Connect with us

DAKSHINA KANNADA

ಪುತ್ತೂರು ಶಾಸಕರ ವಿರುದ್ದ ಕಮೆಂಟ್ ಹಾಕಿದವನ ಮನೆಗೆ ಮಧ್ಯರಾತ್ರಿ ನುಗ್ಗಿದ ಕಾರ್ಯಕರ್ತರು..!

Published

on

ಫೇಸ್ ಬುಕ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರನ್ನ ನಿಂದಿಸಿ ಕಂಮೆಟ್ ಮಾಡಿದ ಆರೋಪದ ಮೇಲೆ ಶಾಸಕರ ಅಭಿಮಾನಿಗಳು ರಾತ್ರೋ ರಾತ್ರಿ‌ ಯುವಕನ ಮನೆಗೆ ಹೋಗಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.

ಪುತ್ತೂರು : ಫೇಸ್ ಬುಕ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರನ್ನ ನಿಂದಿಸಿ ಕಂಮೆಟ್ ಮಾಡಿದ ಆರೋಪದ ಮೇಲೆ ಶಾಸಕರ ಅಭಿಮಾನಿಗಳು ರಾತ್ರೋ ರಾತ್ರಿ‌ ಯುವಕನ ಮನೆಗೆ ಹೋಗಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಜಯನಗರದ ಪ್ರಮೀತ್ ಎಂಬಾತ ಫೇಸ್‌ಬುಕ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈಯವರ ನಿಂದನಾತ್ಮಕ ಬರಹವನ್ನ ಹಂಚಿಕೊಂಡಿದ್ದ.

ಇದರಿಂದ ಕೆರಳಿದ ಅಶೋಕ್ ರೈ ಅಭಿಮಾನಿಗಳು ರಾತ್ರೋ ರಾತ್ರಿ‌ ಪ್ರಮೀತ್ ಎಂಬವರ ಮನೆಗೆ ಹೋಗಿ, ಫೇಸ್ ಬುಕ್ ನಿಂದ ಬರಹವನ್ನ ಡಿಲಿಟ್ ಮಾಡುವಂತೆ ಅಶೋಕ್ ರೈ ಅಭಿಮಾನಿಗಳು ಒತ್ತಡ ಹೇರಿದ್ದಾರೆ.

ಈ ಸಂದರ್ಭ ಮಾತಿಗೆ ಮಾತು ಬೆಳೆದು ಎರಡು ತಂಡಗಳ ನಡುವೆ ವಾಗ್ವಾದ ನಡೆದಿದೆ.

ಮಾಹಿತಿ ಪಡೆದ ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಗಾನ ಕುಮಾರ್ ಆಗಮಿಸಿ ಎರಡು ತಂಡದವರನ್ನ ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದರು.

ಆದ್ರೂ ಅಶೋಕ್ ರೈ ಅಭಿಮಾನಿ ಬಳಗ ಪ್ರಮೀತ್ ಕ್ಷಮೆಯಾಚಿಸುಂತೆ ಪಟ್ಟು ಹಿಡಿದಿದ್ದು, ಕೊನೇ ಕ್ಷಣದಲ್ಲಿ ಪ್ರಮೀತ್ ಅಶೋಕ್ ರೈ ಬಗ್ಗೆ ನಿಂದನೆ ಮಾಡಿದ್ದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.

ಕಮೆಂಟ್ ಏನು ?
ಪುತ್ತೂರು ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಅಶೋಕ್ ರೈ ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ಅಶೋಕ್ ರೈ ಒಂದು ವಾರ ಕಳೆದ್ರು ದಾಖಲೆ ಬಿಡುಗಡೆ ಮಾಡದ ಕಾರಣ ಫೇಸ್‌ ಬುಕ್ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು,

ಟ್ರೋಲ್ ನ್ನ ಹಂಚಿಕೊಂಡಿದ್ದ ಪ್ರಮೀತ್ ಅದಕ್ಕೆ “ಅಪ್ಪನಿಗೆ ಹುಟ್ಟಿದ್ರೆ ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡಿ” ಎಂದು ಕಮೆಂಟ್ ಮಾಡಿದ್ದರು. ಇದೇ ಈ ಘಟನೆಗೆ ಕಾರಣವಾಗಿದೆ.

