Connect with us

    DAKSHINA KANNADA

    ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!

    Published

    on

    ಮಂಗಳೂರು : ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಜನರಿಗೆ ಕಾಡುವ ದೊಡ್ಡ ಸಮಸ್ಯೆ ಅಂದ್ರೆ ಅದು ದೇಹದಲ್ಲಿ ಹೆಚ್ಚಾಗುವ ಬೊಜ್ಜು. ಜೀವನ ಶೈಲಿಯ ಬದಲಾವಣೆ, ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಔಷಧಿಗಳ ಅಡ್ಡ ಪರಿಣಾಮ ಬೊಜ್ಜಿಗೆ ಕಾರಣವಾಗಬಹುದು. ವ್ಯಾಯಾಮ ಮಾಡಲು ಸೋಮಾರಿತನದಿಂದಾಗಿ ಸಾಕಷ್ಟು ಜನ ಡಯಟ್ ಫುಡ್ ಮೂಲಕ ಬೊಜ್ಜು ನಿಯಂತ್ರಿಸುವ ಪ್ರಯತ್ನ ಮಾಡ್ತಾರೆ. ಆದ್ರೆ ಬೊಜ್ಜಿನ ಸಮಸ್ಯೆಗೆ ವೈಜ್ಞಾನಿಕ ಜಗತ್ತು ಹೊಸದೊಂದು ಔಷಧಿ ಕಂಡು ಹಿಡಿದಿದ್ದು, ಈಗಾಗಲೇ ಇಲಿಗಳ ಮೇಲೆ ಇದನ್ನು ಪ್ರಯೋಗಿಸಿ ಯಶಸ್ವಿಯಾಗಿದೆ.

    ಡೆನ್ಮಾರ್ಕ್‌ನ ಆರ್ಹಸ್ ವಿಶ್ವವಿದ್ಯಾಲಯ ಬೊಜ್ಜು ಕರಗಿಸುವ ಮಾತ್ರೆಯೊಂದನ್ನು ಕಂಡು ಹಿಡಿದಿದ್ದು, ಇದು ನೈಸರ್ಗಿಕ ಚಯಾಪಚಯ ಕ್ರಿಯೆಯಂತೆಯೇ ದೇಹದಲ್ಲಿ ಬದಲಾವಣೆ ಮಾಡುವ ಶಕ್ತಿ ಹೊಂದಿದೆ. ಈ ಮಾತ್ರೆಯನ್ನು ಸೇವನೆ ಮಾಡಿದರೆ ಒಂದಿಂಚೂ ಅಲುಗಾಡದೆ ಇದ್ರೂ ಖಾಲಿ ಹೊಟ್ಟೆಯಲ್ಲಿ ಹತ್ತು ಕಿಲೋ ಮೀಟರ್ ಓಡಿದ ಪರಿಣಾಮವನ್ನು ದೇಹಕ್ಕೆ ನೀಡುತ್ತದೆ. ಇನ್ನೂ ಪ್ರಾಯೋಗಿಕವಾಗಿ ಅಂತಿಮ ಹಂತದಲ್ಲಿರುವ ಈ ಮಾತ್ರೆ ಮಾರುಕಟ್ಟೆಗೆ ಬಂದರೆ ಜನರು ವ್ಯಾಯಾಮ ಮಾಡದೆ, ಡಯಟ್ ಮಾಡದೆ ತಮ್ಮ ದೇಹದ ಬೊಜ್ಜು ಕರಗಿಸಬಹುದಾಗಿದೆ.

    ವ್ಯಾಯಾಮದ ಸಮಯದಲ್ಲಿ ರಕ್ತದ ಪ್ಲಾಸ್ಮಾ ಮಟ್ಟದ ಬದಲಾವಣೆ ಮತ್ತು ಬೀಟಾ ಹೈಡ್ರೋಬ್ಯುಟೈರೇಟ್ ಕ್ರಿಯೆಗಳು (BHB)ಸಂಭವಿಸುತ್ತದೆ. ಯಕೃತ್ತಿನಲ್ಲಿ ಉತ್ಪತ್ತಿ ಆಗುವ ಕೀಟೋನ್‌ಗಳು ಗ್ಲೂಕೋಸ್ ಅನುಪಸ್ಥಿತಿಯಲ್ಲಿ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಕಾರಣವಾಗುತ್ತದೆ. ದೇಹದ ಕೊಬ್ಬನ್ನು ಕಡಿಮೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಯಬಹದಾಗಿದೆ. ಈ ಎಲ್ಲಾ ಕಾರ್ಯವನ್ನು ಆ ಒಂದು ಮಾತ್ರೆ ಮಾಡಲಿದೆ ಅಂತ ಸಂಶೋಧಕರು ಹೇಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ 30 ಲಕ್ಷ ರೂಪಾಯಿ ದರೋಡೆ

    Published

    on

     ಬಂಟ್ವಾಳ  : ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ದಾಳಿ ನಡೆಸಿ 30 ಲಕ್ಷ ರೂಪಾಯಿ ದರೋಡೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಈ ಘಟನೆ ನಡೆದಿದೆ.

    ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿದ ಖದೀಮರು ಬರೋಬ್ಬರಿ 30 ಲಕ್ಷ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳವರೆಗೆ ತನಿಖೆ ನಡೆಸಿ, ಮನೆಯಲ್ಲಿದ್ದ ಸುಮರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.

    ಇದನ್ನೂ ಓದಿ : ಟಿಆರ್‌ಪಿಯಲ್ಲಿ ಬಿಗ್‌ಬಾಸನ್ನು ಹಿಂದಿಕ್ಕಿದ ಸರಿಗಮಪ

    ಸ್ಥಳಕ್ಕೆ ದ.ಕ ಜಿಲ್ಲಾ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ  ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.

    Continue Reading

    DAKSHINA KANNADA

    ಮಂಗಳೂರು : ಖಾಸಗಿ ಬಸ್‌ ದರ ಹೆಚ್ಚಳ ರದ್ದು

    Published

    on

    ಮಂಗಳೂರು: “ಮಂಗಳೂರಿನಲ್ಲಿ ಓಡಾಡುವ  ಖಾಸಗಿ ಬಸ್‌ಗಳ ಟಿಕೆಟ್‌ ದರವನ್ನು ಸದ್ಯಕ್ಕೆ ಏರಿಕೆ ಮಾಡುವುದಿಲ್ಲ” ಎಂದು ಕೆನರಾ ಬಸ್‌ ಮಾಲಕರ ಸಂಘ ನಿರ್ಧರಿಸಿದೆ.

    ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಸರಕಾರಿ ಬಸ್‌ ಟಿಕೆಟ್‌ ದರ ಏರಿಸಲು ಸರಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, “ರಾಜ್ಯ ಸರಕಾರದ ಶಕ್ತಿ ಯೋಜನೆ ಆರಂಭದ ಬಳಿಕ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ವಾಹನದ ಬಿಡಿ ಭಾಗಗಳು, ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಕೋವಿಡ್‌ ಬಳಿಕ ಬಸ್‌ ಮಾಲಕರೂ ಸಂಕಷ್ಟದಲ್ಲಿದ್ದು, ಬಸ್‌ ಟಿಕೆಟ್‌ ದರ ಏರಿಕೆ ಅನಿವಾರ್ಯ. ಆದರೆ ಸದ್ಯಕ್ಕೆ ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಸಂಘದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು” ಎಂದು ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ಅಜೀಜ್‌ ಪರ್ತಿಪ್ಪಾಡಿ ಪ್ರತಿಕ್ರಿಯಿಸಿ “ಮಂಗಳೂರಿನಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಟಿಕೆಟ್‌ ದರ ಏರಿಕೆಯ ಬಗ್ಗೆ ಚಿಂತನೆ ನಡೆಸಿಲ್ಲ. ಸದ್ಯದ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅವಲೋಕಿಸಿ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು” ಎಂದು ಹೇಳಿದ್ದಾರೆ.

    Continue Reading

    DAKSHINA KANNADA

    ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

    Published

    on

    ಮಂಗಳೂರು: ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಪಿಲಿಕುಳದ ದೂರದರ್ಶನ ಕೇಂದ್ರ ಮುಂಭಾಗದ ಗೇಟ್ ನ ಬಳಿ ಬಂಧಿಸಿ 20 ಸಾವಿರ ರೂಪಾಯಿ ಮೌಲ್ಯದ 958 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.

    ಮೊಹಮ್ಮದ್ ಆಸಿಫ್ ಮತ್ತು ನಿಯಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ಕಾರ್ಯಾಚರಣರೆ ನಡೆಸಿದರು.

    ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಆತ್ಮಹತ್ಯೆ ಪ್ರಕರಣ: ಬೆಂಗಳೂರೇ ನಂಬರ್ 1

    ಆರೋಪಿಗಳಿಂದ ಎರಡು ಮೊಬೈಲ್‌ ಫೋನ್‌ ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    Continue Reading

    LATEST NEWS

    Trending