ಶಿವಮೊಗ್ಗದಲ್ಲಿ ಇಂದು ನಡೆಯಲಿರುವ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಶಾಸಕ ಡಾ. ಭರತ್ ಶೆಟ್ಟಿಯವರಯ ತುಳಸಿ ಮಾಲೆ ಹಾಕಿ ಸ್ವಾಗತಿಸಿದರು.
ಮಂಗಳೂರು : ಶಿವಮೊಗ್ಗದಲ್ಲಿ ಇಂದು ನಡೆಯಲಿರುವ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಶಾಸಕ ಡಾ. ಭರತ್ ಶೆಟ್ಟಿಯವರಯ ತುಳಸಿ ಮಾಲೆ ಹಾಕಿ ಸ್ವಾಗತಿಸಿದರು.
ಶುದ್ಧ ತುಳಸೀ ಮಾಲೆಯನ್ನು ಧರಿಸಿದರೆ ಯಾವುದೇ ಕೊರನೋ ಬರೋದಿಲ್ಲ.
ಕೊರಳಿಗೆ ಹಾಕಿರುವ ತುಳಸೀ ಮಾಲೆಯಿಂದ ಔಷಧೀ ಗುಣಗಳು ಹುಟ್ಟುತ್ತವೆ. ಕೊರೊನಾ ವಿದೇಶಗಳಲ್ಲಿ ಮತ್ತೆ ವ್ಯಾಪಕವಾಗುತ್ತಿದೆ.
ಬೂಸ್ಟರ್ ಡೋಸ್ ಅಗತ್ಯ ಪಡೆದುಕೊಂಡು, ಪಾರಂಪರ್ಯ ಔಷಧೀಯ ಪದ್ಧತಿಗಳನ್ನು ಅನುಸರಿಸಿರಿ ಎಂದು ಈ ಸಂದರ್ಭ ಸಾಧ್ವಿ ಅವರು ಸಲಹೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಫೈರ್ ಬ್ರಾಂಡ್ ನಾಯಕಿ ಮಧ್ಯ ಪ್ರದೇಶದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭಾಗವಹಿಸಲಿದ್ದಾರೆ,
ಮತ್ತು ಸಂಜೆ ನಡೆಯುವ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಎಎ ಸರ್ಕಲ್ ಹಾಗೂ ಸೈನ್ಸ್ ಮೈದಾನ, ಬಿಎಚ್ ರಸ್ತೆ ಸಂಪೂರ್ಣ ಕೇಸರಿ ಮಯವಾಗಿದೆ.