Connect with us

LATEST NEWS

ಮದುವೆಯಾಗಲ್ಲವೆಂದ ಪ್ರಿಯಕರನ ಮೇಲೆ ಬಿಸಿ ನೀರು ಚೆಲ್ಲಿ, ಮುಖಕ್ಕೆ ಬಾಟಲಿಯಿಂದ ಹಲ್ಲೆ ನಡೆಸಿದ ಯುವತಿ.!

Published

on

ಮದುವೆಯಾಗಲ್ಲ ಎಂದು ಹೇಳಿದ್ದ ಪ್ರಿಯಕರನ ಮೇಲೆ ಯುವತಿಯೊಬ್ಬಳು ಬಿಸಿನೀರು ಚೆಲ್ಲಿ ಆತನ ಮುಖಕ್ಕೆ ಬಾಟಲಿಯಿಂದ ಹೊಡೆದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು :ಮದುವೆಯಾಗಲ್ಲ ಎಂದು ಹೇಳಿದ್ದ ಪ್ರಿಯಕರನ ಮೇಲೆ ಯುವತಿಯೊಬ್ಬಳು ಬಿಸಿನೀರು ಚೆಲ್ಲಿ ಆತನ ಮುಖಕ್ಕೆ ಬಾಟಲಿಯಿಂದ ಹೊಡೆದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಇವರಿಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಆ ಯುವತಿಗೆ ಎರಡು ವರ್ಷಗಳ ಹಿಂದೆಯೇ ಮದುವೆಯಾಗಿತ್ತು ಎಂದು ಹೇಳಲಾಗಿದೆ.

ಇದು ಗೊತ್ತಾಗಿ, ಆ ಯುವಕ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಇದರಿಂದಾಗಿ ಆತನ ಮೇಲೆ ತುಂಬಾ ಸಿಟ್ಟಾಗಿದ್ದ ಯುವತಿ, ಆತನ ಮೇಲೆ ಬಿಸಿನೀರು ಚೆಲ್ಲಿದ್ದಾಳೆಂದು ಹೇಳಲಾಗಿದೆ.

ದಾಳಿಗೊಳಗಾದ ದುರ್ದೈವಿ ಕಲಬುರಗಿಯ ವಿಜಯಶಂಕರ ಆರ್ಯ, ಆರೋಪಿಯ ಹೆಸರು ಅಫ್ಜಲ್ಪುರ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ.

ಇವರಿಬ್ಬರೂ ಬೆಂಗಳೂರಿಗೆ ಬಂದು ಬೇರೆ ಬೇರೆ ಸಂಸ್ಥೆಗಳಲ್ಲಿ ಸೇರಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಈ ಮೊದಲು ಪರಿಚಯವಿರಲಿಲ್ಲ.

ಬೆಂಗಳೂರಿನಲ್ಲೇ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಬೆಳೆದಿದೆ. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು ಒಬ್ಬರನ್ನೊಬ್ಬರು ಸದ್ಯದಲ್ಲೇ ಮದುವೆಯಾಗುವ ಬಗ್ಗೆ ನಿರ್ಧರಿಸಿದ್ದರು.

ಜ್ಯೋತಿ ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ್ದರಿಂದಾಗಿ ತನ್ನ ರೂಮನ್ನೇ ಆಕೆಗೆ ಬಿಟ್ಟುಕೊಟ್ಟಿದ್ದ ವಿಜಯಶಂಕರ, ತಾನು ಸ್ನೇಹಿತನ ರೂಮ್ ನಲ್ಲಿ ಹೋಗಿ ವಾಸ್ತವ್ಯ ಹೂಡಿದ್ದ.

ಇತ್ತೀಚೆಗೆ, ಇವರಿಬ್ಬರ ಲವ್ ಸ್ಟೋರಿಯಲ್ಲಿ ಟ್ವಿಸ್ಟ್ ಸಿಕ್ಕಿತ್ತು. ಜ್ಯೋತಿಗೆ ಮೊದಲೇ ಮದುವೆಯಾಗಿದ್ದು ಆತನಿಗೆ ಗೊತ್ತಾಗಿದೆ.

