Connect with us

    DAKSHINA KANNADA

    ಉಳ್ಳಾಲ : ನೇಣು ಬಿಗಿದು ಯುವಕ ಆತ್ಮಹ*ತ್ಯೆ

    Published

    on

    ಉಳ್ಳಾಲ :  ಯುವಕನೊಬ್ಬ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಎಂಬಲ್ಲಿ ನಡೆದಿದೆ. ತಾರಿಪಡ್ಪು ನಿವಾಸಿ ಶ್ರವಣ್ ಆಳ್ವ(25) ಆತ್ಮಹ*ತ್ಯೆ ಮಾಡಿಕೊಂಡ ಯುವಕ.

    ಎಲೆಕ್ಟ್ರೀಷಿಯನ್ ವೃತ್ತಿ ಮಾಡುತ್ತಿದ್ದ ಶ್ರವಣ್ ನಿನ್ನೆ ರಾತ್ರಿ ಸ್ನೇಹಿತರ ಜತೆಗಿದ್ದು , ರಾತ್ರಿ ಮನೆಗೆ ಬಂದಿದ್ದ ಎನ್ನಲಾಗಿದೆ. ಮಧ್ಯ ರಾತ್ರಿ ಶ್ರವಣ್ ನ ಅಣ್ಣ ಕೆಲಸ ಮುಗಿಸಿ ಬಂದಾಗ ಶ್ರವಣ್ ಬೆಡ್ ರೂಮಿನ ಫ್ಯಾನಿಗೆ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಬರುತ್ತಿದ್ದವರ ಕಾರಿನ ಮೇಲೆ ಬಿದ್ದ ಲಾರಿ

    ಆತ್ಮಹ*ತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು,  ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

    DAKSHINA KANNADA

    ‘ಮಂಗಳೂರು ದಸರಾ’ ವೈಭವದ ಆಕರ್ಷಕ ಶೋಭಾಯಾತ್ರೆ

    Published

    on

    ಮಂಗಳೂರು: ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರವಿವಾರ ಸಂಜೆ ಆರಂಭಗೊಂಡು, ಸೋಮವಾರ ಮುಂಜಾನೆಯವರೆಗೆ ವೈಭವದಿಂದ ನೆರವೇರಿತು.

    ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾ ಯಾತ್ರೆಯನ್ನು ಮಳೆಯ ನಡುವೆಯೂ ಸಹಸ್ರಾರು ಜನರು ಕಣ್ತುಂಬಿಕೊಂಡರು. ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ಮೆರವಣಿಗೆ ನಡೆಯಿತು.

     

    ನಿನ್ನೆ (ಅ.13) ಸಂಜೆ ಶ್ರೀ ಕ್ಷೇತ್ರ ಕುದ್ರೋಳಿಯಿಂದ ಹೊರಟ ದಸರಾ ಮೆರವಣಿಗೆ ಮಣ್ಣಗುಡ್ಡೆ ಮಾರ್ಗವಾಗಿ ಲೇಡಿಹಿಲ್‌, ನಾರಾಯಣ ಗುರು ವೃತ್ತ, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿ.ವಿ.ಎಸ್‌. ವೃತ್ತ, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್‌, ಅಳಕೆ ಮೂಲಕ ಮತ್ತೆ ಶ್ರೀ ಕ್ಷೇತ್ರ ತಲುಪಿತು. ಮಂಗಳೂರು ನಗರದಲ್ಲಿ ಸುಮಾರು 9 ಕಿ.ಮೀ. ವ್ಯಾಪ್ತಿಯಲ್ಲಿ ಮೆರವಣಿಗೆ ಸಾಗಿಬಂತು.
    ನವದುರ್ಗೆಯರ ಮತ್ತು ಶಾರದಾ ಮಾತೆಯ ಮೂರ್ತಿಗಳನ್ನು ಇಂದು ಬೆಳಗ್ಗೆ ಕ್ಷೇತ್ರದ ಪುಷ್ಕರಿಣಿಯಲ್ಲಿ ಜಲ ಸ್ತಂಭನಗೊಳಿಸಲಾಯಿತು. ದಸರಾ ಶೋಭಾಯಾತ್ರೆ ಆರಂಭಕ್ಕೂ ಮುನ್ನ ಕುದ್ರೋಳಿಯ ಶ್ರೀ ಶಾರದೆಯ ಸನ್ನಿಧಿಯಲ್ಲಿ ಹಲವು ಮಂದಿ ಸೇವಾಕರ್ತರನ್ನು ಕ್ಷೇತ್ರದ ಪರವಾಗಿ ಜನಾರ್ದನ ಪೂಜಾರಿ ಅವರು ಗೌರವಿಸಿದರು.


