Connect with us

    LATEST NEWS

    ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾ*ವು

    Published

    on

    ತುಮಕೂರು: ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ವಡ್ಡರಕುಪ್ಪೆ ಬಳಿ ನಡೆದಿದೆ.

    ಘಟನೆಯಲ್ಲಿ ಮಣಿಕುಪ್ಪೆ ಗ್ರಾಮದ 28 ವರ್ಷದ ಯುವಕ ಮಧು ಸಾವನಪ್ಪಿದ್ದಾನೆ. ಕೇಕ್ ಮತ್ತು ಬಿರಿಯಾನಿ ತೆಗೆದುಕೊಂಡು ಬೈಕಲ್ಲಿ ಬರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

    ಕೂಡಲೇ ಸ್ಥಳೀಯರು ಕುಣಿಗಲ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    LATEST NEWS

    ಹಿರಿಯ ಪರಮಾಣು ವಿಜ್ಞಾನಿ ಡಾ. ರಾಜಗೋಪಾಲ ಚಿದಂಬರಂ ನಿಧನ

    Published

    on

    ಮಂಗಳೂರು/ಮುಂಬೈ: ಪೋಖ್ರಾನ್-1 ಹಾಗೂ ಪೋಖ್ರಾನ್-2 ಪರಮಾಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಪರಮಾಣು ವಿಜ್ಞಾನಿ ಹಾಗೂ ಕ್ರಿಸ್ಟಲೋಗ್ರಫರ್ ಡಾ. ರಾಜಗೋಪಾಲ ಚಿದಂಬರಂ (89) ಶನಿವಾರ ನಿಧನರಾದರು.

    ಕಳೆದ ಕೆಲ ದಿನಗಳಿಂದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

    ಭಾರತದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದಲ್ಲಿ ಡಾ. ಚಿದಂಬರಂ ಅವರು ಪ್ರಮುಖ ಪಾತ್ರ ವಹಿಸಿದ್ದರು. 1975ರ ಪೋಖ್ರಾನ್-1 ಪರೀಕ್ಷೆ ಹಾಗೂ 1998ರಲ್ಲಿ ನಡೆದ ಪೋಖ್ರಾನ್-2 ಪರೀಕ್ಷೆಯ ಸಂಯೋಜಕರಾಗಿದ್ದರು.

    ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಆತ್ಮಹತ್ಯೆ ಪ್ರಕರಣ: ಬೆಂಗಳೂರೇ ನಂಬರ್ 1

    ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ (IAEA) ಆಡಳಿತ ಮಂಡಳಿಗೆ 1994-95 ಅವಧಿಯ ಅಧ್ಯಕ್ಷರಾಗಿದ್ದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದರು.
    ಡಾ. ಚಿದರಂಬರಂ ಅವರಿಗೆ 1975ರಲ್ಲಿ ಪದ್ಮಶ್ರೀ ಹಾಗೂ 1999ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಸಂದಿವೆ.

    Continue Reading

    BIG BOSS

    2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?

    Published

    on

    ವರ್ತೂರು ಸಂತೋಷ್​ ಬಿಗ್​ ಬಾಸ್​ ಮನೆಗೆ ಹೋಗಿ ಬಂದ ಮೇಲೆ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದಾರೆ. ಹಳ್ಳಿಕಾರ್​ ಒಡೆಯನಿಗೆ ಕಂಕಣ ಭಾಗ್ಯವೇ ಮುಳ್ಳಾಗಿ ಕಾಡಿತ್ತು. ಮದುವೆ ಬಗ್ಗೆ ಹಲವು ಸುದ್ದಿಗಳು ರೆಕ್ಕೆ ಪುಕ್ಕ ಇಲ್ಲದೇ ಹಾರಾಡಿವೆ. ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

    ವರ್ತೂರು ಸಂತೋಷ್ ಅವರು​ ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿ ಇರ್ತಾರೆ. ಬಿಗ್​ ಬಾಸ್​ ಮನೆಯಿಂದ ಬಂದ ಮೇಲಂತೂ ಸಂತುಗೆ ಸಿಕ್ಕಾಪಟ್ಟೆ ಫ್ಯಾನ್ಸ್​ ಆಗಿದ್ದಾರೆ. ಜನಪ್ರಿಯತೆ ಹೆಚ್ಚಿದಷ್ಟೂ ಸಂತೋಷ್​ ಅವ್ರಿಗೆ ವಿವಾದಗಳು ಬೆಂಬಿಡದೇ ಕಾಡುತ್ತಿವೆ.

