LATEST NEWS
ಗಾರ್ಮೆಂಟ್ ಜಾಬ್ ಸಿಕ್ಕಿದ ಬಳಿಕ ಓದಿಸಿದ ಗಂಡನನ್ನೇ ತೊರೆದ ಹೆಂಡತಿ
Published
8 hours agoon
ಮಂಗಳೂರು/ನವದೆಹಲಿ: ಕಷ್ಟ ಪಟ್ಟು ಓದಿಸಿದ ಪತಿಯನ್ನು ತೊರೆದು ಅಧಿಕಾರಿಯೋರ್ವನನ್ನು ಮದುವೆಯಾದ ಜ್ಯೋತಿ ಮೌರ್ಯ ಪ್ರಕರಣ ಹಸಿರಾಗಿರುವಂತೆಯೇ ಇತ್ತ ರಾಜಸ್ತಾನದಲ್ಲಿ ಅಂತಹುದೇ ಮತ್ತೊಂದು ಘಟನೆ ವರದಿಯಾಗಿದ್ದು, ಈ ಬಾರಿ ತನ್ನನ್ನು ತೊರೆದ ಪತ್ನಿಗೆ ಗಂಡ ಭರ್ಜರಿ ಶಾಕ್ ನೀಡಿದ್ದಾನೆ.
ಏನಿದು ಘಟನೆ ?
ರಾಜಸ್ಥಾನದ ಕೋಟಾದ ಮನೀಶ್ ಮೀನಾ ಮತ್ತು ಸಪ್ನಾ ಮೀನಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಸಪ್ನಾಗೆ ಓದುವ ಆಸೆ. ಹೀಗಾಗಿ ಆಕೆಯನ್ನು ಮನೀಶ್ ಉನ್ನತ ವ್ಯಾಸಂಗ ಮಾಡಲು ನೆರವಾದರು. ಯಾವುದೇ ಬೆಲೆ ತೆತ್ತಾದರೂ ತನ್ನ ಹೆಂಡತಿಯನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಮನೀಶ್ ನಿರ್ಧರಿಸಿದ್ದ. ಆತನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ, ಆತ ಮಾತ್ರ ತನ್ನ ಪತ್ನಿಯನ್ನು ಓದಿಸಬೇಕು ಎಂಬ ಸಂಕಲ್ಪದಿಂದ ಹಿಂದೆ ಸರಿಯಲೇ ಇಲ್ಲ. ತನ್ನ ಮನೆ-ಭೂಮಿ ಎಲ್ಲವನ್ನೂ ಅಡವಿಟ್ಟು ಪತ್ನಿ ಸಪ್ನಾಳನ್ನು ಓದಿಸಿದನು. ಪತ್ನಿ ಓದು ಮುಕ್ತಾಯವಾಗಿ ಆಕೆ ಒಳ್ಳೆಯ ಕೆಲಸ ಸಿಕ್ಕರೆ ಆಗ ಸಾಲವನ್ನೆಲ್ಲಾ ತೀರಿಸಬಹುದು ಎಂದು ಆಸೆಯಲ್ಲಿದ್ದ. ಆಕೆಯ ಶಿಕ್ಷಣಕ್ಕಾಗಿ ಅವನು ಸುಮಾರು 15 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದ. ಉನ್ನತ ವ್ಯಾಸಂಗ ಮುಗಿಸಿದ ನಂತರ, ಸಪ್ನಾ ಮೀನಾ 2023 ರಲ್ಲಿ ರೈಲ್ವೆ ಉದ್ಯೋಗ ಅಧಿಸೂಚನೆಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದರು. ಇನ್ನು ಈ ರೈಲ್ವೇ ಪರೀಕ್ಷೆಯಲ್ಲಿ ಪತ್ನಿ ಸಪ್ನಾ ಉತ್ತೀರ್ಣಳಾದಳು. ಆಕೆಗೆ ರೈಲ್ವೇ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಕೂಡ ದೊರೆಯಿತು. ಆದರೆ ನಿಜವಾದ ತಿರುವು ನಡೆದಿದ್ದು ಇಲ್ಲೇ. ಕೆಲಸ ಸಿಕ್ಕಾಗಿನಿಂದ ಸಪ್ನಾಳ ಕನಸಿನ ಮಾದರಿಯೇ ಬದಲಾಗಿ ಹೋಗಿತ್ತು. ಗಂಡನ ಕುರಿತು ಸಪ್ನಾಳ ನಡೆಯೇ ಬದಲಾಗಿತ್ತು. ಗಂಡನನನ್ನು ಕೀಳಾಗಿ ನೋಡಲು ಆರಂಭಿಸಿದಳು. ಕೊನೆಗೊಂದು ದಿನ ಜಗಳ ಮಾಡಿಕೊಂಡು ಗಂಡನನ್ನೇ ತೊರೆದಳು.
