LATEST NEWS
ಬಾಳೆಹಣ್ಣಿನ ಮೇಲೆ ಕಾಲಿಟ್ಟು ಜಾರಿದ ವ್ಯಕ್ತಿ.. ತೇರಿನ ಚಕ್ರದಡಿಗೆ ಸಿಲುಕಿ ಸಾ*ವು
Published
8 months agoon
By
NEWS DESK2ವಿಜಯನಗರ: ಶ್ರೀ ಜಂಬುನಾಥ ರಥೋತ್ಸವ ಸಾಗುತ್ತಿರುವಾಗ ತೇರಿನ ಚಕ್ರದಡಿಗೆ ಓರ್ವ ವ್ಯಕ್ತಿ ಜಾರಿ ಬಿದ್ದು ಸಾ*ವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ರಾಮಪ್ಪ(49 ರಥದ ಚಕ್ರದಡಿ ಸಿಲುಕಿ ಮೃ*ತಪಟ್ಟಿರುವ ವ್ಯಕ್ತಿ. ಇವರು ರಥ ಕಟ್ಟುವ ಕೆಲಸ ಮಾಡುವರಾಗಿದ್ದರು. ಹೊಸಪೇಟೆಯಲ್ಲಿ ಶ್ರೀ ಜಂಬುನಾಥ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಎಲ್ಲ ಜನರು ಸಂಭ್ರಮದಿಂದ ತೇರನ್ನು ಎಳೆಯುತ್ತಿದ್ದರು. ಈ ವೇಳೆ ಭಕ್ತರು ಎಸೆದ ಬಾಳೆಹಣ್ಣಿನ ಮೇಲೆ ರಾಮಪ್ಪ ಕಾಲಿಟ್ಟಿದ್ದಾರೆ. ತಕ್ಷಣ ಕಾಲು ಜಾರಿದ್ದರಿಂದ ತೇರಿನ ಚಕ್ರದಡಿಗೆ ಬಿದ್ದಿದ್ದಾರೆ.
ತೇರಿನ ಚಕ್ರ ದೇಹದ ಮೇಲೆ ಹೋಗಿದ್ದರಿಂದ ವ್ಯಕ್ತಿ ಮೃ*ತಪಟ್ಟದ್ದಾರೆ. ಈ ಘಟನೆ ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
You may like
LATEST NEWS
ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?
Published
7 minutes agoon
22/12/2024By
NEWS DESK3ಮಂಗಳೂರು/ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಸಂಪುಟದ ಸಚಿವರಿಗೆ ಶನಿವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಗೃಹ ಖಾತೆಯ ಜೊತೆಗೆ ಇಂಧನ, ಕಾನೂನು ಮತ್ತು ನ್ಯಾಯಾಂಗ, ಸಿಬ್ಬಂದಿ ಆಡಳಿತ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಖಾತೆಗಳನ್ನು ಸಿಎಂ ದೇವೇಂದ್ರ ಫಡ್ನವೀಸ್ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ನಗರಾಭಿವೃದ್ದಿ, ವಸತಿ ಮತ್ತು ಲೋಕೋಪಯೋಗಿ ಖಾತೆಗಳು ಹಂಚಿಕೆಯಾಗಿದ್ದರೆ, ಮತ್ತೋರ್ವ ಉಪ ಮುಖ್ಯಮಂತ್ರಿ ಅಜಿತ್ ಪವರ್ ಅವರಿಗೆ ಹಣಕಾಸು ಮತ್ತು ಯೋಜನೆ ಹಾಗೂ ಅಬಕಾರಿ ಖಾತೆ ಹಂಚಿಕೆಯಾಗಿವೆ.
ಇದನ್ನೂ ಓದಿ: ತೆಲಂಗಾಣ ಸರ್ಕಾರದಿಂದ ಟಾಲಿವುಡ್ಗೆ ಭಾರೀ ದೊಡ್ಡ ಹೊಡೆತ !!
ಉಳಿದಂತೆ ಉದಯ್ ಸಾಮಂತ್ ಅವರಿಗೆ ಕೈಗಾರಿಕೆ, ಪಂಕಜಾ ಮುಂಡೆ ಅವರಿಗೆ ಪರಿಸರ, ಮಾಣಿಕ್ರಾವ್ ಕೊಕಾಟೆ ಅವರಿಗೆ ಕೃಷಿ ಖಾತೆಗಳನ್ನು ನೀಡಲಾಗಿದೆ. ಧನಂಜಯ್ ಮುಂಡೆ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಅಶೋಕ್ ಅವರಿಗೆ ಬುಡಕಟ್ಟು ಅಭಿವೃದ್ದಿ, ಆಶಿಶ್ ಶೆಲಾರ್ ಅವರಿಗೆ ಐಟಿ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿ ವಹಿಸಲಾಗಿದೆ.
