ನವದೆಹಲಿ: ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಎಪಿ ಪಕ್ಷ 58 ಸ್ಥಾನಗಳನ್ನು ಗೆಲ್ಲಬಹುದು ಎಂದು ಪಕ್ಷದ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಎಎಪಿಯ ಗುಜರಾತ್ ಉಸ್ತುವಾರಿ, ಡಾ. ಸಂದೀಪ್ ಪಾಠಕ್, ‘ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಬಗ್ಗೆ ಅತೃಪ್ತರಾಗಿರುವ ಗ್ರಾಮೀಣ ಮತದಾರರು ಮತ್ತು ನಗರ ಪ್ರದೇಶಗಳಲ್ಲಿನ ಕೆಳ ಮತ್ತು ಮಧ್ಯಮ ವರ್ಗದ ಮತದಾರರು ಎಎಪಿಯನ್ನು ಬೆಂಬಲಿಸುವ ಸಾಧ್ಯತೆಗಳಿವೆ.
‘ನಮ್ಮ ಆಂತರಿಕ ಸಮೀಕ್ಷೆಯ ಪ್ರಕಾರ, ಗುಜರಾತ್‌ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನಾವು 58 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆ.
ಗ್ರಾಮೀಣ ಗುಜರಾತ್‌ನ ಜನರು ನಮಗೆ ಮತ ಹಾಕಲಿದ್ದಾರೆ. ನಗರ ಪ್ರದೇಶದ ಕೆಳ ಮತ್ತು ಮಧ್ಯಮ ವರ್ಗದವರು ಬದಲಾವಣೆ ಬಯಸಿದ್ದು, ಅವರೂ ಕೂಡ ನಮಗೆ ಮತ ಹಾಕುತ್ತಾರೆ.
ಗುಜರಾತ್‌ನ ಬಿಜೆಪಿ ಸರ್ಕಾರ ಗುಪ್ತಚರ ಇಲಾಖೆ ಮೂಲಕ ನಡೆಸಿದ ಸಮೀಕ್ಷೆಯಲ್ಲೂ ಎಎಪಿಗೆ 55 ಸ್ಥಾನಗಳು ಸಿಗಲಿವೆ ಎಂದು ಉಲ್ಲೇಖಿಸಲಾಗಿದೆ ಎಂದು ಪಾಠಕ್ ತಿಳಿಸಿದರು.