    ಮುಂದಿನ ವರ್ಷ ಚಿನ್ನದ ವೀಣೆ:
    ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಮಂಗಳೂರು ದಸರಾ ಜನರಿಂದಲೇ ಆಚರಿಸುವ ದಸರಾ. ಇದರ ಯಶಸ್ಸಿಗೆ ಕ್ಷೇತ್ರದಲ್ಲಿ ನೆಲೆಸಿರುವ ದೇವರು ಕಾರಣ. ಪ್ರತಿವರ್ಷ ಮಂಗಳೂರು ದಸರಾದ ವೈಭವವನ್ನು ಜಗತ್ತು ನೋಡುತ್ತದೆ. ದೇವರ ಕೃಪೆಯಿಂದ ಹೀಗೆ ವೈಭವದಿಂದ ಮುಂದುವರಿಯುತ್ತಿದೆ. ಈ ಬಾರಿ ಶಾರದೆಯ ವೀಣೆಯನ್ನು ಪುತ್ರ ಸಂತೋಷ್‌ ಅವರು ಬೆಳ್ಳಿಯಿಂದ ಮಾಡಿಸಿದ್ದಾರೆ. ಮುಂದಿನ ಬಾರಿ ದೇವರು ಅವಕಾಶ ನೀಡಿದರೆ ಚಿನ್ನದ ವೀಣೆಯನ್ನು ಪುತ್ರನ ಮೂಲಕ ಒದಗಿಸಲಾಗುವುದು ಎಂದು ಹೇಳಿದರು.
    ವಿವಿಧ ತಂಡಗಳ ಮೆರುಗು:
    ಅಲಂಕೃತ ಕೊಡೆಗಳು, ಜಾನಪದ ಕಲಾ ತಂಡಗಳು, ಭಜನ ತಂಡ, ವಾದ್ಯ-ಬ್ಯಾಂಡ್‌ ತಂಡಗಳು, ವಿವಿಧ ಹುಲಿ ವೇಷ ತಂಡಗಳ ಪ್ರದರ್ಶನ ಹಾಗೂ ವಿವಿಧ ಕಲಾ ಪ್ರಕಾರಗಳು ಶೋಭಾಯಾತ್ರೆಗೆ ಮೆರುಗು ನೀಡಿದವು. ವಿವಿಧ ಸಂಘ ಸಂಸ್ಥೆಗಳು ಪ್ರವರ್ತಿಸಿದ ಹಲವು ಧಾರ್ಮಿಕ-ಸಾಂಸ್ಕೃತಿಕ ಸ್ತಬ್ಧಚಿತ್ರಗಳು ಮೆರವಣಿಗೆಯ ರಂಗು ಹೆಚ್ಚಿಸಿತು. ನೃತ್ಯ ರೂಪಕ, ದೇಶದ ಪರಂಪರೆ ಬಿಂಬಿಸುವ ಟ್ಯಾಬ್ಲೋಗಳು ಮತ್ತು ವಿವಿಧ ಕಲಾ ಪ್ರಕಾರಗಳು ಆಕರ್ಷಣೆಯನ್ನು ಹೆಚ್ಚಿಸಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನ ಜಾತ್ರೆಯೇ ನೆರೆದಿತ್ತು. ಮೆರವಣಿಗೆ ದಾರಿಯಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮ ಮನಸೂರೆಗೊಳಿಸಿತು.

