Connect with us

    International news

    ಒಂಟಿ ತಾಯಿಗೆ ಮರು ಮದುವೆ ಮಾಡಿಸಿದ ಸುಪುತ್ರ !

    Published

    on

    ಸಮಾಜದ ಎಲ್ಲಾ ಎಲ್ಲೆಗಳನ್ನೂ ಮೀರಿ ಯುವಕನೊಬ್ಬ ತನ್ನ ತಾಯಿಗೆ ಮರು ಮದುವೆ ಮಾಡಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಬ್ದುಲ್‌ ಅಹದ್‌ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಸುವ ಮೂಲಕ ಭಾರೀ ಸುದ್ಧಿಯಲ್ಲಿದ್ದಾನೆ.

    ಮಕ್ಕಳಿರುವ ತಾಯಿಗೆ ಒಂದು ವೇಳೆ ಡಿವೋರ್ಸ್‌ ಬಳಿಕ ಅಥವಾ ಗಂಡ ತೀರಿ ಹೋದ ಬಳಿಕ ಎರಡನೇ ಮದುವೆಯಾದರೆ ಸಮಾಜ ನೂರೊಂದು ಕೊಂಕು ಮಾತುಗಳನ್ನಾಡುತ್ತದೆ “ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ” ಎನ್ನುತ್ತಾ ತಾಯಿಯ ಖುಷಿಗಾಗಿ ತಾನೇ ಮುಂದೆ ನಿಂತು ಅಹದ್‌ ಎರಡನೇ ಮದುವೆ ಮಾಡಿಸಿದ್ದಾನೆ. ಈ ಹೃದಯಸ್ಪರ್ಶಿ ಕಥೆಯನ್ನು ಅಹದ್‌ (muserft.ahad) ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

    ಒಬ್ಬ ಬಳಕೆದಾರರು “ನೀವು ನಿಮ್ಮ ತಾಯಿಯ ಖುಷಿಗಾಗಿ ಬಹಳ ಅದ್ಭುತ ಕೆಲಸವನ್ನು ಮಾಡಿದ್ದೀರಿ” ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು “ನಿಜವಾಗಿಯೂ ಒಂಟಿಯಾಗಿ ಬದುಕುವುದು ತುಂಬಾ ಕಷ್ಟ, ಪ್ರತಿಯೊಬ್ಬರಿಗೂ ಸುಖ ದುಃಖವನ್ನು ಹಂಚಿಕೊಳ್ಳಲು ಸಂಗಾತಿಯ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಹದ್‌ನ ಈ ನಡೆಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    International news

    ಆಕಾಶದಿಂದ ಬಿತ್ತು 500 ಕೆಜಿ ತೂಕದ ಹೊಳೆಯುವ ರಿಂಗ್..! ಏನಿದು ವಿಚಿತ್ರ..?

    Published

    on

    ಮಂಗಳೂರು/ಕೀನ್ಯಾ :  2025ರಲ್ಲಿ ಭೂಮಿಯ ಮೇಲೆ ಭಾಹ್ಯಾಶದಿಂದ ಉಲ್ಕೆಗಳು ಅಥವಾ ಏಲಿಯನ್ ದಾಳಿ ಆಗಬಹುದು ಅಂತ ಕಾಲಜ್ಞಾನಿ ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾನೆ. ಇದಕ್ಕೆ ಪೂರಕ ಎಂಬಂತೆ ಒಂದು ಘಟನೆ ನಡೆದಿದ್ದು, ಆಕಾಶದಿಂದ 500 ಕೆಜಿ ತೂಕದ ಉಂಗುರವೊಂದು ಭೂಮಿಗೆ ಅಪ್ಪಳಿಸಿದೆ. ಹಾಗಂತ ಇದು ಏಲಿಯನ್ ಅಥವಾ ಕ್ಷುದ್ರಗ್ರಹಗಳಿಂದ ಸಿಡಿದ ಉಂಗುರ ಅಲ್ಲ ಅಂತ ವಿಜ್ಞಾನಿಗಳು ಸ್ಪಷ್ಟ ಪಡಿಸಿದ್ದಾರೆ.

