ದೇಹದ ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ವಿಭಿನ್ನವಾಗಿರುತ್ತದೆ. ಕೆಲವರು ಕೇವಲ ಕಟ್ಟುನಿಟ್ಟಿನ ಆಹಾರಕ್ರಮ ಮತ್ತು ಪದ್ದತಿಯನ್ನು ಅನುಸರಿಸಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡರೆ, ಇನ್ನೂ ಕೆಲವರು ಕಟ್ಟುನಿಟ್ಟಿನ ಡಯಟ್ ಜೊತೆಗೆ ಜಿಮ್‌ಗೆ ಹೋಗಿ ಕಠಿಣವಾದ ವ್ಯಾಯಾಮಗಳನ್ನು ಮಾಡಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ತೂಕ ಇಳಿಸಿಕೊಂಡ ಪ್ರಕ್ರಿಯೆ ಸ್ವಲ್ಪ ವಿಭಿನ್ನವಾಗಿದೆ ನೋಡಿ.
ಹೌದು ಅಂಕುರ್ ಛಾಬ್ರಾ ಅವರು ಕೇವಲ 90 ದಿನಗಳಲ್ಲಿ ಎಂದರೆ ಮೂರು ತಿಂಗಳುಗಳಲ್ಲಿ ಸುಮಾರು 32 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಮೊದಲೆಲ್ಲಾ ತಮ್ಮ ಹೆಚ್ಚಿನ ತೂಕದಿಂದ ತುಂಬಾನೇ ಸಮಸ್ಯೆಗಳನ್ನು ಎದುರಿಸುತ್ತಿದ್ದ ಇವರು ಈಗ ತೂಕ ಕಡಿಮೆ ಮಾಡಿಕೊಂಡು ಮೊದಲಿಗಿಂತ ಫಿಟ್ ಆಂಡ್ ಫೈನ್ ಆಗಿದ್ದಾರೆ.
ಅಂಕುರ್ ಛಾಬ್ರಾ
ತೂಕ ಜಾಸ್ತಿ ಇದ್ದಾಗ ಅಂಕುರ್ ಅವರಿಗೆ ತುಂಬಾನೇ ಸಮಸ್ಯೆಗಳು ಕಾಡುತ್ತಿದ್ದವಂತೆ.. ಅಧಿಕ ತೂಕವನ್ನು ಹೊಂದಿದ್ದ ಕಾರಣ ನನ್ನ ಕುಟುಂಬದ ಸದಸ್ಯರೊಡನೆ ಹೆಚ್ಚು ಕಾಲ ಓಡಾಡಲು ಮತ್ತು ಅವರೊಂದಿಗೆ ಉತ್ಸಾಹದಿಂದ ಸಮಯ ಕಳೆಯಲು ತುಂಬಾನೇ ಕಷ್ಟವಾಗುತ್ತಿತ್ತು, ಇದೇ ನನಗೆ ತೂಕ ಇಳಿಸಿಕೊಳ್ಳಲು ಮುಖ್ಯವಾದ ಪ್ರೇರಣೆ ಆಯಿತು ಅಂತ ಹೇಳುತ್ತಾರೆ ಅಂಕುರ್.
90 ದಿನಗಳಲ್ಲಿ 32 ಕೆಜಿ ತೂಕವನ್ನು ಹೇಗೆ ಕಡಿಮೆ ಮಾಡಿಕೊಂಡಿದ್ದಾರೆ?
