Connect with us

ದುಬೈನಿಂದ ಆಗಮಿಸುವ ಆತ್ಮೀಯ ಗೆಳೆಯರ ಕ್ವಾರಂಟೈನ್ ಗೆ ವಿಟ್ಲದ ಸ್ನೇಹಿತರು ಮಾಡಿದ್ದಾದರೂ ಏನು.??

Published

on

ದುಬೈನಿಂದ ಆಗಮಿಸುವ ಆತ್ಮೀಯ ಗೆಳೆಯರ ಕ್ವಾರಂಟೈನ್ ಗೆ ವಿಟ್ಲದ ಸ್ನೇಹಿತರು ಮಾಡಿದ್ದಾದರೂ ಏನು.??

ವಿಟ್ಲ: ಕರಾವಳಿಯ ಯುವಕರು ಶಿಕ್ಷಣ ಮುಗಿದೊಡನೆ ಉದ್ಯೋಗಕ್ಕಾಗಿ ಅರಸಿ ಹೋಗೋದು ಗಲ್ಫ್ ರಾಷ್ಟ್ರಗಳತ್ತ.

ಒಂದು ಅಥವಾ ಎರಡು ವರ್ಷಕ್ಕೊಮ್ಮೆಯೋ ಊರಿಗೆ ಬರುವವರಾದರೂ ತಮ್ಮ ಮನೆ, ಸ್ನೇಹಿತರೊಡನೆ ಫೋನ್ ಮೂಲಕವೇ ಆತ್ಮೀಯ ಸಂಪರ್ಕದಲ್ಲಿರುತ್ತಾರೆ.

ಊರಿಗೆ ಬಂದೊಡನೆ ಗೆಳೆಯರು, ಸಂಬಂಧಿಕರ ಮನೆ ಎನ್ನುತ್ತಾ ಓಡಾಟ ನಡೆಸುತ್ತಾ, ಅವರಿಗೂ ವಿದೇಶದಿಂದ ತಂದ ಗಿಫ್ಟ್ ನೀಡೋದು ಇತ್ಯಾದಿಗಳು ಕಾಮನ್ ಕಾಮನ್ ಆಗಿರುತ್ತೆ.

ಆದರೆ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಊರಿನ ಯುವಕರ ಇಂದಿನ ಸ್ಥಿತಿ ಅಷ್ಟೊಂದು ಸರಿಯಿಲ್ಲ.

ಕೊರೊನಾ ಲಾಕ್ ಡೌನ್ ನಿಂದಾಗಿ ಅದೆಷ್ಟೋ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಸುಮಾರು ಮಂದಿ ಕರಾವಳಿಗೆ ಬಂದಿಳಿದು ಕ್ವಾರಂಟೈನ್‌ನಲ್ಲಿದ್ದಾರೆ.

ಹಾಗಂತ ಕೊರೊನಾ ಬಿಸಿ ಇದೆಯೆಂದು ತಮ್ಮ ನೆಚ್ಚಿನ ಸ್ನೇಹಿತರನ್ನ ಮರೆಯೋದಿಕ್ಕೆ ಆಗುತ್ತಾ.

ಅದಕ್ಕೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕೆಲ ಯುವಕರು ದುಬೈ ಸ್ನೇಹಿತರಿಗಾಗಿ ಅಂತಾನೇ ಸ್ಪೆಷಲ್ ಆಗಿ ಕ್ವಾರಂಟೈನ್ ಕುಟೀರ ನಿರ್ಮಿಸಿ ಮಾದರಿಯಾಗಿದ್ದಾರೆ.

ಊರಿಗೆ ಮರಳಲಿರುವ ದುಬೈ ಸ್ನೇಹಿತರ ಎರಡನೇ ಹಂತದ ಕ್ವಾರಂಟೈನ್ ಗೆ ವಿಟ್ಲ ಸಮೀಪದ ಪೆರುವಾಯಿಯ ಕಡೆಂಗೋಡ್ಲು ಡೆನಿಮ್ ಗೈಸ್ ಫ್ರೆಂಡ್ಸ್ ಸರ್ಕಲ್‌ನ ಯುವಕರು ವಿನೂತನ ಯೋಜನೆ ಹಾಕಿಕೊಂಡಿದ್ದು, ಅವರಿಗೆಂದೇ ಆಕರ್ಷಕ ಕುಟೀರಗಳನ್ನು ನಿರ್ಮಿಸಿದ್ದಾರೆ.

