ಮಂಗಳಖೂರು/ಹೈದರಾಬಾದ್: ಗರ್ಭಿಣಿ ಪತ್ನಿಯನ್ನು ಪತಿಯೇ ಕೊಂ*ದು ಶ*ವವನ್ನು ತುಂ*ಡು ತುಂ*ಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿರುವ ಭಯಾನಕ ಘಟನೆ ಹೈದರಬಾದ್‌ನ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ನಡೆದಿದೆ.
ಕೊ*ಲೆಯಾದ ಮಹಿಳೆಯನ್ನು ವೆಂಕಟ ಮಾಧವಿ(35) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ನಿವೃತ್ತ ಯೋಧ ಗುರುಮೂರ್ತಿ ಕೊ*ಲೆ ಮಾಡಿದ ಆರೋಪಿ.
ಕ್ಷುಲ್ಲಕ ಕಾರಣಕ್ಕೆ ಪ್ರತಿನಿತ್ಯ ಜಗಳ :
ಪ್ರಾಥಮಿಕ ತನಿಖೆ ವೇಳೆ, ಕೆಲ ದಿನಗಳಿಂದ ಪತಿ – ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಮೀರ್‌ಪೇಟೆ ಪೊಲೀಸರಿಗೆ ತಿಳಿದು ಬಂದಿದೆ. ಬಳಿಕ ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ವೇಳೆ ಅಸಲಿ ಸತ್ಯ ಹೊರ ಬಿದ್ದಿದೆ. ಪತ್ನಿ ವೆಂಕಟ ಮಾಧವಿಯನ್ನು ತಾನೇ ಕೊಂ*ದಿರುವುದಾಗಿ ಪತಿ ಒಪ್ಪಿಕೊಂಡಿದ್ದಾನೆ. ಶ*ವವನ್ನು ತುಂ*ಡು ತುಂ*ಡಾಗಿ ಕ*ತ್ತರಿಸಿ ಕುಕ್ಕರ್ ನಲ್ಲಿ ಬೇ*ಯಿಸಿದ್ದೆ ಎಂದು ಬಾಯ್ಬಿಟ್ಟಿದ್ದಾನೆ. ಹೀಗೆ ಕುಕ್ಕರ್‌ನಲ್ಲಿ ಬೇ*ಯಿಸಿದ್ದ ದೇ*ಹದ ಭಾ*ಗಗಳನ್ನು ಬಳಿಕ ಚೀಲದಲ್ಲಿ ಸುತ್ತಿ ಜಿಲ್ಲೇಲಗೂಡ ಕೆರೆಯಲ್ಲಿ ಎಸೆದಿದ್ದೇನೆ ಎಂದು ಪೊಲೀಸರಿಗೆ ನಡೆದ ಸಂಗತಿಯನ್ನು ಆರೋಪಿ ಪತಿ ತಿಳಿಸಿದ್ದಾನೆ.
ಸದ್ಯ ಪೊಲೀಸರು ಗುರುಮೂರ್ತಿ ಹೇಳಿದ ವಿಷಯಗಳನ್ನು ದಾಖಲಿಸಿಕೊಂಡಿದ್ದು, ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮೃ*ತದೇಹದ ಕುರುಹುಗಳಿಗಾಗಿ ಜಿಲ್ಲಾಲಗೂಡ ಹೊಂಡದಲ್ಲಿ ಶೋಧ ಕೂಡಾ ನಡೆಸಲಾಗಿದೆ.