ಅಂಕುರ್ ಛಾಬ್ರಾ ಅವರು ಅತ್ಯಂತ ಸರಳವಾದ ಸಮರ್ಪಿತ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸುವ ಮೂಲಕ ಸುಮಾರು 90 ದಿನಗಳಲ್ಲಿ 32 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅಂಕುರ್ ಅವರು ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೆಚ್ಚಾಗಿ ತಮ್ಮ ಡಯಟ್‌ನಲ್ಲಿ ಸೇರಿಸಿಕೊಂಡರು. ಕೇವಲ ಪ್ರೋಟೀನ್ ಭರಿತ ಆಹಾರ ಮತ್ತು ಅವರು ದಿನಕ್ಕೆ ಕನಿಷ್ಠ 3-4 ಗಂಟೆಗಳ ಕಾಲ ವರ್ಕೌಟ್ ಮಾಡ್ತಿದ್ದಾಗೆ ಹೇಳಿದ್ದಾರೆ. ಅಂಕುರ್ ಛಾಬ್ರಾ ಅವರ ವಿವರವಾದ ದಿನಚರಿ ಹೀಗಿತ್ತು..
ಬೆಳಿಗ್ಗೆಯ ಆಹಾರ
ಅಂಕುರ್ ಅವರು ಬೆಳಗ್ಗೆ ಸುಮಾರು 5 ಗಂಟೆಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳನ್ನು ನೆನೆಸಿಟ್ಟ ನೀರು, ಜೀರಿಗೆ ನೀರು ಅಥವಾ ಅಜ್ವೈನ್ ನೀರು ಹೀಗೆ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅದರ ಜೊತೆಗೆ 5 ನೆನೆಸಿಟ್ಟ ಬಾದಾಮಿಗಳನ್ನು ಸೇವಿಸಿದರಂತೆ. ಬೆಳಗಿನ ಉಪಾಹಾರಕ್ಕಾಗಿ, 7 ರಿಂದ 7.30 ರ ನಡುವೆ ಸ್ವಲ್ಪ ಪ್ರಮಾಣದ ಪೋಹಾವನ್ನು, ಮೂರು ಮೊಟ್ಟೆಯ ಬಿಳಿ ಭಾಗಗಳೊಂದಿಗೆ ಮತ್ತು ಸಕ್ಕರೆ ಇಲ್ಲದ ಬ್ಲ್ಯಾಕ್ ಕಾಫಿಯನ್ನು ಸೇವಿಸಿದರಂತೆ.
ಬೆಳಗಿನ ಸ್ನ್ಯಾಕ್ಸ್
11ಗಂಟೆಗೆ ಹಣ್ಣುಗಳೊಂದಿಗೆ ಒಂದು ಕಪ್ ಗ್ರೀನ್ ಟೀ
ಮಧ್ಯಾಹ್ನ ಊಟ
ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹಣ್ಣುಗಳು ಮತ್ತು ಮೊಳಕೆಕಾಳುಗಳನ್ನು ಸೇವಿಸಿದರಂತೆ. ಸಾಂದರ್ಭಿಕವಾಗಿ, ಅವರು ಸಾಂಬಾರ್ ಮತ್ತು ಒಂದು ಲೋಟ ಮಜ್ಜಿಗೆಯೊಂದಿಗೆ ಒಂದು ರಾಗಿ ದೋಸೆ ಅಥವಾ ತರಕಾರಿ, ಮಜ್ಜಿಗೆ ಮತ್ತು ಸಲಾಡ್‌ನೊಂದಿಗೆ ಒಂದು ಚಪಾತಿಯನ್ನು ಸೇವಿಸುತ್ತಿದ್ದರಂತೆ.
ಮಧ್ಯಾಹ್ನ ಸ್ನ್ಯಾಕ್ಸ್
ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆಂಗಿನ ನೀರು ಅಥವಾ ಹರ್ಬಲ್ ಟೀ ಸೇವಿಸಿದರಂತೆ, ಕೆಲವೊಮ್ಮೆ ಅದಕ್ಕೆ ಪೂರಕವಾಗಿ ಹುರಿದ ಚನಾ, ಮಖನಾ ಅಥವಾ ಮಿಶ್ರ ಬೀಜಗಳನ್ನು ತೆಗೆದುಕೊಳ್ಳುತ್ತಿದ್ದರು.
