ಮಂಗಳೂರು/ಬೆಂಗಳೂರು: ಆನ್ ಲೈನ್ ಗೇಮಿಂಗ್ ಹುಚ್ಚು ಜಾಸ್ತಿಯಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು, ಗೃಹಿಣಿಯರು, ಸೆಲೆಬ್ರಿಟಿಗಳು ಹೀಗೆ ಎಷ್ಟೋ ಮಂದಿ ಹಣದೊಂದಿಗೆ ಜೀವವನ್ನು ಕಳೆದುಕೊಂಡ ಹಲವು ಕೇಸುಗಳು ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಿರ್ದೇಶಕ ಗುರುಪ್ರಸಾದ್ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾದರು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆನ್ ಲೈನ್ ಗೇಮಿಂಗ್ ನಿಂದ ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನವೇ ವಂಚನೆಗೆ ಬಲಿ*ಯಾಗುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.
ಈಗ ಇಂಥದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಪ್ರವೀಣ್ ಎಂಬ 19 ವರ್ಷದ ಯುವಕ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾಗಿದ್ದಾನೆ. ಕಳೆದ ಹತ್ತು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರವೀಣ್ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸ ಇದ್ದ. ಕಾಲೇಜಿಗೆ ಹೋಗೋದು ಬಿಟ್ಟು ಯಾವಾಗಲೂ ಗೇಮ್ ಆಡುತ್ತಿದ್ದ. ಆನ್ ಲೈನ್ ಗೇಮ್ ಆಡಲು ಬಹಳ ಸಾಲ ಮಾಡಿಕೊಂಡಿದ್ದ. ಗೆದ್ರೂ ಆ ಹಣವನ್ನು ಸಾಲಗಾರರೇ ತೆಗೆದುಕೊಳ್ಳುತ್ತಿದ್ರು. ಹೀಗಾಗಿ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಪ್ರವೀಣ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೆ.ಆರ್ ಪುರಂ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಆನ್ ಲೈನ್ ಗೇಮ್ ಭೂತ ಹೊಕ್ಕು ಆತನ ಜೀವವನ್ನೆ ಕಿತ್ತುಕೊಂಡಿದೆ. ಆನ್ ಲೈನ್ ಮೂಲಕ ಆಟವಾಡಿ ಹಣವನ್ನು ಕಳೆದುಕೊಂಡು ನಂತರ ಸಾಲ ಮಾಡುತ್ತಾರೆ. ಸಾಲಗಾರರ ಕಾಟ ತಡೆಯಲಾಗದೇ ಆತ್ಮಹತ್ಯೆಗೆ ಬ*ಲಿಯಾಗುತ್ತಿದ್ದಾರೆ.
ಮಂಗಳೂರು/ಬೆಂಗಳೂರು: ಮಾಜಿ ಸಚಿವ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಜೆಪಿ ಶಾಸಕನ ವಿರುದ್ಧ ಮತ್ತೊಂದು ಬ್ಲ್ಯಾಕ್‌ಮೇಲ್ ಕೇಸ್ ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ.
ಅ*ಶ್ಲೀಲ ವಿಡಿಯೋ ಸೃಷ್ಟಿಸಿ ಲಗ್ಗೆರೆ ವಾರ್ಡ್ ಮಾಜಿ ಕಾರ್ಪೋರೇಟರ್‌ವೊಬ್ಬರ ಪತಿಗೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಮುನಿರತ್ನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಶನಿವಾರ (ನ.30) ಎಫ್‌ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ನಾಳೆ (ಡಿ.2) ಮುನಿರತ್ನ ಜಾಮೀನು ಕೋರಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರೋಪ ಏನು ?
