Connect with us

DAKSHINA KANNADA

ಬೆಳ್ತಂಗಡಿ ಜಲಪಾತ ಸೌಂದರ್ಯಕ್ಕೆ ಮರುಳಾಗಿ ಮಣ್ಣಾದ ಯುವಕ..! 

Published

on

ಬೆಳ್ತಂಗಡಿ ಜಲಪಾತ ಸೌಂದರ್ಯಕ್ಕೆ ಮರುಳಾಗಿ ಮಣ್ಣಾದ ಯುವಕ..! 

A young man who falls into the beauty of waterfall; fall to soil  

ಮಂಗಳೂರು:ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಎಳನೀರು ಘಾಟ್‌  ಬಂಗಾರ್ ಪಲ್ಕೆ ಎಂಬಲ್ಲಿ ಅನುಮತಿ ಇಲ್ಲದಿದ್ದರೂ ಅರಣ್ಯ ಪ್ರದೇಶದ ಒಳಗಡೆ ಇರುವ ಜಲಪಾತಕ್ಕೆ ತೆರಳಿದ್ದ ಉಜಿರೆ ಮೂಲದ ಯುವಕ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.ಮೃತರನ್ನು ಉಜಿರೆ ಗ್ರಾಮದ ಕಾಶಿಬೆಟ್ಟು ನಿವಾಸಿ ಸನತ್‌ ಶೆಟ್ಟಿ(26) ಎಂದು ಗುರುತಿಸಲಾಗಿದೆ. ಉಜಿರೆಯ ನಾಲ್ವರು ಯುವಕರು ಜಲಪಾತದಲ್ಲಿ ಇರುವ ಸಮಯ ಜಲಪಾತದ ಅಂಚಿನ‌ ಗುಡ್ಡ ದಿಢೀರನೆ ಕುಸಿತ ಉಂಟಾಗಿ ಮೂವರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಮೂವರಲ್ಲಿ ಓರ್ವ ಮಣ್ಣಿನಡಿಯಲ್ಲಿ ಸಿಲುಕಿ ಕಾಣೆಯಾಗಿದ್ದಾನೆ.ಇನ್ನಿಬ್ಬರು ಪಾರಾಗಿದ್ದಾರೆ. ಇಲ್ಲಿನ ಅರಣ್ಯ ಪ್ರವೇಶಕ್ಕೆ ಅನುಮತಿ ಇಲ್ಲದಿದ್ದರೂ, 5 ಜನರ ತಂಡ ಅನಧಿಕೃತವಾಗಿ ಬಂಗಾರಪಲ್ಕೆ ಅರಣ್ಯವ್ಯಾಪ್ತಿಯ ಬಡಮನೆ ಜಲಪಾತಕ್ಕೆ ತೆರಳಿದ್ದರು.ದಿಡುಪೆಯಿಂದ 10 ಕಿ ಮೀ ದೂರವರಿರುವ ದಟ್ಟಾರಣ್ಯ ವ್ಯಾಪ್ತಿಯ ಜಲಪಾತಕ್ಕೆ ದೂರವಾಣಿ ಸಂಪರ್ಕ ಇಲ್ಲದೇ ಇದ್ದುದರಿಂದ ಕಾರ್ಯಾಚರಣೇಗೆ ಅಡ್ಡಿಯಾಗಿದೆ.

ಈಗಾಗಲೇ ಮಣ್ಣಿನಡಿ ಸಿಲುಕಿದ ವಿದ್ಯಾರ್ಥಿಯನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ. ಬೃಹತ್ ಗಾತ್ರದ ಬಂಡೆಗಳು ಮರಗಳು ಕುಸಿದು ಬಿದ್ದಿರುವುದರಿಂದ ಆ ಜಾಗಕ್ಕೆ ಯಾವುದೇ ರೀತಿಯ ವಾಹನ ಹೋಗಲಾಗುತ್ತಿಲ್ಲ. ಹೀಗಾಗಿ ಕಾರ್ಯಾಚರಣೆಗೆ ತೊಡಕುಂಟಾಗಿದೆ.

ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಎನ್​ಡಿಆರ್​ಎಫ್​ ತಂಡ ಮತ್ತು ಸ್ಥಳೀಯ ಯುವಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳದಲ್ಲಿ ಇದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಅರಣ್ಯದಂಚಿನಲ್ಲಿ ಇರುವ ಜಲಪಾತ ಜನವಸತಿಯಿಂದ ದೂರವಿದೆ. ಇತ್ತೀಚೆಗಷ್ಟೆ ಜಲಪಾತಕ್ಕೆ ನಿಷೇಧ ಹೇರುವಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಒತ್ತಡ ಹೇರಿದ್ದರು.

