Saturday, November 26, 2022

ಕಲಾಸೇವೆಗಾಗಿ ತುಳುವ ಅಬ್ದುಲ್ ರಜಾಕ್‌ಗೆ ಬಿಲ್ಲವ ಸಂಘ ಕುವೈಟ್‌ನಿಂದ ಸನ್ಮಾನ

ಕುವೈಟ್: ಬಿಲ್ಲವ ಸಂಘ ಕುವೈಟ್ ಇದರ 10ನೇ ವರ್ಷದ ವಾರ್ಷಿಕೋತ್ಸವ ‘ಬಿಲ್ಲವ ಚಾವಡಿ 2022’ನ್ನು ಕುವೈಟ್ ನ ಆಸ್ಪೈರ್ ಇಂಡಿಯನ್ ಇಂಟರ್ ನಾಷನಲ್ ಸ್ಕೂಲ್ ಆಡಿಟೋರಿಯಮ್ ಅಬ್ಬಾಸಿಯಾ ಸಂಭ್ರಮ ಸಡಗರದಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಂಘ ಕುವೈಟ್ ಅಧ್ಯಕ್ಷರಾದ ಸುಷ್ಮಾ ಮನೋಜ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಕುವೈಟ್ ಇದರ ಬ್ರಾಂಚ್ ಹೆಡ್ ಅಬ್ದುಲ್ ರಜಾಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.


ಗೌರವ ಅತಿಥಿಯಾಗಿ ಸಂಜೀವ ನಾರಾಯಣ್ ಭಾಗವಹಿಸಿದ್ದರು.
ಇದೇ ಸಂಧರ್ಭ ಮುಖ್ಯ ಅತಿಥಿಯಾದ ಅಬ್ದುಲ್ ರಜಾಕ್ ಅವರ ಸಾಮಾಜಮುಖಿ ಕಾರ್ಯಕ್ರಮ ಜೊತೆಗೆ ಕಲಾಸೇವೆಗಾಗಿ ಬಿಲ್ಲವ ಸಂಘ ಕುವೈಟ್ ವತಿಯಿಂದ ಸನ್ಮಾನಿಸಲಾಯಿತು.


ಡಾ. ದೇವದಾಸ್ ಕಾಪಿಕಾಡ್ ಅವರ ಚಾಪರ್ಕ ನಾಟಕ ತಂಡದ ಪ್ರಮುಖ ಕಲಾವಿದರೂ ಆಗಿದ್ದ ರಜಾಕ್ ದೇವೆರ ದೀಲಕಾ ಆಪುಂಡು, ನಂಕ್ ದೇವೆರುಲ್ಲೆರ್, ನರ್ವಸ್ ನಾರಾಯಣೆ ಬೊಳ್ಳಿ ಹೀಗೆ ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ ಪ್ರತಿಭಾನ್ವಿತ ಕಲಾವಿದ.

ಕುವೈಟ್ ನಲ್ಲಿರುವ ತುಳುವರಿಗೆ ಸದಾ ಸಹಾಯಹಸ್ತ ಚಾಚುವ ರಜಾಕ್ ತುಳುನಾಡಿನ ಹೆಮ್ಮೆಯ ಸಂಘಟನೆ ತುಳುಕೂಟ ಕುವೈಟ್ ನ ಉಪಾಧ್ಯಕ್ಷರೂ ಹೌದು.

ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಅಬ್ದುಲ್ ರಜಾಕ್ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ದಾಂತದಿಂದ ಬೆಳೆದು ಬಂದವನು ನಾನು. ಬಾಲ್ಯದಿಂದಲೂ ನಾನು ಮಸೀದಿಯ ಆಜಾನ್, ದೇವಸ್ಥಾನದ ಭಜನೆ, ಚರ್ಚ್ ನ ಘಂಟೆ ಶಬ್ದ ಕೇಳಿ ಬೆಳೆದವನು.

ಇದು ನಮ್ಮ ತುಳುನಾಡಿನ ಸಂಸ್ಕೃತಿ, ನಮ್ಮ ಮಕ್ಕಳು ಸಮಾಜದಲ್ಲಿ ಸಾಧನೆ ಮಾಡಬೇಕು ಅಂದರೆ ನಮ್ಮ ಮನೆಯಿಂದಲೇ ಒಳ್ಳೆಯ ಸಂಸ್ಕಾರ ಮಕ್ಕಳಿಗೆ ನೀಡಬೇಕು. ಅದೇ ರೀತಿ ಬಿಲ್ಲವ ಸಂಘ ಕುವೈಟ್ ನಲ್ಲಿರುವ ತುಳುವರನ್ನು ಉತ್ತಮ ದಾರಿಯಲ್ಲಿ ಸಂಘಟಿಸುವ ಪುಣ್ಯದ ಕೆಲಸ ಮಾಡುತ್ತಿದೆ ಎಂದರು.


ಭಾರತದ ರಾಷ್ಟ್ರಗೀತೆ ಮತ್ತು ಕುವೈಟ್ ನ ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ತುಳುನಾಡಿನ ವೈಭವವನ್ನು ಪಸರಿಸುವ ಡೆನಾನ ಡೆನಾನಾ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಭೈರಾಸ್ ಭಾಸ್ಕರೆ ತುಳು ನಾಟಕ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹುಲಿವೇಷ ಕುಣಿತ, ಯಕ್ಷಗಾನ, ಗುಡ್ಡದ ಭೂತ, ತುಳುನಾಡಿನ ಜಾನಪದ ನೃತ್ಯಗಳು ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

LEAVE A REPLY

Please enter your comment!
Please enter your name here

Hot Topics

ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳಕ್ಕೆ ಉಡುಪಿ ಶಾಸಕ ರಘುಪತಿ ಭಟ್ ತೀವ್ರ ವಿರೋಧ..!

ಸುರತ್ಕಲ್‌ನಲ್ಲಿ ಕಾರ್ಯಾಚರಿಸುತಿದ್ದ ಟೋಲ್‌ಗೇಟ್‌ನ್ನು ಮುಚ್ಚಿ ಅದನ್ನು ಹೆಜಮಾಡಿ ಟೋಲ್‌ಗೆ ವಿಲೀನಗೊಳಿಸಿ ಟೋಲ್ ಶುಲ್ಕ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ತೀವ್ರವಾಗಿ ವಿರೋಧಿಸಿದ್ದಾರೆ.ಉಡುಪಿ : ಸುರತ್ಕಲ್‌ನಲ್ಲಿ...

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...