ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ತಾಜ್ಯ ವಿಲೇವಾರಿ ಆಗುವ ಪಚ್ಚನಾಡಿ ಡಂಪಿಂಗ್ ಯಾರ್ಡಿನಲ್ಲಿ ಭಿಕರ ಅಗ್ನಿದುರಂತ ಸಂಭವಿಸಿದೆ. ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದ್ದು, ಡಂಪಿಂಗ್ ಯಾರ್ಡ್ ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿಯುತ್ತಿದೆ.
ದುರ್ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ತಾಜ್ಯ ಸಂಸ್ಕರಿಸುವ ಘಟಕದಲ್ಲಿ ಶೆಖರಿ ಇಟ್ಟ ಪ್ಲಾಸ್ಟಿಕ್ ಸರಕುಗಳಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಈ ಅಗ್ನಿ ದುರಂತ ಸಂಭವಿಸಿದ್ದು,
ಸ್ಥಳಿಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರೂ ಕೇವಲ ಒಂದು ಅಗ್ನಿ ಶಾಮಕದ ವಾಹನ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದು, ಅಗ್ನಿ ತಹಬದಿಗೆ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಈ ಘಟಕವನ್ನು ಮಂಗಳೂರು ಮಹಾ ನಗರ ಪಾಲಿಕೆ ಹೊರ ಗುತ್ತಿಗೆಗೆ ನೀಡಿದ್ದರೂ ಇಲ್ಲಿ ಅವೈಜ್ನಾನಿಕವಾಗಿ ತಾಜ್ಯ ಸಂಸ್ಕರಣೆ ಆಗುತ್ತಿತ್ತು ಎಂದು ಸ್ಥಳಿಯರು ದೂರಿದ್ದಾರೆ,
ಘಟನಾ ಸ್ಥಳಕ್ಕೆ ಬಂದಿದ್ದ ಪಾಲಿಕೆಯ ಹಿರಿಯ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿಯನ್ನು ಸ್ಥಳಿಯರು ತರಾಟೆಗೆ ತಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಮೇಯರ್ ಪ್ರೇಮಾನಂದ್ ಶೆಟ್ಟಿ, ಹಿರಿಯ ಅಧಿಕಾರಿಗಳು ಸ್ಥಳಿಯ ಕಾರ್ಪೋರೇಟರ್ ದೌಡಾಯಿಸಿದ್ದಾರೆ.