‘ಬಿಗ್ ಬಾಸ್ ಕನ್ನಡ ಸೀಸನ್ 11’ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಆದ್ರೆ ಕಳೆದ ವಾರ ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಆಚೆ ಬಂದಿದ್ದಾರೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಯಾರು ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೂ ಮೊದಲೇ ಔಟ್ ಆಗಿದ್ದಾರೆ. 105ಕ್ಕೂ ಹೆಚ್ಚು ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದ ಅವರು ಈಗ ಆಟದಿಂದ ಹೊರ ಹೋಗಿದ್ದಾರೆ. ಅವರು ಆಟವನ್ನು ಹತ್ತಿರದಿಂದ ನೋಡಿದವರು. ಯಾರು ದೊಡ್ಮನೆಯಿಂದ ಹೊರ ಹೋಗುತ್ತಾರೆ ಹಾಗೂ ಯಾರೂ ಗೆಲ್ಲಬಹುದು ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ, ಟಾಪ್ 5 ಫೈನಲಿಸ್ಟ್ ಜಾಗದಲ್ಲಿ ತ್ರಿವಿಕ್ರಮ್, ಹನುಮಂತ, ರಜತ್, ಭವ್ಯಾ ಗೌಡ ಹಾಗೂ ಉಗ್ರಂ ಮಂಜು ಇರಲಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ವಾರ ಮೋಕ್ಷಿತಾ ಅಥವಾ ಧನರಾಜ್ ಅವರು ಆಚೆ ಬರಬಹುದು ಎಂದು ಹೇಳಿದ್ದಾರೆ.
ಅಲ್ಲದೇ ಬಿಗ್ ಬಾಸ್ ಸೀಸನ್ 11 ಫಿನಾಲೆ ಟ್ರೋಫಿ ಗೆಲ್ಲೋದು ಯಾರು ಅಂತ ಕೂಡ ಹೇಳಿದ್ದಾರೆ. ಹನುಮಂತ ತುಂಬಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ಹನುಮಂತ ಟಾಪ್ 2ನಲ್ಲಿ ಇರುತ್ತಾರೆ ಅಥವಾ ಗೆಲ್ಲಲುಬಹುದು. ಆದ್ರೆ ನನಗೆ ತ್ರಿವಿಕ್ರಮ್ ಅವರು ಗೆಲ್ಲಬೇಕು. ಅವ್ರು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿದ್ದಾರೆ. ಈ ಬಿಗ್ ಬಾಸ್ ಗೆಲುವು ಅವರಿಗೆ ತುಂಬಾನೇ ಮುಖ್ಯ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಬಿಗ್ ಬಾಸ್ ಮನೆಯಲೀಗ ಮಿಡ್ ವೀಕ್ ಎಲಿಮಿನೇಷನ್ ಟೆನ್ಶನ್ ಶುರುವಾಗಿದೆ.
ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ನಾಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಲಿದ್ದಾರೆ.
ಬಿಗ್ ಬಾಸ್ ಕೊಟ್ಟ ಟಾಸ್ಕ್ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ನಿಂದ ಪಾರಾಗಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ಉಳಿದುಕೊಂಡಿದ್ದು, ಈ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಇನ್ನು ಇಬ್ಬರು ವಾರಾಂತ್ಯಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ. ಕೊನೆಗೆ ವಾರಾಂತ್ಯದಲ್ಲಿ ಮೂರು ಜನ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ.
ಹೀಗಾಗಿ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಕೊಟ್ಟ ಟಾಸ್ಕ್ ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ಅದರಲ್ಲೂ ರಿಲೀಸ್ ಆದ ಪ್ರೋಮೋದಲ್ಲಿ, ಇದು ಮಿಡ್ ವೀಕ್ ಎಲಿಮಿನೇಷನ್ ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಇರುವ ಕೊನೆಯ ಟಾಸ್ಕ್ ಎಂದು ಭಯ ಹುಟ್ಟಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಚೈತ್ರಾ ಕುಂದಾಪುರ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಮಾತಿನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಚೈತ್ರಾ ಕುಂದಾಪುರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಚೈತ್ರಾ ಕುಂದಾಪುರ ಅವರು ಟಾಸ್ಕ್‌ಗಳಲ್ಲಿ ಅಷ್ಟಾಗಿ ಮಿಂಚಿರಲಿಲ್ಲ. ಆದರೆ ಮಾತು, ವಾದ, ವಾಗ್ವಾದಗಳಿಂದಲೇ ಬಿಗ್ ಬಾಸ್ ವೀಕ್ಷಕರ ಗಮನಸೆಳೆದಿದ್ದರು. ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಚೈತ್ರಾ ಕುಂದಾಪುರ ನೇರವಾಗಿ ಮಾತನಾಡುತ್ತಿದ್ದರು. ತಮ್ಮ ಮಾತಿನಿಂದಲೇ ಹಲವು ಬಾರಿ ಮನೆಯವರ ಕೆಂಗಣ್ಣಿಗೆ ಸಹ ಚೈತ್ರಾ ಗುರಿಯಾಗಿದ್ದರು.
