Connect with us

International news

ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಫೇಸ್ ಬುಕ್ ಮೂಲಕ ಮಗು ಮಾರಾಟ ಮಾಡಿದ ಮಹಿಳೆ!

Published

on

ಮಂಗಳೂರು/ಟೆಕ್ಸಾಸ್‌ : ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬಳು ತನ್ನ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಮಹಿಳೆ ತನ್ನ ಮಗುವಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಮಾರಾಟಕ್ಕೆ ಮುಂದಾಗಿದ್ದಳು. ಈ ವಿಚಾರ ತಿಳಿದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಹಣಕ್ಕಾಗಿ ಕೃ*ತ್ಯ :

ಜುನಿಪರ್ ಬ್ರೈಸನ್(21) ಕೃತ್ಯ ಎಸಗಿದ ಮಹಿಳೆ. ಆಕೆ ಮಗುವಿನ ಫೋಟೋವನ್ನು ಫೇಸ್‌ಬುಕ್ ನ ಮಗು ದತ್ತು ಪಡೆಯಲು ಬಯಸುವ ದಂಪತಿ ಗುಂಪಿನಲ್ಲಿ ಹಂಚಿಕೊಂಡಿದ್ದಾಳೆ. ಪ್ರಾರಂಭದಲ್ಲಿ ಯಾವುದೇ ಹಣಕ್ಕೆ ಬೇಡಿಕೆ ಇಡದ ಈ ಮಹಿಳೆ ಬಳಿಕ ಸಾಕಷ್ಟು ದಂಪತಿ ದತ್ತು ಪಡೆಯಲು ಮುಂದೆ ಬಂದಾಗ ಹಣದ ಬೇಡಿಕೆ ಇಟ್ಟಿದ್ದಾಳೆ. ಹಣಕಾಸಿನ ತೊಂದರೆಗಳಿಂದ ನಾನು ನನ್ನ ಮಗುವನ್ನು ಮಾರಾಟ ಮಾಡಲು ಮುಂದಾಗಿರುವುದಾಗಿ ಜುನಿಪರ್ ಹೇಳಿಕೊಂಡಿದ್ದಾಳೆ. 150 ಡಾಲರ್​ ಅಂದರೆ ಸುಮಾರು 12 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಮಗುವನ್ನು ಕಾರಲ್ಲೇ ಮರೆತ ಯೋಧ ; 3 ವರ್ಷದ ಕಂದಮ್ಮ ಉ*ಸಿರುಗಟ್ಟಿ ಸಾ*ವು

ಘಟನೆಯ ಬಗ್ಗೆ ತಿಳಿದ ಪೊಲೀಸರು ಮಗುವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು, ತನಿಖೆಯ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

International news

ಪಾಕಿಸ್ತಾನ: ರೈಲು ನಿಲ್ದಾಣದಲ್ಲಿ ಬಾಂ*ಬ್ ಸ್ಫೋ*ಟ; 20 ಜನರು ಸಾ*ವು

Published

on

ಮಂಗಳೂರು/ಪೇಶಾವರ : ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ(ನ.9) ಬಾಂ*ಬ್ ದಾ*ಳಿ ನಡೆದಿದೆ. ಘಟನೆಯಲ್ಲಿ ಕನಿಷ್ಠ 20 ಜನರು ಸಾ*ವನ್ನಪ್ಪಿದ್ದು, 30 ಕ್ಕೂ ಅಧಿಕ ಮಂದಿ ಗಾ*ಯಗೊಂಡಿದ್ದಾರೆ.

ರೈಲು ಪ್ಲಾಟ್‌ಫಾರ್ಮ್‌ಗೆ ಬರುವ ಮುನ್ನವೇ ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕಚೇರಿಯಲ್ಲಿ ಸ್ಫೋ*ಟ ಸಂಭವಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಜಾಫರ್ ಎಕ್ಸ್‌ಪ್ರೆಸ್ ಬೆಳಗ್ಗೆ 9 ಗಂಟೆಗೆ ಪೇಶಾವರಕ್ಕೆ ಹೊರಡಬೇಕಿತ್ತು. ಆದರೆ, ಆಗಮನ ತಡವಾಗಿತ್ತು. ಸ್ಫೋ*ಟ ಸಂಭವಿಸಿದಾಗ ರೈಲು ಇನ್ನೂ ಪ್ಲಾಟ್‌ಫಾರ್ಮ್‌ಗೆ ಬಂದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಯಾರಿಗಾದ್ರೂ ಹಳೆಯ ಬಟ್ಟೆಗಳನ್ನು `ದಾನ’ ಮಾಡುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ..

