ಫೇಸ್ ಬುಕ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರನ್ನ ನಿಂದಿಸಿ ಕಂಮೆಟ್ ಮಾಡಿದ ಆರೋಪದ ಮೇಲೆ ಶಾಸಕರ ಅಭಿಮಾನಿಗಳು ರಾತ್ರೋ ರಾತ್ರಿ ಯುವಕನ ಮನೆಗೆ ಹೋಗಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.
ಪುತ್ತೂರು : ಫೇಸ್ ಬುಕ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರನ್ನ ನಿಂದಿಸಿ ಕಂಮೆಟ್ ಮಾಡಿದ ಆರೋಪದ ಮೇಲೆ ಶಾಸಕರ ಅಭಿಮಾನಿಗಳು ರಾತ್ರೋ ರಾತ್ರಿ ಯುವಕನ ಮನೆಗೆ ಹೋಗಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಜಯನಗರದ ಪ್ರಮೀತ್ ಎಂಬಾತ ಫೇಸ್‌ಬುಕ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈಯವರ ನಿಂದನಾತ್ಮಕ ಬರಹವನ್ನ ಹಂಚಿಕೊಂಡಿದ್ದ.
ಇದರಿಂದ ಕೆರಳಿದ ಅಶೋಕ್ ರೈ ಅಭಿಮಾನಿಗಳು ರಾತ್ರೋ ರಾತ್ರಿ ಪ್ರಮೀತ್ ಎಂಬವರ ಮನೆಗೆ ಹೋಗಿ, ಫೇಸ್ ಬುಕ್ ನಿಂದ ಬರಹವನ್ನ ಡಿಲಿಟ್ ಮಾಡುವಂತೆ ಅಶೋಕ್ ರೈ ಅಭಿಮಾನಿಗಳು ಒತ್ತಡ ಹೇರಿದ್ದಾರೆ.
ಈ ಸಂದರ್ಭ ಮಾತಿಗೆ ಮಾತು ಬೆಳೆದು ಎರಡು ತಂಡಗಳ ನಡುವೆ ವಾಗ್ವಾದ ನಡೆದಿದೆ.
ಮಾಹಿತಿ ಪಡೆದ ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಗಾನ ಕುಮಾರ್ ಆಗಮಿಸಿ ಎರಡು ತಂಡದವರನ್ನ ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದರು.
ಆದ್ರೂ ಅಶೋಕ್ ರೈ ಅಭಿಮಾನಿ ಬಳಗ ಪ್ರಮೀತ್ ಕ್ಷಮೆಯಾಚಿಸುಂತೆ ಪಟ್ಟು ಹಿಡಿದಿದ್ದು, ಕೊನೇ ಕ್ಷಣದಲ್ಲಿ ಪ್ರಮೀತ್ ಅಶೋಕ್ ರೈ ಬಗ್ಗೆ ನಿಂದನೆ ಮಾಡಿದ್ದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.
ಕಮೆಂಟ್ ಏನು ?
ಪುತ್ತೂರು ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಅಶೋಕ್ ರೈ ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ಅಶೋಕ್ ರೈ ಒಂದು ವಾರ ಕಳೆದ್ರು ದಾಖಲೆ ಬಿಡುಗಡೆ ಮಾಡದ ಕಾರಣ ಫೇಸ್ ಬುಕ್ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು,
ಟ್ರೋಲ್ ನ್ನ ಹಂಚಿಕೊಂಡಿದ್ದ ಪ್ರಮೀತ್ ಅದಕ್ಕೆ “ಅಪ್ಪನಿಗೆ ಹುಟ್ಟಿದ್ರೆ ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡಿ” ಎಂದು ಕಮೆಂಟ್ ಮಾಡಿದ್ದರು. ಇದೇ ಈ ಘಟನೆಗೆ ಕಾರಣವಾಗಿದೆ.
What’s wrong in coment? Let MLA prove his words.or else let him take his words back. This MLA looks too arrogant.always published in wrong reasons,