ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ಎಲೆಕ್ಟ್ರಿಕ್ ಅಟೋ ಪಲ್ಟಿ ಯಾಗಿ ಇಬ್ಬರು ಗಾಯಗೊಂಡಿದ್ದು ಓರ್ವ ಅಲ್ಪ ಸ್ವಲ್ಪ ಗಾ*ಯಗಳೊಂದಿಗೆ ಪಾರಾಗಿದ್ದಾನೆ.
ಗಾ*ಯಾಳುಗಳನ್ನು ಆಟೋ ಚಾಲಕ ಪಕ್ಷಿಕೆರೆ ಕಾಪಿಕಾಡು ನಿವಾಸಿ ರಾಮಚಂದ್ರ ( 45) ಮತ್ತು ಪ್ರಯಾಣಿಕ ಶೇಕ್ ಸಾಹೇಬ್ (60) ಎಂದು ಗುರುತಿಸಲಾಗಿದೆ.
ಶೇಕ್ ಸಾಹೇಬ್ ಪಕ್ಷಿಕೆರೆಯಿಂದ ಆಟೋ ಮೂಲಕ ಮೂಲ್ಕಿ ಕಡೆಗೆ ಹೋಗುತ್ತಿದ್ದಾಗ ಕೆರೆಕಾಡು ಬಳಿ ನಾಯಿ ಅಡ್ಡ ಬಂದಿದ್ದು ಅ*ಪಘಾತ ತಪ್ಪಿಸಲು ಯತ್ನಿಸಿದಾಗ ಆಟೋ ಪ*ಲ್ಟಿಯಾಗಿದೆ. ಅ*ಪಘಾತದ ರಭಸಕ್ಕೆ ಆಟೋದಲ್ಲಿದ್ದವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು : ಸಂಪಾಜೆಯ ಚೆಡಾವು ಎಂಬಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಲಿಯಾಗಿದ್ದಾರೆ. ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಂಟೈನರ್ ಹಾಗೂ ಸುಳ್ಯಕ್ಕೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ಸ್ಕೂಟಿ ನಡುವೆ ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಎಂ. ಚಿದಾನಂದ ಆಚಾರ್ಯ ಎಂಬವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಅವರ ಜೊತೆಗೆ ಸಹ ಸವಾರೆಯಾಗಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಗಂಭೀರ ಗಾಯಗೊಂಡು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡಾ ಮೃತ ಪಟ್ಟಿದ್ದಾರೆ. ಮೃತರು ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಲಿಹುದುಕೇರಿ ನಿವಾಸಿಗಳು ಎಂಬ ಮಾಹಿತಿ ಲಭ್ಯವಾಗಿದೆ. ಸ್ಕೂಟಿಗೆ ಡಿಕ್ಕಿ ಹೊಡೆದ ಕಂಟೈನರ್ ರಸ್ತೆ ಬಿಟ್ಟು ಕೆಲ ಮೀಟರ್ ಗಳಷ್ಟು ದೂರ ಕಾಡಿನ ಒಳಗೆ ಚಲಿಸಿದೆ. ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಕಬ್ಬಿಣದ ತಡೆ ಬೇಲಿ ಕೂಡಾ ಮುರಿದು ಬಿದ್ದಿದ್ದು, ಸ್ಕೂಟಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಈ ಅಪಘಾತ ನಡೆದಿದ್ದು, ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಅಪಘಾತದ ಪ್ರಕರಣ ದಾಖಲಾಗಿದೆ.