ಹಲವು ವರ್ಷಗಳಿಂದ ರಾಜಕೀಯದಲ್ಲಿ ನಾರಾಯಣಸ್ವಾಮಿ ಇದ್ದು, ಒಂದು ಬಾರಿ ಬಿಬಿಎಂಪಿ ಚುನಾವಣೆ ಯಲ್ಲಿ ಲಗ್ಗೆರೆ ವಾರ್ಡ್ನಿಂದ ಅವರ ಪತ್ನಿ ಮಂಜುಳಾ ಆಯ್ಕೆಯಾಗಿದ್ದರು. ಆರ್ಆರ್ ನಗರ ಕ್ಷೇತ್ರ ವ್ಯಾಪ್ತಿಗೆ ಲಗ್ಗೆರೆ ಬರಲಿದ್ದು, ರಾಜಕೀಯ ಕಾರಣಗಳಿಗೆ ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ನಾರಾಯಣಸ್ವಾಮಿ ಎದುರಾಳಿಯಾಗಿದ್ದರು. ಈ ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿ ಕುಟುಂಬದವರಿಗೆ ಶಾಸಕರು ಕಿರುಕುಳ ನೀಡುತ್ತಿದ್ದರು ಹಾಗೂ ನಾರಾಯಣಸ್ವಾಮಿ ಅ*ಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ಗೆ ಮುನಿರತ್ನ ಸಂಚು ರೂಪಿಸಿದ್ದರು ಎಂದು ರೋಪಿಸಲಾಗಿದೆ.
ಮುನಿರತ್ನ ವಿರುದ್ಧ ಮತ್ತೊಂದು ಕೇಸ್ :
ಜಾತಿ ನಿಂದನೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ದೋಷಾರೋಪ ಪಟ್ಟಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ (ನ.30) ಸಲ್ಲಿಸಿದೆ.
‘ತಮಗೆ ಜಾತಿ ನಿಂದನೆ ಮಾಡಿ ಬೆದರಿಸಿದ್ದಾರೆ’ ಎಂದು ಆರೋಪಿಸಿ ಮುನಿರತ್ನ ವಿರುದ್ದ ವೈಯಾಲಿಕಾವಲ್ ಠಾಣೆಗೆ ಲಕ್ಷ್ಮೀದೇವಿ ನಗರ ವಾರ್ಡ್‌ನ ಮಾಜಿ ಕಾರ್ಪೋರೇಟರ್ ವೇಲು ದೂರು ನೀಡಿದರು. ‘ಸಾರ್ವಜನಿಕವಾಗಿ ಜಾತಿನಿಂದನೆ ಮಾಡಿ ಸಾಕ್ಷಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿರುವ ಹಾಗೂ ಜಾತಿಗಳ ನಡುವೆ ವೈಷಮ್ಯವನ್ನುಂಟು ಮಾಡಿರುವ ಆರೋಪ ತನಿಖೆಯಲ್ಲಿ ಸಾಬೀತಾಗಿದೆ’ ಎಂದು ಎಸ್‌ಐಟಿ ಹೇಳಿದೆ. ಮುನಿರತ್ನ ವಿರುದ್ಧ ಅತ್ಯಾಚಾರ, ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಮಾಜಿ ಕಾರ್ಪೋರೇಟರ್‌ಗೆ ಜಾತಿ ನಿಂದನೆ ಆರೋಪ ಸಂಬಂಧ 3 ಎಫ್‌ಐಆರ್‌ಗಳು ದಾಖಲಾಗಿದ್ದು, ಈಗ ಜಾತಿನಿಂದನೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಗಿಸಿದೆ. ಇನ್ನುಳಿದ ಪ್ರಕರಣಗಳ ತನಿಖೆ ಭಾಗಶಃ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ.