ಪತಿಯಿಂದ ಶಾಕ್ :
ಇನ್ನು ತನ್ನ ಪತ್ನಿ ನಡೆಯಿಂದ ಆಕ್ರೋಶಗೊಂಡಿದ್ದ ಗಂಡ ಮನೀಶ್ ತನ್ನ ಹೆಂಡತಿ ಸಪ್ನಾಗೆ ತಿಳಿಹೇಳಬಯಸಿದ್ದ, ಆದರೆ ಆತನ ಯಾವುದೇ ಸಂಧಾನಕ್ಕೂ ಒಪ್ಪದ ಸಪ್ನಾ ಆತನಿಂದ ದೂರ ಉಳಿಯಲು ನಿರ್ಧರಿಸಿದಳು. ಇದರಿಂದ ಕ್ರೋಧಿತನಾದ ಗಂಡ ಮನೀಶ್ ರೈಲ್ವೇ ಇಲಾಖೆಗೆ ದೂರು ನೀಡಿದ್ದ. ದೂರಿನಲ್ಲಿ ಸಪ್ನಾ ತನ್ನ ಸ್ವಂತ ಪ್ರತಿಭೆಯಿಂದ ಕೆಲಸವನ್ನು ಪಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದ. ಅಲ್ಲದೆ ಈ ಸಂಬಂಧ ಅಧಿಕಾರಿಗಳಿಗೆ ಪುರಾವೆಗಳನ್ನು ಸಹ ತೋರಿಸಿದ್ದ. ತನ್ನ ಪತ್ನಿ ಸಪ್ನಾ ಪ್ರಾಕ್ಸಿ ಅಭ್ಯರ್ಥಿಯ (ಡಮ್ಮಿ ಅಭ್ಯರ್ಥಿ) ಸಹಾಯದಿಂದ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಾಬೀತು ಪಡಿಸಿದ. ಈ ವಿಷಯ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸಪ್ನಾ ಅವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ಆಕೆ ಮಾತ್ರವಲ್ಲದೇ ಅಂದು ಪರೀಕ್ಷೆ ಬರೆದ ಅಷ್ಟೂ ಅಭ್ಯರ್ಥಿಗಳ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ ಎಂದು ಕೋಟಾ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಸೌರಭ್ ಜೈನ್ ತಿಳಿಸಿದ್ದಾರೆ. ಕೆಲಸ ಸಿಕ್ಕ ಬಳಿಕ ಗಂಡನ ತೊರೆದ ಸಪ್ನಾಳ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
DAKSHINA KANNADA
ಎಜೆ ಆಸ್ಪತ್ರೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆ; ಮೊಣಕಾಲು, ಸೊಂಟದ ಶಸ್ತ್ರ ಚಿಕಿತ್ಸೆಗೆ ರೋಬೋಟ್ ಬಳಕೆ
Published
2 hours agoon
27/01/2025By
NEWS DESK4ಮಂಗಳೂರು : ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪಿಸಿರುವ ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಯುಎಸ್ ಎಯಲ್ಲಿ ಅಭಿವೃದ್ದಿ ಪಡಿಸಲಾದ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ ಮೆಂಟ್ ಟೆಕ್ನಾಲಜಿಯನ್ನು ಮಂಗಳೂರಿಗೆ ಪರಿಚಯಿಸಿದೆ. ಸ್ಮಿತ್ ಪ್ಲಸ್ ನೆವ್ಯೂದವರು ಅಭಿವೃದ್ದಿ ಪಡಿಸಿರುವ ಈ ಸುಧಾರಿತ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಡಾ. ಎ.ಜೆ.ಶೆಟ್ಟಿ ಅವರು ಉದ್ಘಾಟಿಸಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಹೇಳಿದ್ದಾರೆ.
