LATEST NEWS
ಕಾಪು ಬೀಚ್ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆ..!
ಉಡುಪಿ: ಯುವಕನೋರ್ವ ಬೀಚ್ ಬಳಿ ಬೈಕ್ ಇಟ್ಟು ನಿಗೂಢವಾಗಿ ನಾಪತ್ತೆಯಾದ ಘಟನೆ ಕಾಪುವಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್ ಅವರ ಪುತ್ರ ಕರಣ್ ಸಾಲ್ಯಾನ್ (20) ನಾಪತ್ತೆಯಾದ ಯುವಕ. ಈತ ಗುರುವಾರ(ಜೂ.6) ಸಂಜೆಯಿಂದ ನಾಪತ್ತೆಯಾಗಿದ್ದು ಶುಕ್ರವಾರ(ಜೂ.7) ಬೆಳಿಗ್ಗೆ ಕಾಪು ಬೀಚ್ ಬಳಿ ಬೈಕ್, ಬೆಲೆಬಾಳುವ ಫೋನ್, ನಗದು ಸಹಿತ ಪರ್ಸ್ ಪತ್ತೆಯಾಗಿದೆ.
ಮುಂದೆ ಓದಿ..; ಗಾಂಜಾ ಮಾರಾಟಕ್ಕೆ ಯತ್ನ ಆರೋಪ; ಮಣಿಪಾಲದಲ್ಲಿ ಕೇರಳದ ವಿದ್ಯಾರ್ಥಿ ಬಂಧನ
ಮನೆಯವರು ಮತ್ತು ಸ್ಥಳೀಯರು ಕಾಪು ಬೀಚ್ ಬಳಿ, ಸಮುದ್ರ ತೀರ ಮತ್ತು ಸಮುದ್ರದಲ್ಲಿ ತೀವ್ರ ಹುಡುಕಾಟ ನಡೆಸಿದ್ದು, ಶನಿವಾರವೂ ಹುಡುಕಾಟ ಮುಂದುವರಿಸಿದ್ದಾರೆ. ಮಗ ನಾಪತ್ತೆಯಾಗಿರುವ ಬಗ್ಗೆ ತುಳಸಿ ಸಾಲ್ಯಾನ್ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
LATEST NEWS
T20 ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಹಲವು ದಾಖಲೆ ಬರೆದ ಹಿಟ್ ಮ್ಯಾನ್
ಮಂಗಳೂರು/ ನವದೆಹಲಿ : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಅಮೋಘ ಅರ್ಧ ಶತಕ ಬಾರಿಸಿದ್ದಾರೆ. ಈ ಮೂಲಕ ಭಾರತ ತಂಡದ ನಾಯಕನಾಗಿ 5,000 ರನ್ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ. ಅಲ್ಲದೇ, ಈ ಸಾಧನೆ ಮಾಡಿದ ಭಾರತದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಅಜರುದ್ದೀನ್, ಸೌರವ್ ಗಂಗೂಲಿ ಈ ದಾಖಲೆ ಮಾಡಿದ್ದರು.
ಬಾಬರ್ ಅಜಮ್ ದಾಖಲೆ ಉಡೀಸ್ :
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ನಾಯಕ ಎಂದೆನಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ 2024 ರ ಭಾಗವಾಗಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್-2 ಅನ್ನು 68 ರನ್ಗಳ ದೊಡ್ಡ ಅಂತರದಿಂದ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದೆ.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ 39 ಎಸೆತಗಳಲ್ಲಿ, 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 57 ರನ್ ಸಿಡಿಸಿ ಅರ್ಧಶತಕ ಗಳಿಸಿದ್ದರು. ಆ ಮೂಲಕ ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅತಿ ಹೆಚ್ಚು ಗೆಲುವು ದಾಖಲಿಸಿದ ನಾಯಕ :
ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ನಾಯಕನಾಗಿಯೂ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಬಾಬರ್ ಅಜಮ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದುವರೆಗೆ 61 ಪಂದ್ಯಗಳ ನಾಯಕರಾಗಿರುವ ರೋಹಿತ್ ಶರ್ಮಾ ಭಾರತಕ್ಕೆ 49 ಪಂದ್ಯಗಳನ್ನು ಗೆದ್ದಿದ್ದಾರೆ. ಮತ್ತೊಂದೆಡೆ, ಬಾಬರ್ ಅಜಮ್ ಪಾಕಿಸ್ತಾನಕ್ಕೆ 85 ಪಂದ್ಯಗಳಲ್ಲಿ 48 ಗೆಲುವು ದಾಖಲಿಸಿದ್ದರು.
