Home ಉಡುಪಿ ಕಾಲ್ನಡಿಗೆಯಲ್ಲಿ ಹೊರಟಿದ್ದವರು ಬಸ್ ನಲ್ಲಿ ಹೊರಟರು: ವಲಸೆ ಕಾರ್ಮಿಕರ ಪಾಲಿಗೆ ಬೆಳಕಾದ ಮಾರ್ಗದರ್ಶಕಿ

ಕಾಲ್ನಡಿಗೆಯಲ್ಲಿ ಹೊರಟಿದ್ದವರು ಬಸ್ ನಲ್ಲಿ ಹೊರಟರು: ವಲಸೆ ಕಾರ್ಮಿಕರ ಪಾಲಿಗೆ ಬೆಳಕಾದ ಮಾರ್ಗದರ್ಶಕಿ

ಕಾಲ್ನಡಿಗೆಯಲ್ಲಿ ಹೊರಟಿದ್ದವರು ಬಸ್ ನಲ್ಲಿ ಹೊರಟರು: ವಲಸೆ ಕಾರ್ಮಿಕರ ಪಾಲಿಗೆ ಬೆಳಕಾದ ಮಾರ್ಗದರ್ಶಕಿ

ಉಡುಪಿ: ಕೊರೊನಾ ಲಾಕ್ ‌ಡೌನ್‌ ಅವಧಿಯಲ್ಲಿ ಅತ್ತ ಊರಿಗೂ ತೆರಳಲಾಗದೇ, ಇತ್ತ ದುಡಿಯುವ ಸ್ಥಳದಲ್ಲೂ ನೆಲೆ ಇಲ್ಲದೆ ಸಂಕಷ್ಟ ಪಡುತ್ತಿದ್ದ ವಲಸೆ ಕಾರ್ಮಿಕರನ್ನು ಯುವತಿಯೊಬ್ಬಳು ರಕ್ಷಿಸಿ ತವರಿಗೆ ಕಳುಹಿಸಿದ ಮಾನವೀಯ ಕಥೆ ಇಲ್ಲಿದೆ.

ಸರಕಾರ ಇಂತಹ ವಲಸೆ ಕಾರ್ಮಿಕರ ಅನುಕೂಲಕ್ಕಾಗಿಯೇ ʼಸೇವಾ ಸಿಂಧುʼ ವೆಬ್‌ಸೈಟ್ ಮುಖಾಂತರ ಹೆಸರು ನೋಂದಾಯಿಸಿ ಅವರನ್ನ ತವರು ರಾಜ್ಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದೆ.

ಆದರೆ ಅಕ್ಷರ ಜ್ಞಾನವಿಲ್ಲದ ವಲಸೆ ಕಾರ್ಮಿಕರಿಗೆ ಇಂಟರ್‌ ನೆಟ್‌ ನಲ್ಲಿ ಹೋಗಿ ʼಸೇವಾ ಸಿಂಧುʼ ವೆಬ್‌ ಸೈಟ್‌ ತೆರಳಿ ಹೆಸರು ನೋಂದಾಯಿಸಲು ಸಾಧ್ಯವಿಲ್ಲ.

ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ತಂಗಿದ್ದ ತೆಲಂಗಾಣ ಮೂಲದ ವಲಸೆ ಕಾರ್ಮಿಕರು ಇಂತಹದ್ದೇ ಸಂದಿಗ್ಧ ಸ್ಥಿತಿಯಲ್ಲಿ ಕಳೆದ ಎರಡು ತಿಂಗಳುಗಳನ್ನ ಕಳೆದಿದ್ದರು.

ತೆಲಂಗಾಣ ಮೂಲದ 49 ವಲಸೆ ಕಾರ್ಮಿಕರು ಇದೀಗ ಉಡುಪಿ ಜಿಲ್ಲೆಯಿಂದ ತಮ್ಮ ತವರು ರಾಜ್ಯ ತೆಲಂಗಾಣಕ್ಕೆ ತೆರಳಲು ಸಿದ್ಧರಾಗಿದ್ದಾರೆ.

ಅಚ್ಚರಿ ಅಂದ್ರೆ, ಈ ರೀತಿ ತೆರಳುತ್ತಿರುವ ಕಾರ್ಮಿಕರಿಗೆ ಉಡುಪಿ ಜಿಲ್ಲಾಡಳಿತದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ.

ಬದಲಿಗೆ ಅವರೆಲ್ಲರಿಗೂ ಸ್ಪಂದಿಸಿ ಅವರನ್ನ ಊರಿಗೆ ತಲುಪಿಸಿಯೇ ತಲುಪಿಸ್ತೀನಿ ಅಂತಾ ಪಣ ತೊಟ್ಟ ಓರ್ವ ಹೆಣ್ಣು ಮಗಳ ಶ್ರಮ ಮಾತ್ರ ಇಲ್ಲಿ ಕೆಲಸ ಮಾಡಿದೆ.

ಆಕೆಗೆ ಮಣಿಪಾಲ ಪೊಲೀಸರು ಸಾಥ್‌ ನೀಡಿದ್ದು, ಕೆಲಸ ಇನ್ನಷ್ಟು ಸುಲಭವಾಗಿಸಿದೆ.

