Connect with us

    LATEST NEWS

    ಹಸೆಮಣೆ ಏರಬೇಕಿದ್ದ ಯುವಕ ನೇ*ಣು ಬಿ*ಗಿದು ಆ*ತ್ಮಹ*ತ್ಯೆ

    Published

    on

    ಮಂಜೇಶ್ವರ: ಮದುವೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವಾಗಲೇ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜ. 24ರ ಶುಕ್ರವಾರ ಸಂಜೆ ಮೀಂಜ ಸಮೀಪದ ಬೆಜ್ಜದಲ್ಲಿ ನಡೆದಿದೆ.

    ಅಜಿತ್ ಕುಮಾರ್ (28) ಆತ್ಮಹತ್ಯೆಗೆ ಶರಣಾದ ಯುವಕ. ಅಜಿತ್‌ ವಿವಾಹ ಫೆಬ್ರವರಿ 2 ರಂದು ನಿಗದಿಯಾಗಿತ್ತು. ನಿನ್ನೆ ಸಂಜೆ ಮನೆ ಸಮೀಪದ ಮರವೊಂದರಲ್ಲಿ ನೇಣು ಬಿಗಿದು ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನ ಉಪ್ಪಳ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಜಿತ್‌ಗೆ ಹೊಸಂಗಡಿ ಸಮೀಪದ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು. ಮನೆಯವರು ವಿವಾಹದ ತಯಾರಿಗಾಗಿ ಸಾಮಾಗ್ರಿಗಳನ್ನು ಖರೀದಿಸಲು ಪೇಟೆಗೆ ತೆರಳಿದ್ದರು. ಮನೆಯಲ್ಲಿ ಚಿಕ್ಕಪ್ಪ ಮಾತ್ರ ಇದ್ದರು ಎನ್ನಲಾಗಿದೆ. ಈ ಸಂದರ್ಭ ಅಜಿತ್ ಸಾವಿನ ದಾರಿ ಹಿಡಿದಿದ್ದಾರೆ.

    ಇದನ್ನೂ ಓದಿ : ಲೋ ಬಿಪಿಯಿಂದ ಕುಸಿದು ಬಿದ್ದು ಮೃತಪಟ್ಟ 13 ವರ್ಷದ ಬಾಲಕ..!

    ಸಂಜೆ ಅಜಿತ್ ಮನೆ ಮುಂಭಾಗದ ಮಾವಿನ ಮರದಲ್ಲಿ ಕೇಬಲ್ ವಯರ್ ನಲ್ಲಿ ನೇ*ಣು ಬಿ*ಗಿದಿರುವುದನ್ನು ಮನೆಯವರು ಗಮನಿಸಿದ್ದು, ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃ*ತಪಟ್ಟಿದ್ದರು ಎನ್ನಲಾಗಿದೆ. ಆ*ತ್ಮಹ*ತ್ಯೆ ಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು ಉದ್ಯಮಿಗೆ ಭೂ*ಗತ ಪಾ*ತಕಿಯಿಂದ ಬೆ*ದರಿಕೆ ಕರೆ!

    Published

    on

    ಮಂಗಳೂರು : ಹಲವು ವರ್ಷಗಳ ಸದ್ದಡಗಿದ್ದ ಭೂಗತ ಲೋಕದ ಸದ್ದು ಮಂಗಳೂರಿನಲ್ಲಿ ಮತ್ತೆ ಕೇಳಿಸಿದೆ. ವಿದೇಶದಲ್ಲಿ ಕುಳಿತು ಮಂಗಳೂರಿನ ಉದ್ಯಮಿಗೆ ಹಫ್ತಾ ನೀಡುವಂತೆ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಈ ಹಿಂದೆ ಮಂಗಳೂರು ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ಅಪರಾಧ ಪ್ರಕರಣಗಳ ಹಿಂದೆ ಇದ್ದ ಕಲಿ ಯೋಗೀಶ ಮತ್ತೆ ಫೀಲ್ಡ್‌ಗೆ ಇಳಿದಿದ್ದಾನೆ ಎಂಬ ಅನುಮಾನ ಮೂಡಿದೆ.