1 Comment

1 Comment

  1. Rohan Athikari

    26/05/2023 at 8:20 AM

    What’s wrong in coment? Let MLA prove his words.or else let him take his words back. This MLA looks too arrogant.always published in wrong reasons,

Leave a Reply

Your email address will not be published. Required fields are marked *

DAKSHINA KANNADA

ತುಳು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ‘ಗೋಲ್ಡನ್ ಮೂವೀಸ್’; ಕುದ್ರೋಳಿ ಕ್ಷೇತ್ರದಲ್ಲಿ ‘ಪ್ರೊಡಕ್ಷನ್ ನಂ 1’ಗೆ ಅದ್ದೂರಿ ಚಾಲನೆ

Published

on

ಮಂಗಳೂರು : ಚಂದನವನದಲ್ಲಿ ಸಿನಿಮಾ ನಿರ್ಮಾಣ ಮಾಡಿ ಗೆದ್ದಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್  ಅವರ ಪತ್ನಿ ಶಿಲ್ಪಾ ಗಣೇಶ್  ಕೋಸ್ಟಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಗೋಲ್ಡನ್ ಮೂವೀಸ್ ಸಂಸ್ಥೆ ತುಳು ಸಿನೆಮಾ ಇಂಡಸ್ಟ್ರಿಗೆ ಕಾಲಿಟ್ಟಿದೆ. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಈ ಪ್ರೊಡಕ್ಷನ್‌ನ ಮೊದಲ  ತುಳು ಸಿನಿಮಾ ಪ್ರೊಡಕ್ಷನ್ ನಂ 1ಗೆ ಮುಹೂರ್ತ ನೆರವೇರಿಸಲಾಗಿದೆ.

ಉದ್ಯಮಿ ಎಂ ಆರ್ ಜಿ ಗ್ರೂಪ್‌ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಮೊದಲ ಕ್ಲ್ಯಾಪ್‌ ಮಾಡಿದ್ದು, ಕುದ್ರೋಳಿ ಕ್ಷೇತ್ರದ ನವ ನಿರ್ಮಾಣದ ರೂವಾರಿ ಜನಾರ್ದನ ಪೂಜಾರಿ ಅವರ ಆಶೀರ್ವಾದೊಂದಿಗೆ ನಟ ಗಣೇಶ್ ಕ್ಯಾಮೆರಾ ರೋಲ್ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಉದ್ಯಮಿ ರೋಹನ್ ಮೊಂತೆರೋ, ಲೀಲಾಕ್ಷ ಕರ್ಕೇರ , ತುಳು ಸಿನೆಮಾದ ಕಲಾವಿದರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.

ಗಣೇಶ್ ಹೇಳಿದ್ದೇನು?

ಈ ಬಗ್ಗೆ ಮಾಹಿತಿ ನೀಡಿದ ನಟ ಗಣೇಶ್ , ನಾಲ್ಕು ವರ್ಷದ ಹಿಂದೆ ಮಂಗಳೂರಿಗೆ ಬಂದಾಗ ತುಳು ಸಿನೆಮಾ ಮಾಡಬೇಕು ಅಂತ ಯೋಚನೆ ಬಂದಿತ್ತು. ಉತ್ತಮ ಕಥೆಗಾಗಿ ಕಾಯುತ್ತಿದ್ದು, ಈಗ ಅಂತಹ ಒಂದು ಉತ್ತಮ ಕಥೆ ಸಿಕ್ಕಿದೆ. ಹೀಗಾಗಿ ಶಿಲ್ಪಾ ಈ ಸಿನೆಮಾ ಮಾಡಲು ಮುಂದಾಗಿದ್ದಾಳೆ. ನನ್ನ ನಂಟು ತುಳುನಾಡಿನ ಜೊತೆ ಜಾಸ್ತಿ ಇದ್ದ ಕಾರಣ ಅವಕಾಶ ಸಿಕ್ಕರೆ ಈ ಸಿನೆಮಾದಲ್ಲಿ ಹಾಡಿನ ಸೀನ್‌ನಲ್ಲಾದ್ರೂ ಕಾಣಸಿಕೊಳ್ಳುವುದಾಗಿ ಹೇಳಿದ್ದಾರೆ.

ಪ್ರೊಡಕ್ಷನ್ ನಂಬರ್ 1 ಸಿನಿಮಾ ತುಳುನಾಡಿನ ಸೊಗಡಿನೊಂದಿಗೆ ಸುಂದರ ಸಾಂಸಾರಿಕ ಕಥೆಯನ್ನು ಹೊಂದಿರುವ ಸಿನೆಮಾವಾಗಿದ್ದು, ನಾಯಕ ನಟನಾಗಿ ನಿತ್ಯ ಪ್ರಕಾಶ್ ಬಂಟ್ವಾಳ ಅವರು ಮೊದಲ ಬಾರಿಗೆ ಸಿನೆಮಾಗೆ ಎಂಟ್ರಿ ಕೊಟ್ಟಿದ್ದು, ಅಮೃತಾ ನಾಯಕ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಅಂದಿನ ಖ್ಯಾತ ಮಾಡಲ್ ಇಂದಿನ ಸನ್ಯಾಸಿನಿ ; ಯಾರು ಈ ಸುಂದರ ಸಾಧ್ವಿ ?