590 ಪುಟಗಳ ಆರೋಪಕ್ಕೆ 53 ಸಾಕ್ಷಿ :
ಜಾತಿ ನಿಂದನೆ ದೂರಿನ ಅನ್ವಯ ಮುನಿರತ್ನ ವಿರುದ್ಧ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989 ಮತ್ತು ಕಲಂ 153, 153ಎ(1) (ಎ)(ಬಿ), 504, 509 2.2.4. ರಡಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಮುನಿರತ್ನ ವಿರುದ್ದ ಪ್ರಕರಣಗಳ ತನಿಖೆಗೆ ಎಸ್‌ಐಟಿಯನ್ನು ಸರ್ಕಾರವು ರಚಿಸಿತು. ಅಂತೆಯೇ ತನಿಖೆಗಿಳಿದ ಎಸ್‌ಐಟಿ, ಜಾತಿ ನಿಂದನೆ ಪ್ರಕರಣದ ತನಿಖೆ ಮುಗಿಸಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 590 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ 53 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿದೆ. ಈ ಸಾಕ್ಷಿಗಳ ಪೈಕಿ ಮೂವರು ಪ್ರತ್ಯಕ್ಷದರ್ಶಿಗಳು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ಎಸ್‌ಐಟಿ ತಿಳಿಸಿದೆ.
ಮಂಗಳೂರು/ಬೆಂಗಳೂರು: ಕೇರಳದ ಹುಡುಗ ಹಾಗೂ ಅಸ್ಸಾಂ ಹುಡುಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಪ್ರೀತಿಗೆ ಬಿದ್ದಿದ್ದಾರೆ. ಆದರೆ, ಅಪಾರ್ಟ್ಮೆಂಟ್‌ನಲ್ಲಿ ಪ್ರೇಮಿಯೇ ತನ್ನ ಪ್ರೇಯಸಿಯನ್ನು ಕೊ*ಲೆ ಮಾಡಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ಇಂದಿರಾನಗರ ರಾಯಲ್ ಲಿವಿಂಗ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ಕೊ*ಲೆಯಾದ ಯುವತಿ ಅಸ್ಸಾಂ ರಾಜ್ಯದ ಮಾಯಾ. ಆರೋಪಿಯನ್ನು ಕೇರಳದ ಆರವ್ ಅನಾಯ್ ಎಂದು ಗುರುತಿಸಲಾಗಿದೆ.
ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯೊoದರಲ್ಲಿ ಜೊತೆಯಾಗಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಉಂಟಾದ ಪರಿಚಯದಿಂದ ಸ್ನೇಹ ಬೆಳೆದು ಪ್ರೀತಿಯಾಗಿತ್ತು. ನಂತರ, ಇಬ್ಬರೂ ಮನೆಯನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದರಿಂದ ನಗರದ ವಿವಿಧೆಡೆ ಸುತ್ತಾಡುತ್ತಿದ್ದರು. ನಾಲ್ಕೈದು ದಿನಗಳ ಹಿಂದೆ ಇಂದಿರಾನಗರದ ದಿ ರಾಯಲ್ ಲಿವಿಂಗ್ ಎಂಬ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು.
ಈ ವೇಳೆ, ಏನೋ ಕ್ಷುಲ್ಲಕ ಕಾರಣಕ್ಕೆ ಮೂರು ದಿನಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಆಗ ಉಂಟಾದ ಜಗಳದ ವೇಳೆ ಪ್ರೇಮಿ ಆರವ್ ತನ್ನ ಪ್ರೇಯಸಿ ಮಾಯಾಗೆ ಚಾ*ಕುವಿನಿಂದ ಇರಿದು ಕೊ*ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕೊ*ಲೆ ನಡೆದು ಮೂರು ದಿನಗಳ ನಂತರ ಮನೆಯಿಂದ ದು*ರ್ವಾಸನೆ ಬಂದ ನಂತರ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದಿರಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಚಾ*ಕುವಿನಿಂದ ಇರಿದು ಕೊ*ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ರ ರಿಯಾಲಿಟಿ ಶೋ 119ನೇ ದಿನಕ್ಕೆ ಕಾಲಿಡುತ್ತಿದೆ. ಅದರ ನಡುವೆ ವಾರ ವಾರ ಎಲಿಮಿನೇಟ್ ಪ್ರಕ್ರಿಯೆ ತೀವ್ರ ಕೂತುಹಲ ಕೆರಳಿಸಿದೆ. ಈ ವಾರ ಬಿಗ್ ಬಾಸ್ ನಿಂದ ಧರ್ಮ ಕೀರ್ತಿರಾಜ್ ಎಲಿಮೀನೆಟ್ ಆಗಿ ಹೊರಬಂದಿದ್ದಾರೆ.
