Connect with us

    LATEST NEWS

    ಆನ್‌ಲೈನ್‌ ಗೇಮ್‌ ಗೀಳು..! ಹಣಕ್ಕಾಗಿ ಯುವತಿಗೆ ಕಾನ್ಸ್ಟೇಬಲ್‌ನಿಂದ ವಂಚನೆ..!

    Published

    on

    ಮಂಗಳೂರು / ಮುಂಡಗೋಡ : ಪೊಲೀಸ್ ಎಂದಾಕ್ಷಣ ಆತ ಜನರಿಗೆ ಸಹಾಯಹಸ್ತ ಚಾಚಬೇಕು. ಮೋಸಕ್ಕೊಳಗಾದವರ ನೆರವಿಗೆ ಧಾವಿಸಬೇಕು. ಆದ್ರೆ, ಇಲ್ಲೊಬ್ಬ ಪೊಲೀಸಪ್ಪ ತಾನೇ ಯುವತಿಯೊಬ್ಬಳಿಗೆ ವಂಚಿಸಿದ್ದಾನೆ.


    ಹೌದು, ಈ ಘಟನೆ ನಡೆದಿರೋದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ. ಮನೆ ಕಟ್ಟಲು ಹಣದ ಅವಶ್ಯಕತೆ ಇದೆ ಎಂದು ಯುವತಿಯೊಬ್ಬಳಿಗೆ ನಂಬಿಸಿ, ಮೋಸದಿಂದ 18 ಲಕ್ಷ ರೂಪಾಯಿಯನ್ನು ಪಡೆದುಕೊಂಡು ವಂಚಿಸಿದ್ದಾನೆ ಎಂಬ ಆರೋಪ ಮುಂಡಗೋಡ ಠಾಣೆಯ ಕಾನ್ಸ್ಟೇಬಲ್ ಗಿರೀಶ ಎಸ್.ಎಮ್ ಎಂಬಾತನ ಮೇಲೆ ಕೇಳಿ ಬಂದಿದೆ. ಈ ಬಗ್ಗೆ ರವಿವಾರ(ಜೂ.23) ರಾತ್ರಿ ಪ್ರಕರಣ ದಾಖಲಾಗಿದೆ.


    ಮುಂಡಗೋಡ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗಿರೀಶ ಎಸ್.ಎಮ್ ಎಂಬಾತನು ಮನೆ ಕಟ್ಟಲು ಹಣದ ಅವಶ್ಯಕತೆಯಿದೆ ಎಂದು ಹಾಸನ ಮೂಲದ ಯುವತಿಯನ್ನು ನಂಬಿಸಿದ್ದಾನೆ. 2018 ಏಪ್ರೀಲ್ 27 ರಿಂದ 2023ರ ಆಗಷ್ಟ್ 23ರ ವರೆಗೆ ಆನ್ ಲೈನ್ ಮೂಲಕ ಹಾಗೂ 28-04-2021ರಂದು ಮುಂಡಗೋಡದ ಕೆಎಚ್.ಬಿ ಕಾಲೋನಿಯ ಮನೆಯಲ್ಲಿ 2.50ಲಕ್ಷ ರೂಪಾಯಿ ಸೇರಿದಂತೆ ಒಟ್ಟು 18ಲಕ್ಷ ರೂಪಾಯಿಯನ್ನು ಪಡೆದಿದ್ದಾನೆ. ಅಲ್ಲದೇ, ಯುವತಿಗೆ ಚೆಕ್ ಗಳನ್ನು ನೀಡಿ, ತೆಗೆದುಕೊಂಡ ಹಣವನ್ನು ಮರಳಿ ನೀಡದೇ ನಂಬಿಸಿ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.

    ಹಲವರಿಗೆ ವಂಚಿಸಿರುವ ಪೇದೆ :

