LATEST NEWS
ಟ್ಯೂಷನ್‌ಗೆ ಬರುತ್ತಿದ್ದ ವಿದ್ಯಾರ್ಥಿನಿಯೊಡನೆ ಪರಾರಿಯಾಗಿದ್ದ ಶಿಕ್ಷಕ ಅರೆಸ್ಟ್
Published
5 hours agoon
ಮಂಗಳೂರು/ಬೆಂಗಳೂರು : 10ನೇ ತರಗತಿ ವಿದ್ಯಾರ್ಥಿನಿ ಟ್ಯೂಷನ್‌ಗೆ ಬರುತ್ತಿದ್ದು, ಆಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದ ಶಿಕ್ಷಕನನ್ನು ಜೆಪಿನಗರ ಠಾಣೆ ಪೊಲೀಸರು ಬಂಧಿಸಿ, ವಿದ್ಯಾರ್ಥಿನಿಯನ್ನು ಬಾಲಮಂದಿರಕ್ಕೆ ಕಳುಹಿಸಿದ ಘಟನೆ ಬೆಂಗಲೂರಿನಲ್ಲಿ ನಡೆದಿದೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡು 1ರಿಂದ10ನೇ ತರಗತಿಯ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದ ಅಭಿಷೇಕ್ ಗೌಡ (35) ಮೂಲತಃ ಕನಕಪುರ ತಾಲ್ಲೂಕಿನ ದೊಡ್ಡಸಾತೇನಹಳ್ಳಿ ನಿವಾಸಿ. ಅಭಿಷೇಕ ಪದವಿ ಪೂರ್ಣಗೊಳಿಸದೆಯೇ 6 ತಿಂಗಳು ನ್ಯೂಟ್ರಿಷಿಯನ್ ಕೋರ್ಸ್ ಮಾಡಿಕೊಂಡಿದ್ದಾನೆ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವಿದೆ. ದಂಪತಿ ನಡುವೆ ಮನಸ್ತಾಪದಿಂದಾಗಿ ಈತನನ್ನು ತೊರೆದು ಪತ್ನಿ ತವರುಮನೆ ಸೇರಿದ್ದಾರೆ.
ಟ್ಯೂಷನ್‌ಗೆ ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯ ಮನವೊಲಿಸಿ ನ.23ರಂದು ಸಂಜೆ ಆಕೆಯನ್ನು ಕರೆದುಕೊಂಡು ನಾಪತ್ತೆಯಾಗಿದ್ದ. ಹೋಗುವಾಗ ಮನೆಯಲ್ಲಿ ಫೋನ್ ಬಿಟ್ಟು 70 ಸಾವಿರ ಹಣದೊಂದಿಗೆ ಇವರಿಬ್ಬರೂ ಕಣರೆಯಾಗಿದ್ದರು. ಇವರು ಎಟಿಎಂ ಬಳಸುತ್ತಿರಲಿಲ್ಲ. ಹಾಗಾಗಿ ಪತ್ತೆಹಚ್ಚಲು ಪೊಲೀಸರಿಗೆ ಕಷ್ಟವಾಗಿತ್ತು. ಅಭಿಷೇಕ ವಿದ್ಯಾರ್ಥಿನಿ ಜೊತೆ ಮಳವಳ್ಳಿಗೆ ಹೋಗಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಮನೆ ಮಾಲೀಕರು “ಲುಕೌಟ್ ನೋಟಿಸ್‌ನಲ್ಲಿ ಇರುವವರು ನಮ್ಮ ಮನೆಯಲ್ಲಿ ಬಾಡಿಗೆಗೆ ಇರುವವರು” ಎಂದು ಗುರುತಿಸಿ ತಕ್ಷಣ ಮಳವಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ.
ಮಳವಳ್ಳಿ ಪೊಲೀಸರು ಜೆಪಿನಗರ ಠಾಣೆಗೆ ವಿಷಯ ತಿಳಿಸಿದ ಬಳಿಕ ಪೊಲೀಸರು ಮಳವಳ್ಳಿಗೆ ತೆರಳಿ ಇಬ್ಬರನ್ನು ವಶಕ್ಕೆ ಪಡೆದು ವಿದ್ಯಾರ್ಥಿನಿ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರಕ್ಕೆ ಕರೆತಂದು ವಿದ್ಯಾರ್ಥಿನಿಯನ್ನು ಬಾಲಮಂದಿರಕ್ಕೆ ಕಳುಹಿಸಿ ಅಭಿಷೇಕಗೌಡನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
LATEST NEWS
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
Published
3 minutes agoon
10/01/2025By
NEWS DESK2ನೀವು ಚಿಕ್ಕವರಾಗಿರಲಿ ಅಥವಾ ವಯಸ್ಸಾದವರಾಗಿರಲಿ ಸಿಹಿತಿಂಡಿ ಸೇವಿಸಿದ ನಂತರ ಹಲ್ಲುಗಳನ್ನ ಸ್ವಚ್ಛಗೊಳಿಸುವಲ್ಲಿನ ಅಜಾಗರೂಕತೆಯು ಹಲ್ಲುಗಳಿಗೆ ಸೋಂಕು ತಗುಲಿಸಬಹುದು. ಇದು ಇಡೀ ಹಲ್ಲನ್ನು ಹಾನಿಗೊಳಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಜನರು ದಂತವೈದ್ಯರ ಬಳಿಗೆ ಹೋಗುತ್ತಾರೆ ಮತ್ತು ಆಗಾಗ್ಗೆ ಹಲ್ಲುಗಳನ್ನ ಕೀಳಬೇಕಾಗುತ್ತದೆ. ಯಾಕಂದ್ರೆ, ಇದು ಇತರ ಹಲ್ಲುಗಳಿಗೆ ಹಾನಿ ಮಾಡುವ ಅಪಾಯವನ್ನ ಹೆಚ್ಚಿಸುತ್ತದೆ.
