Wednesday, August 12, 2020

ಕೃಷ್ಣನಗರಿ ಉಡುಪಿಯಲ್ಲಿ ಕೊರೊನಾ ಮಹಾಮಾರಿಗೆ ಮತ್ತೊಬ್ಬ ವ್ಯಕ್ತಿ ಬಲಿ…

Array

ಆಧುನಿಕ ಷಹಜಾನ್….ಮಡಿದ ಪತ್ನಿಯನ್ನು ಮೂರ್ತಿ ರೂಪದಲ್ಲಿ ಮತ್ತೆ ಮನೆ ತುಂಬಿಕೊಂಡ ಪತಿ!

ಕೊಪ್ಪಳ : ಒಂದು ಅಪರೂಪದ ಪ್ರೇಮಕಥೆಗೆ ಕೊಪ್ಪಳ ಸಾಕ್ಷಿಯಾಗಿದೆ. ಎರಡು ವರ್ಷಗಳ ಹಿಂದೆ ಅಗಲಿದ ತಮ್ಮ ಪತ್ನಿಯ ನೆನಪಾರ್ಥವಾಗಿ ಮೇಣದ ಮೂರ್ತಿಯೊಂದಿಗೆ ಉದ್ಯಮಿಯೊಬ್ಬರು ಮನೆಯ ಗೃಹ ಪ್ರವೇಶ ನಡೆಸಿದ್ದಾರೆ. ಈ ಮೂಲಕ ಪತ್ನಿಯ ಮೇಲಿನ ಪ್ರೀತಿಯನ್ನು...

ಬೆಂಗಳೂರು ಗಲಭೆ – ಧಾರ್ಮಿಕ ಅವಹೇಳನಕಾರಿ ಫೋಸ್ಟ್ ಹಾಕಿದ ನವೀನ್ ಅರೆಸ್ಟ್

ಬೆಂಗಳೂರು ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಪ್ತನ ಧಾರ್ಮಿಕ ಅವಹೇಳನಕಾರಿ ಪೋಸ್ಟ್ ಗೆ ಹಿನ್ನಲೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ...

ಬೆಂಗಳೂರು ಗಲಭೆ : ಪೊಲೀಸ್ ಫೈರಿಂಗ್ ನಲ್ಲಿ ಮೂವರು ಸಾವು..ಕರ್ಫ್ಯೂ ಜಾರಿ..!

ಬೆಂಗಳೂರು ಗಲಭೆ : ಪೊಲೀಸ್ ಫೈರಿಂಗ್ ನಲ್ಲಿ ಮೂವರು ಸಾವು..ಕರ್ಫ್ಯೂ ಜಾರಿ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕರೊಬ್ಬರು ಫೇಸ್ ಬುಕ್‌ ನಲ್ಲಿ ಅವಹೇಳಕಾರಿ  ಪೋಸ್ಟ್​ ಮಾಡಿದ್ದರು ಎಂಬ ಕಾರಣಕ್ಕೆ ನಿನ್ನೆ...

ಗಲಭೆಕೋರರ ವಿರುದ್ದ ಕ್ರಮಕ್ಕೆ ಪೊಲೀಸರಿಗೆ ಸಂಪೂರ್ಣ ಅಧಿಕಾರ – ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಉಡುಪಿ ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿ ಇಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ...

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..!

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್‌ ಅವರ ಆಪ್ತರೂ ಆಗಿರುವಂತಹ ನವೀನ್‌ ಎಂಬುವವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ...

ಕೃಷ್ಣನಗರಿ ಉಡುಪಿಯಲ್ಲಿ ಕೊರೊನಾ ಮಹಾಮಾರಿಗೆ ಮತ್ತೊಬ್ಬ ವ್ಯಕ್ತಿ ಬಲಿ…

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ಹಾಗೂ ಮುಂಬಯಿಯಿಂದ ಊರಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ತಮ್ಮ ನಿವಾಸದಲ್ಲಿ ಮೃತಪಟ್ಟಿರುವ ಘಟನೆ ಜೂನ್ 18ರಂದು ಸಂಭವಿಸಿದೆ.

ಬಳಿಕ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಸದ್ಯ ಸ್ಥಳೀಯರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಮುಂಬೈಯಿಂದ ಬಂದು ತೆಕ್ಕಟ್ಟೆಯ ತನ್ನ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಇವರ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೊನಾ ಇರುವುದು ಸಾಬೀತಾಗಿದೆ.

ಮುಂಬೈಯಲ್ಲಿದ್ದ 54 ವರ್ಷದ ಈ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಜಾಂಡೀಸ್ ರೋಗದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ತನ್ನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನಲೆಯಲ್ಲಿ ಈ ವ್ಯಕ್ತಿ ಪತ್ನಿ ಹಾಗೂ ಮಗಳು ಸಹಿತ ಜೂನ್ 18ರ ಮಧ್ಯಾಹ್ನದಂದು ಮುಂಬೈಯಿಂದ ತೆಕ್ಕಟ್ಟೆಯ ತನ್ನ ನಿವಾಸಕ್ಕೆ ವಾಹನದಲ್ಲಿ ಆಗಮಿಸಿದ್ದರು.

