Connect with us

    DAKSHINA KANNADA

    ನಿಶ್ಚಿತಾರ್ಥಗೊಂಡ ಯುವತಿಯ ಆ ಒಂದು ಪ್ರಶ್ನೆಗೆ ಆತ್ಮಹ*ತ್ಯೆ ಮಾಡಿಕೊಂಡ ಯುವಕ ?

    Published

    on

    ಪುಂಜಾಲಕಟ್ಟೆ : ವಿವಾಹ ನಿಶ್ಚಿತಾರ್ಥವಾಗಿದ್ದ ಹುಡುಗಿ ಜತೆ ಇನ್‌ಸ್ಟಾಗ್ರಾಮ್ ಬಗ್ಗೆ ನಡೆದ ಜಗಳದಿಂದ ಯುವಕನ ಆತ್ಮಹ*ತ್ಯೆಯಲ್ಲಿ ಅಂತ್ಯಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಜ. 21ರಂದು, ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಎಲ್ಪೇಲು ನಿವಾಸಿ ದಿ. ಯೋಗಿಶ್ ಅವರ ಪುತ್ರ ಚೇತನ್ (25) ಆತ್ಮಹ*ತ್ಯೆ ಮಾಡಿಕೊಂಡವರು. ಚೇತನ್ ದೈವದ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಮಂಗಳೂರು ತಾಲೂಕು ಕಂದಾವರ ಗ್ರಾಮದ ಓಣಿಬಾಗಿಲು ಮನೆ ನಿವಾಸಿ ದಿ. ಬಾಬು ಅವರ ಪುತ್ರಿ ಚೈತನ್ಯಾಳೊಂದಿಗೆ ಸುಮಾರು 8 ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು.

    ಜ. 21ರ ಬೆಳಿಗ್ಗೆ ಸುಮಾರು 11 ಗಂಟೆಗೆ ಚೇತನ್ ಮಾತ್ರ ಮನೆಯಲ್ಲಿದ್ದು, ತಾಯಿ ಪುಷ್ಪಾ ಅವರು ತನ್ನ ತವರು ಮನೆಯಲ್ಲಿದ್ದ ಸಮಯ ಚೈತನ್ಯಾಳು ಅವಳ ಮೊಬೈಲ್‌ನಿಂದ ಪುಷ್ಪಾ ಅವರಿಗೆ ಕರೆ ಮಾಡಿ, ನಾನು ನಿಮ್ಮ ಮನೆಗೆ ಬಂದಿದ್ದೇನೆ, ಚೇತನ್ ಮನೆಯಲ್ಲಿ ಮಲಗಿದ್ದು ಎದ್ದೇಳುತ್ತಿಲ್ಲ ಕೂಡಲೇ ಮನೆಗೆ ಬನ್ನಿ ಎಂದು ತಿಳಿಸಿದ್ದಳು.

    ಇದನ್ನೂ ಓದಿ: ಮಸಾಜ್ ಸೆಂಟರ್ ದಾಂಧಲೆ ಪ್ರಕರಣ; 14 ಮಂದಿ ಅರೆಸ್ಟ್

    ಪುಷ್ಪಾ ಅವರು 11.30 ರ ವೇಳೆಗೆ ಬಂದು ನೋಡಿದಾಗ ಮನೆಯ ಬಾತ್ ರೂಂ ಮತ್ತು ಮನೆಯ ಮಧ್ಯೆ ಇರುವ ಪ್ಯಾಸೇಜ್‌ನಲ್ಲಿ ಚೇತನ್ ಮಲಗಿದ ಸ್ಥಿತಿಯಲ್ಲಿದ್ದು, ಎಬ್ಬಿಸಲು ಪ್ರಯತ್ನಿಸಿದರೂ ಏಳದೇ ಇದ್ದಾಗ, ಪುಷ್ಪಾ ಅವರು ಮನೆಯ ಛಾವಣಿ ಕಡೆ ನೋಡಿದಾಗ ಲುಂಗಿಯಲ್ಲಿ ನೇಣು ಹಾಕಿದ ರೀತಿಯಲ್ಲಿ ಲುಂಗಿಯನ್ನು ನೋಡಿ ಚೈತನ್ಯಾಳಲ್ಲಿ ಪ್ರಶ್ನಿಸಿದ್ದಾರೆ.

