Connect with us

    LATEST NEWS

    ಪ್ರಿಯತಮೆಗಾಗಿ ಸಿಂಹದ ಬೋನು ಹೊಕ್ಕು ಬ*ಲಿಯಾದ ಪಾಗಲ್ ಪ್ರೇಮಿ

    Published

    on

    ಮಂಗಳೂರು/ಉಜ್ಜೇಕಿಸ್ತಾನ: ಪ್ರಿಯತಮೆಯನ್ನು ಇಂಪ್ರೆಸ್ ಮಾಡಲು ಸಿಂಹದ ಬೋನಿನ ಒಳಗೆ ಹೋಗಿ ವಿಡಿಯೋ ಮಾಡಿದ್ದ ಪ್ರೇಮಿಯೊಬ್ಬ ಸಿಂಹಗಳಿಗೆ ಆಹಾರವಾಗಿರುವ ಘಟನೆ ಉಜ್ಜೇಕಿಸ್ತಾನದ ಪಾರ್ಕೆಂಟ್ ಎಂಬಲ್ಲಿ ನಡೆದಿದೆ.

    ಖಾಸಗಿ ಮೃಗಾಲಯದ ಸಿಬ್ಬಂದಿ ಎಫ್‌. ಐರಿಸ್ಲೋವ್ ಸಿಂಹದ ದಾಳಿಗೆ ಬಲಿಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.

    ಮೃಗಾಲಯದಲ್ಲಿ ಕ್ರೂರ ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದ ಐರಿಸ್ಲೋವ್ ತನ್ನ ಪ್ರಿಯತಮೆಗೆ ತಾನು ಸಿಂಹದ ಬೋನು ಪ್ರವೇಶಿಸಿ ಸಿಂಹಗಳ ಜೊತೆ ಇರುವುದನ್ನು ತೋರಿಸಲು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಬೋನಿನ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಸುಮ್ಮನಿಂದ ಸಿಂಹಗಳು ನಿಧಾನವಾಗಿ ಆತನ ಬಳಿ ಬಂದಿದೆ. ಈ ವೇಳೆ ಒಂದು ಸಿಂಹವನ್ನು ಸಿಂಬಾ ಸುಮ್ಮನಿರು ಎನ್ನುತ್ತಾ ಅದರ ತಲೆ ದಡವಿದ್ದಾನೆ.

    ಇದಾದ ಕೆಲವೇ ಕ್ಷಣದಲ್ಲಿ ಮೂರು ಸಿಂಹಗಳು ಆತನ ಮೇಲೆ ದಾಳಿ ಮಾಡಿ ಆತನನ್ನು ಕೊಂದು ಹಾಕಿದೆ. ಆತನ ದೇಹವನ್ನು ತಿನ್ನಲು ಆರಂಭಿಸಿದಾಗ ಉಳಿದ ಸಿಬ್ಬಂದಿ ಸಿಂಹದ ಬಾಯಿಯಿಂದ ಆತನ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಎರಡು ಸಿಂಹಗಳನ್ನು ನಿಯಂತ್ರಣ ಮಾಡಲಾಯಿತಾದರೂ ಒಂದು ಸಿಂಹವನ್ನು ಸಿಬ್ಬಂದಿ ಗುಂಡಿಟ್ಟು ಸಾಯಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯ ಬಳಿಕ ಐರಿಸ್ಲೋವ್‌ನ ದೇಹವನ್ನು ಬೋನಿನಿಂದ ಹೊರ ತೆಗೆಯಲಾಗಿದೆ.

    LATEST NEWS

    ಕರಾವಳಿ ಉತ್ಸವ ಹಿನ್ನೆಲೆ: ಜ.4-5, 11-12ರಂದು ನಿಗದಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚನೆ

    Published

    on

    ಮಂಗಳೂರು: ದ.ಕ. ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಕರಾಾವಳಿ ಉತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿ ನಗರದ ಕದ್ರಿ ಪಾರ್ಕ್ ಆವರಣದಲ್ಲಿ ಜ.5ರಂದು ಕಾರು ಮತ್ತು ಬೈಕ್ ಶೋ, ಜ.5ರಂದು ಯುವಮನ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ. ಜ.11,12ರಂದು ನಡೆಯುವ ಕಲಾಪರ್ಬ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಹಿನ್ನೆಲೆಯಲ್ಲಿ ಈ ನಾಲ್ಕು ದಿನಗಳಲ್ಲಿ ಕಾರ್ಯಕ್ರಮಕ್ಕೆ ಬರುವವರು ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ಪಾರ್ಕ್ ಮಾಡಲು ನಗರ ಪೊಲೀಸ್ ಆಯುಕ್ತ ಸೂಚಿಸಿದ್ದಾರೆ.

