Thursday, September 29, 2022

ಮಂಗಳೂರು: ಪತ್ರಕರ್ತರಿಗಾಗಿ ಪ್ರೆಸ್‌ಕ್ಲಬ್‌‌ನಲ್ಲಿ ಅಭಾ ಕಾರ್ಡ್ ನೋಂದಣಿ ಶಿಬಿರ

ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್‌ ಹಾಗೂ ಪತ್ರಿಕಾಭವನ ಟ್ರಸ್ಟ್ ಸಹಭಾಗಿತ್ವದಲ್ಲಿ ಪ್ರೆಸ್ ಕ್ಲಬ್‌ನಲ್ಲಿ ಅಭಾ ಕಾರ್ಡ್ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ.


ಶಿಬಿರ ಉದ್ಘಾಟಿಸಿದ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ ದೇಶಾದ್ಯಂತ ಆಯುಷ್ಠಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ- ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಈಗಾಗಲೇ ಆರಂಭವಾಗಿದೆ.


ಹೀಗಾಗಿ, ಆಯುಷ್ಠಾನ್ ಕಾರ್ಡ್ ಪಡೆದಿರುವ ಜಿಲ್ಲೆಯ ನಾಗರಿಕರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಿ ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದ ಮೂಲಕ ಉಚಿತವಾಗಿ ಹೊಸ ಕಾರ್ಡ್ ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಎಟಿಎಂ ಕಾರ್ಡ್ ರೀತಿಯ ಡಿಜಿಟಲ್ ಮಾದರಿಯ ಕಾರ್ಡ್ ವಿತರಿಸಲಾಗುತ್ತಿದೆ. ಈ ಕಾರ್ಡ್ ಮೂಲಕ ದೇಶದ ಯಾವುದೇ ಪ್ರದೇಶದಲ್ಲಿಯೂ ಆಯುಷ್ಮಾನ್ ಯೋಜನೆಯಲ್ಲಿ ಆರೋಗ್ಯ ಸೇವೆ ಪಡೆಯಲು ಸಾಧ್ಯ.

ಆಯುಷ್ಮಾನ್ ಯೋಜನೆಯಡಿ ಹಲವು ರೋಗಗಳಿಗೆ ಸರಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತದೆ. ಅಲ್ಲಿ ಸಿಗದ ಚಿಕಿತ್ಸೆಗೆ ಮಾತ್ರ ಆಯಾ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಗೆ ರೆಫರಲ್ ಮಾಡುತ್ತಾರೆ. ಈ ವಿಧಾನ ಆನ್‌ಲೈನ್ ಆಗಲಿದೆ.

ಈ ಎಲ್ಲಾ ವಿಷಯಗಳ ಹೆಚ್ಚಿನ ಮಾಹಿತಿಗೆ ಸಮೀಪದ ಸರಕಾರಿ ಆರೋಗ್ಯ ಕೇಂದ್ರವನ್ನು , ಆಸ್ಪತ್ರೆಯಲ್ಲಿನ ಆರೋಗ್ಯ ಮಿತ್ರರನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.

ಸಾರ್ವಜನಿಕರು ಪಡೆದುಕೊಂಡ ಆರೋಗ್ಯ ಸೇವೆಯನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಆಯುಷ್ಠಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಎಲ್ಲರೂ ಡಿಜಿಟಲ್ ಖಾತೆ ತೆರೆಯಬೇಕು.

ಡಿಜಿಟಲ್ ಆರೋಗ್ಯ ಖಾತೆಗಳನ್ನು ಈ ಖಾತೆಗೆ ಲಿಂಕ್ ಮಾಡಬಹುದಾಗಿದ್ದು , ಪ್ರತೀ ವ್ಯಕ್ತಿಯ ಆರೋಗ್ಯ ಕೈಪಿಡಿ ಸಿದ್ಧಗೊಳ್ಳಲಿದೆ. ಚಿಕಿತ್ಸೆ ಮತ್ತು ಔಷಧೋಪಚಾರ ಎಲ್ಲದಕ್ಕೂ ವೈದ್ಯರನ್ನು ಖುದ್ದು ಕಾಣುವ ಅನಿವಾರ್ಯತೆ ಕಡಿಮೆ ಮಾಡುವ ಉದ್ದೇಶ ಇದರಿಂದ ಸಾಧ್ಯ ಎಂದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್, ಗ್ರಾಮ ಒನ್‌ನ ವಾಯ್ಲೆಟ್ ಡಿಸೋಜ ಉಪಸ್ಥಿತರಿದ್ದರು.

ಈ ಅಭಾ ಕಾರ್ಡ್ ನೋಂದಾವಣೆ ಶಿಬಿರ ಇಂದು ಕೂಡಾ ನಡೆಯುತ್ತಿದ್ದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಇರಲಿದೆ.

ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ವಿನಂತಿಸಿದ್ದಾರೆ.

ರೇಶನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಆಧಾರ್ ನಂಬರ್ ಲಿಂಕ್ ಆದ ಮೊಬೈಲ್ ಸಹ ಕಡ್ಡಾಯವಾಗಿ ತರಬೇಕು ಎಂದು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ರಸ್ತೆ ಅವ್ಯವಸ್ಥೆ-ಕೋಣಗಳ ಜೊತೆ ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ

ಉಡುಪಿ: ಮಲ್ಪೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ಪ್ರವಾಸಿಗರ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಸದ್ಯ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ಅನುಭವಿಸುತ್ತಿರುವ ಕಷ್ಟವನ್ನು...

ಉಡುಪಿ: ಮೊಬೈಲ್‌ ಶಾಪ್‌ನಲ್ಲಿ 1 ಲಕ್ಷ ರೂ ಮೌಲ್ಯದ ಸೊತ್ತು ಕದ್ದ ಕಳ್ಳ-ಪ್ರಕರಣ ದಾಖಲು

ಉಡುಪಿ: ಮೊಬೈಲ್ ಅಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಮತ್ತಿತರ ವಸ್ತುಗಳನ್ನು ಕಳವುಗೈದ ಘಟನೆ ಉಡುಪಿಯ ಮಲ್ಪೆಯ ಬಸ್ ನಿಲ್ದಾಣ ಸಮೀಪದ ಅಂಗಡಿಯಲ್ಲಿ ನಡೆದಿದೆ.ಇತ್ತೀಚಿನ ದಿನಗಳಲ್ಲಿ ಉಡುಪಿಯಲ್ಲಿ ಕಳ್ಳಕಾಕರ ಹಾವಳಿ ಮತ್ತೆ...

ಮಂಗಳೂರು: ಲೋಕಕಂಟಕ ನಿವೃತ್ತಿಗಾಗಿ ವೆಂಕಟರಮಣ ದೇಗುಲದಲ್ಲಿ ಸಹಸ್ರ ಚಂಡಿಕಾ ಮಹಾಯಾಗ ಪ್ರಾರಂಭ

ಮಂಗಳೂರು: ಶಾರದಾ ಮಹೋತ್ಸವದ 100ನೇ ವರ್ಷದ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ಸಹಸ್ರ ಚಂಡಿಕಾ ಮಹಾಯಾಗ ಇಂದು ಪ್ರಾರಂಭಗೊಂಡಿತು.ಲೋಕ ಕಂಟಕ ನಿವೃತ್ತಿಗಾಗಿ ಲೋಕದಲ್ಲಿ ಉಂಟಾದ ಕ್ಷೋಭೆಯ...