Ancient Mangaluru

ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

Published

on

ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.

ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.  ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ  ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು.  ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ  ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Continue Reading

DAKSHINA KANNADA

ಉಡುಪಿ : ಬೈಕ್ ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಜೀವಾಂತ್ಯ

Published

on

ಉಡುಪಿ : ಉಡುಪಿಯ ಬ್ರಹ್ಮಾವರದ ಧರ್ಮಾವರಂ ಎಂಬಲ್ಲಿ ಬೈಕಿಗೆ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಉಪ್ಪಿನಕೋಟೆಯ 31 ವರ್ಷ ಪ್ರಾಯದ ಪ್ರೀತಮ್‌ ಡಿ’ ಸಿಲ್ವಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.

ಪ್ರೀತಮ್‌ ಅವರು ಬೈಕ್‌ ಚಲಾಯಿಸಿಕೊಂಡು ಬ್ರಹ್ಮಾವರ ಆಕಾಶವಾಣಿ ಪೆಟ್ರೋಲ್‌ ಪಂಪ್‌ ಕಡೆಯಿಂದ ಸರ್ವಿಸ್‌ ರೋಡ್‌ನ‌ಲ್ಲಿ ಆಗಮಿಸಿ ಉಪ್ಪಿನಕೋಟೆಗೆ ತೆರಳಲು ಡಿವೈಡರ್‌ ಬಳಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಖಾಸಗಿ ಬಸ್‌ ಢಿಕ್ಕಿ ಹೊಡೆಯಿತು. ಅವಿವಾಹಿತರಾಗಿದ್ದ ಪ್ರೀತಮ್‌ ಕೆಟರಿಂಗ್‌ ಉದ್ಯಮ ನಡೆಸುತ್ತಿದ್ದರು. ಪ್ರೀತಮ್‌ ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Continue Reading

DAKSHINA KANNADA

ಮನೆ ಬಿಟ್ಟು ಓಡಿ ಹೋಗಿದ್ದ ಬಂಟ್ವಾಳದ ಪ್ರೇಮಿಗಳು ಕಾಸರಗೋಡಿನಲ್ಲಿ ಪತ್ತೆ

Published

on

ಬಂಟ್ವಾಳ : 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿಗಳಾದ ಅಕ್ಕ ಪಕ್ಕದ ಮನೆಗಳ ಯುವಕ ಹಾಗೂ ಯುವತಿಯನ್ನು ಬಂಟ್ವಾಳ ಪೊಲೀಸರು ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಂಗಾಡಿನಲ್ಲಿ ಪತ್ತೆ ಹಚ್ಚಿ ಊರಿಗೆ ಕರೆ ತಂದಿದ್ದಾರೆ.

ಉದ್ದೊಟ್ಟು ನಿವಾಸಿ ಅಬ್ದುಲ್‌ಹಮೀದ್‌ಅವರ ಪುತ್ರಿ ಆಯಿಸತ್‌ರಸ್ಮಾ(18) ಮತ್ತು ಹೈದರ್‌ಅವರ ಪುತ್ರ ಮಹಮ್ಮದ್‌ಸಿನಾನ್‌ (23) ಅವರು ನ. 23 ರಂದು ತಂತಮ್ಮ ಮನೆಗಳಲ್ಲಿ ಮಲಗಿದ್ದವರು ನ. 24ರಂದು ಬೆಳಗಾಗುವಷ್ಟರಲ್ಲಿ ಕಾಣೆಯಾಗಿದ್ದರು. ಮನೆಯವರ ದೂರಿನಂತೆ ಹುಡುಕಾಟ ನಡೆಸಿದ ಬಂಟ್ವಾಳ ಪೊಲೀಸರು ಅವರಿಬ್ಬರನ್ನೂ ಕಾಂಞಂಗಾಡಿನಲ್ಲಿ ಪತ್ತೆ ಹಚ್ಚಿದ್ದು, ಠಾಣೆಗೆ ತಂದು ವಿಚಾರಿಸಿದಾಗ ತಾವಿಬ್ಬರೂ ಪರಸ್ಪರ ಪ್ರೀತಿಸಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Continue Reading

LATEST NEWS

Trending