ಭಾರತ ತಂಡದ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 5 ಸಾವಿರ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ. ವಿರಾಟ ಕೊಹ್ಲಿ 12,883 ರನ್ ಗಳೊಂದಿಗೆ ಟಾಪ್ ನಲ್ಲಿದ್ದಾರೆ. ಧೋನಿ 11,207 ರನ್, ಮೊಹಮ್ಮದ್ ಅಜರುದ್ದೀನ್ 8,095 ರನ್, ಸೌರವ್ ಗಂಗೂಲಿ 7,643 ರನ್ ಗಳೊಂದಿಗೆ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ : WATCH : ಟ್ರಾಫಿಕ್ ಜಾಮ್ ನಿಂದ ಬೇಸತ್ತು ‘ಬಾಹುಬಲಿ’ಯಾದ ಬೈಕ್ ಸವಾರ; ವೀಡಿಯೋ ವೈರಲ್
ಅತ್ಯಧಿಕ ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಆಟಗಾರ :
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಇದುವರೆಗೂ ರೋಹಿತ್ ಶರ್ಮಾ 50 ಸಿಕ್ಸರ್ ಸಿಡಿಸಿದ್ದಾರೆ. 63 ಸಿಕ್ಸರ್ ಗಳೊಂದಿಗೆ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
LATEST NEWS
ವಿಮಾನ ಶೌಚಾಲಯದಲ್ಲಿ ಸ್ಮೋಕಿಂಗ್..! ಯುವಕ ಮುಂಬೈ ಪೊಲೀಸರ ವಶ
ಮುಂಬೈ/ಮಂಗಳೂರು: ದೆಹಲಿಯಿಂದ ಮುಂಬೈಗೆ ತೆರಳುವ ವಿಮಾನದಲ್ಲಿ ಪ್ರಯಾಣಿಕನೋರ್ವ ಧೂಮಪಾನ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಬುಧವಾರ ಸಂಜೆ ನಡೆದಿದೆ. ದೆಹಲಿಯಿಂದ ಮುಂಬೈಗೆ ತೆರಳುವ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬ ಶೌಚಾಲಯದಲ್ಲಿ ಸಿಗರೇಟ್ ಸೇದಿದ್ದಾನೆ. ಆದರೆ ಸ್ಮೋಕ್ ಸೆನ್ಸಾರ್ ಮೂಲಕ ಆತ ಧೂಮಪಾನ ಮಾಡಿರುವುದು ಸಿಬಂದಿಗಳಿಗೆ ಸೂಚನೆ ಸಿಕ್ಕಿದೆ. ಆತ ಶೌಚಾಲಯದಿಂದ ಹೊರ ಬರುತ್ತಿದ್ದಂತೆ ಕೂಡಲೇ ಕ್ಯಾಬಿನ್ ಸಿಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೆಂಕಿ ಕಡ್ಡಿ ಹಾಗೂ ಸಿಗರೇಟ್ ತುಂಡು ಪತ್ತೆಯಾಗಿದೆ.