ಎಕ್ಸ್ ಆರ್ಮಿ ಮ್ಯಾನ್ :
ಗುರುಮೂರ್ತಿ ಈ ಹಿಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದ. ಪ್ರಸ್ತುತ ಕಾಂಚನ್‌ಬಾಗ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಗುರುಮೂರ್ತಿ 13 ವರ್ಷಗಳ ಹಿಂದೆ ವೆಂಕಟಮಾಧವಿ ಅವರನ್ನು ವಿವಾಹವಾಗಿದ್ದದ್ದು, ದಂಪತಿಗೆ 2 ಮಕ್ಕಳಿದೆ. ತೂಪ್ರಾನಪೇಟೆಯ ದಂಡುಪಲ್ಲಿ ಪ್ರದೇಶದಲ್ಲಿ ಈ ದಂಪತಿ ವಾಸವಾಗಿದ್ದರು. ವೆಂಕಟಮಾಧವಿ ವಿರುದ್ಧ ನಾಪತ್ತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಶೀಘ್ರವೇ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ ಎಂದು ಮೀರ್‌ಪೇಟ್ ಸಿಐ ನಾಗರಾಜು ತಿಳಿಸಿದ್ದಾರೆ.
ಮಂಗಳೂರು/ಹೈದರಾಬಾದ್ : ಸಾಮಾನ್ಯವಾಗಿ ಶಾಲೆ ಬಿಟ್ಟ ನಂತರ ಮಕ್ಕಳು ಕ್ರಿಕೆಟ್ ಆಡಲು ಹೋಗುವಂತೆ ಆತನೂ ಸಹ ಶಾಲೆಯಿಂದ ಬಂದು ತಕ್ಷಣವೇ ಕ್ರಿಕೆಟ್ ಆಡಲು ಹೋಗುತ್ತಿದ್ದ.
ತನ್ನ ಹಿರಿಯ ಮಗನಂತೆ ಇವನೂ ಸಹ ಓದಿನಲ್ಲಿ ಮುಂದಿರಬೇಕು ಎಂದು ಇಚ್ಛಿಸುತ್ತಿದ್ದ ತಾಯಿಯ ಕೋಪಕ್ಕೆ ಗುರಿಯಾದ ಘಟನೆಗಳು ಹಲವು. ಹೇಗೆ ತಾಯಿಯ ಕೋಪಕ್ಕೆ ಗುರಿಯಾದ ಹುಡುಗ ಈಗ ಪೋಷಕರ ಕನಸನ್ನು ನನಸು ಮಾಡಿದ್ದಾನೆ.
ಆತನ ಹೆಸರೇ ಮೊಹಮ್ಮದ್ ಸಿರಾಜ್. ಟೀಂ ಇಂಡಿಯಾದ ಸ್ಟಾರ್ ವೇಗಿ ಸಿರಾಜ್ ಬಡತನದಿಂದಲೇ ಬೆಳೆದು ಬಂದವರು. ಇವರ ತಂದೆ ಆಟೋ ಓಡಿಸುತ್ತಿದ್ದರು. ಟೆನ್ನಿಸ್ ಬಾಲ್‌ನಲ್ಲಿಯೇ ಕ್ರಿಕೆಟ್ ಆಡುತ್ತಿದ್ದ ಸಿರಾಜ್ ಇನ್ನಷ್ಟೇ ಸರಿಯಾದ ಕ್ರಿಕೆಟ್‌ಗೆ ಹೊಂದಿಕೊಳ್ಳಬೇಕಿತ್ತು. ಅಷ್ಟರಲ್ಲೇ ಆತನಿಗೆ 2 ದಿನಗಳ ಕಾಲ ನಡೆಯುವ ಪಂದ್ಯದಲ್ಲಿ ಚಾರ್ಮಿನರ್ ಕ್ರಿಕೆಟ್ ಕ್ಲಬ್‌ಗೆ ಆಡುವ ಅವಕಾಶ ಒದಗಿ ಬಂದಿತ್ತು. ಆದರೆ ಟೂರ್ನಮೆಂಟ್‌ನಲ್ಲಿ ಆಡಲು ಸಿರಾಜ್ ಬಳಿ ಸರಿಯಾದ ಶೂ ಸಹ ಇರಲಿಲ್ಲ. ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಚಾರ್ಮಿನಾರ್ ಕ್ರಿಕೆಟ್ ಕ್ಲಬ್‌ನಲ್ಲಿ ಆಡಿದ ನಂತರ ಸಿರಾಜ್ ಹಿಂತಿರುಗಿ ನೋಡಲಿಲ್ಲ.
