Connect with us

LATEST NEWS

ಮೋಜಿಗಾಗಿಯೂ ಕಿಡ್ನಾಪ್ ಮಾಡುತ್ತಾರೆ ಅಂದ್ರೆ ನಂಬೋ ವಿಷ್ಯಾನಾ..!

Published

on

ಮೋಜಿಗಾಗಿಯೂ ಕಿಡ್ನಾಪ್ ಮಾಡುತ್ತಾರೆ ಅಂದ್ರೆ ನಂಬೋ ವಿಷ್ಯಾನಾ..!

ಮಂಗಳೂರು: ಮಂಗಳೂರಿನ ಪದವಿನಂಗಡಿ ಬಳಿಯ ಕೊಂಚಾಡಿ ವೆಂಕಟರಮಣ ಮಹಾಲಸಾ ದೇವಾಲಯದ ಮುಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಸವಾರರು ಬಾಲಕನನ್ನು ಅಪಹರಿಸಿದ್ದರು.  ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಆರೋಪಿ ಯುವಕರು ತಾವು ಮೋಜಿಗಾಗಿ ಈ ಕೃತ್ಯವೆಸಗಿ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್‌ ಮಾಡಲು  ಮಾಡಿರುವುದಾಗಿ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ಮೂವರು ಬಾಲಕರು ಕೊಂಚಾಡಿ ಮಹಾಲಸಾ ದೇವಾಲಯದಿಂದ ಮನೆ ಕಡೆಗೆ ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರು ಗೋಣಿಚೀಲ ಹಾಕಿ ಬಾಲಕರನ್ನು ಕಿಡ್ನಾಪ್‌ ಮಾಡಲು ಯತ್ನಿಸಿದ್ದರು.ಈ ಸಂದರ್ಭ ಒಬ್ಬ ಬಾಲಕ ಓಡಿ ತಪ್ಪಿಸಿಕೊಂಡಿದ್ದರೆ, ಇನ್ನೊಬ್ಬನನ್ನು ಹಿಡಿಯುವಾಗ ಸಾರ್ವಜನಿಕರು ಬಂದರೆಂದು ಬಾಲಕರನ್ನು ಬಿಟ್ಟು ಆರೋಪಿಗಳು ಓಡಿಹೋಗಿದ್ದರು.

ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಇದನ್ನು ಆಧರಿಸಿ ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು.

ಆ ವೇಳೆ ತನಿಖೆ ನಡೆಸಿದಾಗ ಮೂವರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಾವು ಮೋಜಿಗಾಗಿ ಈ ಕೃತ್ಯ ಎಸಗಿದ್ದು, ಕಿಡ್ನಾಪ್‌ ಮಾಡುವ ದೃಶ್ಯಗಳನ್ನು ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಲು ಇದನ್ನು ಮಾಡಿರುವುದಾಗಿ ಹೇಳಿದ್ದಾರೆ.

ಇನ್ನು ಕಿಡ್ನಾಪ್‌ ವೇಳೆ ತಪ್ಪಿಸಿಕೊಂಡ ಬಾಲಕ ಕೂಡಾ ಅಂದು ನಡೆದ ಕೃತ್ಯವನ್ನು ಮಾಧ್ಯಮದ ಮುಂದೆ ಹೇಳಿದ್ದಾನೆ.  ಕಿಡ್ನಾಪ್‌ ವೇಳೆ ತಪ್ಪಿಸಿಕೊಂಡ ಹಾಗೂ ಛೀರಾಡಿ ಜನರನ್ನು ಸೇರಿಸಿ ಆರೋಪಿಗಳಿಂದ ಪರಾರಿಯಾದ ಬಾಲಕರ ದಿಟ್ಟ ನಡೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಬಳಿಕ  ಸುದ್ದಿಗೋಷ್ಠಿ ನಡೆಸಿದ ಕಮಿಷನರ್‌ ಅವರು ಸಿಸಿಟಿವಿ ಫೂಟೇಜ್ ಆಧಾರದಲ್ಲಿ ನಾವು ತನಿಖೆ ಮಾಡಿದಾಗ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ ಎಂದರು.

ಆರೋಪಿಗಳಾದ ರಕ್ಷಕ್‌ ಶೆಟ್ಟಿ, ಆಲಿಸ್ಟರ್‌, ರಾಹುಲ್ ಸಿನ್ಹಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ವಿರುದ್ಧ ಈಗಾಗಲೇ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಡ್ರಗ್ಸ್‌ ಪ್ರಕರಣದಲ್ಲಿ ಇವರು ಶಾಮೀಲಾಗಿದ್ದಾರೆ ಎಂದು ಕಮಿಷನರ್ ವಿವರಿಸಿದರು. ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗುವುದು ಎಂದರು.

