ಪತ್ನಿಯ ತಂಗಿಯನ್ನೇ ಅತ್ಯಾಚಾರಗೈದು ಫೋಟೋ ಕ್ಲಿಕ್ಕಿಸಿ ಬೆದರಿಸಿದ ಭೂಪ..!
ಬಂಟ್ವಾಳ : ವಿಟ್ಲಪಡ್ನೂರು ಗ್ರಾಮದ ಕಡಂಬು ಬೆದ್ರಕಾಡಿನ ಯುವತಿಯನ್ನು ಆಕೆಯ ಅಕ್ಕನ ಪತಿ ಆರೋಪಿ ಬಶೀರ್ ಅತ್ಯಾಚಾರವೆಸಗಿದ ಘಟನೆ ನಡೆದಿದೆ.
ಯುವತಿ ಮತ್ತು ಆಕೆಯ ತಾಯಿ ಇಬ್ಬರೇ ಮನೆಯಲ್ಲಿ ಇದ್ದಾಗ ಆರೋಪಿ ಬಶೀರ್, ಆಕೆಯ ತಾಯಿಯನ್ನು ಬಲವಂತವಾಗಿ ಮನೆಯಿಂದ ಹೊರಗೆ ಕಳುಹಿಸಿ, ಯುವತಿಯನ್ನು ರೂಮಿಗೆ ಎಳೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ಪೋಟೋಗಳನ್ನು ಆತನ ಮೊಬೈಲ್‌ನಲ್ಲಿ ಸೆರೆ ಹಿಡಿದು ನೀನು ನನ್ನೊಂದಿಗೆ ಅನೈತಿಕ ಸಂಬಂಧ ಇಡದೇ ಇದ್ದರೆ ತನ್ನ ಮೊಬೈಲ್‌ನಲ್ಲಿರುವ ಆಕೆಯ ಪೋಟೋಗಳನ್ನು ವೈರಲ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆನ್ನಲಾಗಿದೆ.
ಆರೋಪಿಯ ವಿರುದ್ಧ ಯುವತಿಯು ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