ಕಾರ್ಕಳ : ಭೀಕರ ರಸ್ತೆ ಅ*ಪಘಾತದಲ್ಲಿ ಕಾಂಗ್ರೆಸ್ ಮುಖಂಡ ದಾ*ರುಣ ಸಾ*ವನ್ನಪ್ಪಿದ ಘಟನೆ ಕಾರ್ಕಳದ ನೀರೆ ಹೆದ್ದಾರಿ ಶಾಲೆ ಬಳಿ ನಡೆದಿದೆ.
ಕಾಂಗ್ರೆಸ್ ಮುಖಂಡ, ನೀರೆ ನಿವಾಸಿ ಶಂಕರ್ ಶೆಟ್ಟಿ (70) ಅಪಘಾತದಲ್ಲಿ ಮೃ*ತಪಟ್ಟವರು ಎಂದು ಗುರುತಿಸಲಾಗಿದೆ.
ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀ*ಕರ ಅ*ಪಘಾತದಲ್ಲಿ ಬೈಕ್ ಸವಾರ ಶಂಕರ್ ಶೆಟ್ಟಿ ಸಾ*ವನ್ನಪ್ಪಿದ್ದಾರೆ. ಬೈಲೂರು ಪ್ರೌಢಶಾಲಾ ಶಿಕ್ಷಕ ಹರೀಶ್ ಶೆಟ್ಟಿ ಎಂಬವರು ತಮ್ಮ ಕಾರಿನಲ್ಲಿ ನೀರೆ ಹೆದ್ದಾರಿ ಶಾಲಾ ಕ್ರಾಸ್ ಬಳಿ ಸಾಗುತ್ತಿದ್ದಾಗ ಶಂಕರ್ ಶೆಟ್ಟಿ ಬೈ*ಕ್ ಡಿ*ಕ್ಕಿಯಾಗಿದೆ. ಡಿ*ಕ್ಕಿಯ ರಭಸಕ್ಕೆ ಶಂಕರ್ ಶೆಟ್ಟಿ ಅವರಿಗೆ ತೀವ್ರ ಸ್ವರೂಪದ ಗಾ*ಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆ ಸಾಗಿಸಲಾಯಿತಾದರೂ ದಾರಿಮಧ್ಯೆ ಕೊ*ನೆಯುಸಿರೆಳೆದಿದ್ದಾರೆ.
ಮೃ*ತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಶಂಕರ್ ಶೆಟ್ಟಿ ಅವರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಬ್ರಹ್ಮ ಬೈದೆರ್ಕಳ ಗರಡಿ ನೀರೆ ಇದರ ಆಡಳಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು/ವಾಷಿಂಗ್ಟನ್ ಡಿಸಿ: ಮುಂದಿನ ತಿಂಗಳು ಅಮೆರಿಕದ ನೂತನ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಯೂರೋಪಿಯನ್ ಒಕ್ಕೂಟಕ್ಕೆ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಅಮೆರಿಕದ ಜತೆಗಿನ ಭಾರಿ ವ್ಯಾಪಾರ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶಗಳಿಗೆ ಅಗತ್ಯವಾದ ಬಹುತೇಕ ತೈಲ ಮತ್ತು ಅನಿಲವನ್ನು ಅಮೆರಿಕದಿಂದ ಖರೀದಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯೂರೋಪಿಯನ್ ಒಕ್ಕೂಟದ ದೇಶಗಳು ಹೀಗೆ ಮಾಡದಿದ್ದರೆ, ಉದ್ದಕ್ಕೂ ಸುಂಕ ವಿಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ತಮ್ಮ ಟ್ರುಥ್ ಸೋಶಿಯಲ್ ಪ್ಲಾಟ್ಫಾರಂನಲ್ಲಿ ಈ ಎಚ್ಚರಿಕೆ ನೀಡಿರುವ ಟ್ರಂಪ್, “ಅಮೆರಿಕದ ಜತೆ ಇರುವ ವ್ಯಾಪಾರ ಅಂತರವನ್ನು ಕಿರಿದು ಮಾಡುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮಿಂದ ತೈಲ ಮತ್ತು ಅನಿಲವನ್ನು ಖರೀದಿಸುವಂತೆ ನಾನು ಯೂರೋಪಿಯನ್ ಒಕ್ಕೂಟಕ್ಕೆ ಸೂಚನೆ ನೀಡಿದ್ದೇನೆ. ಇಲ್ಲದಿದ್ದರೆ ಉದ್ದಕ್ಕೂ ಸುಂಕ ವಿಧಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಹಿಂದಿನ ಅವಧಿಯಲ್ಲಿ ಕೂಡಾ ಟ್ರಂಪ್, “ಅನಾದಿ ಕಾಲದಿಂದಲೂ ಅಮೆರಿಕದ ಬೆನ್ನ ಮೇಲೆ ಯೂರೋಪ್ ಸವಾರಿ ಮಾಡುತ್ತಿದೆ. ನಾವು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ” ಎಂದು ಹೇಳಿಕೆ ನೀಡಿದ್ದರು. ಜೊತೆಗೆ ನ್ಯಾಟೊಗೆ ನೀಡುತ್ತಿರುವ ಅಮೆರಿಕದ ನೆರವನ್ನು ಸ್ಥಗಿತಗೊಳಿಸುವುದಾಗಿ ಮತ್ತು ಯೂರೋಪ್ ಕೂಡಾ ಇದಕ್ಕೆ ಕೊಡುಗೆ ನೀಡಬೇಕು ಎಚ್ಚರಿಸಿದ್ದರು.
2022ರಿಂದ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಯೂರೋಪಿಯನ್ ಒಕ್ಕೂಟದ ಜತೆಗೆ ಅಮೆರಿಕದ ವ್ಯಾಪಾರ ಕೊರತೆ 202.5 ಶತಕೋಟಿ ಡಾಲರ್ಗಳಾಗಿವೆ. ಯೂರೋಪಿಯನ್ ಒಕ್ಕೂಟದಿಂದ ಅಮೆರಿಕ 553.3 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದರೆ, 350.8 ಶತಕೋಟಿ ಡಾಲರ್ ಮೌಲ್ಯದ ಸರಕು ರಫ್ತು ಮಾಡಿದೆ.
ಈ ಅಸಮತೋಲನವನ್ನು ನಿವಾರಿಸಬೇಕು ಎನ್ನುವುದು ಟ್ರಂಪ್ ಬಯಕೆ. ಬೆದರಿಕೆ ಹಾಕುವ ಕಾರ್ಯತಂತ್ರದ ಬದಲು ಅಮೆರಿಕ ಮತ್ತೆ ಸರ್ವಶ್ರೇಷ್ಠ ದೇಶವಾಗಲು ನೆರವಾಗಿ ಎಂದು ಮನವೊಲಿಸುವುದು ಅಗತ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಸುಂಕ ಎನ್ನುವುದು ಶಬ್ದಕೋಶದಲ್ಲಿ ತಮಗೆ ಅತ್ಯಂತ ಪ್ರಿಯ ಶಬ್ದ ಎಂದು ಟ್ರಂಪ್ ಹೇಳಿದ್ದಾರೆ.
ಮಂಗಳೂರು/ಮಂಡ್ಯ: ಸಕ್ಕರೆ ನಾಡಿನಲ್ಲಿ ಕಳೆದ 3 ದಿನಗಳಿಂದ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಭಾಷಾ ಅಭಿಚವೃದ್ದಿ ಅಧಿನಿಯಮ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಘೋಷಣೆ ಸೇರಿದಂತೆ 5 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡು,ನುಡಿಯ ಡಿಂಡಿಮ ಮೊಳಗಿದೆ. ಮೊದಲ ದಿನ ಬರೋಬ್ಬರಿ 2 ಲಕ್ಷ ಜನ ಸೇರಿ ದಾಖಲೆ ಬರೆದಿದ್ದರೆ, ಎರಡು ಮತ್ತು ಮೂರನೇ ದಿನ ಕೂಡ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಾಗರೋಪಾದಿಯಲ್ಲಿ ಆಗಮಿಸಿದ್ದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂತಿಮ ದಿನದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಟೇಲ್ ಪಾಂಡು ಅವರು ಈ 5 ನಿರ್ಣಯಗಳನ್ನು ಮಂಡನೆ ಮಾಡಿದರು.
ಬಹಿರಂಗ ಅಧಿವೇಶನದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ತೆಗೆದುಕೊಂಡ ನಿರ್ಣಾಯಗಳು ಹೀಗಿವೆ.
1. ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮ 2022ರ ಎಲ್ಲ ಉಪಬಂಧಗಳು ಮತ್ತು ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮ ಜಾರಿಗೆ ಬರಬೇಕು. ಇದು ಕೂಡಲೇ ಅನುಷ್ಠಾನ ಆಗಬೇಕು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ರಾಜ್ಯ ಮಟ್ಟದ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ತಿದ್ದುಪಡಿ ತರಬೇಕು.
2.ಸರ್ಕಾರಿ ಕನ್ನಡ ಶಾಲೆಗೆ ಕಟ್ಟಡ, ವಾಚನಾಲಯ, ಆಟದ ಮೈದಾನ ಸೇರಿ ಇತರೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಯ ಕ್ರಮಕ್ಕೆ ಸರ್ಕಾರ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು. ಕನ್ನಡೇತರ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು.
3.ಸರೋಜಿನಿ ಮಹಿಷಿ ವರದಿಯನ್ನು ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು
4.ದಾವಣಗೆರೆಯಲ್ಲಿ ನಡೆಯಬೇಕಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಅತೀ ಶೀಘ್ರದಲ್ಲೇ ನಡೆಸಬೇಕು.
5.ಕರ್ನಾಟಕ ಸರ್ಕಾರ ರಾಷ್ಟ್ರಕವಿ ಪ್ರಶಸ್ತಿಯನ್ನ ಶೀಘ್ರದಲ್ಲೇ ಘೋಷಿಸಬೇಕು
ಮಂಗಳೂರು/ವಾಷಿಂಗ್ಟನ್: ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಜ್, ಶೀಘ್ರವೇ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದು, ವಿವಾಹ ಕಾರ್ಯಕ್ರಮದ ಒಟ್ಟಾರೆ ವೆಚ್ಚ 5096 ಕೋಟಿ ರೂ. ದಾಟಲಿದೆ ಎನ್ನಲಾಗಿದೆ.
ಲಾರೆನ್ ಸ್ಯಾಂಚೆಝ್ ಸಂದರ್ಶನಗಳ ಸಮಯದಲ್ಲಿ ತನ್ನ ಮದುವೆಯ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದಾರೆ ಆದರೆ ದಿನಾಂಕವನ್ನು ದೃಢಪಡಿಸಿಲ್ಲ. ದಿ ಟುಡೇ ಶೋ ಜೊತೆಗಿನ ಚಾಟ್‌ನಲ್ಲಿ, ಬಿಡುವಿಲ್ಲದ ವೇಳಾಪಟ್ಟಿಯೊಂದಿಗೆ ಮದುವೆಯ ಯೋಜನೆಯನ್ನು ಕುಶಲತೆಯಿಂದ ಮಾಡುವ ಬಗ್ಗೆ ತಮಾಷೆ ಮಾಡಿದರು, “ನನ್ನ ಬಳಿ Pinterest ಇದೆ. ನಾನು ಎಲ್ಲ ವಧುವಿನಂತೆಯೇ ಇದ್ದೇನೆ.
ಅಮೆರಿಕದ ಕೊಲರಾಡೋದ ಆ್ಯಸ್ಪೆನ್ಸ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಮೊದಲ ಪತ್ನಿ ಮೆಕೆನ್ಜಿಗೆ 2019ರಲ್ಲಿ ಡೈವೋರ್ಸ್ ನೀಡಿದ್ದ ಬೆಜೋಸ್, ಮಾಜಿ ಪತ್ನಿಗೆ 3 ಲಕ್ಷ ಕೋಟಿ ರು.ಪರಿಹಾರ ನೀಡಿದ್ದರು. ಬಳಿಕ ಸ್ಯಾಂಜೆಜ್ ಜೊತೆ ನಂಟು ಹೊಂದಿದ್ದರು. ಸದ್ಯ, ಬೆಜೋಸ್ ಅವರ ಆಸ್ತಿ 20 ಲಕ್ಷ ಕೋಟಿ ರು.ನಷ್ಟಿದೆ. ಕೆಲ ತಿಂಗಳ ಹಿಂದೆ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಖರ್ಚು ಬರೋಬ್ಬರಿ 5000 ಕೋಟಿ ರು. ದಾಟಿತ್ತು.