LATEST NEWS
ಭೀಕರ ರಸ್ತೆ ಅ*ಪಘಾ*ತ; ಯುವ ಪರ್ತಕರ್ತ ದು*ರ್ಮ*ರಣ
Published
3 hours agoon
ಮಂಗಳೂರು/ಚಿಕ್ಕಬಳ್ಳಾಪುರ: ಕಾರು ನಿಯಂತ್ರಣ ತಪ್ಪಿ ಕರೆ ಕಟ್ಟೆಗೆ ಡಿ*ಕ್ಕಿ ಹೊ*ಡೆದು ಯುವ ಪತ್ರಕರ್ತ ದಾ*ರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಎಂಬಲ್ಲಿ ನಡೆದಿದೆ.
ಯುವ ಪತ್ರಕರ್ತ ಭರತ್ (34) ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೃತ ಭರತ್‌ನ ಮಗಳಿಗೆ ಬರುವ ಫೆಬ್ರವರಿ 7 ರಂದು ನಾಮಕರಣವನ್ನು ಗುಡಿಬಂಡೆಯಲ್ಲಿ ಹಮ್ಮಿಕೊಂಡಿದ್ದು ಈ ಸಂಭಂಧ ಗುಡಿಬಂಡೆಗೆ ಹೋಗಿ ಕಲ್ಯಾಣ ಮಂಟಪ ಮಾತನಾಡಿ, ವಾಪಸ್ಸು ಬಾಗೇಪಲ್ಲಿಗೆ ಹೋಗುವ ಸಮಯದಲ್ಲಿ ಮಾಚಹಳ್ಳಿ ಕೆರೆ ಕಟ್ಟೆಯ ಮೇಲೆ ಕಾರು ನಿಯಂತ್ರಣ ತಪ್ಪಿ ಕೆರೆ ಕಟ್ಟೆಗೆ ಡಿ*ಕ್ಕಿ ಹೊಡೆದಿದೆ. ಅ*ಪಘಾ*ತದಿಂದ ಭರತ್‌ನ ತಲೆಗೆ ಗಂ*ಭೀರ ಗಾ*ಯವಾಗಿದೆ. ತಕ್ಷಣವೇ ಗಾ*ಯಾಳನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ.
ಇದನ್ನೂ ಓದಿ : ಹೆಲ್ಮೆಟ್ ಧರಿಸದೇ ಇದ್ದರೆ ಪೆಟ್ರೋಲ್ ಇಲ್ಲ: ಸರಕಾರದ ಆದೇಶ
ಮೃ*ತರು ಪತ್ನಿ ಮತ್ತು ಒಂದು ವರ್ಷದ ಹೆಣ್ಣು ಮಗುವನ್ನು ಅ*ಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
LATEST NEWS
ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು ?
Published
19 minutes agoon
13/01/2025By
NEWS DESK3ಮಂಗಳೂರು/ಪ್ರಯಾಗರಾಜ್ : ಇಂದು ಬೆಳಗ್ಗೆ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ಆರಂಭಗೊಂಡಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮಿಸುವ ಸ್ಥಳವಾದ ಸಂಗಮ್ ನಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಮೊದಲ ಪವಿತ್ರ ಸ್ನಾನ ಮಾಡಿದರು.
ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಇಂದು (ಜನವರಿ 13) ಆರಂಭವಾಗಿ 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ.
ವಿಶ್ವದ ಮಾನವೀಯತೆಯ ಅತಿ ದೊಡ್ಡಸಭೆ ಎಂದು ಕರೆಯಲ್ಪಡುವ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಹಾ ಕುಂಭಮೇಳವು 40 ಕೋಟಿಗೂ ಹೆಚ್ಚು ಜನರನ್ನು ಪ್ರಯಾಗರಾಜ್ ಗೆ ಕರೆತರುವ ನಿರೀಕ್ಷೆಯಿದೆ. ಇದು ಅಮೆರಿಕ ಮತ್ತು ರಷ್ಯಾದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ.
ಮೂರು ನದಿಗಳ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
ದೇಶದ ಮೂರು ಮಹಾನದಿಗಳ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು) ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡುವುದರಿಂದ ಜನರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ.
ಹೀಗಾಗಿ ದೇಶದ ಮೂಲೆ ಮೂಲೆಯಿಂದ ಜನ ಕುಂಭಮೇಳಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತರಿಗಾಗಿ 10,000 ಹೆಕ್ಟೇರ್ ಗಳ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್ ಗಳನ್ನು ನಿರ್ಮಿಸಲಾಗಿದೆ. ಶೌಚಾಲಯ, ಸ್ವಚ್ಛತೆ ಸೇರಿದಂತೆ ಮೊದಲೆಂದಿಗಿಂತಲೂ ಈ ಬಾರಿ ಭಕ್ತರಿಗಾಗಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ
ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು?