ಇನ್ನು ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದ  ಪ್ರಮುಖ ಕಲಾವಿದರು ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

 

Continue Reading

DAKSHINA KANNADA

ಮಂಗಳೂರು : ಬ್ಯಾಡ್ಮಿಂಟನ್ ಕೋರ್ಟ್‌ನಲ್ಲೇ ಕು*ಸಿದುಬಿದ್ದು ವಿದ್ಯಾರ್ಥಿ ಸಾ*ವು

Published

on

ಮಂಗಳೂರು: ಫ್ರೆಂಡ್ಸ್ ಜೊತೆ ಆಡುತ್ತಿದ್ದ ವೇಳೆ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾ*ವನ್ನಪ್ಪಿದ ಘಟನೆ ಮಂಗಳೂರಿನ ಫಳ್ನೀರ್‌ನಲ್ಲಿ ನಿನ್ನೆ (ಜ.15) ನಡೆದಿದೆ.

ಮೂಲತಃ ಅಡ್ಡೂರಿನ ನಿವಾಸಿಯಾಗಿದ್ದು, ಪ್ರಸ್ತುತ ಅತ್ತಾವರ ಐವರಿ ಟವರ್‌ನಲ್ಲಿ ವಾಸವಿದ್ದ ಶಹೀಮ್ (20) ಮೃ*ತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಇಸನದನೂ ಓದಿ : ಬಾಲಿವುಡ್‌ ನಟ ಸುದೀಪ್ ಪಾಂಡೆ ವಿಧಿವಶ

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದ ಶಹೀಮ್ ಗೆಳೆಯರೊಂದಿಗೆ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕೋರ್ಟ್‌ನಲ್ಲೇ ಕು*ಸಿದು ಬಿ*ದ್ದಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃ*ತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Continue Reading

DAKSHINA KANNADA

ಕರಾವಳಿ ಉತ್ಸವ : ಸಂಗೀತ ರಸಮಂಜರಿ, ಮುಖ್ಯಮಂತ್ರಿ ಆಗಮನ

Published

on

ಮಂಗಳೂರು : ಕರಾವಳಿ ಉತ್ಸವ ವಸ್ತುಪ್ರದರ್ಶನ ವೇದಿಕೆಯಲ್ಲಿ ಇಂದು (ಜ.16) ಸಂಜೆ 6 ಗಂಟೆಯಿಂದ ಸ್ಟಾರ್ ಸಿಂಗರ್ಸ್,ಮಂಗಳೂರು ತುಳು ಚಲನಚಿತ್ರ ಕಲಾವಿದರಿಂದ ‘ಸಂಗೀತ ರಸಮಂಜರಿ’ ಕಾರ್ಯಕ್ರಮ ನೆರವೇರಲಿದೆ.

ಮುಖ್ಯಮಂತ್ರಿ ಪ್ರವಾಸ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 17 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ನಾಳೆ ಬೆಳಗ್ಗೆ 11:30 – ಮಂಗಳೂರು ವಿಮಾನ ನಿಲ್ದಾಣ ಆಗಂಇಸಲಿದ್ದಾರೆ. ನಂತರ ಮೇರಿಹಿಲ್ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿ ಕಟ್ಟಡ ಶಿಲಾನ್ಯಾಸ ಭೇಟಿ ನೀಡಲಿದ್ದು, ಮಧ್ಯಾಹ್ನ 12:15 – ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ – ಕರ್ನಾಟಕ ಸುವರ್ಣ ಸಂಭ್ರಮ 50 ಉದ್ಘಾಟನೆ ಮಾಡಲಿದ್ದಾರೆ.

 

ಇದನ್ನೂ ಓದಿ : ನಾಗಾಸಾಧುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಾಂಶಗಳು : ಭಾಗ – 2

 

ಸಂಜೆ 5 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ 2025 ಉದ್ಘಾಟನೆ ಮಾಡಿ, ರಾತ್ರಿ 8 ಗಂಟೆಗೆ ವಿಮಾನದ ಮೂಲಕ ಮುಖ್ಯಮಂತ್ರಿಗಳು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

Continue Reading

LATEST NEWS

Trending

Exit mobile version