Connect with us

NATIONAL

ರೈಲು ಹಳಿ ಮೇಲೆ ಕುಳಿತಿದ್ದ ವಿದ್ಯಾರ್ಥಿ ಪಾಲಿಗೆ ಮುಳುವಾದ ಹೆಡ್ ಫೋನ್.!

Published

on

ಭೋಪಾಲ್: ರೈಲು ಹಳಿ ಮೇಲೆ ಹೆಡ್ ಫೋನ್ ಹಾಕಿ ಸಂಗೀತ ಕೇಳುತ್ತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಿನ್ನೆ (ಅ.30) ಸಂಭವಿಸಿದೆ.

ಬಿಬಿಎ ವಿದ್ಯಾರ್ಥಿ ಮನರಾಜ್ ತೋಮರ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಮನರಾಜ್ ಹಾಗೂ ಆತನ ಸ್ನೇಹಿತ ರೈಲು ಹಳಿಯ ಮೇಲೆ ಕುಳಿತು ಮೊಬೈಲ್ ನಲ್ಲಿ ಏನೋ ಹುಡುಕಾಡುತ್ತಿದ್ದ ವೇಳೆ ಮನರಾಜ್ ಹೆಡ್ ಫೋನ್ ಹಾಕಿಕೊಂಡಿದ್ದು ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಿದ್ದ.
ಈ ಸಂದರ್ಭ ಅದೇ ಹಳಿಯಲ್ಲಿ ಬಂದ ರೈಲು ಮನರಾಜ್ ಗೆ ಡಿಕ್ಕಿ ಹೊಡೆದಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

NATIONAL

ಐಸಿಇಆರ್‌ಟಿ ಎಚ್ಚರಿಕೆ : ನೀವು ಗೂಗಲ್‌ ಕ್ರೋಮ್‌ ನಿತ್ಯ ಬಳಸುತ್ತೀರಾ ?? ಹುಷಾರ್ !!

Published

on

ಮಂಗಳೂರು/ನವದೆಹಲಿ : ಗೂಗಲ್‌ ಕ್ರೋಮ್‌ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಐಸಿಇಆರ್‌ಟಿ ಇಂಡಿಯಾ (Indian Computer Emergency Response team) ಎಚ್ಚರಿಕೆ ನೀಡಿದೆ. ಗೂಗಲ್‌ ಕ್ರೋಮ್‌ ಎಲ್ಲಾ ಬಳಕೆದಾರರಲ್ಲೂ ಸಹ ಉಪಯುಕ್ತ ಮಾಹಿತಿಗಳು ನಾಶವಾಗಬಹುದು ಅಥವಾ ಕಳುವಾಗಬಹುದು ಎಂದು ಸಿಇಆರ್‌ಟಿ ಮುನ್ಸೂಚನೆ ನೀಡಿದೆ.

ಈಗ ಬಳಕೆಯಲ್ಲಿರುವ 131.0.6778.69/70 ಡೆಸ್ಕ್‌ ಟಾಪ್‌ ವರ್ಷನ್‌ ಹಾಗೂ ವಿಂಡೋಸ್‌ ಮತ್ತು ಮ್ಯಾಕ್‌ ಹಾಗೂ ಈ ಮುನ್ನ ಬಳಕೆಯಲ್ಲಿದ್ದ ಲಿನಕ್ಸ್‌ 131.6.6778.69 ವರ್ಷನ್‌ ಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ.

 

ಇದನ್ನೂ ಓದಿ : ಸಜ್ಜಾಗುತ್ತಿದೆ OPEN AI; ಹಾಗಾದ್ರೆ ಬ್ರೌಸರ್, ಗೂಗಲ್ ಕ್ರೋಮ್ ಕಥೆ ಏನಾಗ್ಬೋದು ?

 

ಒಂದು ಸಂಶೋಧನೆಯ ಪ್ರಕಾರ, ಪ್ರಸ್ತುತ ಸಾಮಾಜಿಕ ಜಾಲತಾಣ ಹೇಗಿದೆಯೆಂದರೆ, ಕೇವಲ ಒಂದು ವಿಷಯದ ಕುರಿತಾಗಿ ನಾವು ಒಮ್ಮೆ ಮಾಹಿತಿಯನ್ನು ಪಡೆದುಕೊಂಡರೆ ಸಾಕು ನಂತರದಲ್ಲಿ ಅದರದ್ದೇ ಕುರಿತಾದ ಮತ್ತೂ ಕುತೂಹಲಕಾರಿ ಮಾಹಿತಿಗಳು ದೊರಕುತ್ತಿರುತ್ತವೆ. ನಾವು ಏನು ನೋಡುತ್ತೇವೆ, ಏನು ಮಾಡುತ್ತೇವೆ ಎಂಬ ಎಲ್ಲಾ ಮಾಹಿತಿಯಯೂ ಸ್ಟೋರ್ ಆಗಿರುತ್ತವೆ. ಹಾಗಾಗಿ ಬಹಳಷ್ಟು ಎಚ್ಚರಿಕೆಯಿಂದ ಇರುವುದು ಮುಖ್ಯ.