ಚೈತ್ರಾ ಕುಂದಾಪುರ ಎಲಿಮಿನೇಟ್ ಆದ ವಿಚಾರ ತಿಳಿಯುತ್ತಿದ್ದಂತೆ ಅವರು ಬಿಗ್ ಬಾಸ್ ನಿಂದ ಪಡೆದ ಸಂಭಾವನೆ ಸುದ್ದಿ ವೈರಲ್ ಆಗುತ್ತಿದೆ. ಚೈತ್ರಾ ಕುಂದಾಪುರ ವಾರಕ್ಕೆ 1 ಲಕ್ಷದವರೆಗೆ ಸಂಭಾವನೆ ಪಡೆಯುತ್ತಿದ್ದರು ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ. ಈ ಪ್ರಕಾರ 15 ವಾರಗಳಿಗೆ ಒಟ್ಟು 15,00,000 ರೂಪಾಯಿ ಸಂಭಾವನೆ ಪಡೆದಂತಾಗುತ್ತದೆ. ಇದಲ್ಲದೇ ಚೈತ್ರಾ ಕುಂದಾಪುರ ಅವರಿಗೆ 1,50,000 ರೂಪಾಯಿ ಸ್ಪಾನ್ಸರ್ ಕಡೆಯಿಂದ ಬಹುಮಾನದ ಮೊತ್ತ ಸಿಗಲಿದೆ. ಜೊತೆಗೆ 50,000 ದ ಗಿಫ್ಟ್ ವೋಚರ್ ಸಹ ಸಿಗಲಿದೆ.
ಇದೆಲ್ಲವನ್ನೂ ಒಟ್ಟುಗೂಡಿಸಿದರೆ ಚೈತ್ರಾ ಕುಂದಾಪುರ ಬಿಗ್‌ಬಾಸ್ ನಿಂದ ಒಟ್ಟು 16,50,000 ರೂಪಾಯಿ ಹಣ ಪಡೆದಂತಾಗುವುದು. (ಇದು ವರದಿಗಳನ್ನು ಮತ್ತು ವೈರಲ್ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ. ನಿಖರ ಮಾಹಿತಿಯಲ್ಲ.)
ಬಿಗ್‌ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ತಮ್ಮ ಜರ್ನಿ ಮುಗಿಸಿ ನಿನ್ನೆ ಆಚೆ ಬಂದಿದ್ದಾರೆ. ಬರೋಬ್ಬರಿ 106 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದ ಚೈತ್ರಾ ಅವರು, ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಮನೆಯಿಂದ ಹೊರಬಿದ್ದ ಬೆನ್ನಲ್ಲೇ ಬಿಗ್‌ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ಎದುರಾದರು. ಈ ವೇಳೆ ಸುದೀಪ್, ಚೈತ್ರಾ ಅವರ ಬಿಗ್‌ಬಾಸ್ ಜರ್ನಿಯ ವಿಟಿ ತೋರಿಸಿದರು. ಇದನ್ನು ನೋಡಿದ ಚೈತ್ರಾ ಕುಂದಾಪುರ ತುಂಬಾನೇ ಭಾವುಕರಾದರು. ಅದನ್ನು ಗಮನಿಸಿದ ಕಿಚ್ಚ ಸುದೀಪ್, ಚೈತ್ರಾ ಅವರ ಬಳಿ ಬಂದು ಕಣ್ಣೀರು ಒರೆಸಿದರು. ಕಿಚ್ಚ ಸುದೀಪ್ ಅವರ ಈ ದೊಡ್ಡ ಗುಣವನ್ನು ಕಂಡ ಅಭಿಮಾನಿಗಳು ಖುಷಿಯಾಗಿದ್ದಾರೆ.
ಬಳಿಕ ಮಾತನಾಡಿದ ಸುದೀಪ್, ನೀವು ತುಂಬಾ ಚೆನ್ನಾಗಿ ಆಡಿದ್ದೀರಿ. ನಿಮಗೆ ನಾವು ತೋರಿಸಿರುವ ವಿಡಿಯೋದಲ್ಲಿ ಒಂದು ಅದ್ಭುತ ಇದೆ. ಎಷ್ಟು ಸಲ ನೀವು ಕಳಪೆ ತೆಗೆದುಕೊಂಡಿದ್ದೀರಿ ಅನ್ನೋದು ಇಂಪಾರ್ಟೆಂಟ್ ಅಲ್ಲ. ವಿಡಿಯೋ ಫಿನಿಶ್ ಆಗಿರೋದು ಉತ್ತಮದೊಂದಿಗೆ. ಬಿಗ್ಬಾಸ್ನಿಂದ ನಿಮಗೆ ಒಳ್ಳೆಯದಾಗಿದೆ ಅಂದುಕೊಳ್ತೀನಿ ಎಂದರು.
ನಂತರ ಚೈತ್ರಾ ಕುಂದಾಪುರ ಮಾತನಾಡಿ.. ಮೊದಲನೇ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಬರಬಾರದು ಅಂತ ಅಂದುಕೊಂಡಿದ್ದೆ. ಆದರೆ ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಇರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಹೇಗೆ ಬದುಕಬಹುದು ಅನ್ನೋದನ್ನು ಬಿಗ್‌ಬಾಸ್ ಮನೆಯಲ್ಲಿ ಕಲಿತೆ. ಇಲ್ಲಿಗೆ ಬಂದು ಇಷ್ಟು ಜನರ ಜೊತೆಗೆ ಹೇಗೆ ಬದುಕಬೇಕು ಅಂತ ಕಲಿತ್ತಿದ್ದೇನೆ. 105 ದಿನದ ಸಾರ್ಥಕವಾಗಿ ಬದುಕಿದ್ದೇನೆ ಎಂದರು.
Pingback: ಮ*ರಣದ ನಂತರ ಏನು ಎಂದು ಹುಡುಕಿದಾತ ಸಾ*ವಿಗೆ ಶರಣಾದ! - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ? - NAMMAKUDLA NEWS - ನಮ್ಮಕುಡ್ಲ ನ್ಯೂಸ್