ನಿಲ್ದಾಣದಲ್ಲಿ ಸಾಮಾನ್ಯ ಜನಸಂದಣಿ ಇತ್ತು. ಆದರೆ, ಸ್ಫೋ*ಟದ ಪ್ರಮಾಣ ಹೆಚ್ಚಿದ್ದರಿಂದ ಸಾ*ವು-ನೋ*ವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Continue Reading

International news

ಏನಾಶ್ಚರ್ಯ! ಮರಳುಗಾಡು ಸೌದಿ ಅರೇಬಿಯಾದಲ್ಲಿ ಹಿಮಪಾತ

Published

on

ಮಂಗಳೂರು/ರಿಯಾದ್ : ಸೌದಿ ಅರೇಬಿಯಾ ಮರಳುಗಾಡನ್ನು ಹೊಂದಿರುವ ಪ್ರದೇಶ. ಸುಡುವ ಬಿಸಿಲಿರುವ ಮರುಭೂಮಿಯಲ್ಲಿ ಹಿಮಪಾತವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಹಿಮಪಾತವಾಗಿದೆ. ಮರಳು ಗುಡ್ಡಗಳ ಮೇಲೆ ಹಿಮಗಳ ರಾಶಿ ಕಾಣಿಸುತ್ತಿದೆ. ಅಲ್ -ಜಾವ್ನ್ ಪ್ರಾಂತ್ಯದ ಉತ್ತರ ಗಡಿಪ್ರದೇಶಗಳಾದ ರಿಯಾದ್, ಮೆಕ್ಕಾ, ಆರ್ಸಿ, ತಬೂಕ್ ಮತ್ತು ಅಲ್ ಬಹಾಹ್ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಮತ್ತು ಹಿಮ ಬೀಳುತ್ತಿದೆ.

ಮರುಭೂಮಿಯಲ್ಲಿ ಹಿಮ ಮತ್ತು ಮಳೆಯಾಗುತ್ತಿರುವುದು ಅಚ್ಚರಿ ಉಂಟು ಮಾಡಿದ್ದು,  ಇದರ ವೀಡಿಯೊ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಹಿಮ ಬೀಳಲು ಕಾರಣವೇನು?

ಅರಬ್ಬಿ ಸಮುದ್ರದಲ್ಲಿ ಉಂಟಾದ ಕಡಿಮೆ ಒತ್ತಡದ ಪರಿಣಾಮ ಒಮಾನ್‌ಗೂ ಅವರಿಸಿದೆ. ಇದರಿಂದಾಗಿ ಶುಷ್ಕತೆಯಿಂದ ಇರುವ ಪ್ರದೇಶದಲ್ಲಿ ತೇವಾಂಶದಿಂದ ಕೂಡಿರುವ ಗಾಳಿ ಬೀಸುತ್ತಿದೆ. ಹೀಗಾಗಿ ಸೌದಿ ಅರೇಬಿಯಾ ಮತ್ತು ನೆರೆಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಾದ್ಯಂತ ಗುಡುಗು, ಆಲಿಕಲ್ಲು ಮಳೆ, ಹಿಮ ಬೀಳಲು ಕಾರಣವಾಗಿದೆ ಎಂದು ಯುಎಇಯ ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪ್ರತಿಕೂಲ ಹವಾಮಾನ ಇರುವ ಕಾರಣ ಅಲ್-ಜಾವ್‌ನಾದ್ಯಂತ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ, ತೀವ್ರ ಗಾಳಿ ಬೀಸಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

ಅಪರೂಪದ ವಿದ್ಯಮಾನ :

ಮರುಭೂಮಿಯಲ್ಲಿ ಹಿಮ ಬೀಳುವುದು ತೀರಾ ಅಪರೂಪದ ವಿದ್ಯಮಾನವಾಗಿದೆ. ಆದರೆ ಹಿಮ ಬೀಳುವುದೇ ಇಲ್ಲ ಎನ್ನುವಂತಿಲ್ಲ ಎಂಬುದು ತಜ್ಞರ ಮಾಹಿತಿ.

