ಉಜಿರೆ: ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮು*ಳುಗಿ ನಾ*ಪತ್ತೆಯಾದ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಸೋಮವಾರ (ಡಿ.02) ಸಂಜೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿ ಮೃ*ತದೇಹ ಹೊರತೆಗೆಯಲಾಗಿದೆ.
ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ಸಂಜೆ ಸುಮಾರು 5ರಿಂದ 6 ಗಂಟೆ ಸುಮಾರಿಗೆ ನದಿಗೆ ಇಳಿದಿದ್ದು ಬಳಿಕ ಮುಳುಗಿ ನಾ*ಪತ್ತೆಯಾಗಿದ್ದರು.
ಸ್ಥಳಕ್ಕೆ ಅ*ಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್ ಹಾಗೂ ಅಗ್ನಿಶಾಮಕದಳದವರು ರಾತ್ರಿ11ರ ಸುಮಾರಿಗೆ ಮೃ*ತದೇಹ ಮೇಲೆತ್ತಿದ್ದಾರೆ. ಮೃ*ತ ವ್ಯಕ್ತಿ ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಸಂಯೋಜಕರಾಗಿದ್ದರು.
ಅಂ*ತಿಮ ದರ್ಶನಕ್ಕೆ ಸ್ವಗ್ರಾಮ ಬೆಳಾಲ್ ನಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಪಾರ್ಥೀವ ಶರೀರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶ*ವಾಗಾರದಲ್ಲಿ ಇರಿಸಲಾಗಿದೆ.
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಸಂಭ್ರಮ ಜರುಗುತ್ತಿದ್ದು, ಲಕ್ಷಾಂತರ ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಶುಕ್ರವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ 92ನೇ ವರ್ಷದ ಸರ್ವ ಧರ್ಮ ಸಮ್ಮೇಳನ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಲು ಆಗಮಿಸಿದ್ದ ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್, ಅಧ್ಯಕ್ಷತೆಯನ್ನು ವಹಿಸಿದ್ದ ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಸಹಿತ ಗಣ್ಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್ ದೀಪ ಬೆಳಗಿ ಉದ್ಘಾಟಿಸಿದರು. ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ವಿಶ್ವಮಾನ್ಯತೆ ದೊರಕಿದ ಹಿನ್ನೆಲೆಯಲ್ಲಿ ಡಾ ವೀರೇಂದ್ರ ಹೆಗ್ಗಡೆ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ಡಾ ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿದರು. ತನ್ನ ಅಜ್ಜ ಮಂಜಯ್ಯ ಹೆಗ್ಗಡೆ ಅವರು ಆರಂಭಿಸಿದ ಈ ಸಮ್ಮೇಳನವನ್ನು ತಂದೆ ರತ್ನವರ್ಮ ಹೆಗ್ಗಡೆ ಮುನ್ನಡೆಸಿದ್ದು, ಇದೀಗ 91 ವರ್ಷಗಳು ಸಂದು ಹೋದವು ಎಂದರು. ಈ ವೇದಿಕೆಯಲ್ಲಿ ಹಲವು ಮಂದಿ ಹಿರಿಯ ವಿದ್ವಾಂಸರು, ಮಾನವೀಯ, ಆದರ್ಶದ ಹಾದಿಯನ್ನು ನಾವು ಮುನ್ನಡೆಯಬೇಕೆಂದು ಹಿತವಚನ ನಿಡಿದರು. ಜನವರಿ 1ರಿಂದ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಉಚಿತವಾಗಿ ಸಿಗಲಿದೆ. ವರ್ಷಕ್ಕೆ 10,000 ಬಡ ರೋಗಿಗಳಿಗೆ ನೆರವಾಗಲಿದೆ ಎಂದರು.