ರಣಜಿಯಲ್ಲಿ ಆಡಲು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಿರಾಜ್, 41 ವಿಕೆಟ್‌ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 3ನೇ ಆಟಗಾರನಾಗಿ ಗುರುತಿಸಿಕೊಂಡರು.
ನಂತರ ಇರಾನಿ ಟ್ರೋಫಿಯಲ್ಲೂ ಆಯ್ಕೆಯಾದ ಸಿರಾಜ್ ಸಿರಾಜ್ 2017ರಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ತನ್ನ ತವರು ರಾಜ್ಯ ಆಂಧ್ರಪ್ರದೇಶದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 2.6 ಕೋಟಿ ರೂ ಗೆ ಮಾರಾಟವಾದರು.
ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದ ನಂತರ ಸಿರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ, “ಐಪಿಎಲ್ ಹರಾಜಿನಿಂದ ಪಡೆದ ಹಣದಿಂದ ಒಂದಷ್ಟು ಸಾಲ ತೀರಿಸಬೇಕಿದೆ. ನಂತರ ಪೋಷಕರಿಗೆ ಮನೆ ಖರೀದಿಸಲು ಹಣ ನೀಡುತ್ತೇನೆ, ಬಹುಶಃ ಇನ್ನು ಮುಂದೆ ನನ್ನ ತಂದೆ ಆಟೋ ರಿಕ್ಷಾ ಚಾಲಕರಾಗಿರುವ ಅಗತ್ಯವಿಲ್ಲ” ಎಂದು ಹೇಳಿದ್ದರು.
ನಂತರ ಟೀಮ್ ಇಂಡಿಯಾಗೆ ಆಯ್ಕೆಯಾದ ಸಿರಾಜ್, ಸ್ಟಾರ್ ವೇಗಿಯಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಐಸಿಸಿ ಟ್ರೋಫಿ ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.
ಸಿರಾಜ್ 36 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 100 ವಿಕೆಟ್ ಪಡೆದಿದ್ದಾರೆ. 44 ಏಕದಿನ ಪಂದ್ಯಗಳನ್ನು ಆಡಿದ್ದು, 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ 16 ಟಿ20 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಸಿರಾಜ್ ಅವರ13 ಕೋಟಿ ರೂಪಾಯಿ ಮನೆ
2023 ರಲ್ಲಿ ನಿರ್ಮಿಸಲಾದ ಸಿರಾಜ್ ಅವರ ಐಷಾರಾಮಿ ಮನೆಯ ಮೌಲ್ಯ ಸುಮಾರು 13 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸಿರಾಜ್ ಅವರ ಐಷಾರಾಮಿ ಮನೆ ಹೈದರಾಬಾದ್‌ನ ಫಿಲಂ ಸಿಟಿಯ ಜೂಬಿಲಿ ಹಿಲ್ಸ್‌ನಲ್ಲಿದೆ. ಸಿರಾಜ್ ತಮ್ಮ ಕನಸಿನ ಮನೆಯಲ್ಲಿ ತಾವು ಗೆದ್ದ ಟ್ರೋಫಿಗಳನ್ನು ಪ್ರದರ್ಶಿಸಲು ಪ್ರತ್ಯೇಕ ಗೋಡೆಯನ್ನು ಹೊಂದಿದ್ದಾರೆ.
ಸಿರಾಜ್ ಆದಾಯದ ಮೂಲಗಳು
ಮೊಹಮ್ಮದ್ ಸಿರಾಜ್‌ರವರ ಪ್ರಮುಖ ಆದಾಯದ ಮೂಲಗಳಲ್ಲಿ ಬಿಸಿಸಿಐ ಒಪ್ಪಂದಗಳು, ಐಪಿಎಲ್ ಸಂಬಳ, ಪಂದ್ಯ ಶುಲ್ಕ ಮತ್ತು ಜಾಹೀರಾತು ಒಪ್ಪಂದಗಳು ಸೇರಿವೆ.