ಇವರು ಸಾಯಿಶ್ರೀ ಅಕೊಂಡಿ. ಮೂಲತಃ ಮುಂಬೈಯವರಾಗಿರುವ ಇವರು 2018 ರಲ್ಲಿ ಎಂಐಟಿಯಲ್ಲಿ ಬಿಟೆಕ್ ಮುಗಿಸಿಕೊಂಡವರು.

ಇತ್ತೀಚೆಗೆ ಮತ್ತೆ ಕೆಲಸ ನಿಮಿತ್ತ ಮಣಿಪಾಲಕ್ಕೆ ಆಗಮಿಸಿದ್ದ ಸಾಯಿಶ್ರೀ ಕೂಡಾ ಲಾಕ್‌ ಡೌನ್‌ ನಿಂದಾಗಿ ಮಣಿಪಾಲದಲ್ಲಿಯೇ ಉಳಿಯುವಂತಾಗಿದೆ.

ಕೆಲ ದಿನಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ವಲಸೆ ಕಾರ್ಮಿಕರ ಸ್ಥಿತಿ ಕಂಡು ಮರುಗಿದ್ದಾರೆ.

ಮೊದಲೇ ಭಾಷಾ ಸಮಸ್ಯೆಯಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಲು ಪರದಾಡುತ್ತಿದ್ದ ತೆಲಂಗಾಣದ ಕಾರ್ಮಿಕರಿಗೆ ತೆಲುಗು ಬಲ್ಲ ಸಾಯಿಶ್ರೀ ಸಹಾಯಹಸ್ತ ನೀಡಿದ್ದಾರೆ.

ಸ್ವತ: ತಾನೇ ಮೇ 12 ರಂದು ʼಸೇವಾ ಸಿಂಧುʼ ವೆಬ್‌ಸೈಟ್‌ ಗೆ ತೆರಳಿ ಕಾರ್ಮಿಕರ ಹೆಸರು ನೋಂದಾಯಿಸಿದ್ದಾರೆ.

ತನ್ನ ಟ್ವಿಟ್ಟರ್‌ ಖಾತೆಯ ಮೂಲಕ ತೆಲಂಗಾಣ ಸಿಎಂ, TRS ಪಕ್ಷದ ನಾಯಕಿ ಕವಿತಾ ಅವರಿಗೂ, ಕಾರ್ಮಿಕರ ಸಂಕಷ್ಟದ ಬಗ್ಗೆ ಬರೆದು ಟ್ಯಾಗ್‌ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಟ್ವೀಟ್‌ಗೆ ತಕ್ಷಣವೇ ತೆಲಂಗಾಣ ಸಿಎಂ ಕಚೇರಿಯಿಂದ ಪ್ರತಿಕ್ರಿಯೆಯೂ ಬಂತು. ತಮ್ಮ ರಾಜ್ಯದ ಕಾರ್ಮಿಕರಿಗೆ ಸ್ಪಂದಿಸುವ ಭರವಸೆ ನೀಡಿದರು.

KSRTC ಬಸ್‌ ಸಂಪರ್ಕಿಸಿದಾಗ 2 ಬಸ್‌ಗಳನ್ನು ನೀಡಲು ಮುಂದಾಗಿದ್ದಾರೆ. ಆದರೆ 1,98,200 ರೂಪಾಯಿ ಬಸ್‌ ದರವನ್ನು ನಿಗದಿಪಡಿಸಿದರು.

ಸಾಯಿಶ್ರೀ ತಾನೇ  ಸಾರ್ವಜನಿಕರಿಂದ 50 ಸಾವಿರ ರೂಪಾಯಿ ಸಂಗ್ರಹಿಸಿದ್ದಾರೆ. ತೆಲಂಗಾಣ ಸರಕಾರವೇ ಉಳಿದ ಹಣವನ್ನ ನೀಡುವುದಾಗಿ ಹೇಳಿದೆ.

ಕಾರ್ಮಿಕರಲ್ಲಿ 20 ಮಂದಿ ಮಹಿಳೆಯರಾಗಿದ್ದು,  ಒಬ್ಬಾಕೆ ಗರ್ಭಿಣಿಯಾದರೆ, 10 ಮಕ್ಕಳಿದ್ದು ಅದರಲ್ಲಿ 5 ವರುಷದ ಕೆಳಗಿನವರು ಹಾಗೂ ಒಂದು ವರುಷದ ಎರಡು ಕಂದಮ್ಮಗಳಿದ್ದರು.

ಕಾಲ್ನಡಿಗೆಯಲ್ಲಿ ಊರಿಗೆ ಹೊರಟಿದ್ದ ಕಾರ್ಮಿಕರು ಕೊನೆಗೂ ಬಸ್ ನಲ್ಲಿ ತೆಲಂಗಾಣ ಕ್ಕೆ ತೆರಳಿದ್ದಾರೆ.

ಎರಡು KSRTC ಬಸ್‌ಗಳ ಮೂಲಕ ವಲಸೆ ಕಾರ್ಮಿಕರು ತಮ್ಮ ಊರಿಗೆ ವಾಪಾಸ್‌ ಆಗಿದ್ದಾರೆ. ಈ ವೇಳೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯುವತಿಯ ಮಾನವೀಯತೆಯನ್ನು ಅಭಿನಂದಿಸಿದ್ದಾರೆ.

- Advertisment -

RECENT NEWS

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ ಬೆಂಗಳೂರು: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು...