ಮಂಗಳೂರು/ಚಿತ್ರದುರ್ಗ : 2 ನೇ ಮಹಡಿಯಿಂದ ಕೆಳಗೆ ಬಿ*ದ್ದ ಸ್ಟಾಫ್ ನರ್ಸ್ ಸಾ*ವಿಗೀಡಾದ ದು*ರ್ಘಟನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಮೂಲದ ನರ್ಸ್ ಇಂದ್ರಮ್ಮ (36) ಮೃ*ತ ಮಹಿಳೆ ಎಂದು ಗುರುತಿಸಲಾಗಿದೆ.
ಈಕೆ ಹಲವು ವರ್ಷಗಳಿಂದ ಅದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನಿನ್ನೆ ಸಂಜೆ ಇಂದ್ರಮ್ಮನ ಸ್ನೇಹಿತೆ ಬೀಗದ ಕೀಯನ್ನು ಮೇಲಿಂದ ಕೆಳಗೆ ಎಸೆದಿದ್ದರು. ಆಗ ಬೀಗದ ಕೈ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಅದನ್ನು ಕಟ್ಟಿಗೆಯ ತೆರವಿನಿಂದ ತೆರವುಗೊಳಿಸಲು ಮುಂದಾಗಿದ್ದಾಗ ಇಂದ್ರಮ್ಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಆಕೆಯ ತಲೆಗೆ ಬಲವಾದ ಗಾ*ಯವಾಗಿದ್ದು, ತೀರ್ವ ರಕ್ತಸ್ರಾವವಾಗಿ ಬಸವೇಶ್ವರ ಆಸ್ಪತ್ರೆಗೆ ಶಿಫ್ಟ್ ಮಾಡುವ ಮಾರ್ಗ ಮಧ್ಯೆ ಅಸು*ನೀಗಿದ್ದಾರೆಮದು , ಸಹೊದ್ಯೋಗಿಗಳು ತಿಳಿಸಿದ್ದಾರೆ. ಆದರೆ, ಮೃ*ತರ ಕುಟುಂಬಸ್ಥರು ಸಾ*ವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಹಾಗಾಗಿ, ಪ್ರಕರಣ ತನಿಖೆಯನ್ನು ಚುರುಕುಗೊಳಿಸಿದ್ದು, ಬೆರಳಚ್ಚು ತಜ್ಞರು ಸೇರಿದಂತೆ ಇನ್ನಿತರ ತಂತ್ರಜ್ಞರೊಂದಿಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ.
ಮಂಗಳೂರು/ಬೆಂಗಳೂರು : ‘ಬಾಂ*ಬ್ ಇದೆ’ ಎಂದು ಆಟೋ ಸಮೇತ ಠಾಣೆಗೆ ಬಂದ ಚಾಲಕನಿಂದ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಯಾರೋ ನನ್ನ ಆಟೋದಲ್ಲಿ ಬಾಂ*ಬ್ ಇಟ್ಟಿದ್ದಾರೆ ಎಂದು ಆಟೋವನ್ನ ನೇರವಾಗಿ ಪೊಲೀಸ್ ಠಾಣೆಗೆ ತಂದ ಚಾಲಕನನ್ನು ಕಂಡು ಪೊಲೀಸರು ತಬ್ಬಿಬ್ಬಾಗಿದ್ದಾರೆ. ಈ ಘಟನೆ ನಡೆದಿರೋದು ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ.ತಕ್ಷಣ ಠಾಣೆ ಆವರಣದಿಂದ ಪೊಲೀಸರು ಹೊರಗೆ ಸಾಗಿಸಿದ್ದಾರೆ. ಖಾಲಿ ಮೈದಾನಕ್ಕೆ ಕೊಂಡೊಯ್ದು ಆಟೋವನ್ನು ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬಾಂ*ಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಆಟೋದಲ್ಲಿ ಪ್ರಯಾಣಿಕರ ಬ್ಯಾಗ್ ಪತ್ತೆಯಾಗಿದೆ. ಆಟೋ ಹಿಂದಿನ ಸೀಟ್ ನಲ್ಲಿ ಎರಡು ಚೀಲಗಳು ಪತ್ತೆಯಾಗಿದ್ದು, ಯಾರೋ ಚೀಲ ಇಟ್ಟು ಹೋಗಿದ್ದಾರೆ ಎಂದು ಆಟೋ ಚಾಲಕ ಆತಂಕ ವ್ಯಕ್ತಪಡಿಸಿದ್ದ.
