳೆ, ಅವರ ತಂದೆ ಅಲ್ಲು ಅರವಿಂದ್ ಸಹ ಪೊಲೀಸ್ ಜೀಪು ಹತ್ತಿದ್ದರು, ಆದರೆ ಪೊಲೀಸರು ಅವರನ್ನು ಕೆಳಗೆ ಇಳಿಸಿ, ಕೇವಲ ಅಲ್ಲು ಅರ್ಜುನ್ ಅನ್ನು ಮಾತ್ರವೇ ಬಂಧಿಸಿ ಕರೆದೊಯ್ದಿದ್ದಾರೆ.
Pingback: ರೇಣುಕಾಸ್ವಾಮಿ ಕೊ*ಲೆ ಪ್ರಕರಣ : ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಗೆ ಜಾಮೀನು ಮಂಜೂರು - NAMMAKUDLA NEWS - ನಮ್ಮಕುಡ್ಲ ನ