    ಬಿಗ್​ ಬಾಸ್​ ಮನೆಗೆ ಕಾಲಿಡೋಕು ಮೊದಲು ವರ್ತೂರು ಸಂತೋಷ್​ಗೆ ಮದುವೆ ಆಗಿದೆ ಅನ್ನೋದು ಅವರ ಆಪ್ತ ಬಳಗಕ್ಕೆ ಬಿಟ್ರೆ ಯಾರಿಗೂ ಗೊತ್ತಿರಲಿಲ್ಲ. ಅವರು ಬಿಗ್​ ಮನೆಯಲ್ಲಿ ಇರಬೇಕಾದ್ರೆ ಯುವತಿ ಓರ್ವರ ಜೊತೆಗಿನ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಮದುವೆ ಆಗಿದ್ರು ಮುಚ್ಚಿಟ್ಟಿದ್ದಾರೆ. ಪತ್ನಿಗೆ ಟಾರ್ಚರ್​ ಕೊಟ್ಟು ಮನೆಯಿಂದ ಹೊರಗಟ್ಟಿದ್ದಾರೆ ಎಂದು ಮದುವೆ ವಿಚಾರ ಸದ್ದು ಮಾಡಿತ್ತು. ಇದಾದ ಬಳಿಕ ಬಿಗ್​ ಬಾಸ್​ ಅವಕಾಶ ಕೊಟ್ಟಾಗ ಸಂತೋಷ್​ ಅವ್ರೇ ತಮ್ಮ ಮನದಾಳದ ಮಾತುಗಳನ್ನ ಹೇಳಿದ್ದಾರೆ. ಅವ್ರು ಹೊರಗಡೆ ಬಂದ್ಮೇಲೂ ಸಾಕಷ್ಟು ಚರ್ಚೆಗಳು ನಡೆಯುತ್ತೆ. ಇದು ಹಾದಿ ಬೀದಿಯಲ್ಲಿ ಚರ್ಚೆ ಮಾಡೋ ವಿಷ್ಯಲ್ಲ. ನಮ್ಮ ನಡುವೆ ಏನ್​ ಆಗಿದೆ ಅನ್ನೋದು ನಮಗೆ ಮಾತ್ರ ಗೊತ್ತು ಎಂದು ವಿವಾದಗಳಿಗೆ ತೆರೆ ಎಳೆದಿದ್ದಾರೆ. ಅಲ್ಲಿಗೆ ಈ ವಿಚಾರ ಕೂಡ ತಣ್ಣಗಾಗುತ್ತೆ.

    ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಹಾಗೂ ತನಿಷಾ ಒಳ್ಳೆ ಸ್ನೇಹಿತರಾಗುತ್ತಾರೆ. ಇಬ್ಬರ ನಡುವಿನ ಬಾಂಧವ್ಯ ಹೊರಗಡೆ ಬಂದ್ಮೇಲೂ ಮುಂದುವರೆಯುತ್ತೆ. ಹೀಗಾಗಿ ಸಂತು-ಬೆಂಕಿ ನಡುವೆ ಏನೋ ನಡೀತಿದೆ ಅಂತ ಇವತ್ತಿಗೂ ಗುಸು ಗುಸು, ಪಿಸು ಪಿಸು ಇದೆ. ಸದ್ಯ ವರ್ತೂರು ಸಂತೋಷ್ ಅವರೇ ಹೊಸ ಸುದ್ದಿ ನೀಡಿದ್ದಾರೆ. ನನ್ನ ಮೊದಲ ಮದುವೆ ಮುಗಿದ ಅಧ್ಯಾಯ. ಹೊಸ ಜೀವನ ಶುರು ಮಾಡಬೇಕು. ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಎಂದಿದ್ದಾರೆ.

    ಖಾಸಗಿ ಸಂದರ್ಶನ ಒಂದರಲ್ಲಿ ಮಾತ್ನಾಡಿದ ಸಂತೋಷ್​, ನನಗೆ ಪ್ರೀತಿ ಆಗಿದೆ. ಪರಸ್ಪರ ನಾನು ಮತ್ತು ಆ ಹುಡುಗಿ ಪ್ರೀತಿ ಮಾಡ್ತಿದ್ದೀವಿ. ನನ್ನ ಸೆಕೆಂಡ್​ ಹಾರ್ಟ್​ ಅವಳು. ನಾನು ಡಿಪ್ರೇಷನ್​ನಲ್ಲಿ ಇದ್ದಾಗ ಕಮ್​ಬ್ಯಾಕ್​ ಮಾಡೋಕೆ ಅವಳೇ ಕಾರಣ. ನನ್ನ ಜೀವನದ ಏರುಪೇರುಗಳನ್ನ ಅವಳು ನೋಡಿದ್ದಾಳೆ. ಜೊತೆಗಿದ್ದಾಳೆ. ನನ್ನ ಅಮ್ಮನ ನಂತರ ನಾನು ತುಂಬಾ ಪ್ರೀತಿಸೋ ಜೀವ ಅವಳು. ಇಬ್ಬರಿಗೂ ಮದುವೆಗೆ ಒಪ್ಪಿಗೆ ಇದೆ. ಪ್ರೀತಿ ಇದೆ ಎಂದು ಮುಚ್ಚಿಟ್ಟಿದ್ದ ಪ್ರೀತಿ ವಿಚಾರವನ್ನ ಬಹಿರಂಗ ಪಡೆಸಿದ್ದಾರೆ ವರ್ತೂರು ಸಂತೋಷ್​.