ಇನ್ನೂ ಬಿಜೆಪಿಯ ಚಂದ್ರಶೇಖರ್ ಬಾವಂಕುಲೆಗೆ ಕಂದಾಯ, ಶಿವಸೇನೆಯ ದಾದಾಜಿ ಭುಸೆಗೆ ಶಾಲಾ ಶಿಕ್ಷಣ ಖಾತೆ ನೀಡಲಾಗಿದೆ. ಜಲಸಂಪನ್ಮೂಲ ಖಾತೆಯನ್ನು ಬಿಜೆಪಿಯ ಇಬ್ಬರು ಸಚಿವರುಗಳಾದ ರಾಧಾಕೃಷ್ಣ ವಿಖೆ ಪಾಟೇಲ್ ಮತ್ತು ಗಿರೀಶ್ ಮಹಾಜನ್ ನಡುವೆ ಹಂಚಿಕೆ ಮಾಡಲಾಗಿದೆ.
ಡಿಸೆಂಬರ್ 5ರಂದು ಫಡ್ನವೀಸ್, ಏಕನಾಥ ಶಿಂಧೆ, ಅಜಿತ್ ಪವರ್ ಸಿಎಂ, ಡಿಸಿಎಂಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಡಿಸೆಂಬರ್ 15 ರಂದು 39 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
LATEST NEWS
ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!
Published
9 minutes agoon
22/12/2024ಮಂಗಳೂರು/ಕೋಲ್ಕತಾ: ದೇಗುಲಗಳ ಮೇಲೆ, ಹಿಂದೂಗಳ ಮೇಲೆ ಅಲ್ಲಿನ ಮ*ತಾಂಧರು ದಾಳಿ ನಡೆಸುತ್ತಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದು, ಇದೀಗ ನಿಷೇಧಿತ ಉ*ಗ್ರ ಸಂಘಟನೆಯೊಂದು ಭಾರತದೊಳಗೆ ನುಗ್ಗಿ ಹಿಂದೂ ನಾಯಕರ ಹ*ತ್ಯೆ ಮತ್ತು ರಸ್ತೆ ಕಾರಿಡಾರ್ ಸ್ಫೋ*ಟದ ಮೂಲಕ ಆರ್ಥಿಕ ವಿನಾಶಕ್ಕೆ ಸಂಚು ರೂಪಿಸುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕಳೆದ ಕೆಲ ಹಿಂದೆ ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂನಲ್ಲಿ ಬಾಂಗ್ಲಾದೇಶ ಮೂಲದ ಅನ್ಸರ್ ಅಲ್ ಇಸ್ಲಾಂ ಸಂಘಟನೆಗೆ ಸೇರಿದ 8 ಶಂಕಿತ ಉ*ಗ್ರರನ್ನು ಬಂಧಿಸಲಾಗಿತ್ತು. ಈಶಾನ್ಯ ರಾಜ್ಯಗಳಲ್ಲಿನ ಪ್ರಮುಖ ಹಿಂದೂ ನಾಯಕರ ಹ*ತ್ಯೆಯ ಉದ್ದೇಶವನ್ನು ಉ*ಗ್ರರು ಹೊಂದಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಳದ ಸಿಲಿಗುರಿಗೆ ಈಶಾನ್ಯ ರಾಜ್ಯಗಳ ನಂಟು ಬೆಸೆಯುವ ‘ಚಿಕನ್ ನೆಕ್’ ಎಂದು ಕರೆಯಲಾಗುವ ಸಿಲಿಗುರಿ ಕಾರಿಡಾರ್ ರಸ್ತೆ ಸ್ಫೋ*ಟಗೊಳಿಸುವ ಮೂಲಕ ಇಡೀ ಪ್ರದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಈಶಾನ್ಯ ರಾಜ್ಯಗಳಿಗೆ ಭಾರತವನ್ನು ಬೆಸೆಯುವ ಏಕೈಕ ರಸ್ತೆ ಮಾರ್ಗವಾಗಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವಧಿಯಲ್ಲಿ ನಡೆದಿದ್ದ ಬಾಂಗ್ಲಾ ಪ್ರಜೆಗಳ ಬಲವಂತದ ನಾಪತ್ತೆ ಹಿಂದೆ ಭಾರತದ ಕೈವಾಡವಿದೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರ ರಚಿಸಿರುವ ಸಮಿತಿಯ ವರದಿ ಹೇಳಿದೆ.