    ಈ ಬೃಹದಾಕಾರದ ಉಂಗುರ ಕೀನ್ಯಾ ದೇಶದ ಉತ್ತರದಲ್ಲಿರುವ ಮುಕುನಿ ಕೌಂಟಿಯ ಮುಕುಕು ಗ್ರಾಮದ ಮೇಲೆ ಬಂದು ಬಿದ್ದಿದೆ. ಇದು ಅಂದಾಜು 500 ಕೆ.ಜಿ ಭಾರ ಇರಬಹುದು ಅಂತ ಊಹಿಸಲಾಗಿದ್ದು, ಸದ್ಯಕ್ಕೆ ಈ ಉಂಗುರ ಬಿದ್ದ ಜಾಗವನ್ನು ಕೀನ್ಯಾ ಬಾಹ್ಯಾಕಾಶ ಸಂಸ್ಥೆ(KSA) ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದೆ. ಸುಮಾರು ಎಂಟು ಅಡಿ ವ್ಯಾಸದ ಬೃಹತ್ ಲೋಹದ ಉಂಗುರ ಇದಾಗಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ಇದು ಭೂಮಿಯಿಂದ ಅಂತರಿಕ್ಷಕ್ಕೆ ಉಡಾವಣೆಯಾದ ಉಡಾವಣಾ ವಾಹನದ ಭಾಗ ಎಂದು ಅಂದಾಜಿಸಲಾಗಿದೆ. ಆಕಾಶಕ್ಕೆ ನೆಗೆಯುವ ಉಡಾವಣಾ ವಾಹನಗಳು ಹಂತ ಹಂತವಾಗಿ ಕಳಚುವ ಸಮಯದಲ್ಲಿ ಬೇರ್ಪಟ್ಟ ಭಾಗ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

    ಕೀನ್ಯಾದಲ್ಲಿ ಈ ಘಟನೆ ಮೊದಲ ಬಾರಿಗೆ ನಡೆದಿದೆಯಾದ್ರೂ ಕಳೆದ ಕೆಲವು ವರ್ಷಗಳಲ್ಲಿ ಇಂತಹ ಘಟನೆಗಳು ಭೂಮಿಯ ಅಲ್ಲಲ್ಲಿ ನಡಿತಾ ಇದೆ. ಬಾಹ್ಯಾಕಾಶದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ರಾಕೇಟ್‌ ಲಾಂಚರ್ಗಳ ಅವಶೇಷಗಳು ಭೂಮಿಗೆ ಅ*ಪಾಯ ತಂದೊಡ್ಡುತ್ತಿದೆ. ಕಳೆದ ವರ್ಷ ಇಂತಹದೇ ಒಂದು ಘಟನೆ ಫ್ಲೋರಿಡಾದಲ್ಲಿ ನಡೆದಿದ್ದು, ಆಕಾಶದಿಂದ ಬಿದ್ದ ಲೋಹದ ತುಂಡು ಮನೆಯೊಂದಕ್ಕೆ ಹಾನಿ ಮಾಡಿತ್ತು. ಇದಕ್ಕೆ ಮನೆಯವರು ನಾಸಾದ ವಿರುದ್ಧ ಕೇಸು ದಾಖಲಿಸಿದ್ದರು. ಇದಲ್ಲದೆ, 2024 ರ ಫೆಬ್ರವರಿಯಲ್ಲಿ ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಇಂತಹ ಒಂದು ಬೃಹತ್ ವಸ್ತು ಉತ್ತರ ಪೆಸಿಫಿಕ್ ಮಹಾಸಾಗರದ ಮೇಲೆ ಬಿದ್ದಿರುವುದಾಗಿ ಹೇಳಿತ್ತು.

    ಇದನ್ನೂ ಓದಿ : ಚೀನಾದ ನಿಗೂಢ ವೈರಸ್ ಕುರಿತು ಆರೋಗ್ಯ ಸಂಸ್ಥೆ ಮಾಹಿತಿ !

    ಬಾಹ್ಯಾಕಾಶದಲ್ಲಿ ಲೋ ಅರ್ಥ್ ಆರ್ಬಿಟ್ ( LEO ) ವಿಶ್ವದ ಅತೀ ದೊಡ್ಡ ಕಸದ ಡಂಪ್ ಎಂದು ಪರಿಗಣಿಸಲಾಗಿದೆ. ನಾಸಾ ಪ್ರಕಾರ, ಭೂಮಿಯ ಕಕ್ಷೆಯಲ್ಲಿ ಸುಮಾರು ಆರು ಸಾವಿರ ಟನ್‌ ಇಂತಹ ತ್ಯಾಜ್ಯಗಳು ಸುತ್ತುತ್ತಿವೆ. ಇದು ಸಾಮಾನ್ಯವಾಗಿ ಉಂಟಾಗುವ ಘರ್ಷಣೆಯಿಂದ ಭೂಮಿಗೆ ಅಪ್ಪಳಿಸುತ್ತಿವೆ ಎಂದು ಹೇಳಿದೆ.