ದುಬೈನಿಂದ ಮಂಗಳೂರಿಗೆ ಈಗಾಗಲೇ ಎರಡು ವಿಮಾನಗಳು ಬಂದಿದ್ದು, ಅಲ್ಲಿಂದ ಬಂದ ಕರಾವಳಿಗರನ್ನು 14 ದಿನಗಳ ಕಾಲ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.

ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಉದ್ದೇಶದಿಂದ ತಮ್ಮೂರಿನ ದುಬೈ ಸ್ನೇಹಿತರಿಗೆ ಎರಡನೇ ಹಂತದ ಕ್ವಾರಂಟೈನ್ ಮಾಡಲು ಪ್ಲಾನ್ ಮಾಡಿದ್ದಾರೆ.

ಅದಕ್ಕೆಂದೇ ಕಾಡಂಚಿನಲ್ಲಿ ಸಿಗುವ ಬಿದಿರು ಮತ್ತು ಅಡಿಕೆ ಸೋಗೆ ಬಳಸಿ ಕುಟೀರಗಳನ್ನು ನಿರ್ಮಿಸಿದ್ದು, ಕುಟೀರಗಳಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್, ಫ್ಯಾನ್, ಬಿದಿರಿನಿಂದಲೇ ತಯಾರಾದ ಮಂಚಗಳು ಹಾಗೂ ಚೇರ್ ವ್ಯವಸ್ಥೆ ಮಾಡುವುದಕ್ಕೆ ಸಿದ್ಧತೆ ನಡೆದಿದೆ.

ಅಲ್ಲದೆ ಊಟ ತಿಂಡಿ ವ್ಯವಸ್ಥೆಯನ್ನೂ ಮಾಡಲಿದ್ದಾರೆ. ಜಿಲ್ಲಾಡಳಿತದ ಕ್ವಾರಂಟೈನ್ ಮುಗಿದ ಬಳಿಕ ಮತ್ತೆ 14 ದಿನ ಊರಿನಲ್ಲಿ ಕ್ವಾರಂಟೈನ್ ಗೆ ಅನಿವಾಸಿ ಸ್ನೇಹಿತರ ಮನವೊಲಿಸಿ, ಕುಟೀರದಲ್ಲಿ ಕ್ವಾರಂಟೈನ್ ಮಾಡುವ ಉದ್ದೇಶವಂತೆ.

ಒಟ್ಟಿನಲ್ಲಿ ಉತ್ತಮ ಐಡಿಯಾದಿಂದ ದುಬೈ ಸ್ನೇಹಿತರ ಮನಗೆಲ್ಲುವ ವಿಶ್ವಾಸದಲ್ಲಿದ್ದಾರೆ ಡೆನಿಮ್ ಗೈಸ್.

Click to comment

Leave a Reply

Your email address will not be published. Required fields are marked *

LATEST NEWS

ಹಿಂದಿಗೆ ರಿಮೇಕ್ ಆಗುತ್ತಿದೆ ಝೀ ಕನ್ನಡದ ಫೇಮಸ್‌ ಸೀರಿಯಲ್‌…! ಪ್ರೋಮೋ ರಿಲೀಸ್‌..!

Published

on

ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಈ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಸಿಗುತ್ತಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಪೂಜಾ ಲೋಕೇಶ್, ಅಶೋಕ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗ ಈ ಧಾರಾವಾಹಿ ಹಿಂದಿಗೆ ರಿಮೇಕ್ ಆಗುತ್ತಿದೆ. ಇದಕ್ಕೆ ‘ಮೇ ಹೂ ಸಾತ್ ತೆರೆ’ ಎನ್ನುವ ಶೀರ್ಷಿಕೆ ಇಡಲಾಗಿದೆ.