ಬಾಂಗ್ಲಾದ ಸುದ್ದಿ ಸಂಸ್ಥೆ ಬಾಂಗ್ಲಾದೇಶದ ಸಂಗ್ಬಾದ್ ಸಂಸ್ಥೆಯು ಬಲವಂತದ ನಾಪತ್ತೆಯ ಕುರಿತಾದ ತನಿಖಾ ವರದಿಯನ್ನು ಉಲ್ಲೇಖಿಸಿ ವರದಿ ನೀಡಿದ್ದು, ‘ಬಾಂಗ್ಲಾದೇಶದ ಬಲವಂತದ ನಾಪತ್ತೆ ಪ್ರಕರಣಗಳಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಸಾರ್ವಜನಿಕ ದಾಖಲೆಯ ವಿಷಯವಾಗಿದೆ. ಭಾರತದಲ್ಲಿ ಇನ್ನೂ ಬಂಧಿಯಾಗಿರುವ ಯಾವುದೇ ಬಾಂಗ್ಲಾದೇಶದ ನಾಯಕರನ್ನು ಗುರುತಿಸಲು ತಮ್ಮ ಪ್ರಯತ್ನಗಳನ್ನು ವಿಸ್ತರಿಸಲು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳಿಗೆ ಶಿಫಾರಸ್ಸು ಮಾಡುತ್ತೇವೆ. ಬಾಂಗ್ಲಾದೇಶದ ಹೊರಗೆ ಈ ಜಾಡು ಅನುಸರಿಸುವುದು ನ್ಯಾಯದ ವ್ಯಾಪ್ತಿಯನ್ನು ಮೀರುತ್ತದೆ’ ಎಂದು ತನಿಖಾ ಆಯೋಗದ ವರದಿ ಉಲ್ಲೇಖಿಸಿದೆ.
International news
ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ
Published
55 minutes agoon
22/12/2024By
NEWS DESK3ಮಂಗಳೂರು/ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿವೃತ್ತಿಯಾಗುವುದಕ್ಕೂ ಮುನ್ನ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !
4.28 ಶತಕೋಟಿ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಾಲದಿಂದ ಮುಕ್ತರಾದವರ ಸಂಖ್ಯೆ ಸುಮಾರು 5 ದಶಲಕ್ಷಕ್ಕೆ ತಲುಪಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.
LATEST NEWS
ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಸ್ಪಷ್ಟನೆ !
ಬಾರತೀಯ ಕಾರ್ಮಿಕರೊಂದಿಗೆ ಕುವೈತ್ನಲ್ಲಿ ಮೋದಿ ಸಂವಾದ
ತೆಲಂಗಾಣ ಸರ್ಕಾರದಿಂದ ಟಾಲಿವುಡ್ಗೆ ಭಾರೀ ದೊಡ್ಡ ಹೊಡೆತ !!
ಕ್ರಿಸ್ಮಸ್ ಸ್ಪೆಷಲ್ ಆಫರ್; ಮಂಗಳೂರು – ಬೆಂಗಳೂರು ವಿಶೇಷ ರೈಲು ಸಂಚಾರ
ಕಾನ್ ಸ್ಟೆಬಲ್ ಮನೆಯಲ್ಲಿ ಭರ್ಜರಿ ಬೇಟೆಯಾಡಿದ ಲೋಕಾಯುಕ್ತ ಪೊಲೀಸರು !
ಮುಂಬೈ ಬೋಟ್ ದುರಂತ ಪ್ರಕರಣ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ, ಸಾವಿನ ಸಂಖ್ಯೆ 15ಕ್ಕೆ ಏರಿಕೆ
Trending
- BIG BOSS6 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- DAKSHINA KANNADA7 days ago
ಕ್ಯಾಟ್ಕದ ನೂತನ ಅಧ್ಯಕ್ಷರಾಗಿ ಲಂಚುಲಾಲ್ ಅವಿರೋಧವಾಗಿ ಆಯ್ಕೆ
- BIG BOSS7 days ago
ದಿಢೀರ್ ನಿರ್ಧಾರ ಕೈಗೊಂಡ ಗೋಲ್ಡ್ ಸುರೇಶ್; ಕಿಚ್ಚ ಸುದೀಪ್ ಶಾಕ್ !
- LATEST NEWS4 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್