    Continue Reading

    International news

    ಚೀನಾದ ನಿಗೂಢ ವೈರಸ್ ಕುರಿತು ಆರೋಗ್ಯ ಸಂಸ್ಥೆ ಮಾಹಿತಿ !

    Published

    on

    ಮಂಗಳೂರು/ಬೀಜಿಂಗ್ : ಚೀನಾದಲ್ಲಿ ಕೊರೊನಾ ವೈರಸ್ ಮಾದರಿಯ ಹೂಮನ್ ಮೆಟಾಪ್ ನ್ಯುಮೋ (HMPV) ಸೋಂಕು ಹರಡಿ ಭಾರೀ ಆತಂಕ ಸೃಷ್ಟಿಸಿದೆ.

    ಈ ಹಿಂದೆ ಚೀನಾದಲ್ಲಿ ಜನ್ಮ ತಾಳಿದ್ದ ಕೊರೊನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನು ಆವರಿಸಿ, ಲಾಕ್ ಡೌನ್ ಪರಿಸ್ಥಿತಿಗೆ ದೂಡಿತ್ತು. ವೈರಲ್ ಸೋಂಕಿಗೆ ಲೆಕ್ಕವಿಲ್ಲದಷ್ಟು ಜನ ಜೀವವನ್ನು ಕಳೆದುಕೊಂಡರು. ಅಂದು ಜನರನ್ನು ಕಾಡಿದ್ದ ಕೋವಿಡ್ ಈಗ ಐದು ವರ್ಷಗಳ ನಂತರ ಮತ್ತೊಂದು ರೂಪದಲ್ಲಿ ಚೀನಾದಲ್ಲಿ ಪತ್ತೆಯಾಗಿರುವುದು ಸದ್ಯ ಜಗತ್ತನ್ನು ಭಾರೀ ಆತಂಕಕ್ಕೆ ದೂಡಿದೆ.

    ಭಾರತೀಯ ಆರೋಗ್ಯ ಸಂಸ್ಥೆ ಮಾಹಿತಿ
    ಕೋವಿಡ್ ನ ರೀತಿಯಲ್ಲಿ ಪತ್ತೆಯಾಗಿರುವ ಈ ವೈರಸ್ ನ ಹೆಸರು ಹ್ಯೂಮನ್ ಮೆಟಾಪ್ ನ್ಯುಮೋ ವೈರಸ್ (HMPV) ಎಂದು ಹೇಳಲಾಗಿದೆ. ಈ ಖಾಯಿಲೆ ಕೋವಿಡ್ ನಷ್ಟೇ ಮಾರಕ ಎನ್ನಲಾಗಿದ್ದು, ಈಗಾಗಲೇ ಹಲವರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ಚೀನಾದ ಆಸ್ಪತ್ರೆಗಳಲ್ಲಿ ಹಾಸಿಗೆಯು ಸಿಗದಷ್ಟು ರೋಗಿಗಳು ಆವರಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಕುರಿತು ಭಾರತೀಯ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿದ್ದು, ಯಾರೂ ಸಹ ಆತಂಕ, ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

    ಇದನ್ನೂ ಓದಿ: ಚೀನಾದಲ್ಲಿ ಮತ್ತೆ ವೈರಸ್‌ ಸ್ಫೋಟ; ರೋಗಿಗಳಿಂದ ತುಂಬಿ ತುಳುಕುತ್ತಿವೆ ಆಸ್ಪತ್ರೆಗಳು

    ಈ ಬಗ್ಗೆ ಮಾತನಾಡಿದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (DGHS) ಡಾ. ಅತುಲ್ ಗೋಯೆಲ್, ‘ಎಚ್ಚರಿಕೆಯ ಅಗತ್ಯವಿಲ್ಲ, ಅಲಾರಂ ಬೇಕಿಲ್ಲ. ಚೀನಾದಲ್ಲಿ HMPV ನಿಗೂಢ ವೈರಸ್ ಶೀತವನ್ನು ಉಂಟುಮಾಡುವ ಇತರೆ ಉಸಿರಾಟದ ವೈರಸ್ ನಂತೆ. ಇದು ಶೀತ-ಕೆಮ್ಮು ರೋಗ ಲಕ್ಷಣಗಳನ್ನು ತೋರಿಸುತ್ತದೆ. ಇದಕ್ಕೆ ತೀರ ಭಯ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.

    ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ಅಂತರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ನಾವು ಇಲ್ಲಿನ ಪರಿಸ್ಥಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಮಾಹಿತಿಯನ್ನು ಆಗಾಗ್ಗೆ ಅಪ್ಡೇಟ್ ಮಾಡುತ್ತಿರುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ನವೀಕರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

    HMPV ವೈರಸ್ ಲಕ್ಷಣಗಳು ಏನು ?
    ಕೆಮ್ಮು, ಜ್ವರ, ಮೂಗು ಕಟ್ಟುವುದು, ಶೀತ ಈ ವೈರಸ್ ನ ಸಾಮಾನ್ಯ ಲಕ್ಷಣಗಳಾಗಿವೆ. HMPV ವೈರಸ್ ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಆಗಾಗ್ಗೆ ಕೈ ತೊಳೆಯುವುದಾಗಿದೆ. ಜೊತೆಗೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿದೆ.

    Continue Reading

    International news

    ಕ್ಯಾಲಿಫೋರ್ನಿಯಾದಲ್ಲಿ ವಿಮಾನ ದುರಂತ !

    Published

    on

    ಮಂಗಳೂರು/ಕ್ಯಾಲಿಫೋರ್ನಿಯಾ : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ವಾಣಿಜ್ಯ ಕಟ್ಟಡವೊಂದಕ್ಕೆ ಲಘು ವಿಮಾನ ಡಿಕ್ಕಿಯಾಗಿದೆ. ಈ ದುರಂತದಲ್ಲಿ ಇಬ್ಬರು ಮೃ*ತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.

    ಲಾಸ್ ಏಂಜಲೀಸ್ ನಿಂದ ಆಗ್ನೇಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಪುಲ್ಲೆರ್ಟನ್ ಮುನಿಸಿಪಲ್ ವಿಮಾನ ನಿಲ್ದಾಣದ ಸಮೀಪ ಗುರುವಾರ ಮಧ್ಯಾಹ್ನ 2ರ ಸುಮಾರಿಗೆ ವಿಮಾನವು ಕಟ್ಟಡಕ್ಕೆ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಸೈಬರ್ ಕ್ರೈಮ್ ಅಪರಾಧ; ವಾಟ್ಸಪ್ ಗೆ ಅಗ್ರಸ್ಥಾನ !

    ಪೀಠೋಪಕರಣ ತಯಾರಿಕಾ ಕಂಪನಿಯ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಅಪಘಾತಕ್ಕೀಡಾದ ವಿಮಾನ ‘Van’s RV-10’ ಎಂದು ತಿಳಿಸಿರುವ ಫೆಡರಲ್ ವಿಮಾನಯಾನ ಅಧಿಕಾರಿಗಳು, ಘಟನೆ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೊಂದಿಗೆ ತನಿಖೆ ನಡೆಸುವುದಾಗಿ ಹೇಳಿದೆ. ಹತ್ತು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ಮಂದಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ ಎಂದು ಪುಲ್ಲರ್ಟನ್ ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

    ವಿಮಾನದಲ್ಲಿ ಎಷ್ಟು ಮಂದಿ ಇದ್ದರು, ಮೃ*ತಪಟ್ಟಿರುವವರು ವಿಮಾನದಲ್ಲಿದ್ದವರೇ ಅಥವಾ ಘಟನಾ ಸ್ಥಳದಲ್ಲಿ ಇದ್ದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಕಳೆದ ಭಾನುವಾರ, ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನದಲ್ಲಿ ಭಾರಿ ದುರಂತ ಸಂಭವಿಸಿತ್ತು. ಥಾಯ್ಲೆಂಡ್ ನ ರಾಜಧಾನಿ ಬ್ಯಾಂಕಾಕ್ ನಿಂದ ಬಂದಿದ್ದ ವಿಮಾನ, ಲ್ಯಾಂಡಿಂಗ್ ವೇಳೆ ರನ್ ವೇನಿಂದ ಜಾರಿ ಕಾಂಕ್ರಿಟ್ ಗೋಡೆಗೆ ಡಿಕ್ಕಿಯಾಗಿತ್ತು. ವಿಮಾನದಲ್ಲಿದ್ದ 181 ಮಂದಿಯ ಪೈಕಿ, 179 ಜನರು ಮೃತಪಟ್ಟಿದ್ದರು.

    Continue Reading

    LATEST NEWS

    Trending