ಈ ವ್ಯವಸ್ಥೆಯ ಮೂಲಕ ರೋಗಿಗಳಿಗೆ ಉತ್ತಮ ಶಸ್ತ್ರ ಚಿಕಿತ್ಸಾ ಫಲಿತಾಂಶ ಹಾಗೂ ವೇಗವಾಗಿ ಚೇತರಿಕೆಗೆ ದಾರಿ ಮಾಡಿಕೊಡುತ್ತದೆ. ಈ ಹಿಂದೆಯೂ ಹಲವು ತಂತ್ರಜ್ಞಾನಗಳನ್ನು ಮೊದಲು ಮಂಗಳೂರಿಗೆ ಪರಿಚಯಿಸಿದ ಎಜೆ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಇದೀಗ ಪರಿಚಯಿಸಿರುವ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ತಂತ್ರಜ್ಞಾನ ಕೂಡ ಎಜೆ ಆಸ್ಪತ್ರೆಯ ಗರಿಮೆಯನ್ನು ಹೆಚ್ಚು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ; ಜ.29ಕ್ಕೆ 100ನೇ ಉಪಗ್ರಹ ಉಡಾವಣೆ
ಪತ್ರಿಕಾಗೋಷ್ಠಿಯಲ್ಲಿ ಡಾ.ಸುದೀಪ್ ಶೆಟ್ಟಿ, ಡಾ.ಮಯೂರ್ ರೈ, ಡಾ.ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು.
LATEST NEWS
ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ; ಜ.29ಕ್ಕೆ 100ನೇ ಉಪಗ್ರಹ ಉಡಾವಣೆ
Published
2 hours agoon
27/01/2025By
NEWS DESK4ಮಂಗಳೂರು/ ನವದೆಹಲಿ : ಇಸ್ರೋ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಅಣಿಯಾಗಿದೆ. ಜನವರಿ 29 ರಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ 100 ನೇ ರಾಕೆಟ್ ಉಡಾವಣೆಗೆ ಸಿದ್ಧತೆ ನಡೆದಿದೆ. ಜನವರಿ 29 ರಂದು ಬೆಳಿಗ್ಗೆ 6.23ಕ್ಕೆ ಶ್ರೀಹರಿಕೋಟಾದಿಂದ 2,250 ಕೆಜಿ ನ್ಯಾವಿಗೇಷನ್ ಉಪಗ್ರಹವನ್ನು ಜಿಎಸ್‌ಎಲ್‌ವಿ – ಎಫ್ 15 ರ ಮೂಲಕ ಕಳುಹಿಸಲು ಸಜ್ಜಾಗಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.
ಇದು ಜಿಎಸ್‌ಎಲ್‌ವಿ ಉಡಾವಣಾ ವಾಹನದ 17ನೇ ಹಾರಾಟವಾಗಲಿದ್ದು, 19 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಕೂರಿಸುವ ಯೋಜನೆ ರೂಪಿಸಲಾಗಿದೆ. ಈ ಕಾರ್ಯಾಚರಣೆಯ ಅಡಿ ಎನ್‌ವಿಎಸ್ – 02 ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಇದು ಭಾರತದ ಪ್ರಾದೇಶಿಕ ನ್ಯಾವಿಗೇಷನ್ ವಿದ್ ಇಂಡಿಯನ್ ಕಾನ್‌ಸ್ಟೆಲೇಷನ್(NavIc) ಸಿಸ್ಟಮ್‌ನ್ನು ಮತ್ತಷ್ಟು ಬಲಪಡಿಸಲಿದೆ.