ಸಂಜೆಯೇ ರಾತ್ರಿ ಊಟ ಫಿನಿಶ್
ಸಂಜೆ 5 ಗಂಟೆಯ ಸುಮಾರಿಗೆ ಐದು ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ 100 ಗ್ರಾಂ ಮಿಶ್ರ ತರಕಾರಿಗಳ ಜೊತೆಗೆ ಒಂದು ಚಪಾತಿ ಅಥವಾ ಒಂದು ಮೂಂಗ್, ಓಟ್ಸ್ ಅಥವಾ ಸೂಜಿ ಚಿಲ್ಲಾ ತೆಗೆದುಕೊಳ್ಳುತ್ತಿದ್ದರು. ಊಟದ ನಂತರ ಸರಿ ಸುಮಾರು ಒಂದೂವರೆ ಗಂಟೆಗಳ ನಂತರ, ಒಂದು ಕಪ್ ಗ್ರೀನ್ ಟೀ ಅಥವಾ ತುಳಸಿ ಬೀಜಗಳ ರೂಪದಲ್ಲಿ ರಾತ್ರಿ ಪಾನೀಯವನ್ನು ಸೇವಿಸಿದರಂತೆ. ಸದಾ ಕಾಲ ಹೈಡ್ರೆಟ್ ಆಗಿರಲಿಕ್ಕೆ ನಾನು ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕುಡಿಯುತ್ತೇನೆ ಮತ್ತು ದಿನಕ್ಕೆ ಎರಡು ಬಾರಿ ಸಿಹಿಗೊಳಿಸದ ಬ್ಲ್ಯಾಕ್ ಕಾಫಿಯನ್ನು ಕುಡಿಯುತ್ತೇನೆ ಅಂತ ಅಂಕುರ್ ಹೇಳಿದ್ದಾರೆ.
ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದುಕೊಂಡು ಮನೆಗೆ ಬಂದ ವ್ಯಕ್ತಿಯೋರ್ವರು ವಿಚಿತ್ರವಾಗಿ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಜೀಪಮುನ್ನೂರು ಗ್ರಾಮದ ನಾಗವಳಚ್ಚಿಲ್ ನಿವಾಸಿಯಾಗಿರುವ ಉಗ್ಗಪ್ಪ (70) ಎಂಬವರು ಕಾಣೆಯಾದ ವ್ಯಕ್ತಿ.
ಪಾಣೆಮಂಗಳೂರು ಯೂನಿಯನ್ ಬ್ಯಾಂಕ್‌ಗೆ ಹೋಗಿ ವೃದ್ಧಾಪ್ಯ ವೇತನ ಪಡೆದುಕೊಂಡು ವಾಪಸ್ಸು ಮನೆಗೆ ಬಂದವರು ತನ್ನ ಸೊಸೆಗೆ ಮೊಬೈಲ್ ನಲ್ಲಿ ಕರೆ ಮಾಡಿ ಏನು ವಿಷಯವನ್ನು ತಿಳಿಸಿದಂತೆ ಕರೆಯನ್ನು ಕಟ್ ಮಾಡಿದ್ದಾರೆ. ನಂತರ ಸೊಸೆ ತಿರುಗಿ ಪೋನ್ ಮಾಡಿದಾಗ ಪೋನ್ ರಿಸೀವ್ ಮಾಡಿರಲಿಲ್ಲ.
ಉಗ್ಗಪ್ಪ ಪೂಜಾರಿ ಅವರು ಮೊಬೈಲ್ ನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಹೋಗಿರುವ ವಿಚಾರ ಬಳಿಕ ಗಮನಕ್ಕೆ ಬಂದಿದೆ. ನಂತರ ಇವರ ಮಗ ಅನಿಲ್ ಕುಮಾರ್ ಅವರು ಎಲ್ಲೆಡೆ ಹುಡುಕಾಟ ಮಾಡಿದರೂ ಪತ್ತೆಯಾಗದ ಹಿನ್ನೆಲೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು/ಥೈಲ್ಯಾಂಡ್ : ಹೆರಿಗೆಯ ಸಮಯದಲ್ಲಿ ನರ್ಸ್‌ವೊಬ್ಬಳು ಮಹಿಳೆಯೋರ್ವಳ ಯೋ*ನಿಯಲ್ಲಿ ಶಸ್ತ್ರಚಿಕಿತ್ಸಾ ಸೂಜಿಯನ್ನು ಬಿಟ್ಟಿದ್ದು, ಸುಮಾರು ಎರಡು ದಶಕಗಳ ನಿರಂತರ ನೋವಿನಿಂದ ಬಳಲುತ್ತಿದ್ದ ಇದೀಗ ನೋವು ಹೆಚ್ಚಾದ ಕಾರಣ ಎಕ್ಸರೇ ತೆಗೆದಾಗ ಸೂಜಿ ಇರುವುದು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ.