     

     

    Continue Reading

    DAKSHINA KANNADA

    ಸುಳ್ಯ – ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ, ಕೊಲೆ ಯತ್ನ; ಮಹಿಳೆ ಸ್ಥಿತಿ ಗಂಭೀರ

    Published

    on

    ಸುಳ್ಯ:  ರಾತ್ರಿ ಮಲಗಿರುವಾಗ ಮಹಿಳೆ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿರುವ ಘಟನೆ ನಡೆದಿರುವುದು ತಿಳಿದು ಬಂದಿದೆ.


    ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲರ್ಪೆ ಜಯಭಾರತಿ (56) ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಭಾವ ಶಂಕರ ಅವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
    ಗಂಭೀರ ಗಾಯಗೊಂಡ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬೆಂಕಿ ಹಚ್ಚಿರುವ ವ್ಯಕ್ತಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಟುಂಬಿಕ ವಿವಾದದ ಹಿನ್ನಲೆಯಲ್ಲಿ ಕೃತ್ಯ ಎಸಗಿರುವ ಬಗ್ಗೆ ಶಂಕಿಸಲಾಗಿದೆ.
    ಬೆಳ್ಳಾರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಅಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    DAKSHINA KANNADA

    ಕಟೀಲು, ಕುದ್ರೋಳಿ ಕ್ಷೇತ್ರಕ್ಕೆ ನಟ ಸಂಜಯ್ ದತ್ ಭೇಟಿ

    Published

    on

    ಮಂಗಳೂರು : ಮಂಗಳೂರು ದಸರಾ ಬಲು ಸುಂದರ. ಪ್ರತೀ ವರ್ಷ ಅಬ್ಬರದಿಂದ ನಡೆವ ಮಂಗಳೂರು ದಸರಾಗೆ ಮನಸೋಲದವರಿಲ್ಲ. ವೈಭವದ ಸಂಭ್ರಮಕ್ಕೆ ಪ್ರತಿ ವರ್ಷ ಸಿನಿತಾರೆಯರು ಮೆರುಗು ನೀಡುತ್ತಾರೆ. ಈ ಬಾರಿ ಬಾಲಿವುಡ್ ನಟ ಸಂಜಯ್ ದತ್ ಬಂದಿದ್ದರು.  ಮೊದಲು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿಯ ದರ್ಶನ ಪಡೆದ ಅವರು, ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದರ್ಬಾರ್ ಹಾಲ್ ಗೆ ತೆರಳಿ ದೇವಿಯರ ವಿಗ್ರಹ ಕಣ್ತುಂಬಿಕೊಂಡರು. ಶಾರದೆ ಮಾತೆಗೆ ನಮಿಸಿದರು.

    ಎರಡೂ ದೇವಸ್ಥಾನದಲ್ಲಿ ಸಂಜಯ್ ದತ್ ರಿಗೆ ದೇವರ ಶೇಷ ವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು.

    ಬಳಿಕ ಅವರು ಹುಲಿ ಕುಣಿತದ ಊದು ಪೂಜೆಯಲ್ಲಿ ಭಾಗಿಯಾದರು.  ಪಿಲಿ ನಲಿಕೆ ನೋಡಿ ಆನಂದಿಸಿದರು. ಬಳ್ಳಾಲಭಾಗ್‌ ನಲ್ಲಿ ನಡೆದಿದ್ದ ಈ ಊದು ಪೂಜೆ ಕಾರ್ಯಕ್ರಮಕ್ಕೆ ನಟ ಸಂಜಯತ್ ದತ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡರು. ತಮ್ಮ ಮೊಬೈಲ್‌ ನಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದರು.

     

     

    Continue Reading

    LATEST NEWS

    Trending