ಗೃಹ ಮಂತ್ರಿ ಜಿ ಪರಮೇಶ್ವರ, ಸ್ವಾಮೀಜಿ ಮತ್ತು ಅತಿಥಿಗಳಿಗೆ ಹೆಗ್ಗಡೆ ಗೌರವಾಭಿನಂದನೆ ಸಲ್ಲಿಸಿದರು. ಡಾ ಪರಮೇಶ್ವರ ಮಾತನಾಡಿ, ಸರಕಾರಗಳು ಮಾಡದಿರುವ ಕೆಲಸಗಳನ್ನು ಇಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಮಾಡಿದ್ದಾರೆ. ಸರ್ವಧರ್ಮದ ಸಂದೇಶ ಇಂದಿನ ದಿನ ಬಹಳ ಅಗತ್ಯವಿದೆ. ದೇಶಕ್ಕೆ ಸಂವಿಧಾನ ಬರುವ ಮುಂಚೆಯೇ ಧರ್ಮಸ್ಥಳದಲ್ಲಿ ಸರ್ವಧರ್ಮ ಸಂದೇಶ ಸಾರುವ ಕಾರ್ಯ ನಡೆಯುತ್ತಿದೆ ಎಂದರು.
ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಇಡೀ ಜಗತ್ತೇ ಪರಮೇಶ್ವರ ಮಯ. ಈ ಜ್ಞಾನ ಇರುವವರು ಸಮಾನತೆ ಅನುಸರಿಸುತ್ತಾರೆ. ಇಲ್ಲದದವರು ದ್ವೇಷ ಸಾಧಿಸುತ್ತಾರೆ. ಸಹಬಾಳ್ವೆ ದೂರ ಮಾಡುವ ಯಾವುದಾದರೂ ಮತವಿದ್ದರೆ ಅದಕ್ಕೆ ಭೂಮಿಯಲ್ಲಿರುವಅಧಿಕಾರವೇ ಇಲ್ಲ. ಅಂತಹ ಮತವನ್ನು ಪರಿಷ್ಕರಿಸಬೇಕು ಎಂದರು.
ಸಂಶೋಧಕ ಡಾ ಜಿ ಬಿ ಹರೀಶ್, ಮಾಜಿ ಪ್ರಾಂಶುಪಾಲ ಡಾ ಜೋಸೆಫ್ ಎನ್ ಎಂ, ವಿಜಯಪುರದ ಮೆಹತಾಬಾ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸ ನೀಡಿದರು. ಡಿ ಸುರೇಂದ್ರ ಕುಮಾರ್, ಡಿ. ಹರ್ಷೇoದ್ರ ಕುಮಾರ್, ಹೇಮಾವತಿ ವೀ. ಹೆಗ್ಗಡೆ, ಶ್ರದ್ದಾ ಅಮಿತ್, ಸುಪ್ರಿಯಾ ಹರ್ಷೇoದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುನೀಲ್ ಪಂಡಿತ್ ಮೊದಲಾದವರಿದ್ದರು. ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಪ್ರಾಧ್ಯಾಪಕ ಡಾ ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ಇಲಿಪಾಷಣ ಸೇವಿಸಿ ಆ*ತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾ*ವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಎಂಬಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಗಳು ಆ*ತ್ಮಹತ್ಯೆ ಮಾಡಿಕೊಳ್ಳಲು ಯುವಕನೊಬ್ಬ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ. ಮಿತ್ತಬಾಗಿಲು ಗ್ರಾಮದ ನಿವಾಸಿ 17 ವರ್ಷದ ಅಪ್ರಾಪ್ತ ವಯಸ್ಸಿನ ಪಿಯುಸಿ ವಿದ್ಯಾರ್ಥಿನಿಯನ್ನು ಚಾರ್ಮಾಡಿ ಗ್ರಾಮದ ಮರಂಗಾಯಿ ನಿವಾಸಿ ಪ್ರವೀಣ್ ಗೌಡ (22) ಎಂಬಾತ ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡಿದ್ದು, ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ.