ಕಳೆದ ವರ್ಷದವರೆಗೂ ಸೂಜಿ ಯೋ*ನಿಯೊಳಗೆ ಇರುವುದರ ಕುರಿತು ಮಹಿಳೆಗೆ ಯಾವುದೇ ಕಲ್ಪನೆಯೂ ಇರಲಿಲ್ಲ. ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್-ರೇ ಮಾಡಿದಾಗ ಆಕೆಯ ಖಾ*ಸಗಿ ಭಾಗದಲ್ಲಿ ಸೂಜಿ ಇರುವುದು ಕಂಡು ಬಂದಿದೆ. ಹೆರಿಗೆ ಸಮಯದಲ್ಲಿ 36 ವರ್ಷದ ಮಹಿಳೆ ಥಾಯ್ಲೆಡ್‌ನ ನಾರಾಥಿವಾಟ್ ಪ್ರಾಂತ್ಯದ ನಿವಾಸಿ ಪಾವೆನ್ ಫೌಂಡೇಶನ್ ಫಾರ್ ಚಿಲ್ಡ್ರನ್ ಆಂಡ್ ವುಮೆನ್ ಬಳಿ ಈ ಮಹಿಳೆ ಸಹಾಯವನ್ನು ಕೇಳಿದಾಗ ಈ ಮಾಹಿತಿ ಹೊರಬಿದ್ದಿದೆ.
’18 ವರ್ಷಗಳ ಹಿಂದೆ ಹೆರಿಗೆ ನೋವಿನ ಕಾರಣ ಅಪರೇಷನ್‌ಗೆ ಒಳಗಾಗಿದ್ದ ಮಹಿಳೆ, ಮಗು ಜನಿಸಿದ ಮೇಲೆ ಹೊಲಿಗೆ ಹಾಕುವ ವೇಳೆ ನರ್ಸ್ ಸೂಜಿಯನ್ನು ಯೋ*ನಿಯೆಲ್ಲಿಯೇ ಬಿಟ್ಟಿದ್ದಳು. ನಂತರ ವೈದ್ಯರು ತಮ್ಮ ಬೆರಳುಗಳ ಮೂಲಕ ಸೂಜಿಯನ್ನು ಹೊರತೆಗೆಯುವ ಪ್ರಯತ್ನ ಪಟ್ಟರೂ ಅದು ಹೊರಬಂದಿರಲಿಲ್ಲ. ಆಮೇಲೆ ಅತಿಯಾದ ರಕ್ತಸ್ರಾವ ಉಂಟಾಗಿ, ಸೂಜಿಯು ಯೋ*ನಿಯೊಳಗೆ ಉಳಿದಿದ್ದು, ವೈದ್ಯರು ತಮ್ಮ ಕೆಲಸ ಅಲ್ಲಿಗೇ ಮುಗಿಸಿದರು’ ಎಂದು ಮಹಿಳೆ ನೆನಪು ಮಾಡಿ ಹೇಳಿದ್ದಾರೆ.
