Monday, August 15, 2022

ಉಪ್ಪಿನಂಗಡಿ: ಅಪ್ರಾಪ್ತೆಯನ್ನು ಅತ್ಯಾಚಾರಗೈದು ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಉಪ್ಪಿನಂಗಡಿ: ಅಪ್ರಾಪ್ತೆಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್ (21)ಬಂಧಿತ ಆರೋಪಿ.


ಘಟನೆ ವಿವರ
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದಲ್ಲಿ 13 ವರ್ಷದ ಬಾಲಕಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಯ ನೆರೆಮನೆಯ ಆರೋಪಿ ಮುನಾಸಿರ್ ಆಗಾಗ ಆಕೆಯ ಮನೆಗೆ ಬಂದು ಹೊಗುತ್ತಿದ್ದನು.

ಮೇ 30 ರಂದು ಬೆಳಿಗ್ಗೆ ಆಕೆ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬನದ ಬಳಿ ತಲುಪಿದಾಗ, ಮುನಾಸಿರ್ ಕಾರಲ್ಲಿ ಬಂದು ನಿನ್ನನ್ನು ‌ಶಾಲೆಗೆ ಬಿಡುತ್ತೇನೆ ಎಂದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೆ ಉಪ್ಪಿನಂಗಡಿಯ ಲಾಡ್ಜ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದನು.

ನಂತರ ಮತ್ತೆ ಜೂ. 7 ರಂದು ಬಾಲಕಿ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಹತ್ತಿರ ತಲುಪಿದಾಗ ಆರೋಪಿ ಮುನಾಸಿರ್ ಮತ್ತೆ ಬಂದು ಆಕೆಯನ್ನು ಬಲತ್ಕಾರವಾಗಿ ಕೈ ಹಿಡಿದು ಎಳೆದು ಕಾರಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿಯ ಲಾಡ್ಜ್ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌಜ೯ನ್ಯ ನಡೆಸಿ,

ಈ ವಿಷಯವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿತ್ತು.
ಬಾಲಕಿ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಉಪ್ಪಿನಂಗಡಿಯಲ್ಲಿ ಠಾಣೆಯಲ್ಲಿ ಅ.ಕ್ರ 71-2022 ಕಲಂ:363,376, (2) (ಎಫ್) (ಎನ್), 506 IPC ಮತ್ತು ಕಲಂ:5 (ಎಲ್),6 ಪೋಕ್ಸೋ ಕಾಯ್ದೆಯಂತೆ ಕೇಸು ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ಮೈಸೂರಿಗೆ ತೆರಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಮರೋಡಿಯಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಸಂಭ್ರಮ

ವೇಣೂರು: ಮರೋಡಿ ಅರುಣೋದಯ ಯುವಕ ಮಂಡಲದ ಆಶ್ರಯದಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಕಾರ್ಯಕ್ರಮವು ಮರೋಡಿಯ ಬೊವೂರಿ ಜಯ ಪೂಜಾರಿಯವರ ಗದ್ದೆಯಲ್ಲಿ ಭಾನುವಾರ ನಡೆಯಿತು.ಶಾಸಕ ಹರೀಶ್ ಪೂಂಜ ಕ್ರೀಡಾಕೂಟವನ್ನು ಉದ್ಘಾಟಿಸಿ, ನಮ್ಮ ಮಣ್ಣಿನ ಕ್ರೀಡೆಯನ್ನು...

ಕನಸಿನ, ಆಕರ್ಷಣೆಯ ಹಾಗೂ ಅಭಿವೃದ್ದಿಯ ಮಂಗಳೂರಿಗೆ ಪಣ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

ಮಂಗಳೂರು: ಕನಸಿನ, ಆಕರ್ಷಣೆಯ ಹಾಗೂ ಅಭಿವೃದ್ದಿಯ ಮಂಗಳೂರನ್ನು ಮಾಡಲು ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯದ...

“ಇಂದು ಸೂರ್ಯಾಸ್ತದೊಳಗೆ ನಿಯಮಬದ್ಧವಾಗಿ ಧ್ವಜವನ್ನು ಸುರಕ್ಷಿತವಾಗಿ ಮಡಚಿಡಿ”

ಮಂಗಳೂರು: ಸ್ವಾತಂತ್ರ್ಯದ ಆಚರಣೆಯು ಈಗಾಗಲೇ ಮುಗಿದಿದ್ದು, ಇಂದು ಸಂಜೆ ಸೂರ್ಯಾಸ್ತಮಾನದೊಳಗೆ ನಿಯಮಬದ್ಧವಾಗಿ ತ್ರಿವರ್ಣ ಧ್ವಜವನ್ನು ಸುರಕ್ಷಿತವಾಗಿ ಮಡಚಿಡುವಂತೆ ಎಲ್ಲಾ ಸಾರ್ವಜನಿಕರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.ಈ ಬಗ್ಗೆ...