ತುಮಕೂರು: ಕರುಳಬಳ್ಳಿಗೆ ವಿಷ ಉಣಿಸಿದ ತಾಯಿ ತಾನೂ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತ್ಯಾಗಟೂರು ಬಳಿಯ ಬೊಮ್ಮರಸನಹಳ್ಳಿಯಲ್ಲಿ ನಡೆದಿದೆ.
ಇಂದ್ರಮ್ಮ ಸ್ವಂತ ಮಗಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿದ ಪರಿಣಾಮ ಮಗಳು ದೀಕ್ಷಿತಾ (6) ಸಾ*ವನ್ನಪ್ಪಿದ್ದು, ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಮಧುಗಿರಿ ಮೂಲದ ಇಂದ್ರಮ್ಮ ಬೊಮ್ಮರಸನಹಳ್ಳಿಯಲ್ಲಿ ವಾಸವಾಗಿದ್ದರು. ಶ್ರೀರಂಗಯ್ಯ ಎಂಬವರನ್ನು ಮದುವೆಯಾಗಿದ್ದ ಇಂದ್ರಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿ ಗಂಡನನ್ನು ಬಿಟ್ಟು ಮಗಳೊಂದಿಗೆ ವಾಸವಾಗಿದ್ದಳು.
ತನ್ನ ಹೆಣ್ಣು ಮಗುವನ್ನು ಕೊಂದು ತಾನು ವಿಷ ಕುಡಿದು ಇಂದ್ರಮ್ಮ ಆತ್ಮಹ*ತ್ಯೆಗೆ ಯತ್ನಿಸಿದ್ದಾಳೆ. ಇಂದ್ರಮ್ಮಳ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದುಕೊಂಡು ಮನೆಗೆ ಬಂದ ವ್ಯಕ್ತಿಯೋರ್ವರು ವಿಚಿತ್ರವಾಗಿ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಜೀಪಮುನ್ನೂರು ಗ್ರಾಮದ ನಾಗವಳಚ್ಚಿಲ್ ನಿವಾಸಿಯಾಗಿರುವ ಉಗ್ಗಪ್ಪ (70) ಎಂಬವರು ಕಾಣೆಯಾದ ವ್ಯಕ್ತಿ.
ಪಾಣೆಮಂಗಳೂರು ಯೂನಿಯನ್ ಬ್ಯಾಂಕ್‌ಗೆ ಹೋಗಿ ವೃದ್ಧಾಪ್ಯ ವೇತನ ಪಡೆದುಕೊಂಡು ವಾಪಸ್ಸು ಮನೆಗೆ ಬಂದವರು ತನ್ನ ಸೊಸೆಗೆ ಮೊಬೈಲ್ ನಲ್ಲಿ ಕರೆ ಮಾಡಿ ಏನು ವಿಷಯವನ್ನು ತಿಳಿಸಿದಂತೆ ಕರೆಯನ್ನು ಕಟ್ ಮಾಡಿದ್ದಾರೆ. ನಂತರ ಸೊಸೆ ತಿರುಗಿ ಪೋನ್ ಮಾಡಿದಾಗ ಪೋನ್ ರಿಸೀವ್ ಮಾಡಿರಲಿಲ್ಲ.