    ರವಿ ಪೂಜಾರಿ, ಬನ್ನಂಜೆ ರಾಜ ಮೊದಲಾದ ಪಾ*ತಕಿಗಳ ಬಂಧನದ ಬಳಿಕ ಬಹುತೇಕ ಎಲ್ಲಾ ಭೂ*ಗತ ಪಾ*ತಕಿಗಳ ಸದ್ದು ಅಡಗಿ ಹೋಗಿತ್ತು. ಹೀಗಾಗಿ ಒಂದಷ್ಟು ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ತಮ್ಮ ವ್ಯವಹಾರ ನಡೆಸ್ತಾ ಇದ್ರು. ಆದ್ರೆ ಈಗ ಬಜಪೆಯ ಉದ್ಯಮಿ ರೊನಾಲ್ಡ್ ಎಂಬವರಿಗೆ ಕಲಿ ಯೋಗೀಶನ ಹೆಸರಿನಲ್ಲಿ  ಫೋನ್ ಮಾಡಿ ಬೆ*ದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

    ಇದನ್ನೂ ಓದಿ : ಗೀಸರ್ ರಿಪೇರಿಗಂತ ಬಂದ ರಹಸ್ಯ ಕ್ಯಾಮರಾ ಇಟ್ಟ…ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ಸಿಕ್ಕಿ ಬಿದ್ದಿದ್ಹೇಗೆ?

    ಜನವರಿ 17 ರಂದು ಈ ಕರೆ ಬಂದಿದ್ದು 3 ಕೋಟಿ ನೀಡಬೇಕು, ಇಲ್ಲವಾದಲ್ಲಿ ಮನೆಯವರೆಲ್ಲರನ್ನೂ ಕೊ*ಲ್ಲುವುದಾಗಿ ಬೆ*ದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

     

     

    Continue Reading

    LATEST NEWS

    ಗೀಸರ್ ರಿಪೇರಿಗಂತ ಬಂದ ರಹಸ್ಯ ಕ್ಯಾಮರಾ ಇಟ್ಟ…ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ಸಿಕ್ಕಿ ಬಿದ್ದಿದ್ಹೇಗೆ?

    Published

    on

    ಮಂಗಳೂರು/ ಬೆಂಗಳೂರು : ಇಲ್ಲೊಬ್ಬ ಐನಾತಿ ಖದೀಮ  ಗೀಸರ್‌ ರಿಪೇರಿಗೆಂದು ಬಂದು ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರಿನಲ್ಲಿ.

    ಮಹಿಳೆಯ ಸ್ನಾನದ ವೀಡಿಯೋ ರಹಸ್ಯ ಕ್ಯಾಮೆರಾದ ಮೂಲಕ ಸೆರೆ ಹಿಡಿದ ಆತ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಇದರಿಂದ ನೊಂದ ಮಹಿಳೆ ಯೂಟ್ಯೂಬರ್ ಸಹಾಯದಿಂದ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

    ಏನಿದು ಪ್ರಕರಣ?

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ  ಮಹಿಳೆ ವಾಸವಾಗಿದ್ದು, ಮನೆಯ ಗೀಸರ್ ಹಾಳಾಗಿತ್ತು. ಹೀಗಾಗಿ ಆಕೆ ಟೆಕ್ನೀಷಿಯನ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಗೀಸರ್ ರಿಪೇರಿ ಮಾಡುವ ನೆಪದಲ್ಲಿ ಬಂದ ಖದೀಮ ಮನೆಯ ಗೀಸರ್‌ನಲ್ಲಿ ಯಾರಿಗೂ ಗೊತ್ತಾಗದಂತೆ ರಹಸ್ಯ ಕ್ಯಾಮರಾ ಫಿಕ್ಸ್ ಮಾಡಿ ಹೋಗಿದ್ದಾನೆ. ಬಳಿಕ ಮಹಿಳೆಯ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಆಕೆಗೆ ವಾಟ್ಸ್ ಆ್ಯಪ್  ನಂಬರ್‌ಗೆ ಕಳುಹಿಸಿದ್ದಾರೆ. ನೀನು ನನ್ನ ಜೊತೆ ಬರಬೇಕು. ಇಲ್ಲವಾದಲ್ಲಿ  ವೀಡಿಯೋಗಳನ್ನು ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದಾನೆ.