ಮಂಗಳೂರು: ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ‘ಕರಾವಳಿ ಉತ್ಸವ’ ದ ಪ್ರಯುಕ್ತ ನಡೆಯುತ್ತಿದೆ. ಡಿ. 22ರಂದು ಪ್ರಾರಂಭವಾದ ಈ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ಕದ್ರಿ ಪಾರ್ಕ್ ನಲ್ಲಿ ಸಂಜೆ 4 ರಿಂದ ರಾತ್ರಿ 9ರ ವರೆಗೆ ನಡೆಯಲಿದೆ. ಕರಾವಳಿಯ ನೈಜ ಸಂಸ್ಕೃತಿ ಸಾಹಿತ್ಯ, ಉಡುಗೆತೊಡುಗೆಗಳು, ಸಂಸ್ಕೃತಿಯ ಅನಾವರಣದೊಂದಿಗೆ ಡಿ.21ರಿಂದ ಜ.19 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವವನ್ನು ದ.ಕ ಜಿಲ್ಲಾಡಳಿತ ಆಯೋಜಿಸಿದೆ.
ಕನ್ನಡ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿರುವ ಉತ್ಸವದಲ್ಲಿ ಕರಾವಳಿಯ ವೈವಿಧ್ಯತೆಗಳು ಸಾರ್ವಜನಿಕರನ್ನು ರಂಜಿಸಲಿವೆ. ಡಿಸೆಂಬರ್ 22ರಿಂದ ಡಿಸೆಂಬರ್ 30ರ ವರೆಗೆ ವಸ್ತು ಪ್ರದರ್ಶನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.
ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ :
ಡಿ.24ರಂದು ಸಂಜೆ 6.30 ರಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಾ ಪರ್ಕ ತಂಡದಿಂದ ತುಳು ಹಾಸ್ಯನಾಟಕ ‘ಎರ‍್ಲಾ ಗ್ಯಾರಂಟಿ ಅತ್ತ್’ ಪ್ರದರ್ಶನಗೊಳ್ಳಲಿದೆ.
ಡಿಸೆಂಬರ್ 25ರಂದು ಸಂಜೆ 6.30ರಿಂದ ಝೀ ಟಿವಿ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಈ ಟಿವಿ ಖ್ಯಾತಿಯ ಕಲಾವಿದರಿಂದ ಮಧುರ ಗೀತೆಗಳು ಪ್ರೇಕ್ಷಕರನ್ನು ರಂಜಿಸಲಿದೆ.
ಡಿಸೆಂಬರ್ 26ರಂದು ಸಂಜೆ 6.30ರಿಂದ ಸುರ್-ಸ್ವಾಗರ್ ಲೋಕೇಶ್ ಸಾಲ್ಯಾನ್ ಬ್ಯಾಂಡ್ ಮತ್ತು ಬಳಗದಿಂದ ಫ್ಯೂಶನ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 27ರಂದು ಸಂಜೆ 6.30 ರಿಂದ ರಂಜನ್ ಬ್ಯೂರಾ & ಬಳಗ, ಬೆಂಗಳೂರು ವತಿಯಿಂದ ಮೆಲ್ಲೊಟ್ರೀ ಖ್ಯಾತಿಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಡಿಸೆಂಬರ್ 28ರಂದು ಸಂಜೆ 6.30 ರಿಂದ ನೃತ್ಯಾಂಕುರ ಕಲಾತಂಡ, ಮಂಗಳ ಗಂಗೋತ್ರಿ ವತಿಯಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದೆ. ಜೊತೆಗೆ ಮಕ್ಕಳ ಬ್ಯಾಂಡ್(ಸರಿಗಮಪ ಬಳಗ) ಮಧುರ ಗೀತೆಗಳ ಮೂಲಕ ಪ್ರೇಕ್ಷಕರನ್ನ ರಂಜಿಸಲಿದೆ.
ಡಿಸೆಂಬರ್ 29ರಂದು ಸಂಜೆ 6.30 ರಿಂದ ಕುದ್ರೋಳಿ ಗಣೇಶ್ ಮತ್ತು ತಂಡದಿಂದ ವಿಸ್ಮಯ ಜಾದೂ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 30ರಂದು ಸಂಜೆ 6.30 ರಿಂದ ಅರೆಹೊಳೆ ಪ್ರತಿಷ್ಠಾನ- ನಂದಗೋಕುಲ ವತಿಯಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ.