ಕೆಲವು ವರ್ಷಗಳ ಹಿಂದೆ ಸಹರಾ ಮರುಭೂಮಿ ಪ್ರದೇಶದ ಪಟ್ಟಣದಲ್ಲಿ ತಾಪಮಾನ 58 ಡಿಗ್ರಿಗೆ ಏರಿಕೆಯಾಗಿತ್ತು. ಆದರೆ ಏಕಾಏಕಿ ಆದ ಹಿಮಪಾತದಿಂದ ತಾಪಮಾನ ಇಳಿಕೆಯಾಗಿ ಮೈನಸ್ 2 ಡಿಗ್ರಿಗೆ ತಲುಪಿತ್ತು. ಹವಾಮಾನ ಬದಲಾವಣೆಯ ಕಾರಣದಿಂದಾಗಿ ಈ ರೀತಿ ವಿದ್ಯಮಾನವು ಸಂಭವಿಸುತ್ತದೆ. ಹವಾಮಾನ ವೈಪರೀತ್ಯಗಳ ಪರಿಣಾಮಗಳಿಗೆ ಪಶ್ಚಿಮ ಏಷ್ಯಾವು ಹೆಚ್ಚು ಒಳಗಾಗುತ್ತವೆ.

ಇದನ್ನೂ ಓದಿ : ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಹೊಸ ರೀಲ್ಸ್ ಹಂಚಿಕೊಂಡ ನಿವೇದಿತಾ ಗೌಡ

ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ವಾತಾವರಣದ ಪರಿಸ್ಥಿತಿಗಳಲ್ಲೂ ಬದಲಾವಣೆಯಾಗುತ್ತವೆ. ಆದ್ದರಿಂದ ಮರುಭೂಮಿಗಳಲ್ಲಿ ಹಿಮಪಾತ ಸೇರಿದಂತೆ ಇಂತಹ ಅಸಾಮಾನ್ಯ ಹವಾಮಾನ ಘಟನೆಗಳು ಆಗಾಗ ಆಗುತ್ತವೆ ಎಂಬುದು ತಜ್ಞರ ಉವಾಚ.

Continue Reading

International news

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋ*ಟ; ಹಲವು ಮನೆಗಳು ಭ*ಸ್ಮ, 9 ಮಂದಿ ಸಾ*ವು

Published

on

ಇಂಡೋನೇಷ್ಯಾ : ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ತೀವ್ರವಾಗಿದೆ. ಪರಿಣಾಮ ಹಲವು ಮನೆಗಳು ಭಸ್ಮವಾಗಿವೆ. ಕನಿಷ್ಠ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ

ಕಳೆದ ವಾರದಿಂದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಉಕ್ಕಿ ಹರಿಯುತ್ತಿದೆ. ಗುರುವಾರದಿಂದ(ಅ.31) ಜ್ವಾಲಾಮುಖಿಯು ಪ್ರತಿದಿನ  2,000 ಮೀ(6,500 ಅಡಿ) ಎತ್ತರದ ವರೆಗೆ ದಟ್ಟವಾದ ಕಂದು ಬಣ್ಣದದ ಬೂದಿಯನ್ನು ಉಗುಳುತ್ತಿದೆ. ಹೀಗಾಗಿ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ, ಅಪಾಯದ ವಲಯವನ್ನು ವಿಸ್ತರಿಸಲಾಗಿದೆ.
ದೇಶದ ಜ್ವಾಲಾಮುಖಿ ಏಜೆನ್ಸಿಯು ಜ್ವಾಲಾಮುಖಿ ಅಲರ್ಟ್ ಘೋಷಿಸಿದೆ. ಮಧ್ಯರಾತ್ರಿಯ ನಂತರ ಆಗಾಗ್ಗೆ ಸ್ಫೋಟಗಳು ಸಂಭವಿಸುತ್ತಿದ್ದು, ಅಪಾಯದ ವಲಯವನ್ನು 7 ಕಿ.ಮೀ.ಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ : ಕ್ಯಾಂಡಲ್ ಲೈಟ್ ಡಿನ್ನರ್‌ನಲ್ಲಿ ಹೀಗೆಲ್ಲಾ ಮಾಡ್ತಾರಂತೆ..!

ಭಾನುವಾರ ಮಧ್ಯರಾತ್ರಿ ನಂತರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ ದಟ್ಟವಾದ ಕಂದು ಬಣ್ಣದ ಬೂದಿಯನ್ನು ಉಗುಳಿದೆ. ಈ ಬಿಸಿ ಬೂದಿಯು ಹತ್ತಿರದ ಹಳ್ಳಿಗೆ ಅಪ್ಪಳಿಸಿದೆ. ಅವಘಡದಲ್ಲಿ ಕ್ಯಾಥೋಲಿಕ್ ಸನ್ಯಾಸಿಗಳ ಕಾನ್ವೆಂಟ್ ಸೇರಿದಂತೆ ಹಲವಾರು ಮನೆಗಳು ಸುಟ್ಟು ಹೋಗಿವೆ ಎಂದು ವರದಿಯಾಗಿದೆ.

Continue Reading

LATEST NEWS

Trending

Exit mobile version