    ಅಷ್ಟಕ್ಕೂ ಆಗಿದ್ದೇನು ?
    ಚೇತನ್ ಇನ್‌ಸ್ಟಾಗ್ರಾಂನಲ್ಲಿ ಹುಡುಗಿಯೊಬ್ಬಳಿಗೆ ಲೈಕ್ ಮಾಡಿರುವುದು ಪ್ರಶ್ನಿಸಲು ತಾನು ಮನೆಗೆ ಬಂದಿರುವುದಾಗಿ, ಈ ವಿಚಾರದ ಬಗ್ಗೆ ಗಲಾಟೆಯಾಗಿತ್ತು. ಇದರಿಂದ ಬೇಸರಗೊಂಡ ಚೇತನ್ ಮನೆಯೊಳಗೆ ಓಡಿ ಹೋಗಿ ಛಾವಣಿಯ ಅಡ್ಡಕ್ಕೆ ಲುಂಗಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಾನೇ ಕೆಳಗಿಳಿಸಿ ಆರೈಕೆ ಮಾಡಿರುವುದಾಗಿ ತಿಳಿಸಿದ್ದಳು.
    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    DAKSHINA KANNADA

    ಬಂಟ್ವಾಳ : 108 ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರ್‌ ಡಿಕ್ಕಿ – ವಾಹನಗಳು ಜಖಂ

    Published

    on

    ಬಂಟ್ವಾಳ: ರಸ್ತೆ ಬದಿಯಲ್ಲಿ ಖಾಲಿ ಜಾಗದಲ್ಲಿ ನಿಲ್ಲಿಸಿ ಟಯರ್ ಚೆಕ್ ಮಾಡುತ್ತಿದ್ದ ವೇಳೆ 108 ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂಗೊಂಡಿದ್ದು ಅದೃಷ್ಟವಶಾತ್ ಯಾರಿಗೂ ಗಾಯವಿಲ್ಲದೆ ಪಾರಾಗಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ.

    ವಿಟ್ಲದಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ವಾಪಸು ವಿಟ್ಲಕ್ಕೆ ಬರುತ್ತಿದ್ದ 108 ಅಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರು ಡಿಕ್ಕಿಯಾಗಿದೆ. ಕಡೆಗೋಳಿ ಎಂಬಲ್ಲಿ ಆಂಬ್ಯುಲೆನ್ಸ್ ವಾಹನದ ಚಕ್ರದಲ್ಲಿ ಶಬ್ದ ಬಂದಿದೆ ಎಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚಾಲಕ ಕರುಣಾಕರ ಅವರು ಪರಿಶೀಲನೆ ಮಾಡುತ್ತಿದ್ದ ವೇಳೆ ಇನ್ನೋವ ಕಾರು ಚಾಲಕ ಶ್ರವಣ್ ಅಂಬ್ಯುಲೆನ್ಸ್ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ.

    ಘಟನೆಯಲ್ಲಿ ಯಾವುದೇ ಗಾಯವಾಗದಿದ್ದರೂ ಎರಡು ವಾಹನಗಳಿಗೆ ಹಾನಿಯಾಗಿದೆ. ಪಾಣೆಮಂಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಮಂಗಳೂರಿಗೆ ದುಬೈನಿಂದ ಬಂದ ವ್ಯಕ್ತಿಯಲ್ಲಿ ಮಂಕಿಫಾಕ್ಸ್ ಪತ್ತೆ

    Published

    on

    ಬೆಂಗಳೂರು, ಜನವರಿ 23: ಕಳೆದ 14 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ ವ್ಯಕ್ತಿಯೊಬ್ಬ ಜನವರಿ 17ರಂದು ಮಂಗಳೂರಿಗೆ ಭೇಟಿ ನೀಡಿದ್ದು, ಅವನಿಗೆ ಪುಣೆಯ ಎನ್‌ಐವಿ ಲ್ಯಾಬ್‌ನಲ್ಲಿ ಮಂಕಿಫಾಕ್ಸ್ ಇರುವುದು ದೃಢವಾಗಿದ್ದು ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿದೆ.

    ಸೋಂಕಿತನ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ. ಇನ್ನು ಏರ್‌ಪೋರ್ಟ್‌ನಲ್ಲಿ ಸೋಂಕಿತ ಪತಿಯನ್ನು ನೋಡಲು ಬಂದಿದ್ದ ಪತ್ನಿಯನ್ನು ಐಸೋಲೇಷನ್‌ನಲ್ಲಿರಲು ಸೂಚನೆ ನೀಡಲಾಗಿದೆ. ತಕ್ಷಣ ಐಸೋಲೆಟ್ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವ್ಯಕ್ತಿಯ ಸ್ಯಾಂಪಲ್​ನ್ನು ಬೆಂಗಳೂರು ಮೆಡಿಕಲ್ ಕಾಲೇಜು ಹಾಗೂ ಪುಣೆಯ ಎನ್‌ಐವಿ ಲ್ಯಾಬ್‌ಗೆ ರವಾನಿಸಲಾಗಿತ್ತು. ಇದೀಗ ಎನ್‌ಐವಿ ಲ್ಯಾಬ್‌ ರಿಪೋರ್ಟ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ದೃಢ ಪಟ್ಟಿದೆ. ಸದ್ಯ ಮಂಕಿಪಾಕ್ಸ್​ಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿಲ್ಲ.