ಇಂದಿಗೂ ಸಹ ನಾವು ನಮ್ಮ ಹಿರಿಯರ ಹಳೆಯ ಪರಿಹಾರಗಳನ್ನ ಅನುಸರಿಸುವ ಮೂಲಕ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು. ಇಂದು ನಾನು ನಿಮಗೆ ಅಂತಹ ಮನೆಮದ್ದನ್ನ ಹೇಳಲಿದ್ದೇನೆ, ಅದನ್ನು ಬಳಸಿಕೊಂಡು ನೀವು ದಂತವೈದ್ಯರ ಬಳಿಗೆ ಹೋಗದೆ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು.
ಚಾಕೊಲೇಟ್ ತಿನ್ನುವುದರಿಂದ ಮಕ್ಕಳ ಹಲ್ಲುಗಳು ಹಾನಿಗೊಳಗಾಗುತ್ತವೆ. ಆಹಾರ ಅಥವಾ ಸಿಹಿತಿಂಡಿಗಳನ್ನು ಸೇವಿಸಿದ ನಂತರ ನಾವು ತೊಳೆಯುವುದಿಲ್ಲ. 10 ರಿಂದ 12 ವರ್ಷ ವಯಸ್ಸಿನಲ್ಲಿ, ಕುಳಿಗಳಿಂದಾಗಿ ಮಕ್ಕಳ ಹಲ್ಲುಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ.
ಇದನ್ನು ತಡೆಗಟ್ಟಲು ಸುಲಭ ಮಾರ್ಗವಿದೆ. ಯಾರಿಗಾದರೂ ಹಲ್ಲಿನಲ್ಲಿ ಕುಳಿ ಇದ್ದರೆ, ನೀವು ಅದನ್ನು ಮನೆಯಲ್ಲಿಯೇ ತೆಗೆದುಹಾಕಬಹುದು. ಮೊದಲಿಗೆ, ಈರುಳ್ಳಿ ಬೀಜಗಳನ್ನ ಮಾರುಕಟ್ಟೆಯಿಂದ ತರಬೇಕು. ನಂತರ ಬೆಂಕಿಯನ್ನ ಹೊತ್ತಿಸಿ ಕೆಂಡದ ಮೇಲೆ ಈರುಳ್ಳಿ ಬೀಜಗಳನ್ನ ಹಾಕಿ ಬಂದ ಹೊಗೆಯನ್ನ ಬಾಯಿಯಲ್ಲಿ ಶೇಖರಿಸಿ ನಂತ್ರ ಮುಚ್ಚಿ. ಈ ಪ್ರಕ್ರಿಯೆಯನ್ನ ಎರಡರಿಂದ ಮೂರು ಬಾರಿ ಮಾಡಿ. ಈಗ ನಿಮ್ಮ ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸಿ ಆ ಬಟ್ಟಲಿನಲ್ಲಿ ಉಗುಳಿ. ಈಗ ಆ ಬಟ್ಟಲಿನಲ್ಲಿರುವ ನೀರಿನಲ್ಲಿ ಎಲ್ಲಾ ಹುಳುಗಳು ಗೋಚರಿಸುತ್ತವೆ.
DAKSHINA KANNADA
ವೆನ್ಲಾಕ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಅಂಗಾಂಗ ದಾನ; ಸಾ*ವಿನಲ್ಲೂ ಸಾರ್ಥಕತೆ ಮೆರೆದ ಶಿವಮೊಗ್ಗದ ಮಹಿಳೆ
Published
21 minutes agoon
10/01/2025By
NEWS DESK4ಮಂಗಳೂರು : ಮೆದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಮಹಿಳೆಯ ಅಂಗಾಂಗ ದಾನ ಪ್ರಕ್ರಿಯೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯಿತು.