ವಿದ್ಯಾರ್ಥಿನಿ ತಾಯಿ ಜತೆ ತನ್ನನ್ನು ಪ್ರವೀಣ್ ಜತೆ ಮದುವೆ ಮಾಡಿಸುವಂತೆಯೂ ಹೇಳಿದ್ದಳು. ಪ್ರವೀಣ್ ಗೌಡ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವಕ ಆಕೆಯನ್ನು ಜತೆ ಬೇರೆ ಬೇರೆ ಕಡೆಗಳಿಗೆ ಕರೆದೊಯ್ದು ಸುತ್ತಾಡಿ ಫೋಟೋ ತೆಗೆಸಿಕೊಂಡಿದ್ದ. ಬಳಿಕ ಏಕಾಏಕಿ ‘ನಾನು ನಿನ್ನನ್ನು ಮದುವೆಯಾಗಲ್ಲ ಎಂದು ಹೇಳಿ ಸಾ*ಯುವುದಾದರೆ ಸಾಯಿ, ನಾನು ನಿನ್ನನ್ನು ಮದುವೆಯಾಗಲ್ಲ’ ಎಂದು ಹೇಳಿ ಮೋಸ ಮಾಡಿದ್ದಾನೆ.
ಇದರಿಂದ ಮನನೊಂದ ವಿದ್ಯಾರ್ಥಿನಿ ನವೆಂಬರ್ 20 ರಂದು ರಾತ್ರಿ ಮನೆಯಲ್ಲಿ ಅಂಗಡಿಯಿಂದ ತಂದಿದ್ದ ಇಲಿಪಾಷಣ ಪೇಸ್ಟ್ ಸೇವಿಸಿದ್ದಾಳೆ. ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ತಾಯಿ ಜತೆ ಮಲಗಿದ್ದಾಗ ವಾಂತಿ ಮಾಡಿದ್ದರಿಂದ ಮನೆಮಂದಿಗೆ ವಿಚಾರ ತಿಳಿದು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ನವೆಂಬರ್ 26 ರಂದು ಚಿಕಿತ್ಸೆ ಫಲಿಸದೆ ಸಾ*ವನ್ನಪ್ಪಿದ್ದಾಳೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತನ್ನ ಮಗಳ ಸಾವಿಗೆ ನ್ಯಾಯ ಬೇಕು ಅಂತಾ ವಿದ್ಯಾರ್ಥಿನಿಯ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಯುವಕ ಪ್ರವೀಣ್ ಗೌಡ ಮೊಬೈಲ್ ಸ್ಪೀಚ್ ಆಫ್ ಮಾಡಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಇಂದು ಸಂಜೆ ಐದು ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ.
ಆಚಾರ್ಯ ಮಹಾಮಂಡಲೇಶ್ವರ ಜಗದ್ಗುರು ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ಜರುಗಲಿದೆ. ಸಮ್ಮೇಳನದ ಉದ್ಘಾಟನೆಯನ್ನು ರಾಜ್ಯ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ನೆರವೇರಿಸಲಿದ್ದಾರೆ.
ಸಂಶೋಧಕರು ಹಾಗೂ ಸಂವಹನಕಾರ ಬೆಂಗಳೂರಿನ ಡಾ. ಜಿ.ಬಿ. ಹರೀಶ್, ಮಡಂತ್ಯಾರಿನ ನಿವೃತ್ತ ಪ್ರಾಂಶುಪಾಲ ಜೋಸೆಫ್ ಎನ್.ಎಮ್ ಹಾಗೂ ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೆತಾಬ್ ಇಬ್ರಾಹಿಂ ಸಾಬಾ ಕಾಗಾವಾಡ ಅವರು ಉಪನ್ಯಾಸ ನೀಡಲಿದ್ದಾರೆ. ಸರ್ವ ಧರ್ಮ ಸಮ್ಮೇಳನದ ಬಳಿಕ ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ.