ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಲ್ಲಿ ರಾಜ್ಯದ 21 ಅಧಿಕಾರಿಗಳ ಮೇಲೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿದೆ.
ಇಂದು ಬೆಳಗ್ಗೆ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ ಶೋಧ ನಡೆಸುತ್ತಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ 21 ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದು,
ಆರೋಪಿತರ ಮನೆ, ಕಚೇರಿಗಳು, ಸಂಬಂಧಿಕರು ಮತ್ತು ನಿಕಟವರ್ತಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
ಎಸಿಬಿ ಸಂಸ್ಥೆಯ 300ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಉಡುಪಿ ಜಿಲ್ಲೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗದ ಇಲಾಖೆ ಸಹಾಯಕ ಅಭಿಯಂತರರು, ಹರೀಶ್ ಇವರ ಮನೆ ಹಾಗೂ ಕಚೇರಿ ಮೇಲೆ ಇಂದು ಬೆಳಗ್ಗೆ ಉಡುಪಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉಡುಪಿಯ ಕೊರಂಗ್ರಪಾಡಿಯಲ್ಲಿರವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗದ ಇಲಾಖೆ ಸಹಾಯಕ ಅಭಿಯಂತರರು, ಹರೀಶ್ ಅವರ ಮನೆಯ ಮೇಲೆ ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
1. ಭೀಮ ರಾವ್ ವೈ ಪವಾರ್, ಸೂಪರಿಡಿಟೆಂಟ್ ಇಂಜಿನಿಯರ್ ಬೆಳಗಾವಿ
2. ಹರೀಶ್, ಸಹಾಯಕ ಅಭಿಯಂತರರು, , ಸಣ್ಣ ನೀರಾವರಿ , ಉಡುಪಿ
3. ರಾಮಕೃಷ್ಣ ಎಚ್. ವಿ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಹಾಸನ
4. ರಾಜೀವ್ ಪುರಸಯ್ಯ ನಾಯಕ್, ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕಾರವಾರ
5. ಬಿ. ಆರ್. ಬೋಪಯ್ಯ, ಕಿರಿಯ ಅಭಿಯಂತರರು, ಪೊನ್ನಂ ಪೇಟೆ ಜಿಲ್ಲಾ ಪಂಚಾಯತ್,
6. ಮಧುಸೂದನ್, ಜಿಲ್ಲಾ ರಿಜಸ್ಟರ್, ಐಜಿಆರ್ ಕಚೇರಿ, ಬೆಳಗಾವಿ
7. ಪರಮೇಶ್ವರಪ್ಪ, ಸಹಾಯಕ ಅಭಿಯಂತರರು, ಸಣ್ಣ ನೀರಾವರಿ, ಹೂವಿನಡಗಲಿ
8. ಯಲ್ಲಪ್ಪ ಎನ್ ಪದಸಾಲಿ, ಆರ್‌ಟಿಒ, ಬಾಗಲಕೋಟೆ
9. ಶಂಕರಪ್ಪ ನಾಗಪ್ಪ ಗೋಗಿ, ಯೋಜನ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ
10. ಪ್ರದೀಪ್ ಎಸ್ ಆಲೂರು, ಪಂಚಾಯಿತಿ ಗ್ರೇಡ್ ಕಾರ್ಯದರ್ಶಿ, ಆರ್‌ಡಿಪಿಆರ್, ಗದಗ
11. ಸಿದ್ದಪ್ಪ ಟಿ, ಉಪ ಮುಖ್ಯ ಎಲೆಕ್ಟ್ರಿಕಲ್ ಅಧಿಕಾರಿ, ಬೆಂಗಳೂರು
12. ತಿಪ್ಪಣ್ಣ ಪಿ ಸಿರಸಂಗಿ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ, ಬೀದರ್
13.ಮೃತ್ಯುಂಜಯ ಚನ್ನಬಸಯ್ಯ ತಿರಣಿ, ಸಹಾಯಕ ಕಂಟ್ರೋಲರ್, ಕರ್ನಾಟಕ ವೆಟೆರ್ನಿಟಿ, ಅನಿಮಲ್ ಮತ್ತು ಫಿಷರಿ ಸೈನ್ಸ್ ಯೂನಿವರ್ಸಿಟಿ, ಬೀದರ್
14. ಮೋಹನ್ ಕುಮಾರ್, ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ.
15.ಶ್ರೀಧರ್, ಜಿಲ್ಲಾ ರಿಜಿಸ್ಟರ್, ಕಾರವಾರ
16. ಮಂಜುನಾಥ್ ಜಿ, ನಿರ್ವೃತ್ತ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ
17. ಶಿವಲಿಂಗಯ್ಯ, ಗ್ರೂಪ್ ಸಿ ನೌಕರ, ಬಿಡಿಎ
18. ಉದಯ ರವಿ, ಪೊಲೀಸ್ ಇನ್ಸ್ಪೆಕ್ಟರ್, ಕೊಪ್ಪಳ
19.ಬಿ.ಜಿ. ತಿಪ್ಪಯ್ಯ, ಕೇಸ್ ವರ್ಕರ್, ಕುದೂರು ಪುರಸಭೆ.
20. ಚಂದ್ರಪ್ಪ ಸಿ. ಹೊಳೆಕಾರ್, ಯುಟಿಪಿ, ಅಧಿಕಾರಿ, ರಾಣಿಬೆನ್ನೂರು.
21.ಜನಾರ್ಧನ್, ನಿವೃತ್ತ, ರಿಜಿಸ್ಟರ್ ಭೂ ಮೌಲ್ಯಮಾಪಕರು, ಬೆಂಗಳೂರು.
ಎಸಿಬಿ ಅಧಿಕಾರಿಗಳು ಈ 21 ಅಧಿಕಾರಿಗಳಿಗೆ ಸೇರಿದ 80 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಯನ್ನು ನಡೆಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಎಸಿಬಿ ದಾಳಿ ಮುಗಿದ ಬಳಿಕವಷ್ಟೇ ಯಾವ ಅಧಿಕಾರಿ ಎಷ್ಟು ಅಕ್ರಮ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂಬುದು ತಿಳಿದುಬರಲಿದೆ.