    ಅವರಿಬ್ಬರು ಒಂದೆ ಜಿಲ್ಲೆಯವರು. ಯುವತಿಯನ್ನು ಮದುವೆಯಾಗುವುದಾಗಿಯೂ ಆತ ನಂಬಿಸಿದ್ದನಂತೆ. ಹೀಗಾಗಿ ಮನೆ ಕಟ್ಟುವುದು, ಗದ್ದೆ ಕೆಲಸ ಎಂದೆಲ್ಲಾ ಹೇಳಿ ಯುವತಿಗೆ ಮರುಳು ಮಾಡಿ ಅವಳಿಂದ ಹಣ ಪಡೆದು ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡಿದ್ದ ಎನ್ನಲಾಗಿದೆ.
    ಈ ಹಿಂದೆ ಈ ಬಗ್ಗೆ ಹಿರಿಯ ಅಧಿಕಾರಗಳ ಸಮ್ಮುಖದಲ್ಲಿ ಯುವತಿಗೆ ಹಣ ನೀಡುವುದಾಗಿ ಒಪ್ಪಿಕೊಂಡು ಹಣ ನೀಡಿಲು ಸಮಯ ಪಡೆದು ಚೆಕ್ ಬೇರೆ ನೀಡಿದ್ದನಂತೆ. ಆದರೆ ಈವರೆಗೂ ಹಣ ನೀಡದೆ ಇರುವುದರಿಂದ ರವಿವಾರ ರಾತ್ರಿ ಯುವತಿ ಪ್ರಕರಣ ದಾಖಲಿಸಿದ್ದಾಳೆ.
    ಇದಲ್ಲದೆ ತಾಲೂಕಿನ ಇತರರ ಕಡೆ ಮತ್ತು ಕೆಲ ಸಿಬ್ಬಂದಿ ಬಳಿಯೂ ಹಣ ಪಡೆದು ವಾಪಾಸು ನೀಡದೆ ಇರುವುದು ಬೆಳಕಿಗೆ ಬಂದಿದೆ. ಇನ್ನೂ ಕೆಲವರು ಕಾನ್ಸ್‌ಟೇಬಲ್ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

    LATEST NEWS

    ದೆಹಲಿ ವಿಮಾನ ನಿಲ್ದಾಣದಲ್ಲಿ ದುರಂ*ತ : ಟರ್ಮಿನಲ್ 1 ರ ಮೇಲ್ಛಾವಣಿ ಕುಸಿದು ಓರ್ವ ಸಾ*ವು; ಹಲವರಿಗೆ ಗಾ*ಯ

    Published

    on

    ದೆಹಲಿ : ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದೆ. ಶುಕ್ರವಾರ(ಜೂ.28) ಬೆಳಿಗ್ಗೆ ಭಾರಿ ಮಳೆಯಿಂದ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ರ ಮೇಲ್ಛಾವಣಿಯ ಒಂದು ಭಾಗವು ಕೆಳಗೆ ನಿಂತಿರುವ ಕಾರುಗಳ ಮೇಲೆ ಬಿದ್ದಿದೆ. ಪರಿಣಾಮ ಒಬ್ಬ ವ್ಯಕ್ತಿ ಸಾ*ವನ್ನಪ್ಪಿದ್ದಾರೆ. ಹಾಗೂ ಆರು ಮಂದಿ ಗಾ*ಯಗೊಂಡಿದ್ದಾರೆ .


    ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಟರ್ಮಿನಲ್ 1 ರಲ್ಲಿ ದುರ್ಘಟನೆ ನಡೆದಿದ್ದು, ಸುರಕ್ಷತಾ ಕ್ರಮಗಳಾಗಿ ಟರ್ಮಿನಲ್‌ನಿಂದ ಎಲ್ಲಾ ಚೆಕ್-ಇನ್‌ ಮತ್ತು ನಿರ್ಗಮನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ(DIAL) ತಿಳಿಸಿದೆ.

    ಟರ್ಮಿನಲ್ 1 ರಿಂದ ಕಾರ್ಯನಿರ್ವಹಿಸುವ ಎರಡು ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಸ್ಪೈಸ್‌ಜೆಟ್‌ಗಳ ವಿಮಾನ ಕಾರ್ಯಾಚರಣೆಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ ಈಗಾಗಲೇ ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಸ್ಥಳಕ್ಕೆ ಧಾವಿಸಿದ್ದು, ಇನ್ನು ಮಳೆಯಿಂದ ಕ್ಯಾಬ್‌ಗಳು ಸೇರಿದಂತೆ ಹಲವು ವಾಹನಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
    ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನ ಪಿಕ್-ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಮೇಲ್ಛಾವಣಿಯ ಶೀಟ್ ಕುಸಿದು ಬಿದ್ದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


    ಗಾಯಗೊಂಡವರಿಗೆ ಎಲ್ಲಾ ತುರ್ತು ನೆರವು ಮತ್ತು ವೈದ್ಯಕೀಯ ನೆರವು ನೀಡಲಾಗುತ್ತಿದೆ. ಇಂದು ಮುಂಜಾನೆ ಭಾರೀ ಮಳೆಯಿಂದಾಗಿ, ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಹಳೆಯ ನಿರ್ಗಮನದ ಮುಂಭಾಗದಲ್ಲಿ ಮೇಲಾವರಣದ ಒಂದು ಭಾಗವು ಕುಸಿದಿದೆ. ತುರ್ತು ಸಿಬ್ಬಂದಿ ಅವರಿಗೆ ಅಗತ್ಯವಿರುವ ಎಲ್ಲಾ ನೆರವು ಮತ್ತು ವೈದ್ಯಕೀಯ ನೆರವು ನೀಡಲು ಕೆಲಸ ಮಾಡುತ್ತಿದ್ದಾರೆ.