ಮುಂಬೈನಿಂದ ಈ ಕುಟುಂಬ ತೆಕ್ಕೆಟ್ಟೆಗೆ ಆಗಮಿಸಿರುವ ವಿಚಾರ ತಿಳಿದು ಅನುಮಾನಗೊಂಡ ಸ್ಥಳಿಯರು ಈ ವಿಚಾರವನ್ನು ಸಂಬಂಧಪಟ್ಟ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದರು.

ಬಳಿಕ ಕೋವಿಡ್ ವಾರಿಯರ್ಸ್ ಅವರ ಮನೆಗೆ ಬಂದು ಸೂಕ್ತ ಮಾಹಿತಿಯನ್ನು ಕಲೆ ಹಾಕಿದ್ದರು.

ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈ ವ್ಯಕ್ತಿ ನಿನ್ನೆ (ಜೂನ್ 18) ಸಾಯಂಕಾಲ 4.30ರ ವೇಳೆಗೆ ತನ್ನ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿದೆ.

ಅದರಲ್ಲೂ ಮುಂಬೈ ಸಹಿತ ಹೊರ ಜಿಲ್ಲೆಗಳಿಂದ ಆಗಮಿಸಿದವರಿಂದ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ವಿಷಯ ಹೀಗಿದ್ದರೂ, ಮೃತ ವ್ಯಕ್ತಿ ಹಾಗೂ ಅವರ ಜತೆ ಮುಂಬೈ ನಗರದಿಂದ ಆಗಮಿಸಿದ ಪತ್ನಿ ಹಾಗೂ ಮಗಳ ಗಂಟಲು ದ್ರವದ ಮಾದರಿಯನ್ನು ತಪಾಸಣೆಗಾಗಿ ಲ್ಯಾಬ್‌ ಗೆ ಕಳುಹಿಸಲಾಗಿತ್ತು.

ಮಾತ್ರವಲ್ಲದೇ ವ್ಯಕ್ತಿಯ ಶವವನ್ನು ರಾತ್ರಿ ಪೂರ್ತಿ ಮನೆಯಲ್ಲೇ ಇರಿಸಲಾಗಿತ್ತು.

ಈ ಸುದ್ದಿ ಸುತ್ತಮುತ್ತ ಹರಡುತ್ತಿದ್ದಂತೆ, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ ಈ ವ್ಯಕ್ತಿ ತನ್ನ ಕುಟುಂಬದವರ ಜೊತೆ ಮುಂಬಯಿನಿಂದ ತೆಕ್ಕಟ್ಟೆಗೆ ಆಗಮಿಸುತ್ತಿರುವ ವಿಷಯ ಇಲ್ಲಿನ ಕೆಲವೇ ಮಂದಿಗೆ ಮೊದಲೇ ತಿಳಿದಿತ್ತು ಎಂಬ ಮಾತುಗಳೂ ಇದೀಗ ಕೇಳಿ ಬರಲಾರಂಭಿಸಿದೆ.

ಆದರೆ ಈ ಕುರಿತಾಗಿ ಯಾವುದೇ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಕುರಿತಾಗಿ ಗ್ರಾಮಸ್ಥರು ಇದೀಗ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಮತ್ತು ಈ ಘಟನೆ ಸುತ್ತಮುತ್ತಲಿನ ಪರಿಸರದ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇತ್ತ ಮೃತ ವ್ಯಕ್ತಿ ಅನಾರೋಗ್ಯಪೀಡಿತರಾಗಿದ್ದ ಕಾರಣ ಮತ್ತು ಈ ಕುಟುಂಬ ಕೊರೊನಾ ಹಾಟ್ ಸ್ಪಾಟ್ ಮುಂಬೈನಿಂದ ಆಗಮಿಸಿದ್ದ ಕಾರಣ ಈ ಮನೆಯನ್ನು ಜಿಲ್ಲಾಡಳಿತ ಇದೀಗ ಸೀಲ್ ಡೌನ್ ಮಾಡಿದೆ.

ಮೃತ ವ್ಯಕ್ತಿಯ ಪತ್ನಿ ಮತ್ತು ಮಗಳು ಈ ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದು ಅವರ ತಪಾಸಣಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನು ಉಡುಪಿ ಜಿಲ್ಲೆಯಲ್ಲಿಂದು 11 ಜನರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 1050ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 13,227 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 1050 ಜನರಿಗೆ ಕೋವಿಡ್-19 ಪಾಸಿಟಿವ್ ವರದಿಯಾಗಿದೆ.

ಒಟ್ಟು 11,946 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿಯಾಗಿದೆ. ಇನ್ನೂ 231 ಜನರ ವರದಿ ಜಿಲ್ಲಾಡಳಿತರ ಕೈಸೇರಲು ಬಾಕಿಯಿದೆ.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.