ಅಂದಿನಿಂದ ಇಲ್ಲಿಯವರೆಗೆ ಮಹಿಳೆಗೆ ಆಗಾಗ ತೀವ್ರವಾದ ಕೆಳಹೊಟ್ಟೆ ನೋವು ಉಂಟಾಗುತ್ತಿತ್ತು. ಇದೀಗ ಸೂಜಿಯನ್ನು ಹೊರತೆಗೆಯಲು ಮಹಿಳೆಗೆ ಇನ್ನೊಂದು ಸರ್ಜರಿ ಮಾಡಬೇಕು. ಆದರೆ ದೇಹದಲ್ಲಿ ಸೂಜಿ ಅತ್ತಿತ್ತ ಹೋಗುತ್ತಿದ್ದ ಕಾರಣ ಸರ್ಜರಿ ವಿಳಂಬವಾಗಿದೆ ಎನ್ನಲಾಗಿದೆ.
ಮಹಿಳೆ ತಿಂಗಳಿಗೆ ನಾಲ್ಕು ಬಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ವೈದ್ಯಕೀಯ ವಿಮೆಯು ಆಕೆಯ ಹೆಚ್ಚಿನ ಚಿಕಿತ್ಸೆಯನ್ನು ಒಳಗೊಂಡಿರುತ್ತದೆಯಾದರೂ, ಸಾರಿಗೆ ವೆಚ್ಚಗಳು ಆರ್ಥಕವಾಗಿ ಆಕೆಯ ಮೇಲೆ ಹೊರೆಯಾಗಿದೆ. ಇನ್ನು ಸೂಜಿಯನ್ನು ಯಾವಾಗ ಹೊರತೆಗೆಯಲಾಗುತ್ತದೆ ಎನ್ನುವುದು ಇನ್ನು ಕೂಡಾ ನಿಶ್ಚಯವಾಗಿಲ್ಲ. ಈ ಕುರಿತು ಆಸ್ಪತ್ರೆ ಯಾವುದೇ ಪ್ರತಿಕ್ರಿಯೆಯೂ ನೀಡದ ಕಾರಣ, ಕಾನೂನು ಕ್ರಮ, ಪರಿಹಾರವೇನಾದರೂ ದೊರಕುತ್ತದೆಯೇ ಎಂಬುವುದೂ ತಿಳಿಯದೆ ಕುಟುಂಬ ಕಂಗಲಾಗಿದೆ.
ಮಂಗಳೂರು: ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ, ಸಂಹಿತೆ ಜಾರಿಗೊಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ಪಾಲಿಸುವಂತೆ ಪ್ರವೇಶ ದ್ವಾರದ ಬಳಿ ಸೂಚನಾ ಫಲಕ ಅಳವಡಿಸಲಾಗಿದೆ.
ದೇವರ ದರ್ಶನಕ್ಕೆ ಬರುವಾಗ ಸ್ವಚ್ಛ, ಶುಭ್ರ ಮತ್ತು ಸಭ್ಯ ಉಡುಪುಗಳನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ. ಪುರುಷರು ಪ್ಯಾಂಟ್- ಅಂಗಿ ಅಥವಾ ಲುಂಗಿ – ಅಂಗಿ, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ದೇವರ ದರ್ಶನ ಪಡೆಯುವಂತೆ ತಿಳಿಸಲಾಗಿದೆ.
ದೇವಸ್ಥಾನಕ್ಕೆ ಬರುವಾಗ ಭಕ್ತರು ಧರಿಸಬಹುದಾದ ವಸ್ತ್ರಗಳ ಮಾದರಿಯನ್ನು ಚಿತ್ರದ ಮೂಲಕ ಸೂಚನಾ ಫಲಕದಲ್ಲಿ ಹಾಕಲಾಗಿದೆ. ಅನೇಕ ವರ್ಷಗಳಿಂದ ಭಕ್ತರು ಮತ್ತು ಹಿಂದೂ ಪರ ಸಂಘಟನೆಗಳು ವಸ್ತ್ರ ಸಂಹಿತೆ ಜಾರಿಗೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯವರು ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನಾ ಫಲಕ ಅಳವಡಿಸಿದ್ದಾರೆ.