ಉಗ್ಗಪ್ಪ ಪೂಜಾರಿ ಅವರು ಮೊಬೈಲ್ ನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಹೋಗಿರುವ ವಿಚಾರ ಬಳಿಕ ಗಮನಕ್ಕೆ ಬಂದಿದೆ. ನಂತರ ಇವರ ಮಗ ಅನಿಲ್ ಕುಮಾರ್ ಅವರು ಎಲ್ಲೆಡೆ ಹುಡುಕಾಟ ಮಾಡಿದರೂ ಪತ್ತೆಯಾಗದ ಹಿನ್ನೆಲೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು/ಥೈಲ್ಯಾಂಡ್ : ಹೆರಿಗೆಯ ಸಮಯದಲ್ಲಿ ನರ್ಸ್‌ವೊಬ್ಬಳು ಮಹಿಳೆಯೋರ್ವಳ ಯೋ*ನಿಯಲ್ಲಿ ಶಸ್ತ್ರಚಿಕಿತ್ಸಾ ಸೂಜಿಯನ್ನು ಬಿಟ್ಟಿದ್ದು, ಸುಮಾರು ಎರಡು ದಶಕಗಳ ನಿರಂತರ ನೋವಿನಿಂದ ಬಳಲುತ್ತಿದ್ದ ಇದೀಗ ನೋವು ಹೆಚ್ಚಾದ ಕಾರಣ ಎಕ್ಸರೇ ತೆಗೆದಾಗ ಸೂಜಿ ಇರುವುದು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ.
ಕಳೆದ ವರ್ಷದವರೆಗೂ ಸೂಜಿ ಯೋ*ನಿಯೊಳಗೆ ಇರುವುದರ ಕುರಿತು ಮಹಿಳೆಗೆ ಯಾವುದೇ ಕಲ್ಪನೆಯೂ ಇರಲಿಲ್ಲ. ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್-ರೇ ಮಾಡಿದಾಗ ಆಕೆಯ ಖಾ*ಸಗಿ ಭಾಗದಲ್ಲಿ ಸೂಜಿ ಇರುವುದು ಕಂಡು ಬಂದಿದೆ. ಹೆರಿಗೆ ಸಮಯದಲ್ಲಿ 36 ವರ್ಷದ ಮಹಿಳೆ ಥಾಯ್ಲೆಡ್‌ನ ನಾರಾಥಿವಾಟ್ ಪ್ರಾಂತ್ಯದ ನಿವಾಸಿ ಪಾವೆನ್ ಫೌಂಡೇಶನ್ ಫಾರ್ ಚಿಲ್ಡ್ರನ್ ಆಂಡ್ ವುಮೆನ್ ಬಳಿ ಈ ಮಹಿಳೆ ಸಹಾಯವನ್ನು ಕೇಳಿದಾಗ ಈ ಮಾಹಿತಿ ಹೊರಬಿದ್ದಿದೆ.
’18 ವರ್ಷಗಳ ಹಿಂದೆ ಹೆರಿಗೆ ನೋವಿನ ಕಾರಣ ಅಪರೇಷನ್‌ಗೆ ಒಳಗಾಗಿದ್ದ ಮಹಿಳೆ, ಮಗು ಜನಿಸಿದ ಮೇಲೆ ಹೊಲಿಗೆ ಹಾಕುವ ವೇಳೆ ನರ್ಸ್ ಸೂಜಿಯನ್ನು ಯೋ*ನಿಯೆಲ್ಲಿಯೇ ಬಿಟ್ಟಿದ್ದಳು. ನಂತರ ವೈದ್ಯರು ತಮ್ಮ ಬೆರಳುಗಳ ಮೂಲಕ ಸೂಜಿಯನ್ನು ಹೊರತೆಗೆಯುವ ಪ್ರಯತ್ನ ಪಟ್ಟರೂ ಅದು ಹೊರಬಂದಿರಲಿಲ್ಲ. ಆಮೇಲೆ ಅತಿಯಾದ ರಕ್ತಸ್ರಾವ ಉಂಟಾಗಿ, ಸೂಜಿಯು ಯೋ*ನಿಯೊಳಗೆ ಉಳಿದಿದ್ದು, ವೈದ್ಯರು ತಮ್ಮ ಕೆಲಸ ಅಲ್ಲಿಗೇ ಮುಗಿಸಿದರು’ ಎಂದು ಮಹಿಳೆ ನೆನಪು ಮಾಡಿ ಹೇಳಿದ್ದಾರೆ.
ಅಂದಿನಿಂದ ಇಲ್ಲಿಯವರೆಗೆ ಮಹಿಳೆಗೆ ಆಗಾಗ ತೀವ್ರವಾದ ಕೆಳಹೊಟ್ಟೆ ನೋವು ಉಂಟಾಗುತ್ತಿತ್ತು. ಇದೀಗ ಸೂಜಿಯನ್ನು ಹೊರತೆಗೆಯಲು ಮಹಿಳೆಗೆ ಇನ್ನೊಂದು ಸರ್ಜರಿ ಮಾಡಬೇಕು. ಆದರೆ ದೇಹದಲ್ಲಿ ಸೂಜಿ ಅತ್ತಿತ್ತ ಹೋಗುತ್ತಿದ್ದ ಕಾರಣ ಸರ್ಜರಿ ವಿಳಂಬವಾಗಿದೆ ಎನ್ನಲಾಗಿದೆ.
ಮಹಿಳೆ ತಿಂಗಳಿಗೆ ನಾಲ್ಕು ಬಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ವೈದ್ಯಕೀಯ ವಿಮೆಯು ಆಕೆಯ ಹೆಚ್ಚಿನ ಚಿಕಿತ್ಸೆಯನ್ನು ಒಳಗೊಂಡಿರುತ್ತದೆಯಾದರೂ, ಸಾರಿಗೆ ವೆಚ್ಚಗಳು ಆರ್ಥಕವಾಗಿ ಆಕೆಯ ಮೇಲೆ ಹೊರೆಯಾಗಿದೆ. ಇನ್ನು ಸೂಜಿಯನ್ನು ಯಾವಾಗ ಹೊರತೆಗೆಯಲಾಗುತ್ತದೆ ಎನ್ನುವುದು ಇನ್ನು ಕೂಡಾ ನಿಶ್ಚಯವಾಗಿಲ್ಲ. ಈ ಕುರಿತು ಆಸ್ಪತ್ರೆ ಯಾವುದೇ ಪ್ರತಿಕ್ರಿಯೆಯೂ ನೀಡದ ಕಾರಣ, ಕಾನೂನು ಕ್ರಮ, ಪರಿಹಾರವೇನಾದರೂ ದೊರಕುತ್ತದೆಯೇ ಎಂಬುವುದೂ ತಿಳಿಯದೆ ಕುಟುಂಬ ಕಂಗಲಾಗಿದೆ.
ಮಂಗಳೂರು: ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ, ಸಂಹಿತೆ ಜಾರಿಗೊಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ಪಾಲಿಸುವಂತೆ ಪ್ರವೇಶ ದ್ವಾರದ ಬಳಿ ಸೂಚನಾ ಫಲಕ ಅಳವಡಿಸಲಾಗಿದೆ.
ದೇವರ ದರ್ಶನಕ್ಕೆ ಬರುವಾಗ ಸ್ವಚ್ಛ, ಶುಭ್ರ ಮತ್ತು ಸಭ್ಯ ಉಡುಪುಗಳನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ. ಪುರುಷರು ಪ್ಯಾಂಟ್- ಅಂಗಿ ಅಥವಾ ಲುಂಗಿ – ಅಂಗಿ, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ದೇವರ ದರ್ಶನ ಪಡೆಯುವಂತೆ ತಿಳಿಸಲಾಗಿದೆ.
ದೇವಸ್ಥಾನಕ್ಕೆ ಬರುವಾಗ ಭಕ್ತರು ಧರಿಸಬಹುದಾದ ವಸ್ತ್ರಗಳ ಮಾದರಿಯನ್ನು ಚಿತ್ರದ ಮೂಲಕ ಸೂಚನಾ ಫಲಕದಲ್ಲಿ ಹಾಕಲಾಗಿದೆ. ಅನೇಕ ವರ್ಷಗಳಿಂದ ಭಕ್ತರು ಮತ್ತು ಹಿಂದೂ ಪರ ಸಂಘಟನೆಗಳು ವಸ್ತ್ರ ಸಂಹಿತೆ ಜಾರಿಗೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯವರು ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನಾ ಫಲಕ ಅಳವಡಿಸಿದ್ದಾರೆ.