    ಪದುವಾ ಮೈದಾನ, ಪದುವಾ ಶಾಲಾ ಮೈದಾನ, ಡಿಂಕಿ ಡೈನ್ ಹೊಟೇಲ್ ವಠಾರ, ಬಿಎಸ್‌ಎನ್‌ಎಲ್ ಕಚೇರಿ ವಠಾರ, ಕೆಪಿಟಿ ಬಳಿ ಇರುವ ಆರ್‌ಟಿಒ ಮೈದಾನದಲ್ಲಿ, ಸರ್ಕ್ಯೂಟ್ ಹೌಸ್ ವಠಾರದಲ್ಲಿ ಪಾರ್ಕ್ ಮಾಡಬಹುದಾಗಿದೆ.

    ಕದ್ರಿ ಪಾರ್ಕ್ ರಸ್ತೆಯಲ್ಲಿ ಅಂದರೆ ಪದುವಾ ಕೊಚ್ಚಿನ್ ಬೇಕರಿಯಿಂದ ಸರ್ಕ್ಯೂಟ್ ಹೌಸ್ ಜಂಕ್ಷನ್‌ವರೆಗೆ ಎಲ್ಲಾ ತರದ ವಾಹನ ಗಳ ಸಂಚಾರವನ್ನು ನಿಷೇಧಿಸಲಾಗಿದೆ. ನಗರದ ಕೆಪಿಟಿ ವೃತ್ತದಿಂದ ಬಟ್ಟಗುಡ್ಡೆ, ಬಿಜೈ ಕೆಎಸ್‌ಆರ್‌ಟಿಸಿ, ಲಾಲ್‌ಭಾಗ್-ಕರಾವಳಿ ಉತ್ಸವ ಮೈದಾನದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

    Continue Reading

    LATEST NEWS

    ಹಿರಿಯ ಪರಮಾಣು ವಿಜ್ಞಾನಿ ಡಾ. ರಾಜಗೋಪಾಲ ಚಿದಂಬರಂ ನಿಧನ

    Published

    on

    ಮಂಗಳೂರು/ಮುಂಬೈ: ಪೋಖ್ರಾನ್-1 ಹಾಗೂ ಪೋಖ್ರಾನ್-2 ಪರಮಾಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಪರಮಾಣು ವಿಜ್ಞಾನಿ ಹಾಗೂ ಕ್ರಿಸ್ಟಲೋಗ್ರಫರ್ ಡಾ. ರಾಜಗೋಪಾಲ ಚಿದಂಬರಂ (89) ಶನಿವಾರ ನಿಧನರಾದರು.

    ಕಳೆದ ಕೆಲ ದಿನಗಳಿಂದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

    ಭಾರತದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದಲ್ಲಿ ಡಾ. ಚಿದಂಬರಂ ಅವರು ಪ್ರಮುಖ ಪಾತ್ರ ವಹಿಸಿದ್ದರು. 1975ರ ಪೋಖ್ರಾನ್-1 ಪರೀಕ್ಷೆ ಹಾಗೂ 1998ರಲ್ಲಿ ನಡೆದ ಪೋಖ್ರಾನ್-2 ಪರೀಕ್ಷೆಯ ಸಂಯೋಜಕರಾಗಿದ್ದರು.

    ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಆತ್ಮಹತ್ಯೆ ಪ್ರಕರಣ: ಬೆಂಗಳೂರೇ ನಂಬರ್ 1

    ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ (IAEA) ಆಡಳಿತ ಮಂಡಳಿಗೆ 1994-95 ಅವಧಿಯ ಅಧ್ಯಕ್ಷರಾಗಿದ್ದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದರು.
    ಡಾ. ಚಿದರಂಬರಂ ಅವರಿಗೆ 1975ರಲ್ಲಿ ಪದ್ಮಶ್ರೀ ಹಾಗೂ 1999ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಸಂದಿವೆ.

    Continue Reading

    BIG BOSS

    2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?

    Published

    on

    ವರ್ತೂರು ಸಂತೋಷ್​ ಬಿಗ್​ ಬಾಸ್​ ಮನೆಗೆ ಹೋಗಿ ಬಂದ ಮೇಲೆ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದಾರೆ. ಹಳ್ಳಿಕಾರ್​ ಒಡೆಯನಿಗೆ ಕಂಕಣ ಭಾಗ್ಯವೇ ಮುಳ್ಳಾಗಿ ಕಾಡಿತ್ತು. ಮದುವೆ ಬಗ್ಗೆ ಹಲವು ಸುದ್ದಿಗಳು ರೆಕ್ಕೆ ಪುಕ್ಕ ಇಲ್ಲದೇ ಹಾರಾಡಿವೆ. ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

    ವರ್ತೂರು ಸಂತೋಷ್ ಅವರು​ ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿ ಇರ್ತಾರೆ. ಬಿಗ್​ ಬಾಸ್​ ಮನೆಯಿಂದ ಬಂದ ಮೇಲಂತೂ ಸಂತುಗೆ ಸಿಕ್ಕಾಪಟ್ಟೆ ಫ್ಯಾನ್ಸ್​ ಆಗಿದ್ದಾರೆ. ಜನಪ್ರಿಯತೆ ಹೆಚ್ಚಿದಷ್ಟೂ ಸಂತೋಷ್​ ಅವ್ರಿಗೆ ವಿವಾದಗಳು ಬೆಂಬಿಡದೇ ಕಾಡುತ್ತಿವೆ.

    ಬಿಗ್​ ಬಾಸ್​ ಮನೆಗೆ ಕಾಲಿಡೋಕು ಮೊದಲು ವರ್ತೂರು ಸಂತೋಷ್​ಗೆ ಮದುವೆ ಆಗಿದೆ ಅನ್ನೋದು ಅವರ ಆಪ್ತ ಬಳಗಕ್ಕೆ ಬಿಟ್ರೆ ಯಾರಿಗೂ ಗೊತ್ತಿರಲಿಲ್ಲ. ಅವರು ಬಿಗ್​ ಮನೆಯಲ್ಲಿ ಇರಬೇಕಾದ್ರೆ ಯುವತಿ ಓರ್ವರ ಜೊತೆಗಿನ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಮದುವೆ ಆಗಿದ್ರು ಮುಚ್ಚಿಟ್ಟಿದ್ದಾರೆ. ಪತ್ನಿಗೆ ಟಾರ್ಚರ್​ ಕೊಟ್ಟು ಮನೆಯಿಂದ ಹೊರಗಟ್ಟಿದ್ದಾರೆ ಎಂದು ಮದುವೆ ವಿಚಾರ ಸದ್ದು ಮಾಡಿತ್ತು. ಇದಾದ ಬಳಿಕ ಬಿಗ್​ ಬಾಸ್​ ಅವಕಾಶ ಕೊಟ್ಟಾಗ ಸಂತೋಷ್​ ಅವ್ರೇ ತಮ್ಮ ಮನದಾಳದ ಮಾತುಗಳನ್ನ ಹೇಳಿದ್ದಾರೆ. ಅವ್ರು ಹೊರಗಡೆ ಬಂದ್ಮೇಲೂ ಸಾಕಷ್ಟು ಚರ್ಚೆಗಳು ನಡೆಯುತ್ತೆ. ಇದು ಹಾದಿ ಬೀದಿಯಲ್ಲಿ ಚರ್ಚೆ ಮಾಡೋ ವಿಷ್ಯಲ್ಲ. ನಮ್ಮ ನಡುವೆ ಏನ್​ ಆಗಿದೆ ಅನ್ನೋದು ನಮಗೆ ಮಾತ್ರ ಗೊತ್ತು ಎಂದು ವಿವಾದಗಳಿಗೆ ತೆರೆ ಎಳೆದಿದ್ದಾರೆ. ಅಲ್ಲಿಗೆ ಈ ವಿಚಾರ ಕೂಡ ತಣ್ಣಗಾಗುತ್ತೆ.

    ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಹಾಗೂ ತನಿಷಾ ಒಳ್ಳೆ ಸ್ನೇಹಿತರಾಗುತ್ತಾರೆ. ಇಬ್ಬರ ನಡುವಿನ ಬಾಂಧವ್ಯ ಹೊರಗಡೆ ಬಂದ್ಮೇಲೂ ಮುಂದುವರೆಯುತ್ತೆ. ಹೀಗಾಗಿ ಸಂತು-ಬೆಂಕಿ ನಡುವೆ ಏನೋ ನಡೀತಿದೆ ಅಂತ ಇವತ್ತಿಗೂ ಗುಸು ಗುಸು, ಪಿಸು ಪಿಸು ಇದೆ. ಸದ್ಯ ವರ್ತೂರು ಸಂತೋಷ್ ಅವರೇ ಹೊಸ ಸುದ್ದಿ ನೀಡಿದ್ದಾರೆ. ನನ್ನ ಮೊದಲ ಮದುವೆ ಮುಗಿದ ಅಧ್ಯಾಯ. ಹೊಸ ಜೀವನ ಶುರು ಮಾಡಬೇಕು. ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಎಂದಿದ್ದಾರೆ.

    ಖಾಸಗಿ ಸಂದರ್ಶನ ಒಂದರಲ್ಲಿ ಮಾತ್ನಾಡಿದ ಸಂತೋಷ್​, ನನಗೆ ಪ್ರೀತಿ ಆಗಿದೆ. ಪರಸ್ಪರ ನಾನು ಮತ್ತು ಆ ಹುಡುಗಿ ಪ್ರೀತಿ ಮಾಡ್ತಿದ್ದೀವಿ. ನನ್ನ ಸೆಕೆಂಡ್​ ಹಾರ್ಟ್​ ಅವಳು. ನಾನು ಡಿಪ್ರೇಷನ್​ನಲ್ಲಿ ಇದ್ದಾಗ ಕಮ್​ಬ್ಯಾಕ್​ ಮಾಡೋಕೆ ಅವಳೇ ಕಾರಣ. ನನ್ನ ಜೀವನದ ಏರುಪೇರುಗಳನ್ನ ಅವಳು ನೋಡಿದ್ದಾಳೆ. ಜೊತೆಗಿದ್ದಾಳೆ. ನನ್ನ ಅಮ್ಮನ ನಂತರ ನಾನು ತುಂಬಾ ಪ್ರೀತಿಸೋ ಜೀವ ಅವಳು. ಇಬ್ಬರಿಗೂ ಮದುವೆಗೆ ಒಪ್ಪಿಗೆ ಇದೆ. ಪ್ರೀತಿ ಇದೆ ಎಂದು ಮುಚ್ಚಿಟ್ಟಿದ್ದ ಪ್ರೀತಿ ವಿಚಾರವನ್ನ ಬಹಿರಂಗ ಪಡೆಸಿದ್ದಾರೆ ವರ್ತೂರು ಸಂತೋಷ್​.

    ಮದುವೆ ವಿಚಾರ ಹೇಳುತ್ತಿದ್ದ ಹಾಗೆ ಥಟ್​ ಅಂತ ತನಿಷಾ ಕಣ್ಮುಂದೆ ಬರ್ತಾರೆ. ಇದಕ್ಕೂ ಅವ್ರು ಉತ್ತರಿಸಿದ್ದು, ತನಿಷಾ ನಾನು ಒಳ್ಳೆ ಸ್ನೇಹಿತರು. ಖಂಡಿತ ಅವ್ರಲ್ಲ. ನನ್ನ ಹುಡುಗಿನೇ ಬೇರೆ. ಸದ್ಯದಲ್ಲೇ ಅವರ ಬಗ್ಗೆ ತಿಳಿಸ್ತೀನಿ ಎಂದಿದ್ದಾರೆ.

    ಬೆಂಕಿ-ಸಂತು ಫ್ಯಾನ್ಸ್​ಗೆ ಈ ಸುದ್ದಿ ನಿರಾಸೆ ಮೂಡಿಸಿದ್ದು, ವರ್ತೂರು ಸಂತೋಷ್​ ಮನಗೆದ್ದಿರೋ ಆ ಹುಡುಗಿ ಯಾರು ಅನ್ನೋ ಕುತೂಹಲ ಸಹಜವಾಗಿದೆ. ಒಂದು ಮೂಲದ ಪ್ರಕಾರ ಸಂಬಂಧಿಕರ ಹುಡುಗಿ ಕಾಲೇಜು ದಿನಗಳ ಗೆಳತಿಯನ್ನ ಕೈ ಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    Continue Reading

    LATEST NEWS

    Trending