2025ರ ಮಹಾ ಕುಂಭಮೇಳದಿಂದ ಉತ್ತರಪ್ರದೇಶದ ಆರ್ಥಿಕತೆ, 2 ಲಕ್ಷ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಪ್ರತಿ 40 ಕೋಟಿ ಸಂದರ್ಶಕರು ಸರಾಸರಿ 5,000 ರೂಪಾಯಿಗಳನ್ನು ಖರ್ಚು ಮಾಡಿದರೆ, ಮಹಾ ಕುಂಭಮೇಳದಿಂದ 2 ಲಕ್ಷ ಕೋಟಿ ಗಳಿಸಬಹುದು ಎಂದು ನೀರಿಕ್ಷಿಸಲಾಗಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ಪ್ಯಾಕ್ ಮಾಡಿದ ಆಹಾರಗಳು, ನೀರು, ಬಿಸ್ಕೆಟ್ ಗಳು, ಜ್ಯೂಸ್ ಮತ್ತು ಊಟ, ತಂಪು ಪಾನೀಯಗಳು ಸೇರಿದಂತೆ ಒಟ್ಟು ವ್ಯಾಪಾರದ ಮೂಲಕ 20,000 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಅಲ್ಲದೆ ತೈಲ, ದೀಪಗಳು, ಗಂಗಾಜಲ, ವಿಗ್ರಹಗಳು, ಧೂಪದ್ರವ್ಯಗಳು, ಧಾರ್ಮಿಕ ಪುಸ್ತಕಗಳು ಮತ್ತು ಕೊಡುಗೆಗಳು ಆರ್ಥಿಕತೆಯ ಮತ್ತೊಂದು ಭಾಗವಾಗಿದ್ದು, ಅಂದಾಜು 20,000 ಕೋಟಿ ರೂ. ತಲುಪಬಹುದು ಎಂದು ನೀರಿಕ್ಷಿಸಲಾಗಿದೆ.
ಸ್ಥಳೀಯ ಮತ್ತು ಅಂತರಾಜ್ಯ ಸಾರಿಗೆ ಸೇವೆಗಳು, ಸರಕು ಸಾಗಣೆ ಮತ್ತು ಟ್ಯಾಕ್ಸಿಗಳು ಸೇರಿದಂತೆ ಸಾರಿಗೆ ಮತ್ತು ಲಾಜಿಸ್ಟಿಕ್ಸ್ 10,000 ಕೋಟಿ ರೂಪಾಯಿಗಳನ್ನು ಅಂದಾಜಿಸಲಾಗಿದೆ. ಅಲ್ಲದೆ ಪ್ರವಾಸೋದ್ಯಮ ಸೇವೆಗಳಾದ ಟೂರ್ ಗೈಡ್ ಗಳು, ಟ್ರಾವೆಲ್ ಪ್ಯಾಕೇಜ್ ಗಳು ಮತ್ತು ಇತರೆ ಮೂಲಗಳಿಂದ 10,000 ಕೋಟಿ ರೂಪಾಯಿಗಳು ಬರುವ ಸಾಧ್ಯತೆಯಿದೆ.
ತಾತ್ಕಲಿಕ ವೈದ್ಯಕೀಯ ಶಿಬಿರಗಳು, ಆಯುರ್ವೇದ ಉತ್ಪನ್ನಗಳು ಮತ್ತು ಔಷಧಗಳಿಂದ 3,000 ಕೋಟಿ ರೂ. ಆದಾಯ ನೀರಿಕ್ಷಿಸಿದರೆ, ಇ-ಟಿಕೆಟಿಂಗ್, ಡಿಜಿಟಲ್ ಪಾವತಿಗಳು, ವೈ-ಫೈ ಸೇವೆಗಳು ಮತ್ತು ಮೊಬೈಲ್ ಚಾರ್ಜಿಂಗ್ ಸ್ಟೇಷನ್ ಗಳಂತಹ ವಲಯಗಳಿಂದ 1,000 ಕೋಟಿ ರೂ. ಆದಾಯ ನೀರಿಕ್ಷಿಸಲಾಗಿದೆ. ಜಾಹೀರಾತು ಮತ್ತು ಪ್ರಚಾರ, ಮನರಂಜನೆ ಮತ್ತು ಮಾಧ್ಯಮಗಳ ಮೂಲಕ 10,000 ಕೋಟಿ ರೂ. ಆದಾಯ ಗಳಿಸಬಹುದೆಂದು ಅಂದಾಜಿಸಲಾಗಿದೆ.