ಇದನ್ನೂ ಓದಿ : “ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್
ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್‌ಸ್ಟೆಲೇಷನ್ (NavIc) ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾಗಿದೆ. ಭಾರತದ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT) ಸೇವೆಯನ್ನು ಒದಗಿಸುವ ಜೊತೆಗೆ ಮಿಲಿಟರಿ ಮತ್ತು ಇತರೆ ನ್ಯಾವಿಗೇಷನ್ ಆಧಾರಿತ ಸೇವೆ ಒದಗಿಸಲಿದೆ.
ಆಂಧ್ರಪ್ರದೇಶ: ಸಾವು ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಇಲ್ಲೊಂದು ನಡೆದ ವಿಚಿತ್ರ ಘಟನೆಯೇ ಸಾಕ್ಷಿ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಮೊಬೈಲ್ ಫೋನ್ ಅನ್ನು ನುಂಗಿ ಪ್ರಾಣ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಕಾಕಿನಾಡಲ್ಲಿ ನಡೆದಿದೆ.
ಬೊಮ್ಮೂರಿನ ಪೆನುಮಲ್ಲದ ರಮ್ಯ ಸ್ಮೃತಿ (35) ಪ್ರಾಣ ಕಳೆದುಕೊಂಡ ಮಹಿಳೆ.
ಈ ಮಹಿಳೆ ಕಳೆದ 15 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಮನೆಯವರೂ ಕೂಡ ಈಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ದಿನ ಮಹಿಳೆ ಕೀ ಪ್ಯಾಡ್ ಮೊಬೈಲ್ ಅನ್ನು ನುಂಗಿದ್ದು, ಮನೆಯವರು ಫೋನ್ ಕಾಣುತ್ತಿಲ್ಲ ಎಂದು ಹುಡುಕಿದಾಗ ಮೊಬೈಲ್ ನುಂಗಿರುವ ಬಗ್ಗೆ ಆಕೆ ಹೇಳಿರುತ್ತಾಳೆ.
ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಈಕೆಯ ಅನ್ನನಾಳಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು, ತಕ್ಷಣ ಆಕೆಯನ್ನು ವೈದ್ಯರ ಸಲಹೆಯ ಮೆರೆಗೆ ಕಾಕಿನಾಡದ ಜಿಜಿಎಚ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ.
ಇನ್ನು ಒಂದೆಡೆ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಮೃತ ಮಹಿಳೆಯ ತಂದೆ ಹೇಳಿದ್ದು, ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
LATEST NEWS
ದೈವದ ಮುನಿಸೇ ಈ ಗ್ರಾಮದಲ್ಲಿ ಜನರ ಸರಣಿ ಸಾವಿಗೆ ಕಾರಣವಾಯಿತಾ ?
ಕೋಟೆಕಾರು ಬ್ಯಾಂಕ್ ದರೋಡೆ ಕೇಸ್; ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಕಮಿಷನರ್
ಉಡುಪಿ : ಪ್ರತಿಷ್ಠಿತ ವಸತಿ ಶಾಲೆಗೆ ಬಾಂ*ಬ್ ಬೆ*ದರಿಕೆ ಇಮೇಲ್
ತಾಯಿಗೆ ತಕ್ಕ ಮಗ ; ಜೊತೆಯಾಗಿ ರಾಷ್ಟ್ರಪತಿ ಪುರಸ್ಕಾರ ಪಡೆದ ಸಾಧನಾ, ತರುಣ್
ಗುಯಿಲಿನ್ ಬಾರ್ ಸಿಂಡ್ರೋಮ್ಗೆ ಮಹಾರಾಷ್ಟ್ರದಲ್ಲಿ ಮೊದಲ ಬ*ಲಿ; ಏನಿದು ಜಿಬಿಎಸ್?
ಪ್ರೀತಿಗೆ ವಯಸ್ಸು ಮುಖ್ಯನಾ ? ವೃದ್ಧಾಶ್ರಮದಲ್ಲಿ ಅಜ್ಜ – ಅಜ್ಜಿ ಅದ್ದೂರಿ ಪ್ರೇಮವಿವಾಹ
Trending
- BIG BOSS5 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS4 days ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS5 days ago
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ
- BIG BOSS2 days ago
ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್