ಮಂಗಳೂರು: ನಗರದ ಬಿಜೈಯ ಮಸಾಜ್ ಸೆಂಟರ್‌ನಲ್ಲಿ ದಾಂಧಲೆ ನಡೆಸಿದ ಪ್ರಕರಣದ ಆರೋಪಿ ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರನನ್ನು ಪೊಲೀಸರು ಬಂಧಿಸಿದ್ದಾರೆ.
ನಗರ ಹೊರವಲಯದ ಕುಡುಪು ಬಳಿಯ ಮನೆಯಿಂದ ಪ್ರಸಾದ್ ಅತ್ತಾವರನನ್ನು ಬಂಧಿಸಲಾಗಿದೆ.
ನಗರದ ಮಸಾಜ್ ಸೆಂಟರ್ ಮೇಲೆ ರಾಮ ಸೇನಾ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರನನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಸಾದ್ ಅತ್ತವಾರ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸಂಘಟನೆಯ ಕಾರ್ಯಕರ್ತರು ಮಸಾಜ್ ಸೆಂಟರ್‌ಗೆ ನುಗ್ಗಿರುವುದಾಗಿ ಪ್ರಸಾದ್ ಅತ್ತಾವರ ಒಪ್ಪಿಕೊಂಡಿರುವುದು ವರದಿಯಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮಂಗಳೂರು : ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಆರೋಪದಲ್ಲಿ ದಾಳಿ ನಡೆಸಿ ಪಿಠೋಪಕರಣ ಧ್ವಂಸಗೊಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹಲವು ಸಮಯದಿಂದ ಸೈಲೆಂಟ್ ಆಗಿದ್ದ ಪ್ರಸಾದ್ ಅತ್ತಾವರ ನೇತೃತ್ವದ ರಾಮ ಸೇನೆಯ ಕಾರ್ಯಕರ್ತರು ಈ ಪುಂಡಾಟಿಕೆ ನಡೆಸಿದ್ದಾರೆ. ನಗರದ ಬಿಜೈ ಬಳಿ ಕಾರ್ಯಾಚರಿಸ್ತಾ ಇದ್ದ ಕಲರ್ಸ್ ಎಂಬ ಯುನಿಸೆಕ್ಸ್ ಸೆಲೂನ್ಗೆ ಈ ದಾಳಿ ನಡೆಸಲಾಗಿದೆ. ಪಾರ್ಲರ್ ನಲ್ಲಿ ನಾಲ್ವರು ಯುವತಿಯರಿದ್ದು ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಯುವತಿಯರು ಅಳುತ್ತಾ ಕೈ ಮುಗಿದರೂ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ. ಪಾರ್ಲರ್ ದಾಳಿಯ ವೇಳೆ ಕಾಂಡೋಮ್ ಸಿಕ್ಕಿದ್ದು ಹಾಗಾಗಿ ಇಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಶ್ರೀರಾಮ ಸೇನೆಯ ಪಬ್ ದಾಳಿ , ಜಾಗರಣ ವೇದಿಕೆಯ ಹೋಂ ಸ್ಟೇ ದಾಳಿಯ ಮಾದರಿಯಲ್ಲೇ ಈ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ್ದು ಅಲ್ಲದೆ ಪಾರ್ಲರ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪೀಠೋಪಕರಣಗಳನ್ನು ಹಾನಿ ಮಾಡಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉಡುಪಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಗೃಹ ಸಚಿವರು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವ್ಯಾಪಾರ ಮಾಡಲು ಎಲ್ಲರಿಗೂ ಮುಕ್ತ ಅವಕಾಶ ಇದ್ದು, ಅನೈತಿಕ ಚಟುವಟಿಕೆಯ ಅನುಮಾನ ಇದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು . ಯಾರೂ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.