ಮೂವರು ಬಾಲಕರು ಕೊಂಚಾಡಿ ಮಹಾಲಸಾ ದೇವಾಲಯದಿಂದ ಮನೆ ಕಡೆಗೆ ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರು ಗೋಣಿಚೀಲ ಹಾಕಿ ಬಾಲಕರನ್ನು ಕಿಡ್ನಾಪ್‌ ಮಾಡಲು ಯತ್ನಿಸಿದ್ದರು.

ಈ ಸಂದರ್ಭ ಒಬ್ಬ ಬಾಲಕ ಓಡಿ ತಪ್ಪಿಸಿಕೊಂಡಿದ್ದರೆ, ಇನ್ನೊಬ್ಬನನ್ನು ಹಿಡಿಯುವಾಗ ಸಾರ್ವಜನಿಕರು ಬಂದರೆಂದು ಬಾಲಕರನ್ನು ಬಿಟ್ಟು ಆರೋಪಿಗಳು ಓಡಿಹೋಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಇದನ್ನು ಆಧರಿಸಿ ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು.

DAKSHINA KANNADA

ಬಡಗುತಿಟ್ಟು ಯಕ್ಷಗಾನದ ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ..

Published

on

ಉಡುಪಿ: ಬಡಗುತಿಟ್ಟು ಯಕ್ಷಗಾನ ಲೋಕದ ಶ್ರೇಷ್ಠ ಭಾಗವತ, ಸ್ವರ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ (67ವ) ಇಹಲೋಕ ತ್ಯಜಿಸಿದ್ದಾರೆ. ಅಲ್ಪಕಾಲದಿಂದ ಅಸೌಖ್ಯದಿಂದಿದ್ದ ಇವರು ಬೆಂಗಳೂರಿನಲ್ಲಿರುವ ಪುತ್ರನ  ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಮನೆಯಲ್ಲಿ ಇಂದು(ಎ.25) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಕಾಳಿಂಗ ನಾವುಡರ ಬಳಿಕ ಮಧುರ ಕಂಠದಿಂದ ಹೆಚ್ಚು ಜನಪ್ರಿಯತೆಗಳಿಸಿದ್ದ ಕೀರ್ತಿ ಅವರದ್ದಾಗಿತ್ತು.

bharadeshwara

ಭಾಗವತಿಕೆಯಲ್ಲಿ ಗಾನ ಕೋಗಿಲೆ ಎನಿಸಿಕೊಂಡ ಧಾರೇಶ್ವರ:

ಇವರು ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿ ಪೇರ್ಡೂರು ಮೇಳದಲ್ಲಿ ನಿವೃತ್ತಿ ಹೊಂದಿದ್ದರು. ಆರಂಭದಲ್ಲಿ ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದ ಇವರು ಭಾಗವತರಾಗಿ ಪ್ರಖ್ಯಾತಿಗೊಂಡಿದ್ದರು. ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದ ಇವರು ಪ್ರಯೋಗಶೀಲ ಭಾಗವತರೆಂದೇ ಹೆಸರುವಾಸಿಯಾಗಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ 28 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ  ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ‌ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ನಂತರ ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಮೇಳ ಬಿಟ್ಟು 10 ವರ್ಷದ ಬಳಿಕವೂ ಅನಿವಾರ್ಯ ಸಂದರ್ಭದಲ್ಲಿ ಭಾಗವತರಾಗಿ ಕಲಾ ಸೇವೆ ಮಾಡಿ ಕಲಾವಿದರ ಮನ ಗೆದ್ದಿದ್ದರು.

ಮುಂದೆ ಓದಿ..; ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್ ಕೊಂಡುಯ್ಯುತ್ತೀರಾ? ಹಾಗಿದ್ರೆ ಇದನ್ನು ಗಮನಿಸಿ

ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಸಜ್ಜನ, ಸದ್ಗುಣಿ, ಮಿತಭಾಷಿಯಾಗಿದ್ದ ಧಾರೇಶ್ವರರು ಯಕ್ಷಗಾನಕ್ಕೆ ಕಾಳಿಂಗ ನಾವಡರ ಅನಂತರ ಭಾಗವತಿಕೆ ತಾರಾ ಮೌಲ್ಯ ತಂದಿದ್ದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳದ ತಿರುಗಾಟ ನಿಲ್ಲಿಸಿದ್ದರು. ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗ, ಯಕ್ಷ ಅಭಿಮಾನಿಗಳನ್ನು ಅಗಲಿದ್ದಾರೆ. ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ.

Continue Reading

DAKSHINA KANNADA

ಹಿಂಜಾವೇ ಮುಖಂಡ ಅಕ್ಷಯ್ ರಜಪೂತ್‌ಗೆ ಗಡಿಪಾರು..!