2019ರಲ್ಲಿ ನಡೆದ ಪ್ರಯಾಗ್ ರಾಜ್ ನ ಅರ್ಧ ಕುಂಭಮೇಳವು ರಾಜ್ಯಕ್ಕೆ 1.2 ಲಕ್ಷ ಕೋಟಿ ರೂ. ಆದಾಯ ತಂದುಕೊಟ್ಟಿತ್ತು. ಇದರಲ್ಲಿ 24 ಕೋಟಿ ಭಕ್ತರು ಭಾಗಿಯಾಗಿದ್ದರು.
DAKSHINA KANNADA
ದಾಖಲೆ ಬರೆದ ಲವ – ಕುಶ ಜೋಡುಕರೆ ‘ನರಿಂಗಾನ ಕಂಬಳ’; ಫಲಿತಾಂಶ ವಿವರ ಇಲ್ಲಿದೆ
Published
35 minutes agoon
13/01/2025By
NEWS DESK4ಮಂಗಳೂರು : ಸ್ಪೀಕರ್ ಯು.ಟಿ ಖಾದರ್ ಅವರ ಮುಂದಾಳತ್ವದಲ್ಲಿ ನಡೆದ ನರಿಂಗಾನ 3ನೇ ವರ್ಷದ “ಲವ – ಕುಶ” ಜೋಡುಕರೆ ಕಂಬಳ ಇಂದು(ಜ.13) ಬೆಳಗ್ಗೆ ಸಮಾರೋಪ ಕಂಡಿದೆ. ನರಿಂಗಾನ ಕಂಬಳದಲ್ಲಿ ದಾಖಲೆ ಸಂಖ್ಯೆ ಕೋಣಗಳು ಭಾಗವಹಿಸಿವೆ. ಒಟ್ಟು 265 ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದು ಕಂಬಳ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಸಂಖ್ಯೆಯಾಗಿದೆ. ಈ ಹಿಂದೆ ಪುತ್ತೂರು ಕಂಬಳದಲ್ಲಿ 268 ಜೊತೆ ಕೋಣಗಳು ಭಾಗವಹಿಸಿದ್ದವು.
ಕನೆಹಲಗೆ 10 ಜೊತೆ, ಅಡ್ಡಹಲಗೆ 10 ಜೊತೆ, ಹಗ್ಗ ಹಿರಿಯ 28 ಜೊತೆ, ನೇಗಿಲು ಹಿರಿಯ 28 ಜೊತೆ, ಹಗ್ಗ ಕಿರಿಯ 25 ಜೊತೆ , ನೇಗಿಲು ಕಿರಿಯ 60 ಜೊತೆ, ಸಬ್ ಜೂನಿಯರ್ ನೇಗಿಲು 104 ಜೊತೆ ಸೇರಿದಂತೆ ಒಟ್ಟು 265 ಜೋಡಿ ಕೋಣಗಳು ಭಾಗವಹಿಸಿದ್ದವು.
ಫಲಿತಾಂಶ ವಿವರ :
ಕನೆ ಹಲಗೆ : ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು : ಬೈಂದೂರು ರಾಗಿಹಿತ್ಲು ರಾಘವೇಂದ್ರ
ಕಾಂತಾವರ ಬೇಲಾಡಿ ಬಾವ ಪ್ರಜೋತ್ ಶೆಟ್ಟಿ
ಹಲಗೆ ಮುಟ್ಟಿದವರು : ತೆಕ್ಕಟ್ಟೆ ಸುಧೀರ್ ದೇವಾಡಿಗ
ಅಡ್ಡ ಹಲಗೆ :
ಪ್ರಥಮ : ನಾರಾವಿ ಯುವರಾಜ್ ಜೈನ್ “ಎ” (12.18)
ಹಲಗೆ ಮುಟ್ಟಿದವರು : ಭಟ್ಕಳ ಹರೀಶ್
ದ್ವಿತೀಯ : ಬೋಳಾರ ತ್ರಿಶಾಲ್ ಕೆ ಪೂಜಾರಿ (12.45)
ಹಲಗೆ ಮುಟ್ಟಿದವರು : ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ
ಹಗ್ಗ ಹಿರಿಯ :
ಪ್ರಥಮ : ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ “ಎ” (11.83)
ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ : ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.89)
ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ಹಗ್ಗ ಕಿರಿಯ :
ಪ್ರಥಮ : ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಎ”
ಓಡಿಸಿದವರು : ಭಟ್ಕಳ ಶಂಕರ್
ದ್ವಿತೀಯ : ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ”
ಓಡಿಸಿದವರು : ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
ನೇಗಿಲು ಹಿರಿಯ :
ಪ್ರಥಮ : ಬೋಳ್ಯಾರು ಪೊಯ್ಯೆ ನರ್ಮದ ಉಮೇಶ್ ಶೆಟ್ಟಿ (11.56)
ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ : ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ (11.87)
ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ನೇಗಿಲು ಕಿರಿಯ :
