Saturday, September 18, 2021

ಅಶ್ವತ್ಥ ಎಲೆಯಲ್ಲಿ ಮೂಡಿ ಬಂತು ಬಿಜೆಪಿ ರಾಜ್ಯಾಧ್ಯಕ್ಷರ ಚಿತ್ರ: ಅಕ್ಷಯ ಕೋಟ್ಯಾನ್ ರಿಗೆ ಅಭಿನಂದನೆ

ಅಶ್ವತ್ಥ ಎಲೆಯಲ್ಲಿ ಮೂಡಿ ಬಂತು ಬಿಜೆಪಿ ರಾಜ್ಯಾಧ್ಯಕ್ಷರ ಚಿತ್ರ: ಅಕ್ಷಯ ಕೋಟ್ಯಾನ್ ರಿಗೆ ಅಭಿನಂದನೆ

ಮಂಗಳೂರು: ಬಣ್ಣದ ಪುಡಿಗಳಲ್ಲಿ ಚಿತ್ರ ಬಿಡಿಸುವುದನ್ನು ನಾವು ನೋಡಿರ್ತೇವೆ  ಕ್ಯಾನ್ ವಾಸ್ಗಳಲ್ಲಿ   ಹಲವು ಗಣ್ಯರ ಚಿತ್ರಗಳನ್ನು ನಿಮಿಷಾರ್ಧದಲ್ಲಿ ಮಾಡಿ ಶಹಬ್ಬಾಸ್ ಪಡೆದಿರುವುದನ್ನೂ ನೋಡಿದ್ದೇವೆ. ಆದರೆ ಇಲ್ಲಿ ಅಶ್ವತ್ಥ ಎಲೆಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಮೂಡಬಿದ್ರೆಯ ಕಲ್ಲಬೆಟ್ಟು ಅಕ್ಷಯ್ ಕೋಟ್ಯಾನ್.

ಅಶ್ವತ್ಥದ ಎಲೆಗಳಲ್ಲಿ ಚಿತ್ರ ಬರೆದು ರಾಜ್ಯದಲ್ಲೇ  ಪ್ರಸಿದ್ಧಿ ಪಡೆದ  ಮೂಡುಬಿದಿರೆ ಕಲ್ಲಬೆಟ್ಟು  ಅಕ್ಷಯ್ ಕೋಟ್ಯಾನ್  ಇವರ ಕೈ ಚಳಕದಿಂದ ಮೂಡಿ ಬಂದ  ಬಿಜೆಪಿ ರಾಜ್ಯಾಧ್ಯಕ್ಷರು  ಜಿಲ್ಲೆಯ ಹೆಮ್ಮೆಯ ಸಂಸದರಾದ  ಶ್ರೀ ನಳಿನ್ ಕುಮಾರ್ ಕಟೀಲ್  ಅವರ  ಚಿತ್ರವನ್ನು  ಮಾನ್ಯ ಸಂಸದರಿಗೆ ನೀಡಿದರು. ಸಂಸದರು ಅಕ್ಷಯ್  ಕೋಟ್ಯಾನ್ ರವರನ್ನು ಅಭಿನಂದಿಸಿದರು.

ಈ ಸಂದರ್ಭ ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ.  ಮೂಡ ಅಧ್ಯಕ್ಷರು ರವಿಶಂಕರ್  ಮಿಜಾರ್,  ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಉಪಸ್ಥಿತರಿದ್ದರು

ಪ್ರತಿಭಾನ್ವಿತ ಚಿತ್ರ ಕಲಾವಿದ ಅಕ್ಷಯ್ ಕೋಟ್ಯಾನ್ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಚಿತ್ರವನ್ನು ಅಶ್ವತ್ಥ ವೃಕ್ಷದ ಎಲೆಯಲ್ಲಿ ಅತೀ ಸುಂದರವಾಗಿ ಚಿತ್ರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...