ಬ್ಯಾಗ್ ನಿಂದಾದ ಎಡವಟ್ಟು :
ಆಟೋದಲ್ಲಿ ಯಾರೋ ಪ್ರಯಾಣಿಕರು ಬ್ಯಾಗ್ ಬಿಟ್ಟು ಹೋಗಿದ್ದರು. ಇದನ್ನ ಕಂಡು ಆತಂಕಕ್ಕೆ ಒಳಗಾಗಿದ್ದ ಆಟೋ ಚಾಲಕ, ಬಾಂ*ಬ್ ಎಂದು ಬ್ಯಾಗ್ ಸಮೇತ ಜಯನಗರ ಪೊಲೀಸ್ ಠಾಣೆಗೆ ಹೋಗಿದ್ದ. ಪರಿಶೀಲನೆ ನಡೆಸಿದಾಗ, ಬ್ಯಾಗ್ ನಲ್ಲಿ ಮಿಕ್ಸಿ ಹಾಗೂ ಡ್ರಿಲ್ಲಿಂಗ್ ಮಷಿನ್ ಬಳಸುವ ಆರ್ಮಿಚರ್ ಇರುವುದು ಪತ್ತೆಯಾಗಿದೆ. ಪರಿಶೀಲನೆ ನಡೆಸಿ ಪೊಲೀಸರು ನಿರಾಳರಾಗಿದ್ದಾರೆ. ಸದ್ಯ ಪರಿಶೀಲನೆ ನಡೆಸಿ ಆಟೋ ಚಾಲಕನನ್ನು ಪೊಲೀಸರು ವಾಪಾಸು ಕಳುಹಿಸಿದ್ದಾರೆ.
20 ವರ್ಷದ ನಂತರ ಮತ್ತೆ ಅಖಾಡಕ್ಕೆ ಇಳಿದ ಬಾಕ್ಸಿಂಗ್ ಲೋಕದ ಲೆಜೆಂಡ್ ಮೈಕ್ ಟೈಸನ್ ಶನಿವಾರ ( ನ .16) ನಡೆದ ಜೇಕ್ ಪಾಲ್ ವಿರುದ್ಧದ ಪಂದ್ಯದಲ್ಲಿ 79-73 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.
2003ರಲ್ಲಿ ಮೈಕ್ ಟೈಸನ್ ಕೊನೆಯದಾಗಿ ಬಾಕ್ಸಿಂಗ್ ಪಂದ್ಯ ಗೆದ್ದಿದ್ದರು. 2004 ಮತ್ತು 2005ರಲ್ಲಿ ಸೋಲನುಭವಿಸಿದ ಬಳಿಕ ಬಾಕ್ಸಿಂಗ್‌ನಿಂದ ದೂರವುಳಿದಿದ್ದರು. ಅದಾದ ನಂತರ 20 ವರ್ಷಗಳ ಕಳೆದು ಈಗ ಮತ್ತೆ ಬಾಕ್ಸಿಂಗ್ ರಿಂಗ್‌ಗೆ ಮರಳಿದ್ದ ಕಾರಣ ಈ ಪಂದ್ಯವನ್ನು ಬಹಳ ವಿಶೇಷವಾಗಿ ಪರಿಗಣಿಸಲಾಗಿತ್ತು
ಆರಂಭಿಕ ಸುತ್ತಿನಲ್ಲಿ ನಿಧಾನಗತಿಯಲ್ಲಿ ಆಡಿದ 58 ವರ್ಷದ ಟೈಸನ್ ಬಳಿಕ ಆಕ್ರಮಣಕಾರಿ ಪಂಚ್‌ಗಳ ಮೂಲಕ ಸತತವಾಗಿ ಅಂಕಗಳಿಸಿದರು. ಆದರೂ, ಅಂತಿಮವಾಗಿ 6 ಅಂಕಗಳ ಹಿನ್ನಡೆಯಿಂದ ಸೋಲನ್ನು ಅನುಭವಿಸಿದರು. ಗೆಲುವಿನ ಬಳಿಕ ಮಾತನಾಡಿದ 27 ವರ್ಷದ ಯುವ ಬಾಕ್ಸರ್ ಜೇಕ್ ಜೇಕ್ ಪಾಲ್, ‘ಇದು ಮರೆಯಲಾಗದ ಪಂದ್ಯವಾಗಿದ್ದು. “ನಾನು ಗೆದ್ದಿರಬಹುದು. ಆದರೆ ನನ್ನ ಪ್ರಕಾರ ಈ ಪಂದ್ಯವನ್ನು ಗೆದ್ದಿರುವುದು ಟೈಸನ್. ಏಕೆಂದರೆ ಅವರು ದಿಗ್ಗಜ ಬಾಕ್ಸರ್, ಇಷ್ಟು ವಯಸ್ಸಾಗಿದ್ದರೂ ಇಂತಹ ಒಳ್ಳೆಯ ಪ್ರದರ್ಶನ ನೀಡಿದ ಅವರ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಲೇಬೇಕು'” ಎಂದು ಹೇಳುವ ಮೂಲಕ ಟೈಸನ್‌ಗೆ ಗೌರವ ಸೂಚಿಸಿದರು.
ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವೆ ಒಟ್ಟು 8 ಸುತ್ತಿನ ಸ್ಫರ್ಧೆ ನಡೆದಿದ್ದು, ಪೌಲ್ ಆರು ಸುತ್ತುಗಳಲ್ಲಿ ಗೆಲುವು ಸಾಧಿಸಿದರೇ, ಮೈಕ್ ಟೈಸನ್ ಕೇವಲ ಎರಡು ಸುತ್ತುಗಳಲ್ಲಿ ಗೆದ್ದು ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಪೌಲ್ 10-9, 10-9, 9-10, 9-10, 9-10, 9-10, 9-10, 9-10 ಅಂಕಗಳಿಂದ ಜಯಭೇರಿ ಬಾರಿಸಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿಲು ಜೇಕ್ ಪೌಲ್ ಬರೋಬ್ಬರಿ 40 ಮಿಲಿಯನ್ ಡಾಲರ್ (ರೂ.337 ಕೋಟಿ) ಪಡೆದುಕೊಂಡಿದ್ದು, ಟೈಸನ್ ರೂ.168 ಕೋಟಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಪ್ರಸಿದ್ಧಿ ಪಡೆದ ನಿತಿನ್ ಚೌಹಾಣ್ ಶ*ವವಾಗಿ ಪತ್ತೆಯಾಗಿದ್ದು, ಅವರು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ಧಿಯಾಗಿತ್ತು. 35 ವರ್ಷದ ನಿತಿನ್ ಸಾವಿನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ’ ಮತ್ತು ‘ಕ್ರೈ ಪ್ಯಾಟ್ರೋಲ್’ನಂಥ ರಿಯಾಲಿಟಿ ಶೋ ಗಳಿಂದ ಚಿರಪರಿಚಿತರಾಗಿದ್ದಾರೆ ನಿತಿನ್.