ಪ್ರಥಮ : ಭಟ್ಕಳ ಎಚ್.ಎನ್ ನಿವಾಸ ಪಿನ್ನುಪಾಲ್ (12.07)
ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ್
ದ್ವಿತೀಯ : ಮೂಡುಬಿದ್ರೆ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ (12.13)
ಓಡಿಸಿದವರು : ಒಂಟಿಕಟ್ಟೆ ರಿತೇಶ್
ಸಬ್ ಜೂನಿಯರ್ ನೇಗಿಲು :
ಪ್ರಥಮ : ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ (12.30)
ಓಡಿಸಿದವರು : ಬೈಂದೂರು ಮಂಜುನಾಥ ಗೌಡ
ದ್ವಿತೀಯ : ಸಾಣೂರು ಸೇನರಬೆಟ್ಟು ಜಗದೀಶ್ ಪೂಜಾರಿ (12.82)
ಓಡಿಸಿದವರು : ಭಟ್ಕಳ ಹರೀಶ್
LATEST NEWS
ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ
Published
1 hour agoon
13/01/2025By
NEWS DESK2ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ತಪತಿ ಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಯೋರ್ವ ಕಲ್ಲೆಸೆದಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಬಳಿ ನಿನ್ನೆ ಸಂಭವಿಸಿದೆ.
ಬರೋಬ್ಬರಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಇಂದಿನಿಂದ ಆರಂಭಗೊಂಡು 44 ದಿನಗಳ ಕಾಲ ನಡೆಯಲಿದೆ. ದೇಶದಾದ್ಯಂತ ಭಕ್ತರು ಈ ಒಂದು ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಂತೆ ಸೂರತ್‌ನಿಂದ ಛಾಪ್ರಾಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ತಪತಿ ಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಬಳಿ ಕಿಡಿಗೇಡಿಯೊಬ್ಬ ಕಲ್ಲೆಸೆದಿದ್ದಾನೆ.
ಘಟನೆಯಿಂದ ಕಿಟಕಿಯ ಗಾಜು ಪುಡಿಪುಡಿಯಾಗಿದ್ದು ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಜಲಗಾಂವ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಲ್ಲೆಸೆದಿರುವ ದುಷ್ಕರ್ಮಿಯ ಪತ್ತೆಗೆ ಬಲೆ ಬೀಸಿದ್ದಾರೆ. ರೈಲು ಪ್ರಯಾಣಿಕರು ತಮಗೆ ಭದ್ರತೆ ಒದಗಿಸ ಬೇಕೆಂದು ಮನವಿ ಮಾಡುವ ವಿಡಿಯೋ ವೈರಲ್ ಆಗಿದೆ.
LATEST NEWS
ತುಳುನಾಡು ಕಂಡ ಅಪೂರ್ವ ರಾಜಕಾರಣಿ ಉಳ್ಳಾಲ ಶ್ರೀನಿವಾಸ ಮಲ್ಯ
ಜಾಸ್ತಿ ರೀಲ್ಸ್ ನೋಡೋದನ್ನು ಬಿಟ್ಟು ಬಿಡಿ; ಇಲ್ಲಾಂದ್ರೆ ನಿಮ್ಮನ್ನು ಆವರಿಸುತ್ತೆ ಈ ರೋಗ
“ಇಂಟರ್ ಕಾಸ್ಟ್ ಮ್ಯಾರೇಜ್ ಹೆಚ್ಚಬೇಕು” : ಸಿಎಂ ಸಿದ್ಧರಾಮಯ್ಯ
ಉಡುಪಿ : ಡಿವೈಡರ್ ಹಾರಿ ಟೆಂಪೋಗೆ ಡಿ*ಕ್ಕಿ ಹೊಡೆದ ಕಾರು; ಚಾಲಕರಿಗೆ ಗಂಭೀ*ರ ಗಾ*ಯ
ಭೀಕರ ರಸ್ತೆ ಅ*ಪಘಾ*ತ; ಯುವ ಪರ್ತಕರ್ತ ದು*ರ್ಮ*ರಣ
ಕಾಶ್ಮೀರದ ಝಡ್-ಮೋರ್ಹ್ ಸುರಂಗ ಇಂದು ಲೋಕಾರ್ಪಣೆ: ಏನಿದರ ವಿಶೇಷತೆ ?
Trending
- BIG BOSS2 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- FILM5 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- LATEST NEWS3 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- FILM4 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