ಗೂಗಲ್‌ ಕ್ರೋಮ್‌ ಮೇಲೆ ದಾಳಿ ಮಾಡುವವರು ಮೊದಲು ವೈರಸ್‌ ಗಳನ್ನು ಹರಿಬಿಟ್ಟು ಸೆಕ್ಯುರಿಟಿ ಕಂಟ್ರೋಲ್‌ ಗಳನ್ನು ಬೇಧಿಸಿ ಬಳಿಕ ಸೂಕ್ಷ್ಮ ಮಾಹಿತಿಗಳಿಗೆ ಕೈಹಾಕುವ ಸಾಧ್ಯತೆ ಇದೆಯೆಂದು ಸಿಇಆರ್‌ಟಿ ಹೇಳಿದೆ. ಈ ಮೂಲಕ ಹೆಚ್ಚಾಗಿ ಕ್ರೋಮ್ ಬಳಸುವ ಜನರಿಗೆ ಮನ್ನೆಚ್ಚರಿಕೆ ಕ್ರಮವಾಗಿ ಈ ಎಚ್ಚರಿಕೆ ನೀಡಿದೆ.

 

Continue Reading

NATIONAL

ತಮಾಷೆಗಾಗಿ ಕ*ಪಾಳಮೋಕ್ಷ; ಸೋದರ ಮಾವನಿಂದ 3 ವರ್ಷದ ಮಗುವಿನ ಜೀ*ವಾಂತ್ಯ

Published

on

ಮಂಗಳೂರು/ಥಾಣೆ: ಮೂರು ವರ್ಷದ ಸೋದರ ಸೊಸೆಯನ್ನು ಕೊಂ*ದು ಶ*ವವನ್ನು ವಿಲೇವಾರಿ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನ ಗುರುವಾರ (ನ.21) ಬಂಧಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಕೆಲವೊಮ್ಮೆ ನಾವು ಜೀವನದಲ್ಲಿ ತಾಮಷೆಗಾಗಿ ಮಾಡುವ ಅದೆಷ್ಟೋ ಚೇಷ್ಟೆಗಳು ಗಂಭೀರ ಪರಿಣಾಮ ಭೀರುವುದನ್ನು ಕಾಣುತ್ತೇವೆ. ಏನೋ ಮಾಡಲು ಹೋಗಿ ಅದು ಮತ್ತೇನೋ ಊಹಿಸಲಾಗದ ಸಮಸ್ಯೆಯನ್ನು ತೊಂದೊಡ್ಡುತ್ತದೆ. ಇದೀಗ ಮಹರಾಷ್ಟ್ರದಲ್ಲಿ ನಡೆದ ಘಟನೆಯೂ ಅದಕ್ಕೆ ಹೊರತಾಗಿಲ್ಲ.

ಥಾಣೆಯ ಪ್ರೇಮ್ ನಗರದಲ್ಲಿರುವ ತನ್ನ ಮನೆಯಿಂದ ಮಗು ನವೆಂಬರ್ 18ರಂದು ಕಾಣೆಯಾಗಿತ್ತು. ಮಗು ಕಾಣೆಯಾದ ನಂತರ, ತಾಯಿಯ ದೂರಿನ ಮೇರೆಗೆ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಹಿಲ್ ಲೈನ್ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ಮಗುವಿನ ಶ*ವ ಪತ್ತೆಯಾಗಿದೆ. ಮ*ರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ವಲಯ 4) ಸಚಿನ್ ಗೋರೆ ತಿಳಿಸಿದ್ದರು.

ತೀವ್ರ ತನಿಖೆಯ ಬಳಿಕ, ಮಗುವಿನ ಸೋದರ ಮಾವ 30ರ ಹರೆಯದ ಆರೋಪಿ ಅ*ಪರಾಧವನ್ನ ಒಪ್ಪಿಕೊಂಡಿದ್ದಾನೆ ಆದರೆ ತಾನು ಮಗುವನ್ನ ಉದ್ದೇಶಪೂರ್ವಕವಾಗಿ ಕೊಂ*ದಿಲ್ಲವೆಂಬುವುದಾಗಿ ಸಂತಾಪ ಸೂಚಿಸಿದ್ದಾನೆ. “ಅವಳೊಂದಿಗೆ ಆಟವಾಡುತ್ತಿದ್ದಾಗ ತಮಾಷೆಯಾಗಿ ಕಪಾಳಕ್ಕೆ ಹೊಡೆದಿದ್ದು, ಮಗು ಅಡುಗೆಮನೆಯ ಸ್ಲ್ಯಾಬ್ಗೆ ಡಿ*ಕ್ಕಿ ಹೊಡೆದು ಸಾ*ವನ್ನಪ್ಪಿದೆ” ಎಂದು ಹೇಳಿದ್ದಾನೆ.