ಇದರಿಂದ ಆಕೆಯನ್ನು ಆತ ದೂರವಿಡಲು ಪ್ರಯತ್ನಿಸಿದ್ದಾನೆ. ಆಕೆಗೆ ಅನುಮಾನ ಬಂದಿದ್ದು ಆತನನ್ನು ಕೇಳಿದ್ದಾಳೆ.

ಆತ ಮೊದಲುಬಾಯಿಬಿಟ್ಟಿಲ್ಲ. ಆನಂತರ, ಬಾಯಿಬಿಟ್ಟಿದ್ದಾನೆ.”ನಿನಗೀಗಾಗಲೇ ಮದುವೆಯಾಗಿದೆ.

ಹಾಗಾಗಿ, ನಾವಿಬ್ಬರೂ ಮದುವೆಯಾಗುವುದು ಬೇಡ. ಈ ಸಂಬಂಧವನ್ನು ಇಲ್ಲಿಗೇ ಮುಗಿಸೋಣ” ಎಂದು ಹುಡುಗ ಹೇಳಿದ್ದನೆಂದು ಮೂಲಗಳು ತಿಳಿಸಿವೆ.

ಆದರೆ, ಇದಕ್ಕೆ ಜ್ಯೋತಿ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳಗಾಗುತ್ತಿದ್ದವು.

ಈ ಮಧ್ಯೆ ಆತನನ್ನು ಮಾತಾಡೋಣ ಬಾ ಎಂದು ಆಕೆಯು ಆತನನ್ನು ಕರೆದಿದ್ದಳು.

ಇಬ್ಬರೂ ಬಹುವಾಗಿ ಚರ್ಚಿಸಿದರೂ ಒಂದು ನಿರ್ಧಾರಕ್ಕೆ ಬರಲಾಗಲಿಲ್ಲ. ವಿಜಯಶಂಕರ್ ತಾನು ಮದುವೆಯಾಗೋದೇ ಇಲ್ಲ ಎಂದು ಹಠ ಹಿಡಿದಿದ್ದ.

ಇದರಿಂದ ಒಳಗೊಳಗೇ ಕುದ್ದು ಹೋಗಿದ್ದ ಜ್ಯೋತಿ, ಉಪಾಯವಾಗಿ ಆತನನ್ನು ರೂಮಿನಲ್ಲೇ ಇರುವಂತೆ ಮಾಡಿ, ಬಿಸಿನೀರು ಕಾಯಿಸಿ ತಂದು ಆತನ ಮೇಲೆ ಸುರಿದಿದ್ದಾಳೆ.

ಇದರಿಂದ ಆತ ಕಿರುಚಾಡಿ ಒದ್ದಾಡುತ್ತಿರುವಾಗಲೇ, ಪಕ್ಕದಲ್ಲಿದ್ದ ಬಿಯರ್ ಬಾಟಲಿಯಿಂದ ಆತನ ಮುಖಕ್ಕೆ ಹೊಡೆದಿದ್ದಾಳೆ.

ಇದರಿಂದ ಮತ್ತಷ್ಟು ಗಾಯಗೊಂಡ ಆತ ಚೀರಾಡುತ್ತಾ ರಕ್ತ ಸೋರಿಸಿಕೊಂಡು ಬಿದ್ದು ಒದ್ದಾಡುತ್ತಿದ್ದಾಗ, ಆಕೆ ಬೇಗನೇ ರೂಮನ್ನು ಬಾಗಿಲು ಹಾಕಿಕೊಂಡು ಲಾಕ್ ಮಾಡಿ ಅಲ್ಲಿಂದ ಪೇರಿ ಕಿತ್ತಿದ್ದಾಳೆ.

