20ರ ಹರೆಯಕ್ಕೇ ನಾಲ್ಕನೇ ಮದುವೆಗೆ ತಯಾರಿ ನಡೆಸುತ್ತಿರುವ ಯುವಕ
ಕರಾಚಿ: ಈ ಯುವಕನ ಹೆಸರು ಅದ್ನಾನ್ . ಈಗಾಗಲೇ ಈತನಿಗೆ ಮೂವರು ಹೆಂಡತಿಯರು. ಅಂದ ಮೇಲೆ ಈತ ಯುವಕ ಹೇಗಾದ ಎಂದು ಕೇಳಬೇಡಿ.ನಿಜಕ್ಕೂ ಈತ ಯುವಕನೇ. ಏಕೆಂದರೆ ಈತನ ವಯಸ್ಸು ಕೇವಲ 20.! 20ರ ವಯಸ್ಸಿಗೆ ಮೂರು ಮದುವೆನಾ ಅನ್ನಿಸಬಹುದು. ಆದರೆ ಇದು ನಿಜ. ಮೊದಲ ವಿವಾಹವಾದಾಗ ಈತನಿಗೆ ಕೇವಲ 16 ವರ್ಷ. ಎರಡನೆಯದು ಆದಾಗ 18, ಮೂರನೆಯದಾದಾಗ 19,
ಈಗ 20. ಅಂದಹಾಗೆ ಇವನೀಗ ನಾಲ್ಕನೇ ಮದುವೆಗೆ ತಯಾರಿ ನಡೆಸಿದ್ದಾನೆ.ಅಂದಹಾಗೆ ಈತ ಪಾಕಿಸ್ತಾನದ ಸಿಯಾಲ್ಕೋಟ್ನ ನಿವಾಸಿ ಈತನೇನೋ ನಾಲ್ಕನೆಯವಳನ್ನು ಹುಡುಕುತ್ತಿದ್ದಾನೆ. ಇದಕ್ಕೆ ಉಳಿದ ಮೂವರು ಜಗಳವಾಡುತ್ತಿದ್ದಾರೆ ಅಂತ ಅಂದುಕೊಂಡರೆ ಅದು ತಪ್ಪು. ಏಕೆಂದರೆ ನಾಲ್ಕನೆಯ ಮದುವೆಗೆ ಮೂವರೂ ಸಹಕರಿಸುತ್ತಿದ್ದಾರಂತೆ.
ತಮ್ಮ ಗಂಡ ಇನ್ನೊಂದು ಮದುವೆಯಾಗಲಿ ಎಂದು ನಾಲ್ಕನೆಯವಳಿಗಾಗಿ ಅವರೇ ಹುಡುಕಾಟ ನಡೆಸುತ್ತಿದ್ದಾರೆ. ಹೀಗೆಂದು ಖುದ್ದು ಅದ್ನಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ. ತನ್ನ ಎಲ್ಲ ಹೆಂಡತಿಯರೂ ಅನ್ಯೋನ್ಯವಾಗಿದ್ದಾರೆ. ಯಾವತ್ತಿಗೂ ಜಗಳವಾಡುವುದಿಲ್ಲ. ಮನೆಗೆಲಸಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಎಲ್ಲರ ಜತೆಯೂ ನಾನು ಬಹಳ ಟೈಂ ಕೊಡಲು ಆಗುವುದಿಲ್ಲ ಎಂಬ ಬೇಸರ ಬಿಟ್ಟರೆ ಎಲ್ಲರೂ ಆರಾಮಾಗಿ ಇದ್ದಾರೆ ಎನ್ನುತ್ತಾನೆ ಅದ್ನಾನ್ !
ಈತನಿಗೆ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆಯಂತೆ. ಆದರೆ ಪ್ರತಿ ಮದುವೆಯಾದಾಗಲೂ ಅವನ ಆದಾಯ ಏರುತ್ತಲೇ ಸಾಗಿದೆ ಎನ್ನುತ್ತಿದ್ದಾನೆ ಅದಕ್ಕಾಗಿ ಇನ್ನೂ ಹೆಚ್ಚು ಮದುವೆಯಾಗುವ ಆಸೆ ಎನ್ನುತ್ತಾನೆ ಅದ್ನಾನ್. ಅಂದ ಹಾಗೆ ಇವನ ಒಂದು ಕೋರಿಕೆಯೆಂದರೆ ನಾಲ್ಕನೆಯವಳಾಗಿ ಬರುವವಳು ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇರುವವಳು ಆಗಿರಬೇಕಂತೆ.
ಏಕೆಂದರೆ ಎಸ್ ಈತನಿಗೆ ಬಹಳ ಶುಭದಾಯಕವಂತೆ. ಈತನ ಹೆಂಡತಿಯರ ಹೆಸರು ಶುಂಬಲ್, ಶಬಾನಾ ಮತ್ತು ಶಾಹಿದಾ. ಅರ್ಥಾತ್ ಎಲ್ಲರೂ ಎಸ್ ಅಕ್ಷರದಿಂದಲೇ ಆರಂಭವಾಗುವವರು. ಇದು ಅವನಿಗೆ ಶುಭ ಕೊಟ್ಟಿದ್ದು, ನಾಲ್ಕನೆಯವಳೂ ಹಾಗೇ ಇರಬೇಕು ಎಂದಿದ್ದಾನೆ.