‘ಸೀತಾ ರಾಮ’ ಧಾರಾವಾಹಿ ಮರಾಠಿಯ ‘ಮಜಿ ತುಜಿ ರೆಶಿಮಗತ್’ ಧಾರಾವಾಹಿಯ ಕಥೆಯನ್ನು ಆಧರಿಸಿದೆ. ಜೀ ಮರಾಠಿಯಲ್ಲಿ 2021 ಆಗಸ್ಟ್​ ತಿಂಗಳಿಂದ 2023 ಜನವರಿವರೆಗೆ ಈ ಧಾರಾವಾಹಿ ಪ್ರಸಾರ ಕಂಡಿತ್ತು. ಈ ಧಾರಾವಾಹಿ ಒಟ್ಟೂ 458 ಎಪಿಸೋಡ್​ಗಳನ್ನು ಹೊಂದಿತ್ತು. ಪ್ರಾರ್ಥನಾ ಬೆಹೆರೆ ಹಾಗೂ ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯನ್ನು ಕನ್ನಡಕ್ಕೆ ‘ಸೀತಾ ರಾಮ’ ಹೆಸರಲ್ಲಿ ರಿಮೇಕ್ ಮಾಡಲಾಯಿತು. ಈಗ ಧಾರಾವಾಹಿ ಹಿಂದಿಗೂ ರಿಮೇಕ್ ಆಗುತ್ತಿದೆ.

ಜೀ ಟಿವಿಯಲ್ಲಿ ‘ಮೇ ಹೂ ಸಾತ್ ತೆರೆ’ ಧಾರಾವಾಹಿ ಪ್ರಸಾರ ಕಾಣಲಿದೆ. ಸದ್ಯ ಪ್ರೋಮೋಗಳ ಮೂಲಕ ಧಾರಾವಾಹಿ ಗಮನ ಸೆಳೆಯುತ್ತಿದೆ. ಕನ್ನಡದಲ್ಲಿ ಗಗನ್ ಚಿನ್ನಪ್ಪ ಮಾಡಿರೋ ಪಾತ್ರವನ್ನು ಹಿಂದಿಯಲ್ಲಿ ಕರಣ್ ವೋಹ್ರಾ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರ ಪಾತ್ರವನ್ನು ಉಲ್ಕಾ ಗುಪ್ತಾ ಮಾಡುತ್ತಿದ್ದಾರೆ. ಉಲ್ಕಾ ಗುಪ್ತಾ ಅವರು ‘ಜಾನ್ಸಿ ಕಿ ರಾಣಿ’ ಧಾರಾವಾಹಿ ಮೂಲಕ ಪ್ರಸಿದ್ಧರಾಗಿದ್ದಾರೆ.

ಕಥೆಯಲ್ಲಿ ಬದಲಾವಣೆ :

ಕನ್ನಡದಲ್ಲಿ ಕಥಾ ನಾಯಕ ಉದ್ಯಮಿ. ಹಿಂದಿಯಲ್ಲಿ ಕರಣ್ ಅವರು ಉದ್ಯಮಿಯ ಪಾತ್ರವನ್ನೇ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಥಾ ನಾಯಕಿ ಮಧ್ಯಮ ವರ್ಗದ ಹುಡುಗಿ. ಹಿಂದಿಯಲ್ಲಿ ಕಥಾ ನಾಯಕಿ ಸಿಂಗರ್ ಆಗಬೇಕು ಎಂದು ಕನಸು ಕಾಣುವ ಸಿಂಗಲ್ ಪೇರೇಂಟ್ ಆಗಿ ತೋರಿಸಲಾಗಿದೆ. ಹಿಂದಿಯಲ್ಲಿ ಕಥಾ ನಾಯಕಿಗೆ ಮಗ ಇರುವುದಾಗಿ ತೋರಿಸಲಾಗಿದೆ ಆದರೆ ಕನ್ನಡದಲ್ಲಿ ಕಥಾ ನಾಯಕಿಗೆ ಮಗಳಿದ್ದಾಳೆ. ಏಪ್ರಿಲ್​ನಿಂದ ಈ ಧಾರಾವಾಹಿ ಪ್ರಸಾರ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ‘ಫುಲ್ ಹೌಸ್ ಮೀಡಿಯಾ’ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ.