‘ಮುಂಬೈನಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಇವರ ಶವ ಪತ್ತೆಯಾಗಿತ್ತು. 2009 ರಲ್ಲಿ ಪ್ರಸಾರವಾದ ‘ದಾದಾಗಿರಿ 2’ ಮೂಲಕ ಎಂಟ್ರಿ ಕೊಟ್ಟಿದ್ದ ಇವರು, ‘ಸ್ಪ್ಲಿಟ್ಸ್ ವಿಲ್ಲಾ ಸೀಸನ್ 5′ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಇಲ್ಲಿ ಅಭಿಮಾನಿಗಳ ಸಂಖ್ಯೆ ಏರಿಸಿಕೊಂಡಿದ್ದ ಅವರಿಗೆ ಜಿಂದಗಿ ಡಾಟ್ ಕಾಮ್, ಕ್ರೈಮ್ ಪ್ಯಾಟ್ರೋಲ್, ತೇರಾ ಯಾರ್ ಹೂ ಮೇ ಮುಂತಾದ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತ್ತು. ಆದರೂ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಹಿಂದಿನ ಕಾರಣ ಮಾತ್ರ ತಿಳಿದಿಲ್ಲ’ ಎಂದು ಬಹುತೇಕ ಮಾಧ್ಯಮಗಳು ವರದಿಯನ್ನು ಬಿತ್ತರಿಸಿದವು.
ಅಲ್ಲೇ ಆದದ್ದು ಎಡವಟ್ಟು. ಅದೇನೆಂದರೆ, ನಿಜವಾಗಿ ಸಾ*ವನ್ನಪ್ಪಿದ ನಟ ನಿತಿನ್ ಚೌಹಾಣ್ ಬದಲಿಗೆ ಇನ್ನೋರ್ವ ಅದೇ ಹೆಸರಿನ ನಟ ನಿತಿನ್ ಚೌಹಾಣ್ ಫೋಟೋ ಬಳಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಬದುಕಿರುವ ನಿತಿನ್ ಫೋಟೋ ಶೇರ್ ಆಗುತ್ತಿದ್ದು, ಸಂತಾಪಗಳ ಸುರಿಮಳೆಯಾಗುತ್ತಿದೆ. ಇದನ್ನು ನೋಡಿ ನಟ ನಿತಿನ್ ಆಶ್ಚರ್ಯಚಕಿತರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಅವರು, ‘ನಾನಿನ್ನೂ ಸ*ತ್ತಿಲ್ಲ ಕಣ್ರಿ, ಬದುಕಿದ್ದೇನೆ. ರಿಪ್ ಹಾಕಿ ನನ್ನನ್ನು ಸಾಯಿಸ್ಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
‘ವರದಿ ಬಿತ್ತರಿಸುವಾಗ ಹೀಗೆ ಯಾರದ್ದೋ ಫೋಟೋ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಮಾಹಿತಿಯ ಪೋಸ್ಟ್ ಮತ್ತು ಪ್ರಸರಣಕ್ಕೆ ಸಾಮಾಜಿಕ ಮಾಧ್ಯಮ, ಸುದ್ದಿ ಮೂಲಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಇಬ್ಬರು ವಿಭಿನ್ನ ವ್ಯಕ್ತಿಗಳನ್ನು ಒಂದೇ ವ್ಯಕ್ತಿ ಎಂದು ಗುರುತಿಸುವುದು ಅತ್ಯಂತ ಬೇಜವಾಬ್ದಾರಿ. ಇದು ಎರಡು ಕುಟುಂಬಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ಎಂದು ನಿತಿನ್ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಈ ಸತ್ಯ ಸುದ್ದಿ ತಿಳಿಯದೆ, ಇದುವರೆಗೆ ಬದುಕಿರುವ ನಿತಿನ್‌ಗೆ ಅನೇಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಮತ್ತೆ ಕೆಲವರು ಕರೆ ಮಾಡಿ ಸುದ್ದಿಯನ್ನು ಕನ್ಫರ್ಮ್ ಮಾಡಿಕೊಂಡಿದ್ದಾರೆ. ಎಲ್ಲರ ಕರೆ ಸ್ವೀಕರಿಸಿ ಅವರಿಗೆ ಸ್ಪಷ್ಟನೆ ನೀಡುವಲ್ಲಿ ನಿತಿನ್ ಸುಸ್ತಾಗಿದ್ದರು. ಒಟ್ಟಾಗಿ ಫೋಟೋ ಹಂಚಿಕೊಂಡವನ ಪತ್ತೆ ಹಚ್ಚಿ, ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿತಿನ್ ಪೊಲೀಸರಿಗೆ ಒತ್ತಾಯಿಸಿದ್ದಾರೆ.