ಸಮಾಜದ ಎಲ್ಲಾ ಎಲ್ಲೆಗಳನ್ನೂ ಮೀರಿ ಯುವಕನೊಬ್ಬ ತನ್ನ ತಾಯಿಗೆ ಮರು ಮದುವೆ ಮಾಡಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಬ್ದುಲ್ ಅಹದ್ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಸುವ ಮೂಲಕ ಭಾರೀ ಸುದ್ಧಿಯಲ್ಲಿದ್ದಾನೆ.
ಮಕ್ಕಳಿರುವ ತಾಯಿಗೆ ಒಂದು ವೇಳೆ ಡಿವೋರ್ಸ್ ಬಳಿಕ ಅಥವಾ ಗಂಡ ತೀರಿ ಹೋದ ಬಳಿಕ ಎರಡನೇ ಮದುವೆಯಾದರೆ ಸಮಾಜ ನೂರೊಂದು ಕೊಂಕು ಮಾತುಗಳನ್ನಾಡುತ್ತದೆ “ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ” ಎನ್ನುತ್ತಾ ತಾಯಿಯ ಖುಷಿಗಾಗಿ ತಾನೇ ಮುಂದೆ ನಿಂತು ಅಹದ್ ಎರಡನೇ ಮದುವೆ ಮಾಡಿಸಿದ್ದಾನೆ. ಈ ಹೃದಯಸ್ಪರ್ಶಿ ಕಥೆಯನ್ನು ಅಹದ್ (muserft.ahad) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಒಬ್ಬ ಬಳಕೆದಾರರು “ನೀವು ನಿಮ್ಮ ತಾಯಿಯ ಖುಷಿಗಾಗಿ ಬಹಳ ಅದ್ಭುತ ಕೆಲಸವನ್ನು ಮಾಡಿದ್ದೀರಿ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು “ನಿಜವಾಗಿಯೂ ಒಂಟಿಯಾಗಿ ಬದುಕುವುದು ತುಂಬಾ ಕಷ್ಟ, ಪ್ರತಿಯೊಬ್ಬರಿಗೂ ಸುಖ ದುಃಖವನ್ನು ಹಂಚಿಕೊಳ್ಳಲು ಸಂಗಾತಿಯ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಹದ್‌ನ ಈ ನಡೆಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
ಮಂಗಳೂರು/ಕ್ಯಾಲಿಫೋರ್ನಿಯಾ : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ವಾಣಿಜ್ಯ ಕಟ್ಟಡವೊಂದಕ್ಕೆ ಲಘು ವಿಮಾನ ಡಿಕ್ಕಿಯಾಗಿದೆ. ಈ ದುರಂತದಲ್ಲಿ ಇಬ್ಬರು ಮೃ*ತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.
ಲಾಸ್ ಏಂಜಲೀಸ್ ನಿಂದ ಆಗ್ನೇಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಪುಲ್ಲೆರ್ಟನ್ ಮುನಿಸಿಪಲ್ ವಿಮಾನ ನಿಲ್ದಾಣದ ಸಮೀಪ ಗುರುವಾರ ಮಧ್ಯಾಹ್ನ 2ರ ಸುಮಾರಿಗೆ ವಿಮಾನವು ಕಟ್ಟಡಕ್ಕೆ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೀಠೋಪಕರಣ ತಯಾರಿಕಾ ಕಂಪನಿಯ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತಕ್ಕೀಡಾದ ವಿಮಾನ ‘Van’s RV-10’ ಎಂದು ತಿಳಿಸಿರುವ ಫೆಡರಲ್ ವಿಮಾನಯಾನ ಅಧಿಕಾರಿಗಳು, ಘಟನೆ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೊಂದಿಗೆ ತನಿಖೆ ನಡೆಸುವುದಾಗಿ ಹೇಳಿದೆ. ಹತ್ತು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ಮಂದಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ ಎಂದು ಪುಲ್ಲರ್ಟನ್ ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ವಿಮಾನದಲ್ಲಿ ಎಷ್ಟು ಮಂದಿ ಇದ್ದರು, ಮೃ*ತಪಟ್ಟಿರುವವರು ವಿಮಾನದಲ್ಲಿದ್ದವರೇ ಅಥವಾ ಘಟನಾ ಸ್ಥಳದಲ್ಲಿ ಇದ್ದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ಭಾನುವಾರ, ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನದಲ್ಲಿ ಭಾರಿ ದುರಂತ ಸಂಭವಿಸಿತ್ತು. ಥಾಯ್ಲೆಂಡ್ ನ ರಾಜಧಾನಿ ಬ್ಯಾಂಕಾಕ್ ನಿಂದ ಬಂದಿದ್ದ ವಿಮಾನ, ಲ್ಯಾಂಡಿಂಗ್ ವೇಳೆ ರನ್ ವೇನಿಂದ ಜಾರಿ ಕಾಂಕ್ರಿಟ್ ಗೋಡೆಗೆ ಡಿಕ್ಕಿಯಾಗಿತ್ತು. ವಿಮಾನದಲ್ಲಿದ್ದ 181 ಮಂದಿಯ ಪೈಕಿ, 179 ಜನರು ಮೃತಪಟ್ಟಿದ್ದರು.
ಮಂಗಳೂರು/ದುಬೈ: ಭಾರತದ ಅಗ್ರಗಣ್ಯ ವೇಗದ ಬೌಲರ್ ಜಸ್ ಪ್ರೀತ್ ಬೂಮ್ರಾ ಅವರು ಬುಧವಾರ ಪ್ರಕಟವಾದ ಐಸಿಸಿ ರ್ಯಾಕಿಂಗ್ ನ ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ 907 ರೇಟಿಂಗ್ ಪಾಯಿಂಟ್ ತಲುಪುವ ಮೂಲಕ ರವಿಚಂದ್ರನ್ ಹೆಸರಿನಲ್ಲಿದ್ದ ದಾಖಲೆ ಮುರಿದರು.
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಅಶ್ವಿನ್ 2016ರ ಡಿಸೆಂಬರ್ ನಲ್ಲಿ 904 ರೇಟಿಂಗ್ ಗಲಿಸಿದ್ದು ಇದುವರೆಗಿನ ಅತ್ಯಧಿಕ ಎನಿಸಿತ್ತು. ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಅವರು ಇಂಗ್ಲೆಂಡ್ ನ ಡೆರೆಕ್ ಅಂಡರ್ ವುಡ್ ಜೊತೆ 17ನೇ ಸ್ಥಾನ ಹಂಚಿಕೊಂಡಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಮೊದಲು ಬೂಮ್ರಾ ಅವರು ಅಶ್ವಿನ್ ದಾಖಲೆಯನ್ನು (904) ಸರಿಗಟ್ಟಿದ್ದರು. ಮೆಲ್ಬರ್ನ್ ನಲ್ಲಿ ಇನ್ನೊಮ್ಮೆ ಉತ್ತಮ ಪ್ರದರ್ಶನ ನೀಡಿದ್ದರಿಂದ ಅವರು ಅಗ್ರಮಾನ್ಯ ಟೆಸ್ಟ್ ಬೌಲರ್ ಸ್ಥಾನವನ್ನು ಇನ್ನಷ್ಟು ಭದ್ರಗೊಳಿಸಿದರು.
ಇನ್ನೂ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ 15 ರೇಟಿಂಗ್ ಪಾಯಿಂಟ್ಸ್ ಸಂಪಾದಿಸಿ ಮೂರನೇ ಸ್ಥಾನಕ್ಕೆ ಜಿಗಿದರು. ಅವರು ನಾಲ್ಕನೇ ಟೆಸ್ಟ್ ನಲ್ಲಿ ಆರು ವಿಕೆಟ್ ಪಡೆದು ಆಸ್ಟ್ರೇಲಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಟೆಸ್ಟ್ ಅಲ್ ರೌಂಡರ್ ಗಳ ಪಟ್ಟಿಯಲ್ಲೂ ಅವರು ಮೂರನೇ ಸ್ಥಾನ ಪಡೆದಿದ್ದಾರೆ.
ಮೆಲ್ಬರ್ನ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 82 ರನ್ ಆಟದಿಂದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಟರ್ ಗಳ ಪಟ್ಟಿಯಲ್ಲಿ ಬಡ್ತಿ ಪಡೆದಿದ್ದು ಜೀವನ ಶ್ರೇಷ್ಠ 854 ರೇಟಿಂಗ್ ಪಾಯಿಂಟ್ಸ್ ಗಳಿಸಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಆ ಟೆಸ್ಟ್ ನಲ್ಲಿ ಚೊಚ್ಚಲ ಶತಕ ಬಾರಿಸಿದ ನಿತೀಶ್ ಕುಮಾರ್ ರೆಡ್ಡಿ ಅವರ 30 ಸ್ಥಾನ ಪಡೆದು 53ನೇ ಸ್ಥಾನದಲ್ಲಿದ್ದಾರೆ.
ಮಂಗಳೂರು/ಸಿಯೋಲ್: 179 ಮಂದಿಯನ್ನು ಬಲಿ ಪಡೆದ ದಕ್ಷಿಣ ಕೊರಿಯಾ ಡೆಡ್ಲಿ ವಿಮಾನ ಅಪಘಾತದಲ್ಲಿ ಇಬ್ಬರು ಬದುಕುಳಿದಿರುವುದೇ ರೋಚಕ. ಅವರು ಹೇಗೆ ಬದುಕುಳಿದರು ಎಂಬುದಕ್ಕೆ ಕಾರಣ ನೀಡಲಾಗಿದೆ.
ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನವು ರನ್ ವೇಯಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 181 ಜನರ ಪೈಕಿ 179 ಜನರನ್ನು ಕೊಂದ ನಂತರ ಹೃದಯವಿದ್ರಾವಕ ದೃಶ್ಯಗಳು ತೆರೆದುಕೊಂಡವು.
ಈ ದುರಂತದಲ್ಲಿ ಬದುಕಿರುವ ಇಬ್ಬರೂ ವಿಮಾನ ಸಿಬ್ಬಂದಿಗಳು. ಅವರಲ್ಲಿ ಒಬ್ಬರು ಮಹಿಳೆ ಮತ್ತು ಇನ್ನೊಬ್ಬರು ಪುರುಷ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ವಿಮಾನದ ಹಿಂಬದಿ ಭಾಗದಲ್ಲಿ ಕುಳಿತು ಸೀಟ್ ಬೆಲ್ಟ್ ಧರಿಸಿ ಅಪಘಾತದಿಂದ ಪಾರಾಗಿದ್ದಾರೆ.
ವಾಣಿಜ್ಯ ವಿಮಾನಗಳಲ್ಲಿ ಮುಂಭಾಗದ ಆಸನಗಳಿಗಿಂತ ಹಿಂಭಾಗದ ಆಸನಗಳ ಭಾಗ ಸುರಕ್ಷಿತ ಸ್ಥಳವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ವಿಮಾನ ಅಪಘಾತ ಸಂಭವಿಸಿದಾಗ, ವಿಮಾನದ ಮುಂಭಾಗವೇ ಹೆಚ್ಚು ಹಾನಿಗೊಳಗಾಗುತ್ತದೆ. ಈ ಕಾರಣಕ್ಕೆ ಹಿಂಭಾಗದ ಆಸನಗಳ ಭಾಗವು ಹೆಚ್ಚು ಸುರಕ್ಷಿತ ಎಂದು ನಂಬಲಾಗಿದೆ.
ಟೈಮ್ಸ್ ಮ್ಯಾಗಜೀನ್ ನ 2015ರ ಅಧ್ಯಯನದ ಪ್ರಕಾರ, ವಿಮಾನ ಅಪಘಾತಗಳ ಸಂದರ್ಭದಲ್ಲಿ ಹಿಂಭಾಗದ ಆಸನಗಳು ಅತ್ಯಂತ ಸುರಕ್ಷಿತವಾಗಿದೆ ಎಂದು ಕಂಡುಹಿಡಿದಿದೆ. ಅಪಘಾತದ ಸಂದರ್ಭದಲ್ಲಿ ಹಿಂಭಾಗದ ಆಸನದಲ್ಲಿ ಕುಳಿತ ಪ್ರಯಾಣಿಕರ ಪೈಕಿ ಸಾವಿನ ಸಂಖ್ಯೆ ಶೇ. 32ರಷ್ಟಿದ್ದರೆ, ಮಧ್ಯಮ ಭಾಗದ ಸಾವಿನ ಪ್ರಮಾಣ ಶೇ. 39 ಮತ್ತು ಮುಂಭಾಗದಲ್ಲಿ ಸಂಭವಿಸುವ ಸಾವಿನ ಪ್ರಮಾಣ ಶೇ.38ರಷ್ಟಿರುತ್ತದೆ ಎಂಬುದು ಸಂಶೋಧನಾ ಅಧ್ಯಯನದಿಂದ ತಿಳಿದುಬಂದಿದೆ.
ಇಬ್ಬರು ಬದುಕುಳಿದವರನ್ನು ಲೀ (32) ಮತ್ತು ಕ್ವಾನ್ (25) ಎಂದು ಗುರುತಿಸಲಾಗಿದ್ದು, ಲೀ ಅವರ ಎಡ ಭುಜ ಮತ್ತು ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕರೆತಂದಾಗ ಪ್ರಜ್ಞೆ ಇತ್ತು ಎಂದು ವೈದ್ಯರು ತಿಳಿಸಿದ್ದಾಗಿ ಕೊರಿಯನ್ ಟೈಮ್ಸ್ ವರದಿ ಮಾಡಿದೆ. ಅದೇ ರೀತಿ ಕ್ವಾನ್ ಕೂಡ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದು, ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕಳೆದ ಡಿ.29(ಭಾನುವಾರ)ರಂದು ಬ್ಯಾಂಕಾಕ್ ನಿಂದ ಮುವಾನ್ ಗೆ ಮರಳುತ್ತಿದ್ದ ಜೆಜು ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737-800 ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ದುರ್ಘಟನೆಗೆ ಒಳಗಾಯಿತು. ರನ್ ವೇಯಿಂದ ಸ್ಕಿಡ್ ಆಗಿ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿತ್ತು. ಈ ಘೋರ ದುರಂತದಲ್ಲಿ ಒಟ್ಟು 179 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು.