Saturday, November 26, 2022

ಹತ್ಯೆ ಮಾಡಿ ಸ್ನೇಹಿತನ ಶವದೊಂದಿಗೆ ಕಾರಿನಲ್ಲೇ ಠಾಣೆಗೆ ಬಂದ…!

ಬೆಂಗಳೂರು: ಮಹಿಳಾ ಸೊಸೈಟಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಲವು ಯೋಜನೆಯಡಿಯಲ್ಲಿ ಸಾಲ ನೀಡುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ ವ್ಯಕ್ತಿಯನ್ನು ಕೊಂದು ಆತನ ಶವವನ್ನು ಕಾರಿನಲ್ಲಿ ಪೊಲೀಸ್ ಠಾಣೆಗೆ ತಂದು ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಮಹೇಶಪ್ಪ ಎಂಬಾತನನ್ನು ಕೊಲೆ ಮಾಡಿದ ಆರೋಪಿ ರಾಜಶೇಖರ್ ಠಾಣೆಗೆ ಬಂದು ಶರಣಾಗಿದ್ದಾನೆ.
ಹಣದ ವಿಚಾರವಾಗಿ ಮಹೇಶಪ್ಪನನ್ನು ನಿನ್ನೆ ಕಾರಿನಲ್ಲಿ ರಾಜಶೇಖರ್ ಕರೆತಂದಿದ್ದ.

ಆ ಸಂದರ್ಭ ಇಬ್ಬರ ನಡುವೆ ಕಾರಿನಲ್ಲಿಯೇ ಗಲಾಟೆ ನಡೆದಿದ್ದು ಕೋಪದಲ್ಲಿ ರಾಜಶೇಖರ್ ಮಹೇಶಪ್ಪನಿಗೆ ರಾಡ್‌ನಿಂದ ಬಲವಾಗಿ ಹೊಡೆದಿದ್ದಾನೆ.

ಇದರ ಪರಿಣಾಮವಾಗಿ ಮಹೇಶಪ್ಪ ಕಾರಿನಲ್ಲಿ ಮೃತಪಟ್ಟಿದ್ದಾನೆ. ಇನ್ನು ಆತನ ಶವ ಸಮೇತ ಅದೇ ಕಾರಿನಲ್ಲಿ ಪೊಲೀಸ್ ಠಾಣೆಗೆ ಕರೆತಂದು ತಾನು ಪೊಲೀಸರಿಗೆ ಶರಣಾಗಿದ್ದಾನೆ.

ಹತ್ಯೆಯಾದ ಮಹೇಶಪ್ಪ ಹಲವು ಯೋಜನೆಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆಯುತ್ತಿದ್ದ.

ಆದರೆ ಹಣ ಪಡೆದು ತಿಂಗಳಾದರೂ ಲೋನ್ ಹಣ ಕೊಡಿಸದೆ, ತೆಗೆದುಕೊಂಡ ಹಣವೂ ವಾಪಸ್ ನೀಡದೆ ವಂಚಿಸಿದ್ದ ಎನ್ನಲಾಗಿದೆ.

ಇದೇ ಸಿಟ್ಟಿನಲ್ಲಿ ರಾಜಶೇಖರ್ ಆತನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...