    ಇದನ್ನೂ ಓದಿ : ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿ; ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವು

    ಈ ಘಟನೆಯ ಪರಿಣಾಮವಾಗಿ, ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್‌ಗಳನ್ನು ಮುಚ್ಚಲಾಗಿದೆ ಅನಾನುಕೂಲತೆಗಾಗಿ ನಾವು ಪ್ರಯಾಣಿಕರಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL) ವಕ್ತಾರರು ತಿಳಿಸಿದ್ದಾರೆ.

    Continue Reading

    FILM

    ದರ್ಶನ್ ಬೆಂಬಲಕ್ಕೆ ನಿಂತ ಪರಭಾಷಾ ನಟ; ಏನಂದ್ರು ನಾಗಶೌರ್ಯ?

    Published

    on

    ಮಂಗಳೂರು/ ಬೆಂಗಳೂರು : ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಆರೋಪ ಎದುರಿಸುತ್ತಿರೋ ದರ್ಶನ್ ಜೈಲು ಪಾಲಾಗಿದ್ದಾರೆ. ಇತ್ತ ಅನೇಕ ನಟ – ನಟಿಯರು ದರ್ಶನ್ ಪರವಾಗಿ ಮಾತನಾಡುತ್ತಿದ್ದಾರೆ. ದರ್ಶನ್ ಕೊ*ಲೆ ಮಾಡುವಂತವರಲ್ಲ ಎಂಬುದಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೇ ನಟಿ ಭಾವನಾ ರಾಮಣ್ಣ, ಅದೇನೇ ಆಗ್ಲಿ, ಐ ಸ್ಟ್ಯಾಂಡ್ ವಿತ್ ದರ್ಶನ್. ಸಂತೋಷದಲ್ಲಿ ಜೊತೆಗಿದ್ದು ದುಖದಲ್ಲಿ ಇಲ್ಲ ಅನ್ನೋ ರೀತಿ ಅಲ್ಲ. ದರ್ಶನ್ ಅವರು ಹೀರೋ ಆಗೋಕ್ಕಿಂತ ಮುಂಚೆನೆ ನನಗೆ ಗೊತ್ತು. ಅವರು ನನಗೆ ಗೊತ್ತಿರೋರು…ಸಾಕಷ್ಟು ವರ್ಷದಿಂದ ಜೊತೇಲಿ ಇರೋರು ನಾವು ಎಂದಿದ್ದಾರೆ.


    ಈಗ ಪರಭಾಷಾ ನಟ ನಾಗ ಶೌರ್ಯ ದರ್ಶನ್ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ದರ್ಶನ್ ಅಣ್ಣ ತಮ್ಮ ಕೆಟ್ಟ ದುಃಸ್ವಪ್ನದಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ ಎಂದಿದ್ದಾರೆ.

    ಏನಂದ್ರು ನಾಗ ಶೌರ್ಯ ?

    ನನ್ನ ಹೃದಯವು ಮೃ*ತರ ಕುಟುಂಬಕ್ಕೆ ಮರುಗುತ್ತದೆ ಮತ್ತು ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿಯನ್ನು ನೀಡಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ.

    ಆದಾಗ್ಯೂ, ಜನರು ಈ ವಿಷಯದ ಬಗ್ಗೆ ತೀರ್ಮಾನಗಳಿಗೆ ಬರುತ್ತಿರುವುದನ್ನು ನೋಡುವುದು ನಂಬಲಾಗದಷ್ಟು ನಿರಾಶಾದಾಯಕವಾಗಿದೆ. ದರ್ಶನ್ ಅಣ್ಣ ತಮ್ಮ ಕೆಟ್ಟ ದುಃಸ್ವಪ್ನದಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ದರ್ಶನ್ ಅವರನ್ನು ಚೆನ್ನಾಗಿ ಬಲ್ಲವರಿಗೆ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು ಇತರರಿಗೆ ಸಹಾಯ ಮಾಡುವ ಗುಣ ತಿಳಿದಿದೆ. ಅವರು ಯಾವಾಗಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಮತ್ತು ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ.
    ನನ್ನ ಕರಾಳ ಭಯದಲ್ಲಿಯೂ ನಾನು ಈ ಸುದ್ದಿಯನ್ನು ಒಪ್ಪಿಕೊಳ್ಳಲಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆಯಿದೆ ಮತ್ತು ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ ಎಂದು ನಂಬುತ್ತೇನೆ.