    ಮಂಕಿಪಾಕ್ಸ್​ನ ಲಕ್ಷಣಳು :

    • ಊದಿಕೊಂಡ ದುಗ್ಧರಸ ಗ್ರಂಥಿಗಳು
    • ಜ್ವರ
    • ಚಳಿಯ ಅನುಭವ
    • ಸ್ನಾಯು ನೋವು
    • ತಲೆನೋವು
    • ಸುಸ್ತು

    ಮಂಕಿಪಾಕ್ಸ್​ಗೆ ಇಲ್ಲಿಯವರೆಗೆ ಯಾವುದೇ ಲಸಿಕೆ ಅಥವಾ ಶಿಫಾರಸು ಮಾಡಿದ ಔಷಧವಿಲ್ಲ. ರೋಗಿಗೆ ಆತನ ರೋಗಲಕ್ಷಣಗಳ ಆಧಾರದ ಮೇಲೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಆಂಟಿವೈರಲ್ ಔಷಧಿಗಳನ್ನು ನೀಡುವ ಮೂಲಕ ವೈದ್ಯರು ರೋಗಿಯ ರೋಗವನ್ನು ನಿಯಂತ್ರಿಸುತ್ತಾರೆ.

    Continue Reading

    DAKSHINA KANNADA

    ಮಸಾಜ್ ಸೆಂಟರ್ ದಾಂಧಲೆ ಪ್ರಕರಣ; 14 ಮಂದಿ ಅರೆಸ್ಟ್

    Published

    on

    ಮಂಗಳೂರು : ಅನೈತಿಕ ಚಟುವಟಿಕೆ ಆರೋಪದಲ್ಲಿ ಮಂಗಳೂರಿನ ಬಿಜೈ ಬಳಿ ನಡೆದಿದ್ದ ಮಸಾಜ್ ಪಾರ್ಲರ್ ದಾಳಿಯಲ್ಲಿ ಹದಿನೈದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ಈ ದಾಳಿ ನಡೆದಿದ್ದು, ರಾಮಸೇನೆಯ ಕಾರ್ಯಕರ್ತರು ಈ ದುಷ್ಕೃತ್ಯ ನಡೆಸಿದ್ದಾರೆ. ಪಾರ್ಲರ್ ಒಳ ನುಗ್ಗಿದ್ದ 10 ಜನ ರಾಮಸೇನಾ ಕಾರ್ಯಕರ್ತರು ಅಲ್ಲಿದ್ದ ಮಹಿಳಾ ಸಿಬ್ಬಂದಿಗೆ ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದಾರೆ. ಪಾರ್ಲರ್‌ನಲ್ಲಿ ಭಯದ ವಾತಾವರಣ ಸೃಷ್ಟಿಮಾಡಿ ಅಲ್ಲಿನ ಪಿಠೋಪಕರಣಗಳನ್ನು ಪುಡಿ ಗೈದಿದ್ದಾರೆ.

    ಅಷ್ಟೇ ಅಲ್ಲದೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಎತ್ತಾಡಿ ಬಿಸಾಡಿದ್ದು, ಪಾರ್ಲರ್‌ನಲ್ಲಿದ್ದ ನಾಲ್ವರು ಯುವತಿಯರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕುಡುಪು ಗ್ರಾಮದ ಮನೆಯಿಂದ ರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಿ ಎಳೆದೊಯ್ದಿದ್ದಾರೆ.

    ಇದನ್ನೂ ಓದಿ: ಮಸಾಜ್ ಸೆಂಟರ್‌ಗೆ ಹಿಂದೂ ಕಾರ್ಯಕರ್ತರ ಅನಿರೀಕ್ಷಿತ ದಾಳಿ; ಪೀಠೋಪಕರಣ ಧ್ವಂಸ ಮಾಡಿ ಅಟ್ಟಹಾಸ

    ಉಡುಪಿ ಪ್ರವಾಸದಲ್ಲಿದ್ದ ಗೃಹ ಸಚಿವರು ಹಾಗೂ ಬೆಂಗಳೂರಿನಿಂದ ಉಸ್ತುವಾರಿ ಸಚಿವರು ಘಟನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಪಾರ್ಲರ್ ಮಾಲಕ ಸುಧೀರ್ ಶೆಟ್ಟಿ ಎಂಬುವವರ ದೂರಿನ ಆಧಾರದಲ್ಲಿ ಹಾಗೂ ಸಿಸಿ ಟಿವಿ ದೃಶ್ಯ ಮತ್ತು ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ ಆರೋಪಿಗಳನ್ನು ಗುರುತಿಸಲಾಗಿದೆ.

    ಹನ್ನೊಂದು ಜನ ಪಾರ್ಲರ್ ಒಳಗೆ ಹೋಗಿದ್ದು, ಇದಕ್ಕೆ ಕುಮ್ಮಕ್ಕು ನೀಡಿದ ನಾಲ್ವರನ್ನು ಬಂಧಿಸಲಾಗಿದೆ.

    Continue Reading

    LATEST NEWS

    Trending