ಇತರ ಕಾರ್ಯಕ್ರಮಗಳು:
ಡಿಸೆಂಬರ್ 21-31: ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ ಹೆಲಿಟ್ಯಾಕ್ಸಿ ರೈಡ್‌ಗಳು (ಒಬ್ಬರಿಗೆ 4,500 ರೂ.)
ಡಿಸೆಂಬರ್ 28-29: ತಣ್ಣೀರಭಾವಿ ಬೀಚ್‌ನಲ್ಲಿ ಎರಡು ದಿನಗಳ ಬೀಚ್ ಉತ್ಸವ
ಡಿಸೆಂಬರ್ 22-ಜನವರಿ 19: ಕದ್ರಿ ಪಾರ್ಕ್ ನಲ್ಲಿ ರೋಬೋಟಿಕ್ ಬಟರ್‌ಫ್ಲೈ ಪ್ರದರ್ಶನ (ಸಂಜೆ 4ರಿಂದ ರಾತ್ರಿ 9ರವರೆಗೆ)
ಜನವರಿ 4-5: ಕದ್ರಿ ಪಾರ್ಕ್ ನಲ್ಲಿ ಆಟೋಮೊಬೈಲ್ ಮತ್ತು ಶ್ವಾನ ಪ್ರದರ್ಶನ
ಜನವರಿ 11-12: ಕದ್ರಿ ಪಾರ್ಕ್ ನಲ್ಲಿ ಯುವ ಉತ್ಸವ – ಯುವಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು
ಜನವರಿ 18-19: ತಣ್ಣೀರಭಾವಿ ಬೀಚ್‌ನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ
ಮಂಗಳೂರು: ಕರಾವಳಿ ಉತ್ಸವ ಪ್ರಯುಕ್ತ ಸಾವ೯ಜನಿಕರ ಆಕಷ೯ಣೆಗೆ ನಡೆಯುತ್ತಿರುವ ಹೆಲೆಕಾಪ್ಟರ್ ಸಂಚಾರದ ನಿಲ್ದಾಣವನ್ನು ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಇದುವರೆಗೆ ಮೇರಿಹಿಲ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಸಂಚಾರ ಕಾಯಾ೯ಚರಣೆ ನಡೆಸುತ್ತಿತ್ತು. ತಾಂತ್ರಿಕ ಕಾರಣಗಳಿಂದ ಇದನ್ನು ಅಡ್ಯಾರಿಗೆ ಸ್ಥಳಾಂತರಿಸಲಾಗಿದೆ.
ಸಾರ್ವಜನಿಕರು ಹೆಲಿಕಾಪ್ಟರ್ ನಲ್ಲಿ ನಗರ ದರ್ಶನ ಮತ್ತು ಕಡಲ ಕಿನಾರೆಯ ಸೌಂದರ್ಯವನ್ನು ಆಕಷ೯ಕವಾಗಿ ವೀಕ್ಷಿಸಬಹುದಾಗಿದೆ. ಹೆಲಿಕಾಪ್ಟರ್ ಪ್ರಯಾಣದ ಪ್ರತಿ ಟ್ರಿಪ್‍ನಲ್ಲಿ 6 ಜನರಿಗೆ ಸಂಚರಿಸಲು ಅವಕಾಶವಿದ್ದು, ಪ್ರತಿ ವ್ಯಕ್ತಿಗೆ ರೂ. 4,500/- ದರ ನಿಗದಿಪಡಿಸಲಾಗಿದೆ. ಹೆಲಿಕಾಫ್ಟರ್‍ನಲ್ಲಿ ಸಂಚರಿಸಲು ಆಸಕ್ತರು ಬುಕ್ಕಿಂಗ್‍ಗಾಗಿ ವೆಬ್‍ಸೈಟ್ www.helitaxii.com (ಮೊಬೈಲ್ ಸಂಖ್ಯೆ:- 9400399999 / 7483432752) ಸಂಪರ್ಕಿಸಬಹುದಾಗಿದೆ.