Continue Reading

bangalore

ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾ*ಸ್ಟ್ ಆಗಿ ಯುವಕನ ದುರ್ಮರ*ಣ

Published

on

ಬೆಂಗಳೂರು : ಏರ್‌ ಪ್ರೆಶರ್‌ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್‌ ಆಗಿ ಯುವಕ ಮೃ*ತಪಟ್ಟಿದ್ದಾನೆ. ಹುಡುಗಾಟದಲ್ಲಿ ಆಡಿದ ಆಟ ಘನಘೋರ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಯೋಗೀಶ್(28) ಮೃ*ತ ಯುವಕ.

ಹುಡುಗಾಟಕ್ಕೆ ಹೋಯ್ತು ಪ್ರಾಣ…!

ಮಾರ್ಚ್ 25ರಂದು ಬೈಕ್‌ ರಿಪೇರಿಗಾಗಿ ಸಂಪಿಗೆಹಳ್ಳಿಯ ಸಿಎನ್‌ಸಿ (CNS) ಬೈಕ್ ಸರ್ವೀಸ್ ಸೆಂಟರ್‌ಗೆ ಯೋಗೀಶ್‌ ಎಂಬ ಯುವಕ ತೆರಳಿದ್ದ. ಅದೇ ಸರ್ವೀಸ್‌ ಸೆಂಟರ್‌ನಲ್ಲಿ ಯೋಗೀಶ್‌ ಸ್ನೇಹಿತ ಮುರುಳಿ ಎಂಬಾತ ಕೆಲಸ ಮಾಡುತ್ತಿದ್ದ. ಸ್ನೇಹಿತರಿಬ್ಬರೂ ಒಬ್ಬರಿಗೊಬ್ಬರು ತರ್ಲೆ, ತಂಟೆ ಮಾಡಿಕೊಂಡು ಆಟವಾಡುತ್ತಿದ್ದರು. ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್ ಪ್ಲೇಶರ್ ಪೈಪ್‌ನಿಂದ ಇಬ್ಬರು ಆಟ ಆಡುತ್ತಿದ್ದರು.

ಮೊದಲಿಗೆ ಮುರುಳಿ, ಯೋಗೀಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಏರ್‌ ಪ್ಲೇಶರ್‌ನಿಂದ ಗಾಳಿ ಬಿಟ್ಟಿದ್ದಾನೆ. ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಯೋಗೇಶ್‌ ಹೊಟ್ಟೆ ಊದಿಕೊಂಡು ಕರುಳು ಬ್ಲಾ*ಸ್ಟ್ ಆಗಿದೆ. ತಕ್ಷಣ ಯೋಗೀಶ್ ನರಳಾಟ ಕಂಡು ಮುರುಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗಿಶ್ ಮೃ*ತಪಟ್ಟಿದ್ದಾನೆ.

ಸದ್ಯ ಯೋಗೀಶ್‌ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಕನ್ಯಾನ ಸದಾಶಿವ ಶೆಟ್ಟಿಗೆ ಮಾತೃ ವಿಯೋಗ

Published

on

ಬೆಳ್ತಂಗಡಿ : ಕೊಡುಗೈ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರ ತಾಯಿ, ಕನ್ಯಾನ ದಿವಂಗತ ಪಕೀರ ಶೆಟ್ಟಿ ಅವರ ಪತ್ನಿ ಲೀಲಾವತಿ ಶೆಟ್ಟಿ ನಿಧ*ನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ಮಕ್ಕಳಾದ ಕನ್ಯಾನ ಸದಾಶಿವ ಶೆಟ್ಟಿ, ಚಂದ್ರಹಾಸ ಶೆಟ್ಟಿ, ರಘುರಾಮ ಶೆಟ್ಟಿ, ರವೀಂದ್ರ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ದಿವಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗಣ್ಯರ ಸಂತಾಪ :

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಶಶಿಧರ್ ಶೆಟ್ಟಿ, ಯಕ್ಷಧ್ರುವ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Continue Reading

LATEST NEWS

Trending