ಬೆಂಗಳೂರು: ಮಧ್ಯವರ್ತಿಗಳು, ಏಜೆಂಟರು, ಭ್ರಷ್ಟ, ಅಕ್ರಮ ವಿಧಾನಗಳಿಂದ ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ತಮ್ಮ ವೈಯಕ್ತಿಕ ಪ್ರಭಾವದ ಮೂಲಕ ಬೆಂಗಳೂರಿನ ಚಟುವಟಿಕೆಗಳಲ್ಲಿ ಅವ್ಯವಹಾರಗಳು ಮತ್ತು ಇತರ ಅಕ್ರಮಗಳಲ್ಲಿ ತೊಡಗಿರುವ ಶಂಕಿತರಿಗೆ ಸಂಬಂಧಿಸಿದಂತೆ ಎಸಿಬಿ ಬೆಂಗಳೂರು ನಗರ 9 ವಿವಿಧ ಸ್ಥಳಗಳಲ್ಲಿ ಇಂದು ಬೆಳಗ್ಗೆ ಶೋಧ ನಡೆಸಿದೆ.
ಅಭಿವೃದ್ಧಿ ಪ್ರಾಧಿಕಾರ. ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಸುಮಾರು 100 ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸುತ್ತಿದ್ದಾರೆ.
ರಘು ಬಿ ಎನ್.ಚಾಮರಾಜಪೇಟೆ., ಮೋಹನ್, ಮನೋರಾಯನ ಪಾಳ್ಯ. ಆರ್.ಟಿ.ನಗರ., ಮನೋಜ್ ದೊಮ್ಮಲೂರು., ಮುನಿರತ್ನ ಕೆನಗುಂಟೆ, ಮಲ್ತಳ್ಳಿ, ತೇಜಸ್ವಿ,
ಆರ್.ಆರ್ ನಗರ., ಅಶ್ವತ್ ಮುದ್ದಿನಪಾಳ್ಯ, ರಾಮ ಚಾಮುಂಡೇಶ್ವರಿನಗರ, ಲಕ್ಷ್ಮಣ, ಚಾಮುಂಡೇಶ್ವರಿ ನಗರ ಮತ್ತು ಚಿಕ್ಕಹನುಮ್ಮಯ್ಯ, ಮುದ್ದಿನಪಾಳ್ಯ ಬೆಂಗಳೂರು ಇವರ ನಿವಾಸದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಶೋಧ ಕಾರ್ಯಾಚರಣೆ ನಡೆಸಿದೆ.
ಕೆಲವೇ ದಿನಗಳ ಹಿಂದೆ ಕೆಪಿಟಿಸಿಎಲ್ ಎಇಇ ದಯಾಸುಂದರ್ ಸುಂದರ್ ಸೇರಿ ಹಲವು ಮಂದಿ ಭ್ರಷ್ಟ ಅಧಿಕಾರಿಗಳ ಮನೆಗೆ ಎಸಿಬಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ನಗದು, ಚಿನ್ನಾಭರಣ, ದಾಖಲೆ ಪತ್ರಗಳು ಸಿಕ್ಕಿದ್ದವು.
ಅಧಿಕಾರಿಗಳ ಕಾರ್ಯಾಚರಣೆ ಮತ್ತೆ ಮುಂದುವರಿದಿದ್ದು, ಅದರ ಮುಂದುವರಿದ ಭಾಗವಾಗಿ ಇದೀಗ ಇಂದೂ ಕೂಡಾ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.