Connect with us

LATEST NEWS

ಬಾಣಂತನಕ್ಕೆ ಹೋಗಿ ಬಾಯ್‌ಫ್ರೆಂಡ್ ಜೊತೆ ಪರಾರಿಯಾದ ಖತರ್ನಾಕ್ ಲೇಡಿ

Published

on

ಮಂಗಳೂರು/ಬೆಂಗಳೂರು : ಎರಡನೇ ಮಗುವಿನ ಬಾಣಂತನಕ್ಕೆ ಎಂದು ತವರುಮನೆಗೆ ಹೋಗಿದ್ದ ಮಹಿಳೆಯೊಬ್ಬಳು ಬಾಯ್‌ಫ್ರೆಮಡ್ ಜೊತೆ ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಬಡ ಕುಟುಂಬ ಮೂಲದ ಮಹಿಳೆಯೊಬ್ಬಳಿಗೆ ತಾಯಿ ಶ್ರೀಮಂತ ಹುಡುಗನ ಜೊತೆಗೆ ಮದುವೆ ಮಾಡಿಸಿದ್ದರು. ಕೇವಲ ಮೂರು ವರ್ಷ ಗಂಟನ ಜೊತೆ ಸಂಸಾರ ನಡೆಸಿದ್ದಾಳೆ. ಎರಡನೇ ಮಗುವಿನ ಬಾಣಂತನಕ್ಕೆಂದು ತವರುಮನೆಗೆ ಹೋಗಿದ್ದ ಮಹಿಳೆ ಮತ್ತೆ ವಾಪಸ್ಸಾಗಲೇ ಇಲ್ಲ. ಗಂಡ ಎಷ್ಡೇ ಒತ್ತಾಯಿಸಿದರೂ ಕೇಳಲಿಲ್ಲ. ಪತಿ ವಿರುದ್ಧವೇ ಇಲ್ಲ ಸಲ್ಲದ ಕೇಸ್‌ಗಳನ್ನು ಹಾಕಿದ್ದಾಳೆ.

ಇದನ್ನೂ ಓದಿ : ಛತ್ತೀಸ್‌ಗಢದಲ್ಲಿ ಎನ್*ಕೌಂಟರ್; 10ಕ್ಕೂ ಅಧಿಕ ನಕ್ಸಲರ ಹ*ತ್ಯೆ

ಅತ್ತ ಗಂಡ ಕೋರ್ಟು, ಕೇಸು ಎಂದು ಅಲೆಯುತ್ತಾ ಇದ್ರೆ, ಇತ್ತ ಈಕೆ ಸಿಕ್ಕ ಸಿಕ್ಕವರಿಗೆಲ್ಲಾ ಪ್ರೀತಿ ಪಾಠ ಮಾಡುತ್ತಿದ್ದಾಳೆ. ಗಂಡನನ್ನು ತೊರೆದು ಬಾಯ್‌ಫ್ರೆಂಡ್ಸ್ ಜೊತೆ ಲೈಫ್ ಎಂಜಾಯ್ ಮಾಡ್ತಾ ಇದ್ದಾಳೆ. ಅಷ್ಟೇ ಅಲ್ಲದೇ ಇತ್ತೀಚಿಗೆ ಬಾಯ್‌ಫ್ರೆಂಡ್‌ನಿಂದ ಮೂರನೇ ಮಗುವನ್ನೂ ಪಡೆದಿದ್ದಾಳೆ. ಗಂಡ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಖತರ್‌ನಾಕ್ ಲೇಡಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

DAKSHINA KANNADA

ತಪ್ಪಿಸಿಕೊಳ್ಳಲು ಯತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡು..!

Published

on

ಮಂಗಳೂರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಯನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಓರ್ವನಿಗೆ ಪೊಲೀಸರು ಹಾರಿಸಿದ ಗುಂಡು ಕಾಲಿಗೆ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ಜ.17ರಂದು ನಡೆದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

     ಆರೋಪಿ ರಾಜೇಂದ್ರನ್

ತಮಿಳುನಾಡು ಸಮೀಪದ ಪದ್ಮನೇರಿ ಗ್ರಾಮದಲ್ಲಿ ಬಂಧಿಸಿ ಕರೆತರಲಾಗಿದ್ದು ಇಂದು ಸ್ಥಳ ಮಹಜರು ನಡೆಸಲಾಗಿದೆ. ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಜಂಟಿಯಾಗಿ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಣಿವಣ್ಣನ್‌ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಿಸಿಬಿ ಇನ್‌ಸ್ಪೆಕ್ಟರ್‌ ರಫೀಕ್‌ ಅವರು ಆತನ ಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದುಕೊಂಡರು ಎಂದು ತಿಳಿದು ಬಂದಿದೆ.

ಪ್ರಮುಖ ಆರೋಪಿ ಮುರಗಂಡಿ ತೇವರ್

ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ನಗರದ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Continue Reading