ಮೈಸೂರಿನ ಅಪೋಲೋ ಆಸ್ಪತ್ರೆಗೆ ರೇಖಾ ಯಕೃತ್, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಣ್ಣುಗಳ ಕಾರ್ನಿಯಾವನ್ನು ಝೀರೋ ಟ್ರಾಫಿಕ್ ಮೂಲಕ ಕೊಂಡೊಯ್ಯಲಾಯಿತು.
ಶಿವಮೊಗ್ಗ ರಾಗಿಗುಡ್ಡ ನಿವಾಸಿ, ರೇಖಾ (41) ಅಂಗಾಂಗ ದಾನ ಮಾಡಿರುವ ಮಹಿಳೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೇಖಾ ಅಸ್ವಸ್ಥಗೊಂಡಿದ್ದರು. ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಜ.6 ರಂದು ದಾಖಲಿಸಲಾಗಿತ್ತು. ಆದರೆ, ಬ್ರೈನ್ ಡೆಡ್ ಆದ ಹಿನ್ನೆಲೆ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದರು.
ಇದನ್ನೂ ಓದಿ : ದಂಪತಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಶ*ವ ಪತ್ತೆ!
ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ 176 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಗಾಂಗ ದಾನ ಪ್ರಕ್ರಿಯೆ ನಡೆದಿರೋದು ವಿಶೇಷ.
LATEST NEWS
ಉಡುಪಿ: ಮೆಸ್ಕಾಂ ಎಟಿಎಂ ಸೇವೆ ಸ್ಥಗಿತ- ಬಿಲ್ ಪಾವತಿಗೆ ಸಾರ್ವಜನಿಕರ ಪರದಾಟ
Published
26 minutes agoon
10/01/2025By
NEWS DESK2ಉಡುಪಿ: ವಿದ್ಯುತ್ ಬಿಲ್ ಪಾವತಿಗಾಗಿ ಮೆಸ್ಕಾಂ ಎಟಿಎಂ ಸೇವೆ ಸ್ಥಗಿತಗೊಂಡಿರುವುದರಿಂದ ಉಡುಪಿ ಮತ್ತು ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪರಿಸ್ಥಿತಿಯು ದುರುಪಯೋಗ ಮತ್ತು ಅಸಮರ್ಥತೆಯ ಬಗ್ಗೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಮಣಿಪಾಲ, ಕುಂಜಿಬೆಟ್ಟು, ಪರ್ಕಳ, ಹಿರಿಯಡ್ಕ, ಮೂಡುಬೆಳ್ಳೆ, ಉದ್ಯಾವರ, ಪುತ್ತೂರು, ಉಡುಪಿ ನಗರ ಮುಂತಾದ ಪ್ರದೇಶಗಳ ಜನರು ಈ ಅಮಾನತಿನ ಹೊರೆ ಹೊತ್ತಿದ್ದಾರೆ. ಮೆಸ್ಕಾಂ ಕಚೇರಿಗಳಲ್ಲಿ ಉದ್ದನೆಯ ಸರತಿ ಸಾಲುಗಳು ಸಾಮಾನ್ಯವಾಗಿದ್ದು, ಜನರು ತಮ್ಮ ಬಿಲ್ಲುಗಳನ್ನು ಪಾವತಿಸಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಪಾವತಿಗಳನ್ನು ಮಾಡಲು ಅನೇಕರು ಕೆಲಸದಿಂದ ರಜೆ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ, ಅವರ ದಿನಚರಿಗಳನ್ನು ಅಡ್ಡಿಪಡಿಸುತ್ತದೆ.
ಹಿರಿಯ ನಾಗರಿಕರ ಮೇಲೆ ಪರಿಸ್ಥಿತಿ ವಿಶೇಷವಾಗಿ ಕಠಿಣವಾಗಿದೆ, ಉದ್ದನೆಯ ಸಾಲಿನಲ್ಲಿ ನಿಂತಿರುವ ವ್ಯಕ್ತಿಗಳು ಅನಾರೋಗ್ಯಕ್ಕೆ ಒಳಗಾಗುವ ಘಟನೆಗಳು. ಪರ್ಯಾಯ ವ್ಯವಸ್ಥೆಗಳ ಕೊರತೆಯಿಂದಾಗಿ ಬೇರೆ ದಾರಿಯಿಲ್ಲದೆ ಸಾರ್ವಜನಿಕರ ನಿರಾಶೆ ಹೆಚ್ಚುತ್ತಿದೆ.
ಮೆಸ್ಕಾಂ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ. ಸ್ಥಗಿತಗೊಂಡಿರುವ ಎಟಿಎಂ ಸೇವೆಗಳನ್ನು ಆದಷ್ಟು ಬೇಗ ಪುನರಾರಂಭಿಸಿ ಸಾರ್ವಜನಿಕರ ಸಂಕಷ್ಟಗಳನ್ನು ನಿವಾರಿಸುವಂತೆ ಒತ್ತಾಯಿಸಿದರು.