ಸದಾ ನಗುಮುಖದಲ್ಲೇ ಕಾಣಿಸಿಕೊಳ್ಳುವ ಧರ್ಮ, ಯಾರ ತಂಟೆಗೂ ಹೊಗುತ್ತಿರಲಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧರ್ಮ ಹಾಗೂ ಅನುಷಾ ಒಟ್ಟಿಗೆ ದೊಡ್ಮನೆ ಸೇರಿದ್ದರು. ಆದರೆ ಧರ್ಮ ಮತ್ತು ಅನುಷಾ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ ಅನುಷಾ ಈ ಮೊದಲೇ ಎಲಿಮಿನೇಟ್ ಆಗಿದ್ದರು. ಇದು ಧರ್ಮ ಅವರಿಗೆ ಬೇಸರ ಮೂಡಿಸಿತ್ತು.
ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಹಂತದಲ್ಲಿ ಧರ್ಮ ಹಾಗೂ ಚೈತ್ರಾ ಉಳಿದುಕೊಂಡಿದ್ದರು. ಫೈನಲ್ ಆಗಿ ಧರ್ಮ ಮನೆಯಿಂದ ಹೊರಬಂದರು. ಧರ್ಮ ಬೇಸರದಿಂದಲೇ ಹೊರನಡೆದರು.
ಧರ್ಮ ಸದಾ ಕೂಲ್ ಆಗಿಯೇ ಇರುತ್ತಾರೆ. ಅವರು ಯಾವುದೇ ಕಿತ್ತಾಟಕ್ಕೂ ಹೋಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡು ಒಂದು ದಿನ ಕೂಗಾಡಿದವರಲ್ಲ. ಇನ್ನೊಂದು ಕಡೆ, ಧರ್ಮ ಎಲ್ಲಿಯೂ ಕೂಡ ಹೈಲೈಟ್ ಆಗುತ್ತಿರಲಿಲ್ಲ. ಇವರಿಗಿಂತ ನಂತರ ವೈಲ್ಡ್ ಕಾರ್ಡ್ ನಲ್ಲಿ ಬಂದ ಹನುಮಂತ, ರಜತ್ ಹಾಗೂ ಶೋಭಾ ಶೆಟ್ಟಿ ಈಗಗಾಲೇ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.
ಧರ್ಮ ಶಾಂತತೆಯ ಸ್ವರೂಪವನ್ನು ಹೊಂದಿರುವ ವ್ಯಕ್ತಿತ್ವ. ಈ ಮೊದಲು ಎಲಿಮಿನೇಟ್ ಆಗಿರುವ ಲಾಯರ್ ಜಗದೀಶ್ ವಿರುದ್ದ ಇಡೀ ಮನೆಯೇ ತಿರುಗಿ ಬಿದ್ದಾಗಲೂ ಧರ್ಮ ಫೈಟ್ ಗೆ ಹೋಗಿರಲಿಲ್ಲ. ಇದು ಅವರ ಮುಗ್ದತೆ ಮತ್ತು ತಾಳ್ಮೆಯ ಸ್ವರೂಪವನ್ನು ತೋರಿಸುತ್ತದೆ.
ಬಿಗ್ ಬಾಸ್ ಮನೆ ಎಂದರೆ ನೆನಪಾಗುವುದೇ ಜಗಳ, ಕೋಪ ಮತ್ತು ಮಾತುಗಾರಿಕೆ. ಎಲ್ಲೋ ಒಂದು ಕಡೆ ಧರ್ಮ ಅವರಿಗೆ ತಮ್ಮ ತಾಳ್ಮೆಯೇ ಮುಳುವಾಗಿ ಎಲಿಮಿನೇಟ್ ಆಗಲು ಕಾರಣವಾಯಿತು ಎಂದು ಹೇಳಬಹುದು.