DAKSHINA KANNADA

ಗೋವುಗಳ ಮೇಲಿನ ಪೈಶಾಚಿಕ ಕೃ*ತ್ಯ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Published

on

ಮಂಗಳೂರು : ಬೆಂಗಳೂರಿನ ಚಾಮರಾಜನಗರದಲ್ಲಿ ಹಿಂದುಗಳು ಆರಾಧಿಸುವ ಗೋಮಾತೆಯ ಕೆಚ್ಚಲನ್ನು ಕತ್ತರಿಸಿ ವಿ*ಕೃತಿ ಮೆರೆದಿರುವುದು ಹಾಗೂ ನಂಜನಗೂಡಿನಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದ ಹಸುವಿನ ಮೇಲೆ ದುಷ್ಟರು ಮಾ*ರಕಾಸ್ತ್ರದಿಂದ ದಾ*ಳಿ ಮಾಡಿ ಹಸುವಿನ ಬಾಲವನ್ನು ಕತ್ತರಿಸಿ ಪೈಶಾಚಿಕ ಕೃ*ತ್ಯ ನಡೆಸಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ವಿಶ್ವ ಹಿಂದು ಪರಿಷತ್‌ ಸೇರಿದಂತೆ ಹಲವು ಹಿಂದು ಪರ ಸಂಘಟನೆಗಳು ಸಾಥ್‌ ನೀಡಿದ್ದವು. ಮೊದಲಿಗೆ ಗೋವಿಗೆ ವಿಶೇಷ ಪೂಜೆ ಮಾಡುವ ಮೂಲಕ ಗೋವನ್ನು ಪೂಜಿಸಲಾಯಿತು.

ಬಳಿಕ ನಡೆದ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ  ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳು ಪವಿತ್ರ ಎಂದು ಪೂಜಿಸುವ ಗೋವಿನ ಮೇಲೆ ನಿರಂತರವಾಗಿ ದೌರ್ಜ*ನ್ಯ ದಬ್ಬಾಳಿಕೆ ನಡೆಯುತ್ತಿದೆ. ಯಾವುದೇ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಇಲ್ಲಿ ದೇವಸ್ಥಾನಕ್ಕೆ ಹೋಗಿ ಗಂಧಪ್ರಸಾದ ಸ್ವೀಕರಿಸುತ್ತಾರೆ. ಆದರೆ ಗೋವಿನ ಮೇಲೆ ದೌರ್ಜ*ನ್ಯ ನಡೆದಾಗ ತಮ್ಮ ಬಾಯಿ ಬಿಚ್ಚುತ್ತಿಲ್ಲ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡರಾದ ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್‌, ಗೋಪಾಲ್ ಕುತ್ತಾರ್ ಮೊದಲಾದವರು ಭಾಗಿಯಾಗಿದ್ದರು.

Continue Reading

FILM

ಅಬ್ಬಬ್ಬಾ! 31 ಕೋಟಿಗೆ ಅಪಾರ್ಟ್ಮೆಂಟ್ ಖರೀದಿಸಿದ್ದ ಅಮಿತಾಬ್ ಬಚ್ಚನ್  ಮಾರಿದ್ದೆಷ್ಟು ರೇಟ್‌ಗೆ ಗೊತ್ತಾ!?

Published

on

ಮಂಗಳೂರು/ಮುಂಬೈ : ಬಿಗ್ ಬಿ ಅಮಿತಾಬ್ ಬಚ್ಚನ್   ಮುಂಬೈನ ಓಶಿವಾರಾದಲ್ಲಿರುವ ತಮ್ಮ  ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದಾರೆ. ಭಾರೀ ಮೊತ್ತಕ್ಕೆ ಅಪಾರ್ಟ್ಮೆಂಟ್ ಮಾರಾಟವಾಗಿದೆ. ಹೌದು, 31 ಕೋಟಿ ಕೊಟ್ಟು ಅಪಾರ್ಟ್ಮೆಂಟ್ ಖರೀದಿಸಿದ್ದ ಬಿಗ್ ಬಿ ಈಗ ಲಾಭ ಪಡೆದಿದ್ದಾರೆ.

ಓಶಿವಾರಾದಲ್ಲಿ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ ‘ದಿ ಅಟ್ಲಾಂಟಿಸ್‌’ನಲ್ಲಿ ಅಮಿತಾಬ್ ಅಪಾರ್ಟ್ಮೆಂಟ್ ಇದೆ. 2021ರ ಎಪ್ರಿಲ್‌ನಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಅಮಿತಾಬ್ ಖರೀದಿಸಿದ್ದರು. ಅವರು 31 ಕೋಟಿ ಕೊಟ್ಟಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ನಟಿ ಕೃತಿ ಸನೋನ್‌ಗೆ ಭದ್ರತಾ ಠೇವಣಿ 60 ಲಕ್ಷ ಮತ್ತು ಮಾಸಿಕ 10 ಲಕ್ಷ ರೂ. ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಮಹಿಳಾ ನಾಗಸಾಧ್ವಿಗಳು ಮುಟ್ಟಿನ ಸಮಯದಲ್ಲಿ ಏನು ಮಾಡುತ್ತಾರೆ ಗೊತ್ತಾ ?

ಈಗ ಈ ಅಪಾರ್ಟ್ಮೆಂಟ್‌ನ್ನು  ಅಮಿತಾಬ್ ಬಚ್ಚನ್ 83 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರ(ಐಜಿಆರ್) ಪ್ರಕಾರ, ಈ ಅಪಾರ್ಟ್ಮೆಂಟ್ ಅನ್ನು 83 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ.  ಈ ಮೂಲಕ ಅವರು ಶೇ.168ರಷ್ಟು ಲಾಭ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಅಂದ್ಹಾಗೆ ಮುಂಬೈನ ಓಶಿವಾರಾವು ಉತ್ತಮ ಮೂಲಭೂತ ಸೌಕರ್ಯ ಹೊಂದಿರುವ ಪ್ರದೇಶ. ಆಧುನಿಕ ಜೀವನಶೈಲಿಗೆ ತಕ್ಕ ಜಾಗ. ಉತ್ತಮ ರಸ್ತೆಗಳು, ಮೆಟ್ರೋ ಸಂಪರ್ಕಗಳನ್ನು ಹೊಂದಿದೆ.

Continue Reading

LATEST NEWS

Trending

Exit mobile version