ಬಳಿಕ, ಹೆದರಿ ಮಗುವಿನ ಶ*ವವನ್ನ ಮುಂಬೈನ ಉಲ್ಹಾಸ್ ನಗರದ ಬಳಿಯ ಪೊದೆಗಳಲ್ಲಿ ಎಸೆದಿದ್ದಾನೆ. ಸಧ್ಯ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡು, ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Continue Reading

NATIONAL

ಕೂಚ್ ಬೇಹರ್ ಟ್ರೋಫಿ: ದ್ವಿಶತಕ ಸಿಡಿಸಿದ ಮರಿ ಸೆಹ್ವಾಗ್

Published

on

ಮಂಗಳೂರು/ದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ತಮ್ಮ ಆಟದ ಮೂಲಕವೇ ಇಡೀ ವಿಶ್ವದ ಗಮನ ಸೆಳೆದಿದ್ದ ದಾಂಡಿಗ. ಈಗ ಅವರ ಮಗ, ಆರ್ಯವೀರ್ ಸೆಹ್ವಾಗ್ ಕೂಚ್ ಬೆಹರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ ಅದ್ಬುತ ದ್ವಿಶತಕ ಸಿಡಿಸಿದ್ದಾರೆ.

ಭಾರತೀಯ ಕ್ರಿಕೆಟ್ ಕಂಡಂತಹ ಅದ್ಬುತ ಕ್ರಿಕೆಟಿಗ ಸೆಹ್ವಾಗ್, ಭಾರತದ ಪರ ಎಲ್ಲಾ ಮೂರು ಸ್ವರೂಪಗಳ ಕ್ರಿಕೆಟ್ ಆಡಿದ್ದರು. ಇದಲ್ಲದೆ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಈಗ ಅವರ ಮಗನ ಸರದಿ.

ಇದನ್ನೂ ಓದಿ:ನೀರಸ ಪ್ರದರ್ಶನ ಮುಂದುವರಿಸಿದ ಭಾರತ: ವಿವದಾತ್ಮಕ ತೀರ್ಪಿಗೆ ರಾಹುಲ್ ಬಲಿ !
ಆರ್ಯವೀರ್ ಸೆಹ್ವಾಗ್:
ಆರ್ಯವೀರ್ ಅವರು ಕಳೆದ ತಿಂಗಳು ದೆಹಲಿ ಅಂಡರ್-19 ಕ್ರಿಕೆಟ್ ತಂಡಕ್ಕೆ ಸ್ಥಾನ ಪಡೆದಿದ್ದರು. ಈಗ ಕೂಚ್ ಬೆಹರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ ದೆಹಲಿ ಪರ ಸ್ಮರಣೀಯ ಇನ್ನಿಂಗ್ಸ್ ಆಡಿ 229 ಎಸೆತಗಳಲ್ಲಿ 200 ರನ್ ಸಿಡಿಸಿ ತಂದೆಗೆ ತಕ್ಕ ಮಗ ಎಂದು ನಿರೂಪಿಸಿದ್ದಾರೆ.
ಮೇಘಾಲಯ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಯಿತು. ಕೇವಲ 104.3 ಓವರ್ ಗಳಲ್ಲಿ 260 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಇದಾದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ ಮತ್ತು ಅರ್ನವ್ ಬುಗ್ಗಾ ಭರ್ಜರಿ ಆಟವಾಡಿದರು. ಮೊದಲ ವಿಕೆಟ್ ಗೆ 180 ರನ್ ಗಳ ಜೊತೆಯಾಟವಾಡಿ, ಅರ್ನವ್ ಬುಗ್ಗಾ ಕೂಡ ಶತಕ ಗಳಿಸಿ 114 ರನ್ ಗೆ ಔಟಾದರು. ಡೆಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 468 ರನ್ ಗಳಿಸಿದೆ.
ಅಪ್ಪನ ಹಾದಿಯನ್ನೇ ಹಿಡಿದ ಆರ್ಯವೀರ್ ಸೆಹ್ವಾಗ್ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಬಹುದು ಎಂಬ ನಿರೀಕ್ಷೆ ಮೂಡಿದೆ.

Continue Reading

LATEST NEWS

Trending

Exit mobile version