    ಮದುವೆ ವಿಚಾರ ಹೇಳುತ್ತಿದ್ದ ಹಾಗೆ ಥಟ್​ ಅಂತ ತನಿಷಾ ಕಣ್ಮುಂದೆ ಬರ್ತಾರೆ. ಇದಕ್ಕೂ ಅವ್ರು ಉತ್ತರಿಸಿದ್ದು, ತನಿಷಾ ನಾನು ಒಳ್ಳೆ ಸ್ನೇಹಿತರು. ಖಂಡಿತ ಅವ್ರಲ್ಲ. ನನ್ನ ಹುಡುಗಿನೇ ಬೇರೆ. ಸದ್ಯದಲ್ಲೇ ಅವರ ಬಗ್ಗೆ ತಿಳಿಸ್ತೀನಿ ಎಂದಿದ್ದಾರೆ.

    ಬೆಂಕಿ-ಸಂತು ಫ್ಯಾನ್ಸ್​ಗೆ ಈ ಸುದ್ದಿ ನಿರಾಸೆ ಮೂಡಿಸಿದ್ದು, ವರ್ತೂರು ಸಂತೋಷ್​ ಮನಗೆದ್ದಿರೋ ಆ ಹುಡುಗಿ ಯಾರು ಅನ್ನೋ ಕುತೂಹಲ ಸಹಜವಾಗಿದೆ. ಒಂದು ಮೂಲದ ಪ್ರಕಾರ ಸಂಬಂಧಿಕರ ಹುಡುಗಿ ಕಾಲೇಜು ದಿನಗಳ ಗೆಳತಿಯನ್ನ ಕೈ ಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    Continue Reading

    LATEST NEWS

    ಮಂಗಳೂರು:ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

    Published

    on

    ಮಂಗಳೂರು: ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಸದ ಬ್ರಿಜೇಶ್ ಚೌಟ ಶುಕ್ರವಾರ ಹೊಸದಿಲ್ಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

    ಮಂಗಳೂರಿನಲ್ಲಿ ಆದಷ್ಟು ಬೇಗ ಎನ್‌ಐಎ ಘಟಕ ಸ್ಥಾಪಿಸಬೇಕು, ಕರಾವಳಿ ತೀರದ ಸುರಕ್ಷತೆ ದೃಷ್ಟಿಯಿಂದ ಭಾರತೀಯ ಕೋಸ್ಟ್‌ಗಾರ್ಡ್ ಅಕಾಡಮಿ ಸ್ಥಾಪಿಸಬೇಕು, ದ.ಕ.ದಲ್ಲಿ ಸೈನಿಕ ಶಾಲೆ-ಮಿಲಿಟರಿ ನೆಲೆ ಸ್ಥಾಪಿಸಬೇಕು, ಮಂಗಳೂರು-ಬೆಂಗಳೂರು ನಡುವಿನ ರೈಲು ಹಾಗೂ ರಸ್ತೆ ಸಂಪರ್ಕ ಮತ್ತಷ್ಟು ಸುಗಮಗೊಳಿಸಬೇಕು ಎಂದು ಸಂಸದರು ಮನವಿ ಸಲ್ಲಿಸಿದರು.

    ಸಂಸದರಾದ ಬಳಿಕ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಮೊದಲ ಬಾರಿಗೆ ಅಧಿಕೃತವಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬ್ರಿಜೇಶ್ ಚೌಟ ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಲೋಚಿಸಿದರು.

    ಕರಾವಳಿಯ ಸಹಕಾರ ಬ್ಯಾಂಕಿಂಗ್ ವಲಯದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಣ್ಣ ಉದ್ದಿಮೆದಾರರು ಹಾಗೂ ಕೃಷಿಕರಿಗೆ ಹೆಚ್ಚಿನ ಆರ್ಥಿಕ ನೆರವು ಪಡೆಯುವುದಕ್ಕೆ ಕೋ ಆಪರೇಟಿವ್ ಬ್ಯಾಂಕ್‌ಗಳ ಉತ್ತೇಜನ ಅನುಕೂಲ ಮಾಡಲಿದೆ ಎಂದು ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಅವರಲ್ಲಿ ಸಂಸದರು ಮನವಿ ಮಾಡಿದ್ದಾರೆ.

    Continue Reading

    LATEST NEWS

    Trending