Published

on

ಪುತ್ತೂರು:  ಹಿಂದೂ ಜಾಗರಣ ವೇದಿಕೆಯ ಮುಖಂಡ ಅಕ್ಷಯ್ ರಜಪೂತ್‌ ರವರನ್ನು (ನಿನ್ನೆ) ಎ.25ರಂದು ರಾತ್ರಿ ಗಡಿಪಾರು ಮಾಡಲಾಗಿದೆ. ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿಯ ಸದಸ್ಯ ಅಕ್ಷಯ್ ರಜಪೂತ್‌ ರವರನ್ನು ತಡರಾತ್ರಿ ವೇಳೆ ಅವರ ಮನೆಯಲ್ಲಿ ಬಂಧಿಸಿ ಇದೀಗ ಅವರನ್ನು ಹಾವೇರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

akshaya rajaputh

ಮುಂದೆ ಓದಿ..; ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್‌ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!

ಅಕ್ಷಯ್‌ ಗಡಿಪಾರನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು ಕಾಂಗ್ರೆಸ್ಸಿನ ಹಿಂದೂ ವಿರೋಧೀ ನೀತಿ ಎಂದು ಹೇಳಿದ್ದಾರೆ.

Continue Reading

LATEST NEWS

ಪ್ರಿಯಕರನ ಮೇಲೆ ಆ್ಯ*ಸಿಡ್ ಎರಚಿದ ಯುವತಿ!

Published

on

ಮಂಗಳೂರು/ ಉತ್ತರ ಪ್ರದೇಶ : ಪ್ರೀತಿಸಿ ಮೋಸ ಮಾಡಿದರೆ ಯುವಕರು ಪ್ರೇಯಸಿಯನ್ನು ಹ*ತ್ಯೆ ಮಾಡುವುದನ್ನು, ಆ್ಯಸಿ*ಡ್ ಎರಚುವ ಸುದ್ದಿಗಳನ್ನು ಕೇಳುತ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ ವಿಭಿನ್ನವಾದ ಘಟನೆ ನಡೆದಿದೆ. ಇಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಮೇಲೆ ಆ್ಯ*ಸಿಡ್ ದಾಳಿ ನಡೆಸಿದ್ದಾರೆ. ಮಂಗಳವಾರ(ಏ.23) ಬಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


ಕೃತ್ಯ ಎಸಗಿದ್ದು ಯಾಕೆ?

ಯುವತಿ ಈ ರೀತಿ ದುಷ್ಕೃತ್ಯ ಮೆರೆಯಲು ಕಾರಣ ‘ಪ್ರೀತಿ’. ಆಕೆಯ ಪ್ರಿಯತಮ ಪ್ರೀತಿಸಿ ಮೋಸ ಮಾಡಿ ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದ ಎನ್ನಲಾಗಿದೆ. ಹೀಗಾಗಿ ಯುವತಿ ಆತನ ಮುಖದ ಮೇಲೆ ಆ್ಯ*ಸಿಡ್ ಎರಚಿದ್ದಾಳೆ. ಮದುವೆಯ ಮೆರವಣಿಗೆಯ ವೇಳೆ ಯುವತಿ ವೇಷ ಮರೆಸಿಕೊಂಡು ಬಂದು ವರನ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ ಎನ್ನಲಾಗಿದೆ.

ಆ್ಯ*ಸಿಡ್ ಬಿದ್ದ ಪರಿಣಾಮ ಗಾಯಗೊಂಡ ಯುವಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನಿಗೆ ಆ್ಯ*ಸಿಡ್ ಎರಚಿದ ಯುವತಿಯನ್ನು ಹಿಡಿದ ಮಹಿಳೆಯರು ಸರಿಯಾಗಿ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ತಾಯಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಲಿಯಾದ ಪೊಲೀಸ್ ಅಧಿಕಾರಿ ಮುನ್ನಾ ಲಾಲ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ : ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್‌ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!
ಯುವಕ – ಯುವತಿ ಪರಸ್ಪರ ಪ್ರೀತಿಸಿದ್ದರು. ದೈಹಿಕ ಸಂಪರ್ಕ ಹೊಂದಿದ್ದರು. ಆದರೆ, ಇವರ ಸಂಬಂಧವನ್ನು ಎರಡೂ ಕುಟುಂಬ ವಿರೋಧಿಸಿತ್ತು ಎನ್ನಲಾಗಿದೆ. ಏಪ್ರಿಲ್ 22 ರಂದು ಯುವಕನ ಮನೆಯವರು ಬೇರೆ ಯುವತಿಯೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡಿದ್ದರು. ಇದರಿಂದ ಕೋಪಗೊಂಡ ಯುವತಿ ಮದುವೆ ಮೆರವಣಿಗೆಯಲ್ಲಿ ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.

 

Continue Reading

LATEST NEWS

Trending