    ಇದನ್ನೂ ಓದಿ : ಜೈಲಿನಿಂದಲೇ ದರ್ಶನ್‌ನಿಂದ ಅಭಿಮಾನಿಗಳಿಗೆ ವಿಶೇಷ ಮನವಿ

    ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಸವಾಲಿನ ಅವಧಿಯಲ್ಲಿ ಅವರು ಗೌಪ್ಯತೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ತನ್ನ ಸಮಗ್ರತೆ ಮತ್ತು ಸಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ನಿರಾಪರಾಧಿ ಎಂದು ಸಾಬೀತಾಗುತ್ತಾರೆ. ನಿಜವಾದ ಅಪರಾಧಿಯನ್ನು ನ್ಯಾಯಾಂಗಕ್ಕೆ ತರಲಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ನಾಗಶೌರ್ಯ ಬರೆದುಕೊಂಡಿದ್ದಾರೆ.

    #standbydarshan #justiceforall ಎಂದು ಹ್ಯಾಶ್ ಟ್ಯಾಗ್ ನ್ನೂ ನಟ ಬಳಸಿದ್ದಾರೆ.

    ಪರಪ್ಪನ ಅಗ್ರಹಾರದಲ್ಲಿದ್ದಾರೆ ದರ್ಶನ್:

    ರೇಣುಕಾಸ್ವಾಮಿ ಕೊ*ಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

    Continue Reading

    FILM

    ಜೈಲಿನಿಂದಲೇ ದರ್ಶನ್‌ನಿಂದ ಅಭಿಮಾನಿಗಳಿಗೆ ವಿಶೇಷ ಮನವಿ

    Published

    on

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಇನ್ನು ದರ್ಶನ್‌ನನ್ನು ನೋಡಲು ಅವರ ಅಭಿಮಾನಿಗಳ ದಂಡು ಜೈಲಿನ ಬಳಿ ದೌಡಾಯಿಸುತ್ತಿದ್ದಾರೆ. ನಿತ್ಯವೂ ಜೈಲಿನ ಬಳಿ ಅಭಿಮಾನಿಗಳು ಬಂದು ದರ್ಶನ್‌ ಪರ ಘೋಷಣೆಗಳನ್ನು ಕೂಗುತ್ತಿದ್ದರು.

    ಇತ್ತೀಚೆಗೆ ಸೌಮ್ಯ ಹೆಸರಿನ ವಿಶೇಷಚೇತನ ಯುವತಿ ದರ್ಶನ್‌ ಭೇಟಿಗಾಗಿ ಜೈಲಿನ ಬಳಿ ಬಂದಿದ್ದಳು. ದರ್ಶನ್ ನೀಡಿದ್ದ ರಿಕ್ಷಾದಲ್ಲಿ ಪೋಷಕರ ಜೊತೆ ದರ್ಶನ್‌ನನ್ನು ನೋಡಲು ಬಂದಿದ್ದರು. ಅನ್ನ, ನೀರು ಬಿಟ್ಟು ದರ್ಶನ್‌ನನ್ನು ನೋಡಲು ಹಠ ಮಾಡಿದ್ದಾಳೆ. ಇದನ್ನು ಕೇಳಿ ದರ್ಶನ್ ಬೇಸರಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್‌ ಎಂಬ ವಿಶೇಷಚೇತನ ಯುವಕ ಗುಲ್ಬರ್ಗಾದಿಂದ ತ್ರಿ ವ್ಹೀಲರ್ ನಲ್ಲಿ ದರ್ಶನ್‌ನನ್ನು  ಭೇಟಿ ಮಾಡಲು ಬಂದಿದ್ದ ಎನ್ನಲಾಗಿದೆ.

    Read More..; ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಯ ಬಂಧನ

    ಈ ಬಗ್ಗೆ ದರ್ಶನ್ ಬೇಸರಗೊಂಡಿದ್ದಾರೆ. ಜೈಲಿನಲ್ಲೇ ಕುಳಿತು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನೆ ಮಾಡಿದ್ದಾರೆ. ‘ಯಾರೂ ಜೈಲಿನ ಬಳಿ ಬರಬೇಡಿ’ ಎಂದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಜೈಲಿನ ಬಳಿ ಬಂದು ನನ್ನ ಭೇಟಿಗಾಗಿ ಕಾಯುವುದು ಬೇಡ, ನಿಮ್ಮ ಸಮಯವನ್ನು ವ್ಯರ್ಥ ಮಾಡುವುದು ಬೇಡ ಎಂದು ದರ್ಶನ್ ಜೈಲು ಅಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.  ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ ಹೀಗಾಗಿ ಸುಮ್ಮನೆ ಬಂದು ಸಮಯ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    Continue Reading

    LATEST NEWS

    Trending