    ಇದನ್ನೂ ಓದಿ : ಮನೆಯ ಕಪಾಟಿನಿಂದ ಬಟ್ಟೆಗಳು ಕೆಳಗೆ ಬೀಳುತ್ತದೆಯೇ? ಈ ಟಿಪ್ಸ್‌ ಸಹಾಯದಿಂದ ಕಬೋರ್ಡ್ ಈ ರೀತಿ ಜೋಡಿಸಿ

    ಆತನ ಬೆದರಿಕೆಗೆ ಬೇಸತ್ತ  ಮಹಿಳೆ  ಈ ವಿಚಾರ ಮನೆಯವರಿಗೆ ಹೇಳಲು ಹಿಂಜರಿದಿದ್ದಾರೆ. ಕಾ*ಟ ಹೆಚ್ಚಾಗುತ್ತಿದ್ದಂತೆ ಯೂಟ್ಯೂಬರ್ ಮಂಜೇಶ್ ಯಶಸ್ ಎಂಬವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಕೆಯ ಕಷ್ಟಕ್ಕೆ ಸ್ಪಂದಿಸಿದ ಯೂಟ್ಯೂಬರ್ ಹಾಗೂ ಅವರ ತಂಡ ದುರ್ಷರ್ಮಿಯ ಪತ್ತೆಗೆ ಬಲೆ ಬೀಸಿದೆ.

    ಖದೀಮ ಸಿಕ್ಕಿ ಬಿದ್ದಿದ್ದು ಹೇಗೆ?

    ಯೂಟ್ಯೂಬರ್ ಹಾಗೂ ಆತನ ತಂಡ ಮಹಿಳೆಯ ಕುಟುಂಬದೊಂದಿಗೆ ಸೇರಿ ಕಾ*ಮುಕನನ್ನು ಹಿಡಿಯಲು ಯೋಜನೆ ರೂಪಿಸುತ್ತಾರೆ. ಮಹಿಳೆಗೆ ಕರೆ ಮಾಡಿದ ಖದೀಮ ಬಸ್ ನಿಲ್ದಾಣದ ಬಳಿ ಬರಲು ಸೂಚಿಸಿದ್ದಾನೆ. ಈ ಸಂದರ್ಭ ಯುವಕರ ತಂಡ ತೆರಳಿ ಆತನನ್ನು ಹಿಡಿದು ಥ*ಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    Continue Reading

    DAKSHINA KANNADA

    ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

    Published

    on

    ಮಂಗಳೂರು : ಹಿರಿಯ ಪತ್ರಕರ್ತ  ಗುರುವಪ್ಪ ಬಾಳೆಪುಣಿ  (62)  ಅಲ್ಪಕಾಲದ ಅಸೌಖ್ಯದಿಂದ ಇಂದು(ಜ.26) ಬಾಳೆಪುಣಿಯ ಸ್ವಗೃಹದಲ್ಲಿ ನಿ*ಧನರಾಗಿದ್ದಾರೆ. ಅವರು ಪತ್ನಿ ಹಾಗೂ ಪುತ್ರನನ್ನು ಅ*ಗಲಿದ್ದಾರೆ.

    ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ  26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ   ಕರ್ತವ್ಯ ನಿರ್ವಹಿಸಿದ್ದಾರೆ. ಸರಳ, ಸಜ್ಜನಿಕೆಯ ಬಾಳೆಪುಣಿ ಅವರು ಜನಾನುರಾಗಿಯಾಗಿದ್ದರು.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಸೆಹ್ವಾಗ್-ಆರತಿ ದಾಂಪತ್ಯದಲ್ಲಿ ಬಿರುಕು ?

    ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ  ಪರಿಚಯಿಸಿದ ಕೀರ್ತಿ  ಗುರುವಪ್ಪ ಬಾಳೆಪುಣಿ ಅವರದು. ಪತ್ರಿಕೋದ್ಯಮದ ಅವರ ಮೇರು ಸಾಧನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಅವರ ಮುಡಿಗೇರಿದೆ.

    Continue Reading

    LATEST NEWS

    Trending