ಕೂಡಲೇ ಕ್ಯಾಬಿನ್ ಸಿಬಂದಿಗಳು ಮೇಲಾಧಿಕಾರಿಗಳಿಗೆ ದೂರು ನೀಡಿದ್ಧಾರೆ. ಇದಾದ ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಅಗುತ್ತಿದ್ದಂತೆಯೇ ಮೇಲಾಧಿಕಾರಿಗಳು ಆತನನ್ನು ವಿಚಾರಣೆ ನಡೆಸಿದ್ದು ಈ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
Read More..; ದೆಹಲಿ ವಿಮಾನ ನಿಲ್ದಾಣದಲ್ಲಿ ದುರಂ*ತ : ಟರ್ಮಿನಲ್ 1 ರ ಮೇಲ್ಛಾವಣಿ ಕುಸಿದು ಓರ್ವ ಸಾ*ವು; ಹಲವರಿಗೆ ಗಾ*ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಖಲೀಲ್ ಕಾಜಮ್ಮುಲ್ ಖಾನ್ ನನ್ನು ಮುಂಬೈನ ಸಹಾರ ಪೊಲೀಸ್ ಠಾಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
LATEST NEWS
WATCH : ಟ್ರಾಫಿಕ್ ಜಾಮ್ ನಿಂದ ಬೇಸತ್ತು ‘ಬಾಹುಬಲಿ’ಯಾದ ಬೈಕ್ ಸವಾರ; ವೀಡಿಯೋ ವೈರಲ್
ಮಂಗಳೂರು : ಸದ್ಯ ದೊಡ್ಡ ದೊಡ್ಡ ನಗರಗಳು ಎದುರಿಸುತ್ತಿರೋ ಸಮಸ್ಯೆ ಎಂದರೆ ಟ್ರಾಫಿಕ್ ಜಾಮ್. ವಾಹನ ದಟ್ಟಣೆಗಳ ಕಿರಿ ಕಿರಿ ಹೇಳತೀರದು. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಿಂದ ಜನರು ಬೇಸತ್ತು ಹೋಗೋದು ನಗರಗಳ ದಿನನಿತ್ಯದ ಸಮಸ್ಯೆ.
ಇದೀಗ ಇಂತಹುದೇ ಟ್ರಾಫಿಕ್ ಜಾಮ್ ನಿಂದ ವ್ಯಕ್ತಿಯೊಬ್ಬರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ವೇಳೆ ಅವರು ಹೆಗಲ ಮೇಲೆ ಬೈಕ್ ಹೊತ್ತು ಸಾಗಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ವಾಹನ ದಟ್ಟಣೆಯಿಂದ ಹೈರಾಣಾಗಿದ್ದಾನೆ. ಕೊನೆಗೊಂದು ಉಪಾಯವನ್ನೂ ಹೂಡಿದ್ದಾನೆ. ಹೌದು, ಆತ ತನ್ನ ಹೆಗಲ ಮೇಲೆ ಬೈಕ್ ಅನ್ನು ಹೊತ್ತೊಯ್ದಿದ್ದಾನೆ. ಈ ದೃಶ್ಯ ನೋಡಿದ ಮಂದಿ ಬಿಟ್ಟ ಕಂಗಳಲ್ಲೇ ಆತನನ್ನು ನೋಡಿದ್ದಾರೆ. ಈ ದೃಶ್ಯ ‘ಬಾಹುಬಲಿ’ ಸಿನಿಮಾ ನೆನಪಿಸಿದ್ದು ಸುಳ್ಳಲ್ಲ. ಇದನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸದ್ಯ ವೀಡಿಯೋ ವೈರಲ್ ಆಗಿದೆ.
@basit_ki_memes ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್ 18ರಂದು ಹಂಚಿಕೊಂಡಿರುವ ಈ ವಿಡಿಯೋ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ನೆಟ್ಟಿಗರು ವ್ಯಕ್ತಿಯ ನಡೆಗೆ ಹುಬ್ಬೇರಿಸಿದ್ದಾರೆ.
- LATEST NEWS6 days ago
ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ
- LATEST NEWS3 days ago
ಪ್ರೀತಂ ಗೌಡ ಸೇರಿ ನಾಲ್ವರ ಮೇಲೆ ಎಫ್ಐಆರ್..! ಪ್ರಜ್ವಲ್ ಗೆ ಮತ್ತೊಂದು ಸಂಕಷ್ಟ
- DAKSHINA KANNADA4 days ago
ಕರಾವಳಿಯಲ್ಲಿ ಬಿರುಸು ಪಡೆದುಕೊಂಡ ಮಳೆ; ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ
- LATEST NEWS7 days ago
ನಟ ದರ್ಶನ್ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಸಿವಿ ನಾಗೇಶ್; ಯಾರಿವರು ಗೊತ್ತಾ!?
Pingback: ನಾಪತ್ತೆಯಾಗಿದ್ದ ಯುವಕನ ಮೃ*ತದೇಹ ಕಾಪು ಬೀಚ್ನಲ್ಲಿ ಪತ್ತೆ..! - NAMMAKUDLA NEWS - ನಮ್ಮಕುಡ್ಲ ನ್ಯೂಸ್