ಇತ್ತ, ಆತನ ಕಿರುಚಾಟವು ರೂಮಿನ ಕೆಳಗಡೆ ಇದ್ದ ಮನೆಯ ಮಾಲೀಕನ ಕಿವಿಗೆ ಬಿದ್ದಿದ್ದು, ಆತ ಓಡಿಬಂದು ಕಿಟಕಿಯಿಂದ ನೋಡಿದಾಗ ರೂಮಿನಲ್ಲಿ ವಿಜಯಶಂಕರ್ ಒದ್ದಾಡುತ್ತಿದ್ದುದು ಕಣ್ಣಿಗೆ ಬಿದ್ದಿದೆ.

ಕೂಡಲೇ ಆತನನ್ನು ಕಾಪಾಡಿ, ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದಾನೆ. ಪೊಲೀಸರಿಗೂ ಸುದ್ದಿ ಮುಟ್ಟಿಸಿದ್ದಾನೆ.

ವೈದ್ಯರು ಹೇಳುವ ಪ್ರಕಾರ, ಆತನಿಗ ಶೇ. 50ರಿಂದ 60ರಷ್ಟು ಸುಟ್ಟಗಾಯಗಳಾಗಿವೆ. ಮುಖದ ಮೇಲಿನ ಗಾಯದಿಂದ ತೀವ್ರವಾಗಿ ರಕ್ತಸ್ರಾವವಾಗಿದ್ದೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

 

Click to comment

Leave a Reply

Your email address will not be published. Required fields are marked *

LATEST NEWS

ಬೈಕ್‌ ಅಪಘಾತ: ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಲೆ ಹರಿದ ಲಾರಿ- ಮೂವರು ಸ್ಥಳದಲ್ಲೇ ಸಾವು..!

Published

on

ಶಿವಮೊಗ್ಗ: ಬೈಕ್ ಗಳ ಮದ್ಯೆ ನಡೆದ ಅಪಘಾತದಿಂದ ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಳೆ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ.

ಹಳೆ ಜಂಬರಗಟ್ಟ ನಿವಾಸಿ ವಿಕಾಸ್ (18), ಯಶ್ವಂತ್ (17), ಹಾಗೂ ಶಶಾಂಕ್ (17) ಮೃತ ದುರ್ದೈವಿಗಳು.

ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಸವಾರರ ರಸ್ತೆ ಮೇಲೆ ಬಿದ್ದಿದ್ದಾರೆ.

ಇದೇ ವೇಳೆ ರಭಸವಾಗಿ ಬಂದ ಲಾರಿ ಆ ವ್ಯಕ್ತಿಗಳ ಮೇಲೆ ಹರಿದಿದೆ.

ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಚಿತ್ರ ನಟ ಪ್ರೇಮ್..!

Published

on

ಚಿಕ್ಕಮಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದನ್ನು ಖಂಡಿಸಿದ ಕನ್ನಡ ಚಿತ್ರನಟ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ​ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ.

‘ಕಾವೇರಿ ನಮ್ಮದು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನೀರಿನಿಂದ ರಾಜ್ಯಕ್ಕೆ ನ್ಯಾಯ ನೀಡಬೇಕೆಂದು ಪತ್ರದ ಮೂಲಕ ಪ್ರೇಮ್ ಅವರು  ಮನವಿ ಮಾಡಿದ್ದಾರೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

bengaluru

ನಟ ನಾಗಭೂಷಣ್ ಕಾರು ಅಪಘಾತ – ಮಹಿಳೆ ಸಾವು..!

Published

on

ಬೆಂಗಳೂರು: ಕನ್ನಡದ ಹೆಸರಾಂತ ನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ದಂಪತಿಗಳಿಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆಯ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಸಂತಪುರದ ನಿವಾಸಿ ಪ್ರೇಮಾ (48) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ನಾಗಭೂಷಣ್ ಶೂಟಿಂಗ್ ಮುಗಿಸಿಕೊಂಡು ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಹಿತಿ ಪಡೆಯುತ್ತಿದ್ದಾರೆ.

ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Continue Reading

LATEST NEWS

Trending